AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Euro Cup 2024: ಆಂಗ್ಲರ ಕನಸು ನುಚ್ಚುನೂರು: ಸ್ಪೇನ್ ಯುರೋ ಕಪ್ ಚಾಂಪಿಯನ್ಸ್​

Euro Cup 2024 Final: ಸ್ಪೇನ್ ತಂಡವು ಯುರೋ ಕಪ್ ಇತಿಹಾಸದಲ್ಲಿ ನಾಲ್ಕನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. 1964 ರಲ್ಲಿ ಸ್ಪೇನ್ ಚೊಚ್ಚಲ ಬಾರಿ ಟ್ರೋಫಿ ಮುಡಿಗೇರಿಸಿಕೊಂಡಿದ್ದರು. ಇದಾದ ಬಳಿಕ 2ನೇ ಟ್ರೋಫಿ ಗೆದ್ದಿದ್ದು 2008 ರಲ್ಲಿ. ಇನ್ನು 2012 ರಲ್ಲಿ ಮೂರನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದ್ದರು. ಇದೀಗ ನಾಲ್ಕನೇ ಬಾರಿ ಯುರೋ ಕಪ್ ಎತ್ತಿ ಹಿಡಿಯುವಲ್ಲಿ ಸ್ಪೇನ್ ಯಶಸ್ವಿಯಾಗಿದೆ.

Euro Cup 2024: ಆಂಗ್ಲರ ಕನಸು ನುಚ್ಚುನೂರು: ಸ್ಪೇನ್ ಯುರೋ ಕಪ್ ಚಾಂಪಿಯನ್ಸ್​
Spain Champions
ಝಾಹಿರ್ ಯೂಸುಫ್
|

Updated on:Jul 15, 2024 | 8:17 AM

Share

ಯುರೋ ಕಪ್ (Euro Cup 2024) ಫುಟ್​ಬಾಲ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್​ ತಂಡವನ್ನು ಮಣಿಸಿ ಸ್ಪೇನ್  ಚಾಂಪಿಯನ್ ಪಟ್ಟ ಅಲಂಕರಿಸಿದೆ. ಬರ್ಲಿನ್​ನ ಒಲಿಂಪಿಯಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಪಂದ್ಯದ ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಸ್ಪೇನ್ ಪಡೆಯು ಸತತ ದಾಳಿಯ ಮೂಲಕ ಇಂಗ್ಲೆಂಡ್ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದ್ದರು. ಪರಿಣಾಮ ಮೊದಲಾರ್ಧದ ಅರ್ಧ ಭಾಗವನ್ನು ಇಂಗ್ಲೆಂಡ್ ರಕ್ಷಣಾತ್ಮಕ ಆಟಕ್ಕೆ ಕಳೆದರು.

ಇತ್ತ ಮೊದಲಾರ್ಧದಲ್ಲಿ ಸ್ಪೇನ್ ಚೆಂಡಿನ ಮೇಲೆ ಹಿಡಿತ ಸಾಧಿಸಿದ್ದರೂ, ಆಂಗ್ಲರ ರಕ್ಷಣಾ ಕೋಟೆಯನ್ನು ಬೇಧಿಸಲು ಮಾತ್ರ ಸಾಧ್ಯವಾಗಲಿಲ್ಲ. ಪರಿಣಾಮ ಮೊದಲಾರ್ಧವು ಯಾವುದೇ ಗೋಲುಗಳಿಲ್ಲದೇ ಅಂತ್ಯವಾಯಿತು.

ದ್ವಿತೀಯಾರ್ಧದ ಜಿದ್ದಾಜಿದ್ದು:

ದ್ವಿತೀಯಾರ್ಧದಲ್ಲಿ ಉಭಯ ತಂಡಗಳ ಮುನ್ಪೆಡೆ ಆಟಗಾರರು ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ್ದರು. ಅದರಲ್ಲೂ ರಣ ಉತ್ಸಾಹದಲ್ಲಿ ಕಾಣಿಸಿಕೊಂಡ ಸ್ಪೇನ್ ಪಡೆಯ ಫಾರ್ವಡ್ ಆಟಗಾರರಾದ ಅಲ್ವಾರೊ ಮೊರಾಟಾ, ಡ್ಯಾನಿ ಓಲ್ಮೋ, ಫೆರಾನ್ ಟೊರೆಸ್ ಮತ್ತು ಲ್ಯಾಮಿನ್ ಯಮಲ್ ಉತ್ತಮ ಹೊಂದಾಣಿಕೆಯ ಆಟ ಪ್ರದರ್ಶಿಸಿದರು.

ಈ ಹೊಂದಾಣಿಕೆಯ ಆಟದ ಫಲವಾಗಿ ಪಂದ್ಯದ 47ನೇ ನಿಮಿಷದಲ್ಲಿ ಮೊದಲ ಯಶಸ್ಸು ಪಡೆಯಿತು. ಮೊರಾಟಾ ನೀಡಿದ ಅತ್ಯುತ್ತಮ ಪಾಸ್ ಅನ್ನು ಲೆಫ್ಟ್ ವಿಂಗ್​ ಮೂಲಕ ಮುನ್ನುಗ್ಗಿ ಬಂದು ನಿಕೋ ವಿಲಿಯಮ್ಸ್ ಗೋಲಾಗಿ ಪರಿವರ್ತಿಸಿದರು.

ಈ ಗೋಲಿನ ಬಳಿಕ ಇಂಗ್ಲೆಂಡ್ ಫಾರ್ವಡ್ ಆಟಗಾರರಾದ ಹ್ಯಾರಿ ಕೇನ್, ಸಾಕಾ ಮತ್ತು ಬೆಲ್ಲಿಂಗ್​ಹ್ಯಾಮ್ ಸತತವಾಗಿ ಸ್ಪೇನ್​ ಪೋಸ್ಟ್​ನತ್ತ ದಾಳಿ ನಡೆಸಿದರು/ ಆದರೆ ಯಶಸ್ಸು ಮಾತ್ರ ದಕ್ಕಲಿಲ್ಲ. ಅದರಲ್ಲೂ ಸ್ಪೇನ್ ತಂಡದ ರಕ್ಷಣಾ ಪಡೆಯು ಆಂಗ್ಲರನ್ನು ಕಟ್ಟಿಹಾಕಲು ಅದ್ಭುತ ಯೋಜನೆ ರೂಪಿಸಿದ್ದರು. ಪರಿಣಾಮ ಹಲವು ಬಾರಿ ಗೋಲು ಬಲೆಯತ್ತ ಸಾಗಿದರೂ ನಿರಾಸೆ ಅನುಭವಿಸಬೇಕಾಯಿತು.

ಆದರೆ 73ನೇ ನಿಮಿಷದಲ್ಲಿ ಬೆಲ್ಲಿಂಗ್​ಹ್ಯಾಮ್ ನೀಡಿದ ಉತ್ತಮ ಪಾಸ್​ ಅನ್ನು ಗೋಲಾಗಿಸುವಲ್ಲಿ ಕೋಲ್ ಪಾಲ್ಮರ್ ಕೊನೆಗೂ ಯಶಸ್ವಿಯಾದರು. ಈ ಗೋಲಿನೊಂದಿಗೆ ಪಂದ್ಯವು 1-1 ಸಮಬಲದೊಂದಿಗೆ ಸಾಗಿತು. ಅಲ್ಲದೆ ಅಂತಿಮ ನಿಮಿಷಗಳ ವೇಳೆ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟಿತು.

ಈ ಹಂತದಲ್ಲಿ ಸ್ಪೇನ್ ತಂಡದ ಮುನ್ಪಡೆಯಲ್ಲಿ ಕೆಲ ಬದಲಾವಣೆವನ್ನು ಮಾಡಲಾಯಿತು. ಈ ಬದಲಾವಣೆಯಿಂದಾಗಿ ಇಂಗ್ಲೆಂಡ್​ಗಿಂತ ಸ್ಪೇನ್ ಆಟಗಾರರು ರಣ ಉತ್ಸಾಹದಲ್ಲಿ ಕಾಣಿಸಿಕೊಂಡರು. ಅದರಲ್ಲೂ 86ನೇ ನಿಮಿಷದಲ್ಲಿ ಗೋಲು ಬಲೆಯತ್ತ ತೂರಿಬಂದ ಚೆಂಡನ್ನು ಸ್ಲೈಡ್ ಕಿಕ್​ನೊಂದಿಗೆ ಗೋಲಾಗಿಸುವಲ್ಲಿ ಮಿಡ್ ಫೀಲ್ಡರ್ ಆಟಗಾರ ಮೈಕೆಲ್ ಒಯರ್ಜಾಬಲ್ ಯಶಸ್ವಿಯಾದರು.

86ನೇ ನಿಮಿಷದಲ್ಲಿ 2-1 ಗೋಲುಗಳ ಅಂತರದಿಂದ ಮುನ್ನಡೆ ಸಾಧಿಸಿದ ಸ್ಪೇನ್ ತಂಡವು ಅಂತಿಮ ಕ್ಷಣದಲ್ಲಿ ರಕ್ಷಣಾತ್ಮಕ ಆಟಕ್ಕೆ ಮುಂದಾದರು. ಆದರೆ ಪಂದ್ಯವನ್ನು ಡ್ರಾಗೊಳಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದ ಇಂಗ್ಲೆಂಡ್​ಗೆ ಹಲವು ಅವಕಾಶಗಳು ದೊರೆತರೂ ಚೆಂಡನ್ನು ಗೋಲು ಬಲೆಯೊಳಗೆ ತಲುಪಿಸುವಲ್ಲಿ ವಿಫಲರಾದರು.

ಅದರಲ್ಲೂ ಪಂದ್ಯದ 90ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್​ ಅನ್ನು ಗೋಲಾಗಿಸುವಲ್ಲಿ ಇಂಗ್ಲೆಂಡ್ ಆಟಗಾರರು ಸರ್ವ ಪ್ರಯತ್ನ ನಡೆಸಿದ್ದರು. ಆದರೆ ಗೋಲು ಬಲೆಯ ಲೈನ್​ನಲ್ಲಿ ನಿಂತು ಡ್ಯಾನಿ ಓಲ್ಮೋ ಹೆಡ್ ಮಾಡುವ ಮೂಲಕ ಚೆಂಡನ್ನು ತಡೆದರು. ಈ ಅದ್ಭುತ ಸೇವ್ ಸ್ಪೇನ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿತು ಎಂದರೆ ತಪ್ಪಾಗಲಾರದರು. ಅದರಂತೆ ಅಂತಿಮವಾಗಿ 2-1 ಅಂತರದಿಂದ ಇಂಗ್ಲೆಂಡ್ ತಂಡವನ್ನು ಮಣಿಸಿ ಸ್ಪೇನ್ ಪಡೆಯು ಯುರೋ ಕಪ್ 2024ರ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಸ್ಪೇನ್ ತಂಡದ ಸಂಭ್ರಮ:

ಇದನ್ನೂ ಓದಿ: ಚಾಂಪಿಯನ್ಸ್​ ಟ್ರೋಫಿಯಿಂದ ಟೀಮ್ ಇಂಡಿಯಾ ಹಿಂದೆ ಸರಿದರೆ, ಯಾವ ತಂಡಕ್ಕೆ ಚಾನ್ಸ್?

ಇಂಗ್ಲೆಂಡ್ ಕನಸು ನುಚ್ಚುನೂರು:

ಇಂಗ್ಲೆಂಡ್ ತಂಡವು ಈವರೆಗೆ ಯುರೋ ಕಪ್ ಗೆದ್ದಿಲ್ಲ. 2021ರ ಫೈನಲ್​ನಲ್ಲಿ ಇಟಲಿ ವಿರುದ್ಧ 3-2 ಅಂತರದಿಂದ ಸೋತಿದ್ದ ಆಂಗ್ಲರು, ಈ ಬಾರಿ ಕೂಡ ಸೋಲೊಪ್ಪಿಕೊಂಡಿದ್ದಾರೆ. ಈ ಮೂಲಕ ಚೊಚ್ಚಲ ಬಾರಿ ಯುರೋ ಕಪ್ ಗೆಲ್ಲುವ ಅವಕಾಶವನ್ನು ಕೈಚೆಲ್ಲಿಕೊಂಡಿದ್ದಾರೆ.

Published On - 8:16 am, Mon, 15 July 24

ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ