AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

UAE T20 League: 6 ತಂಡಗಳು, 34 ಪಂದ್ಯಗಳು: ಯುಎಇ ಟಿ20 ಲೀಗ್​ ನೇರ ಪ್ರಸಾರ ಹಕ್ಕು ಪಡೆದ ಝೀ ನೆಟ್​ವರ್ಕ್

UAE T20 League: ಯುಎಇ ಟಿ20 ಲೀಗ್ ಅನ್ನು ZEE ನ ಲೀನಿಯರ್ ಚಾನಲ್‌ಗಳು ಮತ್ತು ಅದರ OTT ಪ್ಲಾಟ್‌ಫಾರ್ಮ್ ZEE5 ನಲ್ಲಿ ಪ್ರಸಾರ ಮಾಡಲಾಗುತ್ತದೆ.

UAE T20 League: 6 ತಂಡಗಳು, 34 ಪಂದ್ಯಗಳು: ಯುಎಇ ಟಿ20 ಲೀಗ್​ ನೇರ ಪ್ರಸಾರ ಹಕ್ಕು ಪಡೆದ ಝೀ ನೆಟ್​ವರ್ಕ್
UAE T20 League
Follow us
TV9 Web
| Updated By: ಝಾಹಿರ್ ಯೂಸುಫ್

Updated on: May 24, 2022 | 4:09 PM

UAE T20 League: ಟಿ20 ಕ್ರಿಕೆಟ್​ ಅಂಗಳದಲ್ಲಿ ಮತ್ತೊಂದು ಲೀಗ್ ಸೇರ್ಪಡೆಯಾಗುತ್ತಿದೆ. ಶೀಘ್ರದಲ್ಲೇ ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ECB) ಹೊಸ ಲೀಗ್​ ಅನ್ನು ಶುರು ಮಾಡಲಿದೆ. ಯುಎಇ ಟಿ20 ಲೀಗ್ (UAE T20 League) ಹೆಸರಿನಲ್ಲಿ ನಡೆಯಲಿರುವ ಈ ಟೂರ್ನಿಗೆ ಬೇಕಾದ ಸಿದ್ಧತೆಗಳು ಆರಂಭವಾಗಿದೆ. ಅದರ ಮೊದಲ ಹೆಜ್ಜೆ ಎಂಬಂತೆ ಇದೀಗ ಪಂದ್ಯಗಳ ನೇರ ಪ್ರಸಾರ ಹಕ್ಕುಗಳನ್ನು ಮಾರಾಟಲಾಗಿದ್ದು, ಪ್ರಮುಖ ಸಂಸ್ಥೆಗಳನ್ನು ಹಿಂದಿಕ್ಕಿ ದೇಶದ ಪ್ರಮುಖ ಮಾಧ್ಯಮ ಸಂಸ್ಥೆ ZEE ನೆಟ್​ವರ್ಕ್​ ಟಿ20 ಲೀಗ್‌ನ ಜಾಗತಿಕ ಮಾಧ್ಯಮ ಹಕ್ಕುಗಳನ್ನು ಪಡೆದುಕೊಂಡಿದೆ.

ಯುಎಇಯ ಈ ಟಿ20 ಲೀಗ್‌ನಲ್ಲಿ, ಹಕ್ಕುಗಳ ಒಪ್ಪಂದವನ್ನು ಎಮಿರೇಟ್ಸ್ ಮಂಡಳಿ ಮಂಗಳವಾರ ಪ್ರಕಟಿಸಿದೆ. ಜಾಗತಿಕ ಮಾಧ್ಯಮ ಮತ್ತು ಮನರಂಜನಾ ಶಕ್ತಿ ಕೇಂದ್ರವಾದ ZEE ಯೊಂದಿಗೆ ದೀರ್ಘಾವಧಿಯ ಮಾಧ್ಯಮ ಹಕ್ಕುಗಳ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಲೀಗ್ ಅನ್ನು ZEE ನ ಲೀನಿಯರ್ ಚಾನಲ್‌ಗಳು ಮತ್ತು ಅದರ OTT ಪ್ಲಾಟ್‌ಫಾರ್ಮ್ ZEE5 ನಲ್ಲಿ ಪ್ರಸಾರ ಮಾಡಲಾಗುತ್ತದೆ. ಪಂದ್ಯಗಳನ್ನು ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ನೇರ ಪ್ರಸಾರ ಮಾಡಲಾಗುತ್ತದೆ ಎಂದು ತಿಳಿಸಿದೆ.

ಯುಎಇ ಟಿ20 ಲೀಗ್‌ನಲ್ಲಿ 6 ತಂಡಗಳ ನಡುವೆ ಒಟ್ಟು 34 ಪಂದ್ಯಗಳನ್ನು ಆಡಲಾಗುತ್ತದೆ . ಈ ತಂಡಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಅದಾನಿ ಸ್ಪೋರ್ಟ್ಸ್‌ಲೈನ್, ಕೋಲ್ಕತ್ತಾ ನೈಟ್ ರೈಡರ್ಸ್, ಲ್ಯಾನ್ಸರ್ ಕ್ಯಾಪಿಟಲ್, ಜಿಎಂಆರ್ ಗ್ರೂಪ್ ಮತ್ತು ಕ್ಯಾಪ್ರಿ ಗ್ಲೋಬಲ್ ಕಂಪೆನಿಗಳು ಖರೀದಿಸಿರುವುದು ವಿಶೇಷ.

ಇದನ್ನೂ ಓದಿ
Image
IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು
Image
Virat Kohli: ಕೊಹ್ಲಿ ಕಡೆಯಿಂದ ರಶೀದ್ ಖಾನ್​​ಗೆ ಸ್ಪೆಷಲ್ ಗಿಫ್ಟ್​: ಸೇಫ್ ಆಗಿ ಇಟ್ಟಿರಿ ಎಂದ ಸೌತ್ ಆಫ್ರಿಕಾ ಕ್ರಿಕೆಟಿಗ
Image
KL Rahul: ಐಪಿಎಲ್​ನಲ್ಲಿ ರಾಹುಲ್ ಅಬ್ಬರ: ಸತತ 5ನೇ ಬಾರಿ ಕೆಎಲ್ ಕಿಂಗ್
Image
IPL 2022: ಬುಮ್ರಾ ದಾಖಲೆ ಮುರಿದ ಉಮ್ರಾನ್ ಮಲಿಕ್

ಯಾವ ಚಾನೆಲ್​ನಲ್ಲಿ ನೇರ ಪ್ರಸಾರ? UAE ಯ T20 ಲೀಗ್ ಪಂದ್ಯಗಳನ್ನು ZEE ಯ 10 ಲೀನಿಯರ್ ಚಾನಲ್‌ಗಳಲ್ಲಿ HSM (ಹಿಂದಿ ಮಾತನಾಡುವ ಮಾರುಕಟ್ಟೆಗಳು), ದಕ್ಷಿಣ ಮತ್ತು ಪೂರ್ವ ಪ್ರದೇಶಗಳಲ್ಲಿ ಇಂಗ್ಲಿಷ್, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಇದರೊಂದಿಗೆ, ಲೀಗ್ ZEE5 ನಲ್ಲಿ ಲೈವ್ ಸ್ಟ್ರೀಮಿಂಗ್ ಕೂಡ ಇರಲಿದೆ. ಹಾಗೆಯೇ ಗ್ಲೋಬಲ್ ರೇಡಿಯೊದಲ್ಲಿಯೂ ಪಂದ್ಯಗಳ ಮಾಹಿತಿ ಸಿಗಲಿದೆ. ಪ್ರಪಂಚದಾದ್ಯಂತ T20 ಲೀಗ್ ಕ್ರಿಕೆಟ್‌ನ ಜನಪ್ರಿಯತೆಯ ನಡುವೆ, UAE ನ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯು ತನ್ನ ಯುಎಇ ಟಿ20 ಲೀಗ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿತ್ತು. ಇದೀಗ ಟೂರ್ನಿಯ 10 ವರ್ಷಗಳ ಪ್ರಸಾರ ಹಕ್ಕುಗಳನ್ನು ಝೀ ನೆಟ್​ವರ್ಕ್​ ಪಡೆದುಕೊಂಡಿದ್ದು, ಈ ಮೂಲಕ ಭಾರತ ಸೇರಿದಂತೆ ವಿಶ್ವದಾದ್ಯಂತ ಹೊಸ ಲೀಗ್​ ಅನ್ನು ಕ್ರಿಕೆಟ್​ ಪ್ರೇಮಿಗಳಿಗೆ ತಲುಪಿಸಲು ಮುಂದಾಗಿದೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್
‘ಬಾಯ್ಸ್ vs ಗರ್ಲ್ಸ್’ನಲ್ಲಿ ಹೆಚ್ಚು ವೋಟ್ ಬಿದ್ದಿದ್ದು ಯಾರಿಗೆ?
‘ಬಾಯ್ಸ್ vs ಗರ್ಲ್ಸ್’ನಲ್ಲಿ ಹೆಚ್ಚು ವೋಟ್ ಬಿದ್ದಿದ್ದು ಯಾರಿಗೆ?
VIDEO: ಏಟಿಗೆ ಎದಿರೇಟು... ಆಕ್ರೋಶಭರಿತರಾಗಿ ಸಂಭ್ರಮಿಸಿದ ವಿರಾಟ್ ಕೊಹ್ಲಿ
VIDEO: ಏಟಿಗೆ ಎದಿರೇಟು... ಆಕ್ರೋಶಭರಿತರಾಗಿ ಸಂಭ್ರಮಿಸಿದ ವಿರಾಟ್ ಕೊಹ್ಲಿ
VIDEO: ಇದು ನನ್ನ ಗ್ರೌಂಡ್... ಕೆಎಲ್ ರಾಹುಲ್​ಗೆ ವಿರಾಟ್ ಕೊಹ್ಲಿ ತಿರುಗೇಟು
VIDEO: ಇದು ನನ್ನ ಗ್ರೌಂಡ್... ಕೆಎಲ್ ರಾಹುಲ್​ಗೆ ವಿರಾಟ್ ಕೊಹ್ಲಿ ತಿರುಗೇಟು