ಡಿಕೆ ಶಿವಕುಮಾರ್ ತಿನಿಸಿದ ಸ್ವೀಟನ್ನು ಬಾಯಿಂದ ತೆಗೆದು ಎಸೆದ ಸಿಎಂ ಸಿದ್ದರಾಮಯ್ಯ! ವಿಡಿಯೋ ನೋಡಿ
ವಿಜಯಪುರದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸಿಎಂ ಡಿಕೆ ಶಿವಕುಮಾರ್ ತಿನಿಸಿದ ಲಡ್ಡನ್ನು ತೆಗೆದು ಬಿಸಾಡಿದ್ದಾರೆ. ದೀರ್ಘಾವಧಿ ಸಿಎಂ ಆಗಿ ದಾಖಲೆ ಹಿನ್ನೆಲೆಯಲ್ಲಿ ಈ ಸನ್ಮಾನ ನಡೆಯುತ್ತಿತ್ತು. ಈ ವೇಳೆ ಸಚಿವ ಎಂಬಿ ಪಾಟೀಲ್ ಮನೆಯಲ್ಲಿ ಮಾಡಿದ ಲಡ್ಡುವನ್ನು ನೀಡಿದ್ದರು. ನಂತರ ಡಿಕೆಶಿ ನೀಡಿದ್ದರು. ವಿಡಿಯೋ ಇಲ್ಲಿದೆ ನೋಡಿ.
ವಿಜಯಪುರ, ಜನವರಿ 10: ವಿಜಯಪುರದಲ್ಲಿ ಶುಕ್ರವಾರ ನಡೆದ ಸನ್ಮಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿನ್ನಿಸಿದ ಲಡ್ಡನ್ನು ಬಾಯಿಯಿಂದ ತೆಗೆದು ಬಿಸಾಡಿದ್ದಾರೆ. ದೀರ್ಘಾವಧಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ದಾಖಲೆ ನಿರ್ಮಿಸಿದ ಹಿನ್ನೆಲೆಯಲ್ಲಿ ಈ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಚಿವ ಎಂಬಿ ಪಾಟೀಲ್ ಮನೆಯಲ್ಲಿ ತಯಾರಿಸಿದ ಲಡ್ಡನ್ನು ಸಿದ್ದರಾಮಯ್ಯನವರಿಗೆ ಮೊದಲು ನೀಡಿದರು. ನಂತರ ಎಂ.ಬಿ. ಪಾಟೀಲ್ ಅವರು ಅದೇ ಲಾಡುವನ್ನು ಡಿಕೆ ಶಿವಕುಮಾರ್ ಕೈಗೆ ಕೊಟ್ಟು ಮುಖ್ಯಮಂತ್ರಿಗೆ ತಿನ್ನಿಸುವಂತೆ ಕೇಳಿದರು. ಒತ್ತಾಯಕ್ಕೆ ಮಣಿದು ಡಿಸಿಎಂ ಡಿಕೆ ಶಿವಕುಮಾರ್ ಸಿಎಂಗೆ ಸಿಹಿ ತಿನ್ನಿಸಿದರು. ಆದರೆ, ಆ ಲಡ್ಡನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಯಿಂದ ತೆಗೆದು ಎಸೆದಿದ್ದಾರೆ.

