UEFA Euro 2020: ಯೂರೋ 2020 ಫುಟ್​ಬಾಲ್ ಸರಣಿಯನ್ನು ವಿಶೇಷ ಡೂಡಲ್​ನೊಂದಿಗೆ ಸಂಭ್ರಮಿಸಿದ ಗೂಗಲ್

| Updated By: ganapathi bhat

Updated on: Jun 11, 2021 | 3:34 PM

Google Doodles: ಈ ಟೂರ್ನಮೆಂಟ್​ನ್ನು ಗೂಗಲ್ ವಿಶೇಷವಾಗಿ ಸಂಭ್ರಮಿಸಿದೆ. ವಿಶೇಷ ಡೂಡಲ್ ಅರ್ಪಿಸುವ ಮೂಲಕ ಪಂದ್ಯಾವಳಿಗೆ ಸಂತಸದ ಆರಂಭ ನೀಡಿದೆ.

UEFA Euro 2020: ಯೂರೋ 2020 ಫುಟ್​ಬಾಲ್ ಸರಣಿಯನ್ನು ವಿಶೇಷ ಡೂಡಲ್​ನೊಂದಿಗೆ ಸಂಭ್ರಮಿಸಿದ ಗೂಗಲ್
ಗೂಗಲ್ ಡೂಡಲ್
Follow us on

ಯುಇಎಫ್​ಎ ಯೂರೋ 2020 (ಯುರೋಪಿಯನ್ ಫುಟ್​ಬಾಲ್ ಚಾಂಪಿಯನ್​ಶಿಪ್) ಟೂರ್ನಿಯು ಸ್ಥಳೀಯ ಕಾಲಮಾನದ ಪ್ರಕಾರ ಶುಕ್ರವಾರ ಆರಂಭಗೊಳ್ಳಲಿದೆ. ರೋಮ್​ನ ಸ್ಟೆಡಿಯೊ ಒಲಿಂಪಿಕೊನಲ್ಲಿ ಗ್ರೂಪ್ ಎಯ ಟರ್ಕಿ ಹಾಗೂ ಇಟಲಿ ತಂಡದ ನಡುವೆ ಪಂದ್ಯ ನಡೆಯಲಿದೆ. ಈ ಟೂರ್ನಮೆಂಟ್​ನ್ನು ಗೂಗಲ್ ವಿಶೇಷವಾಗಿ ಸಂಭ್ರಮಿಸಿದೆ. ವಿಶೇಷ ಡೂಡಲ್ ಅರ್ಪಿಸುವ ಮೂಲಕ ಪಂದ್ಯಾವಳಿಗೆ ಸಂತಸದ ಆರಂಭ ನೀಡಿದೆ.

ಇದೇ ಮೊದಲ ಬಾರಿಗೆ ಟೂರ್ನಮೆಂಟ್ ಯುರೋಪ್​ನ 11 ನಗರಗಳಲ್ಲಿ ಆಯೋಜನೆಗೊಳ್ಳುತ್ತಿದೆ. ಈ ಮೊದಲು, ಒಂದು ಅಥವಾ ಎರಡು ದೇಶಗಳಲ್ಲಿ ನಡೆಯುತ್ತಿದ್ದ ಯುರೋಪ್ ಫುಟ್​ಬಾಲ್ ಚಾಂಪಿಯನ್​ಶಿಪ್, ಕೊರೊನಾ ಕಾರಣದಿಂದಾಗಿ ಈ ಬಾರಿ ವಿವಿಧ ನಗರಗಳಲ್ಲಿ ನಡೆಯಲಿದೆ. ಕ್ರಿಶ್ಚಿಯಾನೋ ರೊನಾಲ್ಡೋನ ಪೋರ್ಚುಗಲ್ ತಂಡ ಕಳೆದ ಬಾರಿಯ ಚಾಂಪಿಯನ್​ಗಳಾಗಿದ್ದಾರೆ. ಆದರೆ, ಫ್ರಾನ್ಸ್ ತಂಡ ಈ ಬಾರಿಯ ಫೇವರಿಟ್ ಎನಿಸಿಕೊಂಡಿದೆ.

ಕೊವಿಡ್-19 ಕಾರಣದಿಂದಾಗಿ ಒಂದು ವರ್ಷ ತಡವಾಗಿ ಆರಂಭವಾದ ಟೂರ್ನಿ, ಈ ಬಾರಿ ನಡೆಯುತ್ತಿದೆ. ಯುಇಎಫ್​ಎ ಅಧ್ಯಕ್ಷ ಅಲೆಕ್ಸಾಂಡರ್ ಸೆಫರಿನ್ ಈ ವರ್ಷ ಆಯೋಜನೆಗೊಳ್ಳುತ್ತಿರುವ ಯೂರೋ 2020 ಸುರಕ್ಷತೆಯಿಂದ ನಡೆಯಲಿದೆ ಎಂದು ಹೇಳಿದ್ದಾರೆ. ಕೊರೊನಾದಿಂದ ಜಾಗತಿಕ ಮಟ್ಟದಲ್ಲಿ ಆಟೋಟ ಚಟುವಟಿಕೆಗಳು ಸ್ಥಗಿತಗೊಂಡ ಬಳಿಕ ನಡೆಯುತ್ತಿರುವ ಮೊದಲ ಟೂರ್ನಿ ಇದಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಶೇಷ ಎಂದರೆ, ಅಭಿಮಾನಿಗಳಿಗೂ ಪಂದ್ಯ ವೀಕ್ಷಣೆಗೆ ಕಟ್ಟುನಿಟ್ಟಿನ ಕ್ರಮದೊಂದಿಗೆ ಅವಕಾಶ ನೀಡಲಾಗಿದೆ. ಶೇಕಡಾ 25 ರಷ್ಟು ಪ್ರೇಕ್ಷಕರಿಂದ ಶೇಕಡಾ 100 ರಷ್ಟು ಪ್ರೇಕ್ಷಕರ ವ್ಯತ್ಯಾಸದಲ್ಲಿ ಪಂದ್ಯ ನೋಡಲು ವಿವಿಧ ನಗರಗ ಮೈದಾನದಲ್ಲಿ ಅವಕಾಶ ನೀಡಲಾಗಿದೆ.

ಪಂದ್ಯ ಆಯೋಜನೆಗೊಂಡಿರುವ ನಗರಗಳ ಪಟ್ಟಿಯಿಂದ ಡುಬ್ಲಿನ್ ಮತ್ತು ಬಿಲ್ಬವೊ ನಗರಗಳನ್ನು ಕೈಬಿಡಲಾಗಿದೆ. ಸೀಮಿತ ಸಂಖ್ಯೆಯ ಪ್ರೇಕ್ಷಕರು, ಕೊರೊನಾ ಮಾರ್ಗಸೂಚಿ ಕ್ರಮಗಳನ್ನು ಕೈಗೊಳ್ಳುವಲ್ಲಿ ಯುಇಎಫ್​ಎ ನಿರೀಕ್ಷೆ ಮಟ್ಟವನ್ನು ತಲುಪಲು ಆಗದ ಕಾರಣ ಈ ನಗರಗಳಲ್ಲಿ ಪಂದ್ಯ ಆಯೋಜಿಸುತ್ತಿಲ್ಲ. ಬದಲಾಗಿ, ಲಂಡನ್ ಮತ್ತು ಸೈಂಟ್ ಪೀಟರ್ಸ್​ಬರ್ಗ್​ಗೆ ಆ ಪಂದ್ಯಗಳನ್ನು ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ: Viral Video: ಹೈ ಹೀಲ್ಸ್ ಧರಿಸಿ ಫುಟ್​ಬಾಲ್ ಆಡಿದ ಹುಡುಗಿ; ನೆಟ್ಟಿಗರಿಂದ ಅಚ್ಚರಿಯ ರಿಯಾಕ್ಷನ್!

ಕೊವಿಡ್19 ಕಾರಣದಿಂದ ಚೀನಾದಲ್ಲಿ ನಡೆಯಬೇಕಿದ್ದ ಫುಟ್​ಬಾಲ್ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯಗಳು ದುಬೈಗೆ ಸ್ಥಳಾಂತರ