AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟಿ ಆಶ್ರಿತಾ ಶೆಟ್ಟಿಯನ್ನ ವರಿಸಿದ ಮನೀಶ್ ಪಾಂಡೆ

ಸೂರತ್​ನಲ್ಲಿ ನಡೆದ ಸಯ್ಯದ್ ಮುಷ್ತಾಕ್ ಅಲಿ ಟಿಟ್ವೆಂಟಿ ಟೂರ್ನಿಯ ಫೈನಲ್​ನಲ್ಲಿ ನಮ್ಮ ಕರ್ನಾಟಕ ತಂಡ, ತಮಿಳುನಾಡು ವಿರುದ್ಧ 1ರನ್​ನಿಂದ ರಣರೋಚಕ ಗೆಲುವು ದಾಖಲಿಸಿದ್ದು ಗೊತ್ತೇ ಇದೆ. ನಾಯಕ ಮನೀಷ್ ಪಾಂಡೆ ಪರಾಕ್ರಮದಿಂದಲೇ ಕರ್ನಾಟಕ ಫೈನಲ್ ಪಂದ್ಯವನ್ನ ಗೆದ್ದು ಬೀಗಿದೆ ಅಂದ್ರೂ ತಪ್ಪಿಲ್ಲ. ಕೇವಲ ಬ್ಯಾಟಿಂಗ್​ನಲ್ಲಿ ನಿರ್ಣಾಯಕ 60 ರನ್​ಗಳಿಸಿದ್ದಷ್ಟೇ ಅಲ್ಲ. ನಾಯಕತ್ವದಲ್ಲೂ ಬೌಲರ್​ಗಳನ್ನ ಸರಿಯಾಗಿ ಬಳಸಿಕೊಂಡಿದ್ದರಿಂದಲೇ, ಕೆ.ಗೌತಮ್ ಕೊನೆ ಓವರ್​ನಲ್ಲಿ ರೋಚಕ ಗೆಲುವು ತಂದುಕೊಟ್ಟಿದ್ರು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮನೀಷ್ ಪಾಂಡೆ: ಮುಂಬೈನ ಖಾಸಗಿ ಹೋಟೆಲ್​ನಲ್ಲಿ ನಡೆದ […]

ನಟಿ ಆಶ್ರಿತಾ ಶೆಟ್ಟಿಯನ್ನ ವರಿಸಿದ ಮನೀಶ್ ಪಾಂಡೆ
ಸಾಧು ಶ್ರೀನಾಥ್​
|

Updated on: Dec 03, 2019 | 11:31 AM

Share

ಸೂರತ್​ನಲ್ಲಿ ನಡೆದ ಸಯ್ಯದ್ ಮುಷ್ತಾಕ್ ಅಲಿ ಟಿಟ್ವೆಂಟಿ ಟೂರ್ನಿಯ ಫೈನಲ್​ನಲ್ಲಿ ನಮ್ಮ ಕರ್ನಾಟಕ ತಂಡ, ತಮಿಳುನಾಡು ವಿರುದ್ಧ 1ರನ್​ನಿಂದ ರಣರೋಚಕ ಗೆಲುವು ದಾಖಲಿಸಿದ್ದು ಗೊತ್ತೇ ಇದೆ. ನಾಯಕ ಮನೀಷ್ ಪಾಂಡೆ ಪರಾಕ್ರಮದಿಂದಲೇ ಕರ್ನಾಟಕ ಫೈನಲ್ ಪಂದ್ಯವನ್ನ ಗೆದ್ದು ಬೀಗಿದೆ ಅಂದ್ರೂ ತಪ್ಪಿಲ್ಲ. ಕೇವಲ ಬ್ಯಾಟಿಂಗ್​ನಲ್ಲಿ ನಿರ್ಣಾಯಕ 60 ರನ್​ಗಳಿಸಿದ್ದಷ್ಟೇ ಅಲ್ಲ. ನಾಯಕತ್ವದಲ್ಲೂ ಬೌಲರ್​ಗಳನ್ನ ಸರಿಯಾಗಿ ಬಳಸಿಕೊಂಡಿದ್ದರಿಂದಲೇ, ಕೆ.ಗೌತಮ್ ಕೊನೆ ಓವರ್​ನಲ್ಲಿ ರೋಚಕ ಗೆಲುವು ತಂದುಕೊಟ್ಟಿದ್ರು.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮನೀಷ್ ಪಾಂಡೆ: ಮುಂಬೈನ ಖಾಸಗಿ ಹೋಟೆಲ್​ನಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ ಪಾಂಡೆ, ಮದುಮಗನ ಗೆಟಪ್​ನಲ್ಲಿ ಮಿಂಚುತ್ತಿದ್ರೆ, ಆಶ್ರಿತಾ ರೇಷ್ಮೇ ಸೀರೆಯಲ್ಲಿ ಕಂಗೊಳಿಸುತ್ತಿದ್ಳು. ಮೊದಲೇ ಪ್ರೀತಿಸಿದ ಮನಸ್ಸುಗಳು ಖುಷಿ ಖುಷಿಯಿಂದಲೇ ಹಾರ ಬದಲಾಯಿಸಿಕೊಂಡು ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ರು. ಇಂಟ್ರಸ್ಟಿಂಗ್ ವಿಷ್ಯ ಅಂದ್ರೆ ಈ ಸರಳ ವಿವಾಹ ಮಹೋತ್ಸವದಲ್ಲಿ ಸಂಬಂಧಿಕರು ಹಾಗೂ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ವೆಸ್ಟ್ ಇಂಡೀಸ್ ಸರಣಿ ಬಳಿಕ ಬೆಂಗಳೂರಿನಲ್ಲಿ ರಿಸೆಪ್ಷನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮಕ್ಕೆ ಸ್ನೇಹಿತರಿಗೆ, ಕ್ರಿಕೆಟಿಗರಿಗೆ ಆಹ್ವಾನ ನೀಡಲಾಗಿದೆ ಎನ್ನಲಾಗಿದೆ.

ಪ್ರೇಮ ಪಾಶದಲ್ಲಿ ಪಾಂಡೆ ಸಿಲುಕಿದ್ದೇಗೆ? ನೋಡೋದಕ್ಕೆ ಸ್ಪೂರದ್ರೂಪಿಯಾಗಿರೋ ಮನೀಷ್ ಪಾಂಡೆ, ಮನಸ್ಸು ಕದಿಯೋಕೆ ತುಂಬಾ ಸುಂದರಿಯರು ಟ್ರೈ ಮಾಡಿದ್ರು. ಆದ್ರೆ ಪಾಂಡೆ ಮಾತ್ರ ಯಾರ ಪ್ರೇಮಪಾಶಕ್ಕೂ ಸಿಲುಕಿರಲಿಲ್ಲ. ಅದು ಒಂದು ವರ್ಷದ ಹಿಂದೆ ನಡೆದ ಪಾರ್ಟಿ. ಆ ಪಾರ್ಟಿಯಲ್ಲಿ ಸ್ಪೂರದ್ರೂಪಿ ಮನೀಷ್ ಪಾಂಡೆ ಕಣ್ಣಿಗೆ, ಚಂದನದ ಗೊಂಬೆಯಾಗಿ ಕಾಣಿಸಿದ್ದೇ ಈ ಆಶ್ರಿತಾ ಶೆಟ್ಟಿ. ಅತ್ತ ಆಶ್ರಿತಾ ಶೆಟ್ಟಿಗೂ ಮನೀಷ್ ಪಾಂಡೆ ಗಂಧರ್ವ ಲೋಕದ ಕಿನ್ನರನಾಗಿ ಕಾಣಿಸಿದ್ದ. ಹೀಗೆ ಪಾರ್ಟಿಯಲ್ಲಿ ಇಬ್ಬರು ಕಣ್ಣುಗಳು ಒಂದಾಗಿದ್ವು.

ಯಾರು ಈ ದುಂಡು ಮುಖದ ಆಶ್ರಿತಾ ಶೆಟ್ಟಿ? ಇಂಟ್ರಸ್ಟಿಂಗ್ ವಿಷ್ಯ ಅಂದ್ರೆ ಆಶ್ರಿತಾ ಶೆಟ್ಟಿ ಕರ್ನಾಟಕ ಮೂಲದವಳು ಎನ್ನಲಾಗ್ತಿದೆ. ಆಶ್ರಿತಾ ಮುಂಬೈನಲ್ಲೇ ಹುಟ್ಟಿ ಬೆಳೆದ್ರೂ ಮೊದಲು ನಟಿಸಿದ್ದು ತುಳು ಸಿನಿಮಾವೊಂದರಲ್ಲಿ. ಅಲ್ಲಿಗೆ ಈಕೆ ಕನ್ನಡದ ಬೇರಿನ ಚಿಗುರು ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಇನ್ನು ಆಶ್ರೀತಾ ದಕ್ಷಿಣ ಭಾರತ ಸಿನಿ ರಂಗದಲ್ಲಿ ಈಗ ತಾನೇ ಚಾಪು ಮೂಡಿಸುತ್ತಿದ್ದ ನಟಿ. ಸಿದ್ದಾರ್ಥ್ ಜೊತೆಯಲ್ಲಿ ತಮಿಳಿನ ಉದಯಂ ಎನ್ ಎಚ್ 4, ಒರು ಕನ್ನಿಯುಂ ಮೂನು ಕಳವಾನಿಕಳುಂ ಚಿತ್ರಗಳಲ್ಲಿ ನಟಿಸಿದ್ದು, ಈ ಚಿತ್ರ ಬಾಕ್ಸ್ ಆಫೀಸ್​ನಲ್ಲೂ ಸೌಂಡ್ ಮಾಡಿತ್ತು.

ಕಡೆಗೂ ಪಾಂಡೆ ತಮ್ಮ ಮನಸ್ಸು ಕದ್ದ ಚೆಲುವೆಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನೊಂದು ಇಂಟ್ರಸ್ಟಿಂಗ್ ವಿಷ್ಯ ಏನಂದ್ರೆ, ಯಾರದೋ ಜೊತೆ ಡೇಟಿಂಗ್ ಮಾಡಿ ಇನ್ನೊಬ್ಬರ ಕೈ ಹಿಡಿಯೋರ ಮದ್ಯೆ, ಸ್ಟಾರ್​ಗಿರಿ ಶ್ರೀಮಂತಿಕೆ ಇದ್ರೂ ಮನಸ್ಸು ಕದ್ದ ಚೆಲುವೆಯನ್ನೇ ಬಾಳಸಂಗಾತಿಯನ್ನಾಗಿ ಆರಿಸಿಕೊಂಡ ಪಾಂಡೆ ಪರಿಶುದ್ಧ ಪ್ರೀತಿಗೆ ಬೇಷ್ ಅನ್ನಲೇಬೇಕು.