LSG Probable XI: ಗಾಯದಿಂದ ಚೇತರಿಸಿಕೊಂಡ ಸ್ಟಾರ್ ಆಲ್​ರೌಂಡರ್; ಆರ್​ಸಿಬಿ ಎದುರಿನ ಪಂದ್ಯಕ್ಕೆ ಲಕ್ನೋ ತಂಡ ಹೇಗಿರಲಿದೆ?

IPL 2022 | LSG vs RCB Eliminator: ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದ ಕೃನಾಲ್ ಪಾಂಡ್ಯ ಬದಲು ಮನನ್ ವೋಹ್ರಾ ಕಣಕ್ಕಿಳಿದಿದ್ದರು. ಇಂದು ಕೃನಾಲ್ ತಂಡಕ್ಕೆ ಮರಳಲಿದ್ದಾರೆ. ಆರ್​ಸಿಬಿ ಎದುರಿನ ಎಲಿಮಿನೇಟರ್ ಪಂದ್ಯಕ್ಕೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಹೇಗಿರಲಿದೆ? ಇಲ್ಲಿದೆ ನೋಡಿ.

LSG Probable XI: ಗಾಯದಿಂದ ಚೇತರಿಸಿಕೊಂಡ ಸ್ಟಾರ್ ಆಲ್​ರೌಂಡರ್; ಆರ್​ಸಿಬಿ ಎದುರಿನ ಪಂದ್ಯಕ್ಕೆ ಲಕ್ನೋ ತಂಡ ಹೇಗಿರಲಿದೆ?
ರಾಯಲ್ ಚಾಲೆಂಜರ್ಸ್​ ಬೆಂಗಳೂರು- ಲಕ್ನೋ ಸೂಪರ್ ಜೈಂಟ್ಸ್
Follow us
TV9 Web
| Updated By: shivaprasad.hs

Updated on:May 25, 2022 | 9:03 AM

ಪಂದ್ಯಾವಳಿಯುದ್ದಕ್ಕೂ ಬಹುತೇಕ ಉತ್ತಮ ಪ್ರದರ್ಶನ ನೀಡಿರುವ ಲಕ್ನೋ ಸೂಪರ್ ಜೈಂಟ್ಸ್​ (Lucknow Super Giants) ತಂಡ ಮೂರನೇ ಸ್ಥಾನದಲ್ಲಿ ತನ್ನ ಲೀಗ್ ಹಂತ ಮುಗಿಸಿತ್ತು. ಇದೀಗ ಐಪಿಎಲ್​ನ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore: RCB) ತಂಡವನ್ನು ಎಲ್​ಎಸ್​ಜಿ ಎದುರಿಸಲಿದೆ. ಇಂದು (ಮೇ.25)  ಕೋಲ್ಕತ್ತಾದ ಈಡನ್​ ಗಾರ್ಡನ್ಸ್​ನಲ್ಲಿ ಪಂದ್ಯ ನಡೆಯಲಿದೆ. ಕೆಎಲ್ ರಾಹುಲ್ ನೇತೃತ್ವದ ಲಕ್ನೋ ತಮ್ಮ ಲೀಗ್ ಹಂತದ ಕೊನೆಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ಎದುರು ಆಡಿತ್ತು. ಕೇವಲ 2 ರನ್​ಗಳ ಅಂತರದಿಂದ ಜಯ ಸಾಧಿಸಿದ್ದ ತಂಡ ಮುಂದಿನ ಹಂತಕ್ಕೆ ಪ್ರವೇಶ ಪಡೆದಿತ್ತು. ಇತ್ತ ಆರ್​ಸಿಬಿ ಗುಜರಾತ್ ವಿರುದ್ಧದ ತನ್ನ ಕೊನೆಯ ಪಂದ್ಯದಲ್ಲಿ ಭರ್ಜರಿ ಆಲ್​ರೌಂಡ್​ ಪ್ರದರ್ಶನ ನೀಡಿ ವಿಜಯ ಗಳಿಸಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ತೀವ್ರ ಜಿದ್ದಾಜಿದ್ದಿನ ಪೈಪೋಟಿ ಕಂಡುಬರಲಿದೆ. ಅದಲ್ಲದೇ ಎಲಿಮಿನೇಟರ್ ಆಗಿರುವುದರಿಂದ ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ. ಗೆದ್ದ ತಂಡ ರಾಜಸ್ಥಾನ್ ರಾಯಲ್ಸ್​ ಎದುರು ಎರಡನೇ ಕ್ವಾಲಿಫೈಯರ್​ನಲ್ಲಿ ಸೆಣೆಸಬೇಕಿದೆ.

ಇಂದಿನ ಪಂದ್ಯದಲ್ಲಿ ಲಕ್ನೋ ಸಂಭಾವ್ಯ ತಂಡ:

ಕಳೆದ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ಬದಲು ಮನನ್ ವೋಹ್ರಾ ಕಣಕ್ಕಿಳಿದಿದ್ದರು. ಸಣ್ಣ ಗಾಯವೊಂದರ ಕಾರಣ ಕೃನಾಲ್ ಕಣಕ್ಕಿಳಿದಿರಲಿಲ್ಲ. ಇದೀಗ ಅವರು ಚೇತರಿಸಿಕೊಂಡಿದ್ದು ಇಂದು ತಂಡಕ್ಕೆ ಮರಳಲಿದ್ದಾರೆ. ಎಲ್​ಎಸ್​ಜಿ ತಂಡ ಮೊದಲಿನಿಂದ ದುರ್ಬಲ ಮಧ್ಯಮ ಕ್ರಮಾಂಕದ ಸಮಸ್ಯೆ ಎದುರಿಸುತ್ತಿದೆ. ಇಂದಿನ ಪಂದ್ಯದಲ್ಲಿ ತಂಡದ ಜಯಕ್ಕಾಗಿ ಮಧ್ಯಮ ಕ್ರಮಾಂಕದ ಕೊಡುಗೆ ಅನಿವಾರ್ಯವಾಗಿದೆ.

ಇದನ್ನೂ ಓದಿ
Image
GT vs RR, IPL 2022 Qualifier 1: ಫೈನಲ್​ಗೆ ಎಂಟ್ರಿ ಕೊಟ್ಟ ಗುಜರಾತ್ ಟೈಟಾನ್ಸ್
Image
IPL 2022: ಆರ್​ಸಿಬಿಗೆ ಸಂಕಷ್ಟ: LSG vs RCB ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆ
Image
IPL 2022 Eliminator: ನಿರ್ಣಾಯಕ ಪಂದ್ಯಕ್ಕೆ RCB ತಂಡದಲ್ಲಿ 1 ಬದಲಾವಣೆ ಸಾಧ್ಯತೆ..!
Image
IPL 2022: RCB ತಂಡಕ್ಕೆ ಸಿಡಿಲಮರಿ ABD ರಿ-ಎಂಟ್ರಿ​..!

ಇದನ್ನೂ ಓದಿ: IPL 2022: ಆರ್​ಸಿಬಿಗೆ ಸಂಕಷ್ಟ: LSG vs RCB ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆ

ಎಲ್​ಎಸ್​ಜಿಯ ಓಪನಿಂಗ್ ಬ್ಯಾಟರ್​ಗಳಾದ ಕೆಎಲ್ ರಾಹುಲ್ ಹಾಗೂ ಕ್ವಿಂಟನ್ ಡಿಕಾಕ್ ಸಿಡಿಲಬ್ಬರದ ಪ್ರದರ್ಶನ ನೀಡುತ್ತಿದ್ದಾರೆ. ಕೆಕೆಆರ್ ವಿರುದ್ಧ ಯಾವುದೇ ವಿಕೆಟ್ ನಷ್ಟವಿಲ್ಲದೇ 210 ರನ್​ಗಳನ್ನು ಪೇರಿಸಿತ್ತು ಈ ಆರಂಭಿಕ ಜೋಡಿ. ಒಂದುವೇಳೆ ರಾಹುಲ್ ಹಾಗೂ ಕ್ವಿಂಟನ್ ಈರ್ವರೂ ಔಟ್ ಆದರೆ ಲಕ್ನೋ ಪಂದ್ಯದಲ್ಲಿ ತಿರುಗಿಬಿದ್ದಿದ್ದು ಕಡಿಮೆ. ಲೀಗ್​ನ ಮೊದಲ ಪಂದ್ಯಗಳಲ್ಲಿ ಭರ್ಜರಿ ಬ್ಯಾಟ್ ಬೀಸಿದ್ದ ಆಯುಷ್ ಬಡೋನಿ ಇತ್ತೀಚೆಗೆ ಸದ್ದು ಮಾಡುತ್ತಿಲ್ಲ.

ಕೆಲವೇ ಪಂದ್ಯದಲ್ಲಿ ಅವಕಾಶ ಪಡೆದಿದ್ದ ಕೆರೆಬಿಯನ್ ದಾಂಡಿಗ ಎವಿನ್ ಲಿವಿಸ್ ಇಂದಿನ ಪಂದ್ಯದಲ್ಲೂ ಕಣಕ್ಕಿಳಿಯುವ ನಿರೀಕ್ಷೆ ಇದೆ. ಯಾವುದೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಬಲ್ಲ ಅವರು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದ್ದು, ನಂತರ ದೀಪಕ್ ಹೂಡಾ ಹಾಗೂ ಮಾರ್ಕಸ್ ಸ್ಟೋಯ್ನಿಸ್ ಬ್ಯಾಟ್ ಬೀಸಲಿದ್ದಾರೆ.

ಆಲ್​ರೌಂಡರ್​ಗಳಾಗಿ ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆರ್​ಸಿಬಿಯಲ್ಲಿ ಸ್ಪಿನ್​ ಅನ್ನು ಎದುರಿಸಲು ದಿಗ್ಗಜ ಬ್ಯಾಟರ್​ಗಳೂ ಒಮ್ಮೊಮ್ಮೆ ಪರದಾಡುತ್ತಾರೆ. ಹೀಗಾಗಿ ಇಂದು ಕರ್ನಾಟಕದ ಕೃಷ್ಣಪ್ಪ ಗೌತಮ್ ಪಾತ್ರ ಬಹುಮುಖ್ಯವಾಗಿರಲಿದೆ. ಎಲ್​ಎಸ್​ಜಿ ಸ್ಪಿನ್ ವಿಭಾಗವನ್ನು ರವಿ ಬಿಷ್ಣೋಯಿ ಮುನ್ನಡೆಸಲಿದ್ದಾರೆ. ಅವೇಶ್ ಖಾನ್ ನೇತೃತ್ವದ ಬೌಲಿಂಗ್ ವಿಭಾಗದಲ್ಲಿ ಮೊಹ್ಸೀನ್ ಖಾನ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.

ಒಟ್ಟಿನಲ್ಲಿ ಎಲ್​ಎಸ್​ಜಿ ಹಾಗೂ ಆರ್​ಸಿಬಿ ಎರಡೂ ತಂಡಗಳು ಚೊಚ್ಚಲ ಬಾರಿಗೆ ಕಪ್ ಎತ್ತುವ ಕನಸಿನಲ್ಲಿವೆ. ಇದು ಸಾಕಾರವಾಗಬೇಕಾದರೆ ಎರಡೂ ತಂಡಗಳು ಸಂಘಟಿತ ಪ್ರದರ್ಶನ ನೀಡಲೇಬೇಕಾಗುತ್ತದೆ. ಹೀಗಾಗಿ ದಿಗ್ಗಜ ಆಟಗಾರರಿರುವ ಈ ಎರಡೂ ತಂಡಗಳಿಂದ ಒಳ್ಳೆಯ ಪೈಪೋಟಿ ಇರುವ ಪಂದ್ಯವನ್ನು ನಿರೀಕ್ಷಿಸಬಹುದು.

ಇದನ್ನೂ ಓದಿ: IPL 2022 Eliminator: ನಿರ್ಣಾಯಕ ಪಂದ್ಯಕ್ಕೆ RCB ತಂಡದಲ್ಲಿ 1 ಬದಲಾವಣೆ ಸಾಧ್ಯತೆ..!

ಲಕ್ನೋ ಸೂಪರ್ ಜೈಂಟ್ಸ್​ ಸಂಭಾವ್ಯ ತಂಡ:

ಕ್ವಿಂಟನ್ ಡಿ ಕಾಕ್ (wk), KL ರಾಹುಲ್ (c), ಎವಿನ್ ಲೆವಿಸ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಮಾರ್ಕಸ್ ಸ್ಟೋನಿಸ್, ಜೇಸನ್ ಹೋಲ್ಡರ್, ಕೃಷ್ಣಪ್ಪ ಗೌತಮ್, ಮೊಹ್ಸಿನ್ ಖಾನ್, ಅವೇಶ್ ಖಾನ್, ರವಿ ಬಿಷ್ಣೋಯ್.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:01 am, Wed, 25 May 22

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ