ದುಬೈನಲ್ಲಿ ಧೋನಿ ಜತೆ ವಿಶೇಷವಾಗಿ ಕ್ರಿಸ್ಮಸ್ ಆಚರಿಸಿದ ಪಂತ್

ದುಬೈನಲ್ಲಿ ಧೋನಿ ಜತೆ ವಿಶೇಷವಾಗಿ ಕ್ರಿಸ್ಮಸ್ ಆಚರಿಸಿದ ಪಂತ್

ಟೀಂ ಇಂಡಿಯಾದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್​ಮನ್ ರಿಷಬ್ ಪಂತ್ ಕ್ರಿಸ್ಮಸ್ ಹಬ್ಬವನ್ನ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಟೀಮ್ ಇಂಡಿಯಾದ ಚಾಂಪಿಯನ್ ಎಂ.ಎಸ್.ಧೋನಿ ಜೊತೆ ಕ್ರಿಸ್ಮಸ್ ಹಬ್ಬವನ್ನ ರಿಷಬ್ ಪಂತ್ ದುಬೈನಲ್ಲಿ ಆಚರಿಸಿದ್ದಾರೆ. ಈ ಸಂಭ್ರಮದಲ್ಲಿ ಪಂತ್ ಗೆಳೆಯರು ಸಹ ಇದ್ದಾರೆ. ಈ ವಿಡಿಯೋದಲ್ಲಿ ಧೋನಿ ಖುಷಿ ಖುಷಿಯಿಂದ ಗೆಳೆಯರೊಂದಿಗೆ ಮಾತನಾಡ್ತಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. https://www.instagram.com/p/B6gEvVDH6_8/?utm_source=ig_web_copy_link ಇಸಿಬಿಯಿಂದ ಹಫೀಜ್ ಅಮಾನತು:  ಇಂಗ್ಲೆಂಡ್ ಹಾಗೂ ವೇಲ್ಸ್ ಆತಿಥ್ಯದಲ್ಲಿ ನಡೆಯುವ ಎಲ್ಲ ಸ್ಪರ್ಧೆಗಳಿಂದ ಪಾಕಿಸ್ತಾನದ […]

sadhu srinath

|

Dec 26, 2019 | 8:28 PM

ಟೀಂ ಇಂಡಿಯಾದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್​ಮನ್ ರಿಷಬ್ ಪಂತ್ ಕ್ರಿಸ್ಮಸ್ ಹಬ್ಬವನ್ನ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಟೀಮ್ ಇಂಡಿಯಾದ ಚಾಂಪಿಯನ್ ಎಂ.ಎಸ್.ಧೋನಿ ಜೊತೆ ಕ್ರಿಸ್ಮಸ್ ಹಬ್ಬವನ್ನ ರಿಷಬ್ ಪಂತ್ ದುಬೈನಲ್ಲಿ ಆಚರಿಸಿದ್ದಾರೆ. ಈ ಸಂಭ್ರಮದಲ್ಲಿ ಪಂತ್ ಗೆಳೆಯರು ಸಹ ಇದ್ದಾರೆ. ಈ ವಿಡಿಯೋದಲ್ಲಿ ಧೋನಿ ಖುಷಿ ಖುಷಿಯಿಂದ ಗೆಳೆಯರೊಂದಿಗೆ ಮಾತನಾಡ್ತಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

https://www.instagram.com/p/B6gEvVDH6_8/?utm_source=ig_web_copy_link

ಇಸಿಬಿಯಿಂದ ಹಫೀಜ್ ಅಮಾನತು:  ಇಂಗ್ಲೆಂಡ್ ಹಾಗೂ ವೇಲ್ಸ್ ಆತಿಥ್ಯದಲ್ಲಿ ನಡೆಯುವ ಎಲ್ಲ ಸ್ಪರ್ಧೆಗಳಿಂದ ಪಾಕಿಸ್ತಾನದ ಆಲ್​ರೌಂಡರ್ ಮೊಹಮ್ಮದ್ ಹಫೀಜ್​ರನ್ನ ಅಮಾನತುಗೊಳಿಸಲಾಗಿದೆ. ಇಸಿಬಿ ಬಿಡುಗಡೆ ಮಾಡಿದ ಹೇಳಿಕೆಯಂತೆ ಆಟಗಾರನು ತನ್ನ ಆಫ್ ಸ್ಪಿನ್ ಬೌಲಿಂಗ್​ನಲ್ಲಿ ಮೊಣಕೈ ವಿಸ್ತರಣೆಯು 15 ಡಿಗ್ರಿಗಳನ್ನ ಮೀರಿದೆ ಎಂದು ಮೌಲ್ಯಮಾಪನವು ತಿಳಿಸಿದೆ. ಇದರ ಅನ್ವಯ ಅಕ್ರಮ ಬೌಲಿಂಗ್ ಎಂದು ವ್ಯಾಖ್ಯಾನಿಸಲಾಗಿದೆ. ಹೀಗಾಗಿ ಮೊಹಮ್ಮದ್ ಹಫೀಜ್​ರನ್ನ ಬ್ರಿಟನ್ ಸ್ಪರ್ಧೆಯಿಂದ ನಿಷೇಧವನ್ನ ಹೇರಲಾಗಿದೆ.

ಅಶೋಕ್ ದಿಂಡಾಗೆ ನಿಷೇಧದ ಶಿಕ್ಷೆ ಆಂಧ್ರ ವಿರುದ್ಧದ ರಣಜಿ ಟ್ರೋಫಿ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಹಾಗೂ ಬೆಂಗಾಲ್ ತಂಡದ ವೇಗಿ ಅಶೋಕ್ ದಿಂಡಾ, ನಿಷೇಧದ ಶಿಕ್ಷೆಗೆ ಗುರಿಯಾಗಿದ್ದಾರೆ. ಪಂದ್ಯಕ್ಕೂ ಮುನ್ನ ನಡೆದ ಅಭ್ಯಾಸದ ಬಳಿಕ ದಿಂಡಾ ಬೆಂಗಾಲ್ ತಂಡದ ಕೋಚ್ ರಣದೇಬ್ ಬೋಸ್​ರನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾರಣ ಶಿಕ್ಷೆಗೆ ಗುರಿಯಾಗಿದ್ದಾರೆ. ಬೌಲಿಂಗ್ ಕೋಚ್ ರಣದೇಬ್ ಬೋಸ್ ತಂಡದ ನಾಯಕ ಅಭಿಮನ್ಯು ಈಶ್ವರನ್ ಜೊತೆ ಮಾತನಾಡುತ್ತಿದ್ದಾಗ, ಈ ಘಟನೆ ನಡೆದಿದೆ ಎನ್ನಲಾಗಿದೆ. ಘಟನೆ ಬಳಿಕ ದಿಂಡಾಗೆ ಕೋಚ್ ಬಳಿ ಕ್ಷಮೆ ಕೇಳಲು ಸೂಚಿಸಿದ್ರೂ, ಇದಕ್ಕೆ ಹಿಂದೇಟು ಹಾಕಿದೆ ಹಿನ್ನೆಲೆಯಲ್ಲಿ ಒಂದು ಪಂದ್ಯದಿಂದ ದಿಂಡಾಗೆ ನಿಷೇಧ ಹೇರಲಾಗಿದೆ.

ದೀಪಕ್ ಈ ಐಪಿಎಲ್ ಆಡೋದು ಡೌಟ್ ಟೀಮ್ ಇಂಡಿಯಾದ ಯುವ ವೇಗಿ ದೀಪಕ್ ಚಹರ್ 2020ರ ಐಪಿಎಲ್ ಟೂರ್ನಿ ಆಡೋದು ಅನುಮಾನವಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದ ವೇಳೆ ಬೆನ್ನು ನೋವಿನ ಸಮಸ್ಯೆಗೆ ತುತ್ತಾಗಿದ್ದ ದೀಪಕ್ ಚಹರ್, 3ನೇ ಪಂದ್ಯದಿಂದ ಹೊರಗುಳಿದಿದ್ರು. ಶ್ರೀಲಂಕಾ ವಿರುದ್ಧದ ಟಿಟ್ವೆಂಟಿ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಿಂದಲೂ ಹೊರಬಿದ್ದಿರುವ ದೀಪಕ್, ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳಲು 3ರಿಂದ ನಾಲ್ಕು ತಿಂಗಳು ಬೇಕಿದೆ. ಒಂದೊಮ್ಮೆ ದೀಪಕ್ ಸಮಯಕ್ಕೆ ಸರಿಯಾಗಿ ಗುಣಮುಖರಾಗದಿದ್ದರೇ, ಐಪಿಎಲ್​ನಲ್ಲಿ ಚೆನ್ನೈ ಪರ ಕೆಲ ಪಂದ್ಯಗಳಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ.

ಗ್ರಹಣ ಎಫೆಕ್ಟ್, 2ಗಂಟೆ ತಡವಾಗಿ ಪಂದ್ಯ ಆರಂಭ: ಮೈಸೂರಿನ ಗಂಗೋತ್ರಿ ಗ್ಲೈಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹಿಮಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು. ಮೊದಲ ಇನ್ನಿಂಗ್ಸ್​ನಲ್ಲಿ 67.2 ಓವರ್​ಗಳಲ್ಲಿ 166ರನ್​ಗಳಿಗೆ ಆಲೌಟ್ ಆಗಿತ್ತು. ಇಂದು ಬೆಳಗ್ಗೆ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಪಂದ್ಯವನ್ನ 2 ಗಂಟೆಗಳ ಕಾಲ ಮುಂದೂಡಲಾಗಿತ್ತು. 2ನೇ ದಿನದಾಟ ಆಟ ತಡವಾಗಿ ಆರಂಭವಾಯ್ತು. ಬೆಳಗ್ಗೆ 9.30ಕ್ಕೆ ಆರಂಭವಾಗಬೇಕಿದ್ದ ಪಂದ್ಯಕ್ಕೆ 11.15ಕ್ಕೆ ಆರಂಭವಾಗಿದೆ.

ಬೆನ್ ಸ್ಟೋಕ್ಸ್ ಮತ್ತೆ ತಂಡಕ್ಕೆ ಎಂಟ್ರಿ ಇಂಗ್ಲೆಂಡ್ ತಂಡದ ಸ್ಟಾರ್ ಆಲ್​ರೌಂಡರ್ ಬೆನ್ ಸ್ಟೋಕ್ಸ್ ಮತ್ತೆ ತಂಡವನ್ನ ಸೇರಿಕೊಂಡಿದ್ದಾರೆ. ಬೆನ್ ಸ್ಟೋಕ್ಸ್ ತಂದೆ ಗಿರ್ರಾರ್ಡ್​ಗೆ ಅನಾರೋಗ್ಯದ ಹಿನ್ನೆಲೆ, ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ರು. ಹೀಗಾಗಿ ತಂಡದ ಪ್ರಾಕ್ಟೀಸ್ ಸೆಷನ್​ಗೂ ಸಹ ಬೆನ್ ಸ್ಟೋಕ್ಸ್ ಭಾಗಿಯಾಗಿರಲಿಲ್ಲ. ಸದ್ಯ ಬೆನ್ ಸ್ಟೋಕ್ಸ್ ತಂದೆ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದಾರೆ. ಹೀಗಾಗಿ ಇಂದು ನಡೀತಿರೋ ದಕ್ಷಿಣ ಆಫ್ರಿಕಾ ವಿರುದ್ಧದ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಟೋಕ್ಸ್ ಅವಕಾಶ ಪಡೆದಿದ್ದಾರೆ.

Follow us on

Most Read Stories

Click on your DTH Provider to Add TV9 Kannada