
ರಾಂಚಿಯ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ನಡೆದ 2026ರ ನ್ಯಾಷನಲ್ ಸೀನಿಯರ್ ಫೆಡರೇಶನ್ ಕಪ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪಂಜಾಬ್‌ನ 25 ವರ್ಷದ ಓಟಗಾರ ಗುರಿಂದರ್ವೀರ್ ಸಿಂಗ್ ಕೇವಲ 10.09 ಸೆಕೆಂಡುಗಳಲ್ಲಿ ಗುರಿ ತಲುಪಿ, ಪುರುಷರ 100 ಮೀಟರ್ ಓಟದಲ್ಲಿ ಹೊಸ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ಈ ಮೂಲಕ ಭಾರತದ ಇತಿಹಾಸದಲ್ಲೇ 10.10 ಸೆಕೆಂಡ್‌ಗಿಂತ ಕಡಿಮೆ ಅವಧಿಯಲ್ಲಿ ಓಡಿದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನ್ಯಾಷನಲ್ ಸೀನಿಯರ್ ಫೆಡರೇಶನ್ ಕಪ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಪುರುಷರ 100 ಮೀಟರ್ ಓಟದಲ್ಲಿ ಗುರಿಂದರ್ವೀರ್ ಸಿಂಗ್ ಮತ್ತು ಒಡಿಶಾದ ಅನಿಮೇಶ್ ಕುಜುರ್ ನಡುವೆ ನೇರ ಪೈಪೋಟಿ ಏರ್ಪಟ್ಟಿತ್ತು. ಸೆಮಿಫೈನಲ್ನಿಂದ ಶುರುವಾದ ಈ ಪೈಪೋಟಿಯು ಫೈನಲ್ನಲ್ಲೂ ಮುಂದುವರೆಯಿತು. ಪರಿಣಾಮ ಗುರಿಂದರ್ವೀರ್ ಸಿಂಗ್ ಹೊಸ ದಾಖಲೆಯೊಂದಿಗೆ ಗುರಿ ತಲುಪಿದರು.
ಪುರುಷರ 100 ಮೀಟರ್ ಫೈನಲ್ ಫಲಿತಾಂಶಗಳು:
ನ್ಯಾಷನಲ್ ಸೀನಿಯರ್ ಫೆಡರೇಶನ್ ಕಪ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಕ್ರೀಡಾಕೂಟದಲ್ಲಿ ಇನ್ನು ಎರಡು ಪ್ರಮುಖ ರಾಷ್ಟ್ರೀಯ ದಾಖಲೆಗಳು ನಿರ್ಮಾಣವಾದವು:
ಇದನ್ನೂ ಓದಿ: 27 ಕ್ರೀಡೆಗಳು: ಕರ್ನಾಟಕದ ಹೊಸ ಕ್ರಿಕೆಟ್ ಸ್ಟೇಡಿಯಂ ವಿಶೇಷತೆಗಳೇನು ಗೊತ್ತಾ?
ಈ ಭರ್ಜರಿ ಪ್ರದರ್ಶನದೊಂದಿಗೆ ಗುರಿಂದರ್ವೀರ್ ಸಿಂಗ್ 2026ರ ಕಾಮನ್‌ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ಗೆ ನೇರ ಅರ್ಹತೆ ಪಡೆದಿದ್ದಾರೆ. ಹೀಗಾಗಿ ಮುಂಬರುವ ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತವು ಪದಕವನ್ನು ನಿರೀಕ್ಷಿಸಬಹುದು.