
16 ವರ್ಷದ ಭಾರತೀಯ ಚೆಸ್ ಗ್ರ್ಯಾಂಡ್ಮಾಸ್ಟರ್ ರಮೇಶ್ಬಾಬು ಪ್ರಗ್ನಾನಂದ (Grandmaster Rameshbabu Praggnanandhaa), ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸೆನ್ (Magnus Carlsen) ಅವರ ವಿರುದ್ಧ ಜಯ ಸಾಧಿಸಿದ್ದಾರೆ. ಶುಕ್ರವಾರ (ಮೇ 19) ರಂದು ನಡೆದ ಆನ್ಲೈನ್ ರ್ಯಾಪಿಡ್ ಚೆಸ್ ಟೂರ್ನಮೆಂಟ್ನಲ್ಲಿ ರಮೇಶ್ಬಾಬು ಪ್ರಗ್ನಾನಂದ ಮತ್ತು ಮ್ಯಾಗ್ನಸ್ ಕಾರ್ಲ್ಸೆನ್ ಎದುರಾಗಿದ್ದರು.
ಆಟವು ನೀರಸ ಡ್ರಾದತ್ತ ಸಾಗುತ್ತಿತ್ತು ಆದರೆ ಕಾರ್ಲ್ಸನ್ ಅವರ 40 ನೇ ಮೂವ್ನಲ್ಲಿ ಕಾರ್ಲ್ಸೆನ್ ಕುದುರೆಯನ್ನು ಮೂವ್ ಮಾಡುವ ಮುಖಾಂತರ ತಪ್ಪು ಮೂವ್ ಮಾಡಿದರು. ಇದನ್ನು ಗಮನಿಸಿದ ಕೂಡಲೇ ಪ್ರಗ್ನಾನಂದ ಅವರು ಚೆಕ್ ನೀಡಿದರು. ಈ ಮೂಲಕ ಪ್ರಗ್ನಾನಂದ, ಮ್ಯಾಗ್ನಸ್ ಕಾರ್ಲ್ಸೆನ್ ಅವರಿಗೆ ಸೋಲಿನ ಕಹಿ ಉಣಿಸಿದ್ದಾರೆ.
ಈ ಹಿಂದೆ ಕೂಡ ಈ ಜೋಡಿ ಎದುರಾಗಿತ್ತು, ಅದು ಫೆಬ್ರವರಿ 23 2022ರಂದು ಚನೈನಲ್ಲಿ ನಡೆದ ಪಂದ್ಯದಲ್ಲಿ ಪ್ರಗ್ನಾನಂದ, ಕಾರ್ಲ್ಸೆನ್ ಅವರನ್ನು ಸೋಲಿಸಿದ್ದಾರೆ.
ಇದನ್ನು ಓದಿ: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು
ಚೆಸ್ 24 ಗೆ ನೀಡಿದ ಸಂದರ್ಶನದಲ್ಲಿ ಪ್ರಗ್ನನಾಥ ಅವರು ಈ ಪಂದ್ಯ ನಡೆಯುವಾಗ ನನ್ನ ಪ್ರಗ್ನಾನಂದ ಅವರು ಈವೆಂಟ್ನಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿರುವುದಾಗಿ ಹೇಳಿದರು. “ನನ್ನ ಆಟದ ಗುಣಮಟ್ಟದ ಬಗ್ಗೆ ನಾನು ತುಂಬಾ ರೋಮಾಂಚನಗೊಂಡಿಲ್ಲ. ನಾನು ಕೆಲವು ವಿಷಯಗಳು, ಕೆಲವು ತಂತ್ರಗಳನ್ನು ಕಳೆದುಕೊಂಡಿದ್ದೇನೆ ಹೀಗಾಗಿ ನಾನು ಇನ್ನೂ ತೀಕ್ಷಣವಾಗಿ ಆಡಲು ಕಲಿಯಬೇಕು ಎಂದು ಹೇಳಿದರು.
ಮೂರು ಅಂಕಗಳ ಮೌಲ್ಯದ ಗೆಲುವಿನೊಂದಿಗೆ, ಪ್ರಗ್ನಾನಂದ (12 ಅಂಕ) ಏಳನೇ ಸುತ್ತಿನಲ್ಲಿ ಗವೈನ್ ಜೋನ್ಸ್ (ಇಂಗ್ಲೆಂಡ್) ಅವರನ್ನು ಸೋಲಿಸಿದರು, ನಂತರ 11 ನೇ ಸ್ಥಾನದಲ್ಲಿರುವ ದೇಶಬಾಂಧವ ಪಿ. ಹರಿಕೃಷ್ಣ ಅವರೊಂದಿಗೆ ಡ್ರಾ ಮಾಡಿಕೊಂಡರು. ವಿದಿತ್ ಗುಜರಾತಿ (5) 14ನೇ ಸ್ಥಾನದಲ್ಲಿದ್ದರು.
ಇದನ್ನು ಓದಿ: ಇಂದು RCB = ರಾಯಲ್ ಚಾಲೆಂಜರ್ಸ್ ಬಾಂಬೆ..!
ಈ ವರ್ಷದ ಆರಂಭದಲ್ಲಿ ಫೆಬ್ರವರಿಯಲ್ಲಿ ನಡೆದ ಏರ್ಥಿಂಗ್ಸ್ ಮಾಸ್ಟರ್ಸ್ನಲ್ಲಿ ಪ್ರಗ್ನಾನಂದ ಅವರು ನಾರ್ವೆಯನ್ನರನ್ನು ಸೋಲಿಸಿದ್ದರು. ಭಾರತದ ಯುವ ಗ್ರ್ಯಾಂಡ್ಮಾಸ್ಟರ್ ಆರ್ ಪ್ರಗ್ನಾನಂದ ಅವರು ಆನ್ಲೈನ್ ರ್ಯಾಪಿಡ್ ಚೆಸ್ ಪಂದ್ಯಾವಳಿಯಾದ ಏರ್ಥಿಂಗ್ಸ್ ಮಾಸ್ಟರ್ಸ್ನ ಎಂಟನೇ ಸುತ್ತಿನಲ್ಲಿ ವಿಶ್ವದ ನಂ 1, ಮ್ಯಾಗ್ನಸ್ ಕಾರ್ಲ್ಸೆನ್ ಅವರನ್ನು ಬೆರಗುಗೊಳಿಸಿದರು. ಕಾರ್ಲ್ಸೆನ್ರ ಸತತ ಮೂರು ಗೆಲುವಿನ ಓಟವನ್ನು ತಡೆಯಲು ಸೋಮವಾರದ ಆರಂಭದಲ್ಲಿ ನಡೆದ ಟಾರ್ರಾಷ್ ಬದಲಾವಣೆಯ ಆಟದಲ್ಲಿ ಪ್ರಗ್ನಾನಂದ ಅವರು 39 ಚಲನೆಗಳಲ್ಲಿ ಕಾರ್ಲ್ಸೆನ್ ಮಣಿಸಿ, ಗೆದ್ದು ಬೀಗಿದರು.
ಹೆಚ್ಚಿನ ಕ್ರೀಡಾ ಸುದ್ದಿಗಳಿಗಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:18 pm, Sat, 21 May 22