ಅಫ್ರಿದಿಗೆ ಮುಟ್ಟಿನೋಡ್ಕೊಂಡಂಗೆ ತಿರುಗೇಟು ನೀಡಿದ ಗಂಭೀರ್!

|

Updated on: May 19, 2020 | 2:15 PM

ಪದೇ ಪದೇ ಭಾರತದ ವಿಚಾರದಲ್ಲಿ ಕ್ಯಾತೆ ತೆಗೆಯೋ ಪಾಕಿಸ್ತಾನ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ, ಪ್ರಧಾನಿ ನರೇಂದ್ರ ಮೋದಿಯನ್ನ ಕೆಣಕಿ, ಮಾಜಿ ಕ್ರಿಕೆಟಿಗ ಬಿಜೆಪಿ ಸಂಸದ ಗೌತಮ್ ಗಂಭೀರ್​ ಕೈಯಿಂದ ಮಂಗಳಾರತಿ ಮಾಡಿಸಿಕೊಂಡಿದ್ದಾರೆ. ಇತ್ತೀಚೆಗೆ ಪಾಕ್​ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ಕೊಟ್ಟಿದ್ದ ಶಾಹೀದ್ ಅಫ್ರಿದಿ, ನಾನು ನಿಮ್ಮ ಹಳ್ಳಿಯಲ್ಲಿದ್ದೇನೆ. ಕೊರೊನಾ ವೈರಸ್​ನ ಕಾರಣಕ್ಕೆ ಇಲ್ಲಿಗೆ ಬರುವುದು ಸ್ವಲ್ಪ ತಡವಾಗಿದೆ. ಆದರೆ ಕೊರೊನಾಗಿಂತಲೂ ದೊಡ್ಡದಾದ ಕಾಯಿಲೆ ಭಾರತದ ಪ್ರಧಾನಿ ನರೇಂದ್ರ ಮೋದಿ ಎಂದು ಅವಮಾನಿಸಿದ್ದಾರೆ. ಮೋದಿ ಕಾಶ್ಮೀರದಲ್ಲಿ […]

ಅಫ್ರಿದಿಗೆ ಮುಟ್ಟಿನೋಡ್ಕೊಂಡಂಗೆ ತಿರುಗೇಟು ನೀಡಿದ ಗಂಭೀರ್!
Follow us on

ಪದೇ ಪದೇ ಭಾರತದ ವಿಚಾರದಲ್ಲಿ ಕ್ಯಾತೆ ತೆಗೆಯೋ ಪಾಕಿಸ್ತಾನ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ, ಪ್ರಧಾನಿ ನರೇಂದ್ರ ಮೋದಿಯನ್ನ ಕೆಣಕಿ, ಮಾಜಿ ಕ್ರಿಕೆಟಿಗ ಬಿಜೆಪಿ ಸಂಸದ ಗೌತಮ್ ಗಂಭೀರ್​ ಕೈಯಿಂದ ಮಂಗಳಾರತಿ ಮಾಡಿಸಿಕೊಂಡಿದ್ದಾರೆ.

ಇತ್ತೀಚೆಗೆ ಪಾಕ್​ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ಕೊಟ್ಟಿದ್ದ ಶಾಹೀದ್ ಅಫ್ರಿದಿ, ನಾನು ನಿಮ್ಮ ಹಳ್ಳಿಯಲ್ಲಿದ್ದೇನೆ. ಕೊರೊನಾ ವೈರಸ್​ನ ಕಾರಣಕ್ಕೆ ಇಲ್ಲಿಗೆ ಬರುವುದು ಸ್ವಲ್ಪ ತಡವಾಗಿದೆ. ಆದರೆ ಕೊರೊನಾಗಿಂತಲೂ ದೊಡ್ಡದಾದ ಕಾಯಿಲೆ ಭಾರತದ ಪ್ರಧಾನಿ ನರೇಂದ್ರ ಮೋದಿ ಎಂದು ಅವಮಾನಿಸಿದ್ದಾರೆ.

ಮೋದಿ ಕಾಶ್ಮೀರದಲ್ಲಿ ಏಳು ಲಕ್ಷ ಸೈನಿಕರನ್ನ ನಿಯೋಜಿಸಿದ್ದಾರೆ. ಇದು ಪಾಕಿಸ್ತಾನ ಸೇನೆಯ ಒಟ್ಟಾರೆ ಸೈನಿಕರ ಸಂಖ್ಯೆಗೆ ಸಮವಾಗಿದೆ ಎಂದಿರುವ ಅಫ್ರಿದಿ, ಭಾರತದಲ್ಲಿರುವ ಕಾಶ್ಮೀರಿಗಳು ಪಾಕಿಸ್ತಾನದ ಸೇನೆಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ಬಡಾಯಿ ಬಿಟ್ಟಿದ್ದಾನೆ.

ಗಂಭೀರ್ ಟ್ವಿಟರ್​ ತಿರುಗೇಟು:
ಇನ್ನು ಅಫ್ರಿದಿಯ ಈ ಮಾತಿಗೆ ಕಟುವಾಗಿ ಪ್ರತಿಕ್ರಿಯಿಸಿರುವ ಟೀಂ ಇಂಡಿಯಾ ಮಾಜಿ ಆಟಗಾರ ಹಾಗೂ ಸಂಸದ ಗೌತಮ್ ಗಂಭೀರ್, ಪಾಕಿಸ್ತಾನ 70 ವರ್ಷಗಳಿಂದ ಕಾಶ್ಮೀರಕ್ಕಾಗಿ ಭಿಕ್ಷೆ ಬೇಡುತ್ತಿದೆ. ಶಾಹಿದ್ ಅಫ್ರಿದಿ, ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಸೇನಾ ಮುಖ್ಯಸ್ಥ ಬಜ್ವಾರಂತಹ ಜೋಕರ್​ಗಳು ಭಾರತ ಹಾಗೂ ನರೇಂದ್ರ ಮೋದಿಯ ವಿರುದ್ಧ ವಿಷವನ್ನು ಕಕ್ಕುತ್ತಾರೆ.

ಈ ಮೂಲಕ ಪಾಕಿಸ್ತಾನದ ಜನರನ್ನು ಮುಟ್ಠಾಳರನ್ನಾಗಿ ಮಾಡುತ್ತಿದ್ದಾರೆ. ಆದರೆ ಇದರ ಮೂಲಕ ಕಾಶ್ಮೀರವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಬಾಂಗ್ಲಾದೇಶವನ್ನು ಒಮ್ಮೆ ನೆನಪಿಸಿಕೊಳ್ಳಿ ಎಂದು ಗಂಭೀರ್ ಟ್ವಿಟರ್​ನಲ್ಲಿ ಅಫ್ರಿದಿಗೆ ತಿರುಗೇಟು ನೀಡಿದ್ದಾರೆ.

ಗಂಭೀರ್ ಖಡಕ್ ಆಗಿ ತಿರುಗೇಟು ನೀಡುತ್ತಿದ್ದಂತೆ ಅಫ್ರಿದಿ, ತುಟಿ ಪಿಟಿಕ್ ಎಂದಿಲ್ಲ. ಪದೇ ಪದೇ ಭಾರತ ಮತ್ತು ಪ್ರಧಾನಿ ಮೋದಿ ವಿರುದ್ಧ ಕಿಡಿ ಕಾರೋ ಅಫ್ರಿದಿಗೆ, ಆಕಾಶಕ್ಕೆ ಮುಖ ಮಾಡಿ ಉಗಿದ್ರೆ ಏನಾಗುತ್ತೆ ಅನ್ನೊದು ಈಗ ಅರ್ಥವಾದಂತೆ ಕಾಣ್ತಿದೆ.

Published On - 1:34 pm, Tue, 19 May 20