ಹೊಸ ಇನಿಂಗ್ಸ್ ಆರಂಭಿಸುವ ಬಗ್ಗೆ ಬಾಯ್ಬಿಟ್ಟ ಯುವರಾಜ..

ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಹೊಸ ಇನಿಂಗ್ಸ್ ಆರಂಭಿಸೋದಕ್ಕೆ ರೆಡಿಯಾಗಿದ್ದಾರೆ. 14 ವರ್ಷಗಳ ಕಾಲ ಟೀಮ್ ಇಂಡಿಯಾ ಘರ್ಜಿಸಿದ ಯುವರಾಜ, ಈಗ ಶುರುಮಾಡ್ತಿರೋ ಹೊಸ ಇನಿಂಗ್ಸ್ ಯಾವುದು ಅನ್ನೋ ಕುತೂಹಲ ನಿಮ್ಮಲ್ಲಿ ಇದ್ದೆ ಇರುತ್ತೆ. ಕಳೆದ ವರ್ಷ ಜೂನ್​ ತಿಂಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್ ಬೈ ಹೇಳಿದ್ದ ಯುವಿ, ಕೆನಡಾ ಟಿಟ್ವೆಂಟಿ ಲೀಗ್​ನಲ್ಲಿ ಕಾಣಿಸಿಕೊಂಡಿದ್ರು. ಆದ್ರೀಗ ಯುವರಾಜ್ ಸಿಂಗ್ ತಮ್ಮ ಹೊಸ ಇನಿಂಗ್ಸ್ ಬಗ್ಗೆ ಬಾಯ್ಬಿಟ್ಟಿದ್ದಾರೆ. ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಕೇವಿನ್ ಪೀಟರ್ಸನ್ […]

ಹೊಸ ಇನಿಂಗ್ಸ್ ಆರಂಭಿಸುವ ಬಗ್ಗೆ ಬಾಯ್ಬಿಟ್ಟ ಯುವರಾಜ..
ಯುವರಾಜ್ ಸಿಂಗ್
Follow us
ಸಾಧು ಶ್ರೀನಾಥ್​
|

Updated on:May 20, 2020 | 12:50 PM

ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಹೊಸ ಇನಿಂಗ್ಸ್ ಆರಂಭಿಸೋದಕ್ಕೆ ರೆಡಿಯಾಗಿದ್ದಾರೆ. 14 ವರ್ಷಗಳ ಕಾಲ ಟೀಮ್ ಇಂಡಿಯಾ ಘರ್ಜಿಸಿದ ಯುವರಾಜ, ಈಗ ಶುರುಮಾಡ್ತಿರೋ ಹೊಸ ಇನಿಂಗ್ಸ್ ಯಾವುದು ಅನ್ನೋ ಕುತೂಹಲ ನಿಮ್ಮಲ್ಲಿ ಇದ್ದೆ ಇರುತ್ತೆ.

ಕಳೆದ ವರ್ಷ ಜೂನ್​ ತಿಂಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್ ಬೈ ಹೇಳಿದ್ದ ಯುವಿ, ಕೆನಡಾ ಟಿಟ್ವೆಂಟಿ ಲೀಗ್​ನಲ್ಲಿ ಕಾಣಿಸಿಕೊಂಡಿದ್ರು. ಆದ್ರೀಗ ಯುವರಾಜ್ ಸಿಂಗ್ ತಮ್ಮ ಹೊಸ ಇನಿಂಗ್ಸ್ ಬಗ್ಗೆ ಬಾಯ್ಬಿಟ್ಟಿದ್ದಾರೆ. ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಕೇವಿನ್ ಪೀಟರ್ಸನ್ ಜೊತೆ, ಇನ್​ಸ್ಟಾದಲ್ಲಿ ಮಾತನಾಡೋವಾಗ ಯುವಿ ಕೋಚ್ ಆಗಿ ಕಾರ್ಯ ನಿರ್ವಹಿಸೋ ಆಸೆಯಿದೆ ಅನ್ನೋದನ್ನ ಹೇಳಿಕೊಂಡಿದ್ದಾರೆ.

ಕೋಚ್ ಆಗಲು ತುಂಬಾ ಉತ್ಸುಕ: ‘ನಾನು ಕೋಚ್ ಆಗಲು ತುಂಬಾ ಉತ್ಸುಕನಾಗಿದ್ದೇನೆ. ಮೊದಲು ನಾನು ಯಾವುದಾದರೂ ಒಂದು ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತೇನೆ. ಅಲ್ಲಿ ನಾನೇನಾದ್ರೂ ಯಶಸ್ಸು ಕಂಡ್ರೆ, ನಂತರ ಫುಲ್ ಟೈಮ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತೇನೆ’ ಎಂದಿದ್ದಾರೆ.

ಹಾಗೇ ಕೋಚ್ ಆದ್ರೆ ತಾನು ಯಾವ ವಿಭಾಗದಲ್ಲಿ ಸ್ಟ್ರಾಂಗ್ ಮಾಡ್ತೀನಿ ಅನ್ನೋದನ್ನು ಯುವಿ, ಕೆಪಿ ಜೊತೆ ಹಂಚಿಕೊಂಡಿದ್ದಾರೆ. ಮಿಡಲ್ ಆರ್ಡರ್​ ಬ್ಯಾಟ್ಸ್​ಮನ್​ಗಳು ಹೇಗೆ ತಂಡಕ್ಕೆ ನೆರವಾಗಬೇಕು ಅನ್ನೋದನ್ನ, ಸ್ವತಃ ಮಿಡಲ್ ಆರ್ಡರ್ ಬ್ಯಾಟ್ಸ್​ಮನ್ ಆಗಿ ತನ್ನ ಅನುಭವವನ್ನ ಧಾರೆಯೆರೆಯಲಿದ್ದೇನೆ ಎಂದಿದ್ದಾರೆ.

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಹೆಚ್ಚು ಒಳನೋಟವಿದೆ: ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ನನಗೆ ಹೆಚ್ಚು ಒಳನೋಟವಿದೆ ಮತ್ತು ಅವರು ಯಾವ ರೀತಿಯ ಮನಸ್ಥಿತಿಯನ್ನು ಹೊಂದಿರಬೇಕು ಎಂಬುದರ ಕುರಿತು ನಂಬರ್ 4, 5, 6 ರಲ್ಲಿ ಬ್ಯಾಟಿಂಗ್ ಮಾಡಲು ಬರುವ ಆಟಗಾರರೊಂದಿಗೆ ನನ್ನ ಜ್ಞಾನವನ್ನು ಹಂಚಿಕೊಳ್ಳಬಹುದು ಎಂದು ಅವರು ಹೇಳಿದರು.

ಸದ್ಯ ಪಂಜಾಬ್ ಕಾ ಪುತ್ತರ್ ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಮುಂದಿನ ಒಂದು ವರ್ಷ ವಿದೇಶಿ ಟಿ-ಟ್ವೆಂಟಿ ಲೀಗ್​ಗಳನ್ನ ಆಡುವ ಯೋಜನೆ ಹೊಂದಿದ್ದಾರೆ. ಆ ಬಳಿಕ ಯುವಿ ಯಾವುದಾದ್ರೂ ಒಂದು ತಂಡದ ತರಬೇತುದಾರರಾಗಿ ಕಾಣಿಸಿಕೊಳ್ಳಲಿದ್ದಾರೆ. ಯುವಿಯ ಸೆಕೆಂಡ್ ಇನ್ನಿಂಗ್ಸ್ ಮೊದಲ ಇನಿಂಗ್ಸ್​​ನಂತೆ ಯಶಸ್ವಿಯಾಗಲಿ ಅನ್ನೋದೇ ಅವರ ಅಭಿಮಾನಿಗಳ ಆಶಯವಾಗಿದೆ.

Published On - 12:33 pm, Wed, 20 May 20