AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೆನಿಸ್ ಪ್ಲೇಯರ್ ಜೀವಕ್ಕೆ ಕುತ್ತು ತಂದ ರೀಲ್ಸ್ ಹುಚ್ಚು; ತಂದೆಯಿಂದಲೇ ಗುಂಡಿಕ್ಕಿ ಹತ್ಯೆ

Gurgaon Tennis Player Radhika Yadav Shot Dead by Father: ಗುರುಗ್ರಾಮ್‌ನಲ್ಲಿ ರಾಜ್ಯಮಟ್ಟದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಅವರನ್ನು ಅವರ ತಂದೆಯೇ ಗುಂಡಿಕ್ಕಿ ಕೊಂದಿದ್ದಾರೆ. ರೀಲ್ಸ್ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದ್ದು, ಈ ಜಗಳ ಕೊಲೆಗೆ ಕಾರಣವಾಗಿದೆ ಎನ್ನಲಾಗಿದೆ. ಪೊಲೀಸರು ತಂದೆಯನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಟೆನಿಸ್ ಪ್ಲೇಯರ್ ಜೀವಕ್ಕೆ ಕುತ್ತು ತಂದ ರೀಲ್ಸ್ ಹುಚ್ಚು; ತಂದೆಯಿಂದಲೇ ಗುಂಡಿಕ್ಕಿ ಹತ್ಯೆ
Tennis Player
ಪೃಥ್ವಿಶಂಕರ
|

Updated on:Jul 10, 2025 | 9:06 PM

Share

ಹರಿಯಾಣದ ಗುರುಗ್ರಾಮದಲ್ಲಿ ರಾಜ್ಯ ಮಟ್ಟದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ (Radha Yadav) ಅವರನ್ನು ಸ್ವತಃ ಅವರ ತಂದೆಯೇ ಗುಂಡಿಕ್ಕಿ ಕೊಂದಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಮಾಹಿತಿ ಪ್ರಕಾರ, ಗುರುಗ್ರಾಮದ ಸುಶಾಂತ್ ಲೋಕ್ -2 ರಲ್ಲಿರುವ ನಿವಾಸದಲ್ಲಿ ಮಧ್ಯಾಹ್ನ 12:30 ರ ಸುಮಾರಿಗೆ ಈ ಘಟನೆ ಜರುಗಿದೆ. ಘಟನೆ ನಡೆದ ಬಳಿಕ ಗುಂಡಿನ ದಾಳಿಗೆ ತುತ್ತಾಗಿದ್ದ ಯುವತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆಯಾದರೂ, ಆಸ್ಪತ್ರೆಗೆ ತಲುಪುವ ಮುನ್ನವೇ ಆಕೆ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಪ್ರಸ್ತುತ ಪೊಲೀಸರು ಮೃತ ಟೆನಿಸ್ ಆಟಗಾರ್ತಿಯ ತಂದೆಯನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ರೀಲ್ಸ್ ವಿಚಾರಕ್ಕೆ ಕೊಲೆ

ಮೃತ ರಾಧಿಕಾ ಮತ್ತು ಅವರ ತಂದೆ ಒಂದೇ ಮನೆಯಲ್ಲಿ ಬಹಳ ವರ್ಷಗಳಿಂದ ವಾಸಿಸುತ್ತಿದ್ದರು. ಆದರೆ ಇಬ್ಬರ ನಡುವೆ ರೀಲ್ಸ್ ವಿಚಾರಕ್ಕೆ ಜಗಳ ನಡೆದಿದ್ದು, ಕ್ರಮೇಣ ಈ ಜಗಳ ತಾರಕಕ್ಕೇರಿದೆ. ಈ ವೇಳೆ ಮೃತ ಯುವತಿಯ ತಂದೆ, ಯುವತಿಗೆ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಆ ನಂತರ ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಗಂಭೀರ ಸ್ಥಿತಿಯಲ್ಲಿದ್ದ ರಾಧಿಕಾ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಆದಾಗ್ಯೂ, ಘಟನೆಯ ಹಿಂದಿನ ನಿಜವಾದ ಕಾರಣ ಇನ್ನೂ ಬೆಳಕಿಗೆ ಬಂದಿಲ್ಲ. ಮಗಳನ್ನು ಗುಂಡಿಕ್ಕಿ ಕೊಂದಿರುವ ರಾಧಿಕಾ ಅವರ ತಂದೆಯನ್ನು ಪೊಲೀಸರು ಬಂಧಿಸಿದ್ದು, ಸ್ಥಳದಿಂದ ರಿವಾಲ್ವರ್ ಅನ್ನು ವಶಪಡಿಸಿಕೊಂಡಿದ್ದಾರೆ.

ವಾಸ್ತವವಾಗಿ ರಾಧಿಕಾ ರಾಜ್ಯ ಮಟ್ಟದ ಟೆನಿಸ್ ಆಟಗಾರ್ತಿಯಾಗಿದ್ದು, ಹಲವು ಪಂದ್ಯಾವಳಿಗಳನ್ನು ಗೆದ್ದಿದ್ದರು. ಮೂಲಗಳ ಪ್ರಕಾರ, ರಾಧಿಕಾ ಮತ್ತು ಅವರ ತಂದೆಯ ನಡುವೆ ರೀಲ್ ಮಾಡುವ ಬಗ್ಗೆ ವಾಗ್ವಾದ ನಡೆದಿತ್ತು. ಈ ವಾಗ್ವಾದ ತಾರಕಕ್ಕೇರಿದ್ದು, ಇಬ್ಬರ ನಡುವೆ ಜಗಳ ಶುರುವಾಗಿದೆ. ಈ ವೇಳೆ ತಾಳ್ಮೆ ಕಳೆದುಕೊಂಡ ರಾಧಿಕಾ ಅವರ ತಂದೆ, ತಮ್ಮ ಮಗಳ ಮೇಲೆ ಮೂರು ಗುಂಡುಗಳನ್ನು ಹಾರಿಸಿದ್ದಾರೆ.

ರಾಧಿಕಾ ಅವರ ವೃತ್ತಿಜೀವನ

ರಾಧಿಕಾ ಯಾದವ್ ಅವರ ಟೆನಿಸ್ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ಅವರು ಟೆನಿಸ್​ನಲ್ಲಿ ಪ್ರಸ್ತುತ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನು ನೀಡಿಲ್ಲ. ಅಂತರರಾಷ್ಟ್ರೀಯ ಟೆನಿಸ್ ಫೆಡರೇಶನ್‌ನಲ್ಲಿ ದಾಖಲಾಗಿರುವ ದಾಖಲೆಗಳ ಪ್ರಕಾರ, ರಾಧಿಕಾ ಹಿರಿಯರ ಮಟ್ಟದಲ್ಲಿ ಕೇವಲ 3 ವೃತ್ತಿಪರ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲಿ ಸೋಲನ್ನು ಎದುರಿಸಿದ್ದಾರೆ. ಐಟಿಎಫ್‌ನ ಜೂನಿಯರ್ ಮಟ್ಟದಲ್ಲಿ 1 ಪಂದ್ಯವನ್ನು ಗೆದ್ದಿರುವ ಅವರು 2 ಪಂದ್ಯಗಳಲ್ಲಿ ಸೋಲನ್ನು ಎದುರಿಸಿದ್ದಾರೆ ಎಂದು ವರದಿಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:01 pm, Thu, 10 July 25