ಹಾರ್ದಿಕ್ ಮೇಲೆ ಸಿಟ್ಟಾದ ಕೊಹ್ಲಿ; ವಿರಾಟ್ರನ್ನು ಕೂಲ್ ಮಾಡಿದ ಧವನ್ಗೆ ಪಾಂಡ್ಯ ಮೈದಾನದಲ್ಲೇ ದೀರ್ಘದಂಡ ನಮಸ್ಕಾರ
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಟೀಂ ಇಂಡಿಯಾ ಉತ್ತಮ ಆರಂಭ ಕಂಡಿತ್ತು. 103ರನ್ ಗಳಿಸಿ ರೋಹಿತ್-ಧವನ್ ಆಡುತ್ತಿದ್ದರು. ಈ ವೇಳೆ ರೋಹಿತ್ (37) ಬೋಲ್ಡ್ ಆದರು.

ಭಾರತ ಮತ್ತು ಇಂಗ್ಲೆಂಡ್ ನಡುವಣ ಅಂತಿಮ ಏಕದಿನ ಪಂದ್ಯದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಹಾರ್ದಿಕ್ ಪಾಂಡ್ಯ ಅವರು ಶಿಖರ್ ಧವನ್ಗೆ ದೀರ್ಘದಂಡ ನಮಸ್ಕಾರ ಮಾಡಿದ್ದಾರೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದವರೆಲ್ಲ ನಕ್ಕಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಟೀಂ ಇಂಡಿಯಾ ಉತ್ತಮ ಆರಂಭ ಕಂಡಿತ್ತು. 103ರನ್ ಗಳಿಸಿ ರೋಹಿತ್-ಧವನ್ ಆಡುತ್ತಿದ್ದರು. ಈ ವೇಳೆ ರೋಹಿತ್ (37) ಬೋಲ್ಡ್ ಆದರೆ, ನಂತರ ಧವನ್ (67), ನಾಯಕ ವಿರಾಟ್ ಕೊಹ್ಲಿ (7) ರಾಹುಲ್ (7) ಕೂಡ ವಿಕೆಟ್ ಒಪ್ಪಿಸಿದರು. ಟೀಂ ಇಂಡಿಯಾ ಸಂಕಷ್ಟದಲ್ಲಿರುವಾಗಲೇ ರಿಷಬ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ಜಾಗರೂಕ ಜತೆಯಾಟ ಆಡಿದರು. ಅಂತಿಮವಾಗಿ ಟೀಂ ಇಂಡಿಯಾ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 329ರನ್ ಗಳಿಸಿತು.
330ರನ್ಗಳ ಬೃಹತ್ ಗುರಿ ಬೆನ್ನು ಹತ್ತಿದ ಆಂಗ್ಲ ಪಡೆಗೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಮೊದಲ ಓವರ್ನಲ್ಲೇ ದಾಳಿಗೆ ಇಳಿದಿದ್ದ ಜೇಸನ್ ರಾಯ್ 14 ರನ್ಗೆ ಔಟ್ ಆದರು. ನಂತರ ಜಾನಿ ಬೇರ್ಸ್ಟೋ (1) ಕೂಡ ಪೆವಿಲಿಯನ್ ಸೇರುವ ಮೂಲಕ ಟೀಂ ಇಂಡಿಯಾವನ್ನು ನಿರಾಳ ಮಾಡಿದರು. ಈ ವೇಳೆ ಹೊಡಿಬಡಿ ಆಟಕ್ಕೆ ಮುಂದಾಗಿದ್ದರು ಬೆನ್ ಸ್ಟೋಕ್ಸ್. ಆದರೆ, ಬೀಸುವ ಅಬ್ಬರದಲ್ಲಿ ಅವರು ಎಚ್ಚರ ತಪ್ಪಿದ್ದರು.
ಅವರು ಹೊಡೆದ ಶಾಟ್ ನೇರವಾಗಿ ಹಾರ್ದಿಕ್ ಪಾಂಡ್ಯ ಕೈ ಸೇರಿತ್ತು. ಆದರೆ, ಅವರು ಸುಲಭ ಕ್ಯಾಚನ್ನು ಕೈಚೆಲ್ಲಿದರು. ಅವರು ಕ್ಯಾಚ್ ಬಿಡುತ್ತಿದ್ದಂತೆ ಸ್ಟೋಕ್ಸ್ ನಿರಾಳರಾದರು. ರೋಹಿತ್ ತಲೆಮೇಲೆ ಕೈ ಹೊತ್ತು ಕುಳಿತರೆ, ವಿರಾಟ್ ಕೊಹ್ಲಿ ಸಿಟ್ಟಾದರು. ಮಾಡಿದ ತಪ್ಪಿಗೆ ಹಾರ್ದಿಕ್ ದೊಡ್ಡದಾಗಿ ಕೈ ಮುಗಿದು ಕ್ಷಮೆ ಕೇಳಿದರು.
ಕೆಲ ಓವರ್ಗಳ ನಂತರ ಬೆನ್ ಸ್ಟೋಕ್ಸ್ ಹೊಡೆದ ಶಾಟ್ ನೇರವಾಗಿ ಧವನ್ ಕೈ ಸೇರಿತ್ತು. ಇದನ್ನು ಧವನ್ ಅದ್ಭುತವಾಗಿ ಹಿಡಿದು ತೊಡೆ ತಟ್ಟಿದರು. ಕೊಹ್ಲಿ ಕೂಡ ನಕ್ಕರು. ಈ ವೇಳೆ ಎಲ್ಲರಿಗಿಂತ ಹೆಚ್ಚು ಖುಷಿ ಆಗಿದ್ದು ಹಾರ್ದಿಕ್. ಅವರು ತಾವಿದ್ದಲ್ಲಿಂದಲೇ ದೀರ್ಘ ದಂಡ ನಮಸ್ಕಾರ ಹಾಕಿ ಬಿಟ್ಟರು. ಸದ್ಯ, ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
Hardik Pandya’s reaction was so funny after Shikhar Dhawan takes the catch ?#INDvENG #HardikPandya pic.twitter.com/LL6oYYhdhs
— CricColumn (@CricColumn) March 28, 2021
Thank you shikhar dhawan??#INDvENG #HardikPandya #INDvsENG pic.twitter.com/HeDcXKhBol
— Surbhi sharma ??( सुरभि)//yash/always/suraj/stan (@Imsurbhis) March 28, 2021
Ben Stokes Departs !
HardikPandya reaction after Ben Stokes Dismissal ?#INDvsENG #BenStokes #HardikPandya pic.twitter.com/cM4AhKAWgH
— FirstSportz (@SportzFirst) March 28, 2021
#IndiavsEngland #INDvsENG #HardikPandya #natarajan ஹர்திக் பாண்டியா டூ நடராஜன்?? pic.twitter.com/NSMF4H3wZA
— ஜெர்ரி? (@Jerrykutty07) March 28, 2021
ಇದನ್ನೂ ಓದಿ: India vs England: ನಾನೆಂದಿಗೂ ಶತಕಗಳಿಗೋಸ್ಕರ ಆಡಿದವನಲ್ಲ! ನಿವೃತ್ತಿಯ ಬಳಿಕ ಅಂಕಿ- ಅಂಶ ಗಣನೆಗೆ ಬರುವುದಿಲ್ಲ: ಕಿಂಗ್ ಕೊಹ್ಲಿ
Published On - 7:27 pm, Sun, 28 March 21