- Kannada News Sports ಕೋಕಾ ಕೋಲಾ ದೂರವಿಟ್ಟ ರೊನಾಲ್ಡೊಗೆ ಇನ್‌ಸ್ಟಾಗ್ರಾಮ್‌ನಲ್ಲಿ 300 ಮಿಲಿಯನ್ ಫಾಲೋವರ್ಸ್! ಕೊಹ್ಲಿ ಕೂಡ ರೇಸ್ನಲ್ಲಿ
ಕೋಕಾ ಕೋಲಾ ದೂರವಿಟ್ಟ ರೊನಾಲ್ಡೊಗೆ ಇನ್‌ಸ್ಟಾಗ್ರಾಮ್‌ನಲ್ಲಿ 300 ಮಿಲಿಯನ್ ಫಾಲೋವರ್ಸ್! ಕೊಹ್ಲಿ ಕೂಡ ರೇಸ್ನಲ್ಲಿ
ವಿಶ್ವದ ಪ್ರಸಿದ್ಧ ಕ್ರೀಡಾಪಟುಗಳಲ್ಲಿ ಅಗ್ರಸ್ಥಾನದಲ್ಲಿರುವ ಜುವೆಂಟಸ್ ಫುಟ್‌ಬಾಲ್ ಕ್ಲಬ್‌ನ ತಾರೆ ರೊನಾಲ್ಡೊ ಈಗ ಇನ್‌ಸ್ಟಾಗ್ರಾಮ್‌ನಲ್ಲಿ 300 ಮಿಲಿಯನ್ ಫಾಲೋವರ್ಸ್ ಪಡೆದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Updated on: Jun 19, 2021 | 7:54 AM

ಪೋರ್ಚುಗಲ್‌ನ ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಮೈದಾನದಲ್ಲಿ ಮತ್ತು ಮೈದಾನದಿಂದ ಹೊರಗಿರುವ ಚಟುವಟಿಕೆಗಳಿಂದಾಗಿ ನಿರಂತರವಾಗಿ ಚರ್ಚೆಯಲ್ಲಿರುತ್ತಾರೆ. ಪ್ರಸ್ತುತ, ಅವರು ಯುರೋ 2020 ರಲ್ಲಿ ಪೋರ್ಚುಗೀಸ್ ತಂಡದೊಂದಿಗೆ ನಿರತರಾಗಿದ್ದಾರೆ. ಅಲ್ಲಿ ಅವರ ನಾಯಕತ್ವದಲ್ಲಿ ತಂಡವು ಮೊದಲ ಪಂದ್ಯದಲ್ಲಿ ಹಂಗೇರಿಯನ್ನು 3-0 ಗೋಲುಗಳಿಂದ ಸೋಲಿಸಿತು. ಈ ಅವಧಿಯಲ್ಲಿ ರೊನಾಲ್ಡೊ ಕೆಲವು ದಾಖಲೆಗಳನ್ನು ಮಾಡಿದ್ದಾರೆ. ಆದರೆ ಈ ದಾಖಲೆ ಮೈದಾನದ ಒಳಗಲ್ಲ. ಬದಲಿಗೆ ಮೈದಾನದಿಂದ ಹೊರಗಡೆ ಅವರು ದೊಡ್ಡ ದಾಖಲೆ ಮಾಡಿದ್ದಾರೆ.

ವಿಶ್ವದ ಪ್ರಸಿದ್ಧ ಕ್ರೀಡಾಪಟುಗಳಲ್ಲಿ ಅಗ್ರಸ್ಥಾನದಲ್ಲಿರುವ ಜುವೆಂಟಸ್ ಫುಟ್‌ಬಾಲ್ ಕ್ಲಬ್‌ನ ತಾರೆ ರೊನಾಲ್ಡೊ ಈಗ ಇನ್‌ಸ್ಟಾಗ್ರಾಮ್‌ನಲ್ಲಿ 300 ಮಿಲಿಯನ್ ಫಾಲೋವರ್ಸ್ ಪಡೆದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕ್ರಿಸ್ಟಿಯಾನೊ ಅವರ ಇನ್‌ಸ್ಟಾಗ್ರಾಮ್ ಖಾತೆಯು 300 ಮಿಲಿಯನ್ ಫಾಲೋವರ್ಸ್ ಗಡಿ ದಾಟಿದ ಮೊದಲನೆಯ ಖಾತೆಯಾಗಿದೆ.

ಮತ್ತೊಂದೆಡೆ, ನಾವು ಹೆಚ್ಚು ಅನುಯಾಯಿಗಳೊಂದಿಗೆ ಕ್ರೀಡಾಪಟುಗಳ ಬಗ್ಗೆ ಮಾತನಾಡಿದರೆ, ರೊನಾಲ್ಡೊ ಅವರ ಅತಿದೊಡ್ಡ ಪ್ರತಿಸ್ಪರ್ಧಿ ಮತ್ತು ಅಷ್ಟೇ ಶ್ರೇಷ್ಠ ಆಟಗಾರ ಅರ್ಜೆಂಟೀನಾ ಮತ್ತು ಬಾರ್ಸಿಲೋನಾ ಫುಟ್ಬಾಲ್ ಕ್ಲಬ್ ನಾಯಕ ಲಿಯೋನೆಲ್ ಮೆಸ್ಸಿ ಎರಡನೇ ಸ್ಥಾನದಲ್ಲಿದ್ದಾರೆ. ಮೆಸ್ಸಿ ಪ್ರಸ್ತುತ 219 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.

ಈ ಇಬ್ಬರ ನಂತರ, ಅತ್ಯಂತ ಜನಪ್ರಿಯ ಕ್ರೀಡಾಪಟು ಬ್ರೆಜಿಲ್ ಮತ್ತು ಪಿಎಸ್ಜಿಯ ಡ್ಯಾಶಿಂಗ್ ಫಾರ್ವರ್ಡ್ ನೇಮಾರ್ ಜೂನಿಯರ್. ಈ ಖ್ಯಾತ ಫುಟ್ಬಾಲ್ ಆಟಗಾರ ಇನ್ಸ್ಟಾಗ್ರಾಮ್ನಲ್ಲಿ 152 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.

ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅತಿ ಹೆಚ್ಚು ಗಳಿಕೆಯಿಂದ ಹಿಡಿದು ಅತ್ಯಂತ ಪ್ರಸಿದ್ಧ ಕ್ರೀಡಾಪಟುಗಳವರೆಗೆ, ಕೊಹ್ಲಿ ಮಾತ್ರ ಕ್ರಿಕೆಟ್‌ನಿಂದ ಧ್ವಜ ಎತ್ತುತ್ತಿದ್ದಾರೆ. ಪ್ರಸ್ತುತ ಯುಗದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಕೊಹ್ಲಿಗೆ 128 ಮಿಲಿಯನ್ ಫಾಲೋವರ್ಸ್ ಇದ್ದಾರೆ.

ನಾವು ಟಾಪ್ 5 ಬಗ್ಗೆ ಮಾತನಾಡಿದರೆ, ಲೆಬ್ರಾನ್ ಜೇಮ್ಸ್ ಈ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದಾರೆ. ಅಮೆರಿಕದ ವಿಶ್ವ ಪ್ರಸಿದ್ಧ ಬ್ಯಾಸ್ಕೆಟ್‌ಬಾಲ್ ಲೀಗ್ ಎನ್‌ಬಿಎಯ ಅತಿದೊಡ್ಡ ತಂಡಗಳಲ್ಲಿ ಒಂದಾದ ಲಾಸ್ ಏಂಜಲೀಸ್ ಲೇಕರ್ಸ್‌ನ ಈ ಆಟಗಾರ 88.4 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.
