AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

FIFA WC 2022: ಇಟಲಿ ಟು ಚಿಲಿ; ಈ 5 ದಿಗ್ಗಜ ತಂಡಗಳಿಲ್ಲದೆ ನಡೆಯಲಿದೆ ಈ ಬಾರಿಯ ವಿಶ್ವಕಪ್‌..!

FIFA World Cup 2022: ಪ್ರಸ್ತುತ ಯೂರೋ ಕಪ್ ವಿಜೇತ ಮತ್ತು 4 ಬಾರಿ ವಿಶ್ವ ಚಾಂಪಿಯನ್ ಇಟಲಿಯಂತಹ ದಿಗ್ಗಜ ತಂಡಕ್ಕೆ ಈ ಬಾರಿ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ.

FIFA WC 2022: ಇಟಲಿ ಟು ಚಿಲಿ; ಈ 5 ದಿಗ್ಗಜ ತಂಡಗಳಿಲ್ಲದೆ ನಡೆಯಲಿದೆ ಈ ಬಾರಿಯ ವಿಶ್ವಕಪ್‌..!
Football World Cup
TV9 Web
| Updated By: ಪೃಥ್ವಿಶಂಕರ|

Updated on:Nov 17, 2022 | 1:32 PM

Share

ಫುಟ್ಬಾಲ್ ವಿಶ್ವಕಪ್ 2022 (FIFA World Cup 2022) ನವೆಂಬರ್ 20 ರಿಂದ ಪ್ರಾರಂಭವಾಗಲಿದೆ. ಕತಾರ್​ನಲ್ಲಿ ನಡೆಯಲಿರುವ ಈ ವಿಶ್ವಕಪ್​ನಲ್ಲಿ ಒಟ್ಟು 32 ತಂಡಗಳು ಭಾಗವಹಿಸಲಿವೆ. ಪ್ರಸ್ತುತ ಯೂರೋ ಕಪ್ ವಿಜೇತ ಮತ್ತು 4 ಬಾರಿ ವಿಶ್ವ ಚಾಂಪಿಯನ್ ಇಟಲಿಯಂತಹ ದಿಗ್ಗಜ ತಂಡಕ್ಕೆ ಈ ಬಾರಿ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ವಿಶ್ವಕಪ್‌ನ ಭಾಗವಾಗದ ತಂಡ ಇದೊಂದೇ ಅಲ್ಲ, ಇತರ 4 ದಿಗ್ಗಜ ತಂಡಗಳು ಈ ವಿಶ್ವಕಪ್​ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿವೆ. ಈ ಐದು ತಂಡಗಳ ಅನುಪಸ್ಥಿತಿಯು ಅಭಿಮಾನಿಗಳಿಗೆ ನಿರಾಶೆಯನ್ನುಂಟು ಮಾಡಿದೆ. ಅಂತಹ 5 ದಿಗ್ಗಜ ತಂಡಗಳು ಯಾವುವು ಎಂಬುದರ ಪೂರ್ಣ ವಿವರ ಇಲ್ಲಿದೆ.

1. ಇಟಲಿ: ಬ್ರೆಜಿಲ್ ನಂತರ ಅತಿ ಹೆಚ್ಚು ಫುಟ್ಬಾಲ್ ವಿಶ್ವಕಪ್ ಗೆದ್ದ ತಂಡ ಇಟಲಿ. ಇಟಲಿ 4 ಬಾರಿ ವಿಶ್ವ ಚಾಂಪಿಯನ್ ಆಗಿದೆ. ಸದ್ಯ ಫಿಫಾ ರ್ಯಾಂಕಿಂಗ್‌ನಲ್ಲಿ 6ನೇ ಸ್ಥಾನದಲ್ಲಿದೆ. ಕಳೆದ ವರ್ಷವೂ ಈ ತಂಡ ಯೂರೋ ಕಪ್ ಚಾಂಪಿಯನ್ ಆಗಿತ್ತು. ಆದರೆ, ಈ ವರ್ಷ ವಿಶ್ವಕಪ್‌ಗೆ ಅರ್ಹತೆ ಪಡೆಯುವ ಅವಕಾಶವನ್ನು ಇಟಲಿ ಕಳೆದುಕೊಂಡಿತು. ಮಾರ್ಚ್‌ನಲ್ಲಿ ನಡೆದ ಪ್ಲೇಆಫ್ ಸೆಮಿ-ಫೈನಲ್‌ನಲ್ಲಿ ಉತ್ತರ ಮೆಸಿಡೋನಿಯಾ ವಿರುದ್ಧ 92 ನೇ ನಿಮಿಷದ ಸೋಲು ಇಟಲಿಯನ್ನು ವಿಶ್ವಕಪ್ ರೇಸ್‌ನಿಂದ ಹೊರಹಾಕಿತು.

2. ಚಿಲಿ: ಈ ದಕ್ಷಿಣ ಅಮೆರಿಕಾದ ತಂಡ ಇಲ್ಲಿಯವರೆಗೆ ವಿಶ್ವಕಪ್‌ನ ಭಾಗವಾಗಿತ್ತು. 1962ರಲ್ಲಿ ಈ ತಂಡ ಸೆಮಿಫೈನಲ್ ತಲುಪಿತ್ತು. ಪ್ರಸ್ತುತ ಈ ತಂಡದ ಶ್ರೇಯಾಂಕ 29. ಕತಾರ್‌ನಲ್ಲಿ ನಡೆದ 4 ಅರ್ಹತಾ ಪಂದ್ಯಗಳಲ್ಲಿ ಈ ತಂಡ ಕೇವಲ ಒಂದು ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಇದರಿಂದಾಗಿ ಈ ತಂಡ ಚೊಚ್ಚಲ ಬಾರಿಗೆ ವಿಶ್ವಕಪ್‌ಗೆ ಗೈರು ಹಾಜರಾಗಬೇಕಿದೆ.

3. ಕೊಲಂಬಿಯಾ: ಕೊಲಂಬಿಯಾ ತಂಡ ಫಿಫಾ ಶ್ರೇಯಾಂಕದಲ್ಲಿ 17ನೇ ಸ್ಥಾನದಲ್ಲಿದೆ. ಬ್ರೆಜಿಲ್‌ನಲ್ಲಿ ನಡೆದ 2014 ರ ವಿಶ್ವಕಪ್‌ನಲ್ಲಿ ತಂಡವು ಕ್ವಾರ್ಟರ್ ಫೈನಲ್‌ಗೆ ತಲುಪಿತು. ತಂಡದ ಸ್ಟಾರ್ ಆಟಗಾರ ಜೇಮ್ಸ್ ರೋಡ್ರಿಗಸ್ ವಿಶ್ವಕಪ್ ಗೋಲ್ಡನ್ ಬೂಟ್ ವಿಜೇತರಾಗಿದ್ದಾರೆ. ಆದರೆ ಈ ಬಾರಿ ತಮ್ಮ ತಂಡವನ್ನು ವಿಶ್ವಕಪ್‌ಗೆ ಅರ್ಹತೆ ಪಡೆಯುವಂತೆ ಮಾಡಲು ಜೇಮ್ಸ್ ರೋಡ್ರಿಗಸ್ ಸಾಧ್ಯವಾಗಲಿಲ್ಲ.

4. ಸ್ವೀಡನ್: ಇಲ್ಲಿಯವರೆಗೆ 21 ವಿಶ್ವಕಪ್‌ಗಳಲ್ಲಿ 12 ಪಂದ್ಯಗಳನ್ನು ಆಡಿರುವ ಸ್ವೀಡನ್ ತಂಡ 1958 ರಲ್ಲಿ ವಿಶ್ವಕಪ್‌ನಲ್ಲಿ ರನ್ನರ್ ಅಪ್ ಆಗಿತ್ತು. ಕಳೆದ ವರ್ಷ ಕತಾರ್ ವಿಶ್ವಕಪ್ ಅರ್ಹತಾ ಸುತ್ತಿನ ಎರಡನೇ ಸುತ್ತಿನಲ್ಲಿ ಸ್ವೀಡನ್ ಆಡಿದ 6 ಪಂದ್ಯಗಳಲ್ಲಿ 3 ರಲ್ಲಿ ಸೋತಿದೆ. ಇದರಿಂದಾಗಿ ಈ ತಂಡ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯಿತು. ಪೋಲೆಂಡ್ ವಿರುದ್ಧದ ಪ್ಲೇಆಫ್ ಸೋಲು ಸ್ವೀಡನ್ ವಿಶ್ವಕಪ್ ತಲುಪುವ ಕನಸನ್ನು ಕೊನೆಗೊಳಿಸಿತು, ತಂಡವು ಪ್ರಸ್ತುತ 25 ನೇ ಸ್ಥಾನದಲ್ಲಿದೆ.

5. ನೈಜೀರಿಯಾ: ಈ ಆಫ್ರಿಕನ್ ತಂಡ ತನ್ನ ಆಟಕ್ಕೆ ಹೆಸರುವಾಸಿಯಾಗಿದೆ. 1994 ರಲ್ಲಿ ನೈಜೀರಿಯಾ ಮೊದಲ ವಿಶ್ವಕಪ್ ಆಡಿತು. ಅಂದಿನಿಂದ, ತಂಡವು 2006 ರ ವಿಶ್ವಕಪ್ ಅನ್ನು ಮಾತ್ರ ತಪ್ಪಿಸಿಕೊಂಡಿದೆ. ನೈಜೀರಿಯಾ ಇದುವರೆಗೆ ಮೂರು ಬಾರಿ 16ರ ಘಟ್ಟಕ್ಕೆ ತಲುಪಿದ್ದು, ತಂಡದ FIFA ಶ್ರೇಯಾಂಕವು 32 ಆಗಿದೆ. ಅಲ್ಲದೆ ಭಾರೀ ಸಂಖ್ಯೆಯಲ್ಲಿ ನೈಜೀರಿಯನ್ನರು ಕತಾರ್‌ನಲ್ಲಿ ಕೆಲಸ ಮಾಡುತ್ತಾರೆ. ಹೀಗಿರುವಾಗ ಈ ಬಾರಿ ವಿಶ್ವಕಪ್​ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ವಿಫಲವಾಗಿರುವುದು ನೈಜೀರಿಯಾ ಅಭಿಮಾನಿಗಳಿಗೆ ಬೇಸರದ ಸುದ್ದಿಯಾಗಿದೆ.

Published On - 1:29 pm, Thu, 17 November 22

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್