ಭಾರತದಲ್ಲಿ ನಡೆಯುತ್ತಿರುವ ಹಾಕಿ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಏಕೆ ಆಡುತ್ತಿಲ್ಲ? ಇಲ್ಲಿದೆ ಪೂರ್ಣ ಸತ್ಯ

Hockey World Cup 2023: ವಾಸ್ತವವಾಗಿ, ಮೂರು ಬಾರಿಯ ವಿಶ್ವ ಚಾಂಪಿಯನ್ ಪಾಕಿಸ್ತಾನವು ಹಾಕಿ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕಾಗಿ, ಪಾಕ್ ತಂಡ ಸತತ ಎರಡನೇ ಬಾರಿಗೆ ವಿಶ್ವಕಪ್‌ನಿಂದ ಹೊರಬಿದ್ದಿದೆ.

ಭಾರತದಲ್ಲಿ ನಡೆಯುತ್ತಿರುವ ಹಾಕಿ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಏಕೆ ಆಡುತ್ತಿಲ್ಲ? ಇಲ್ಲಿದೆ ಪೂರ್ಣ ಸತ್ಯ
ಪಾಕ್ ಹಾಕಿ ತಂಡ
Follow us
TV9 Web
| Updated By: ಪೃಥ್ವಿಶಂಕರ

Updated on:Jan 06, 2023 | 12:52 PM

ಇನ್ನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಹಾಕಿ ವಿಶ್ವಕಪ್ (Hockey World Cup) ಆರಂಭವಾಗಲಿದ್ದು, ಇದರಲ್ಲಿ ವಿಶ್ವದಾದ್ಯಂತದ ಅಗ್ರ ತಂಡಗಳು ಪ್ರಶಸ್ತಿ ಗೆಲ್ಲಲ್ಲು ಸೆಣಸಾಡಲಿವೆ. ಟೋಕಿಯೊ ಒಲಿಂಪಿಕ್ಸ್ (Tokyo Olympics) ನಂತರ ಹಾಕಿಯ ಮೊದಲ ಪ್ರಮುಖ ಪಂದ್ಯಾವಳಿ ಇದಾಗಿದ್ದು ಭಾರತ ಈ ಬಾರಿಯ ವಿಶ್ವಕಪ್‌ಗೆ ಸತತ ಎರಡನೇ ಬಾರಿ ಆತಿಥ್ಯ ವಹಿಸುತ್ತಿದೆ. ಕಳೆದ ಬಾರಿ ಅಂದರೆ 2018ರ ವಿಶ್ವಕಪ್ ಕೂಡ ಭಾರತದಲ್ಲಿಯೇ ನಡೆದಿತ್ತು. ಆದರೆ ಕಳೆದ ಬಾರಿಯಂತೆ ಈ ಬಾರಿಯೂ ನಾಲ್ಕು ಬಾರಿಯ ವಿಶ್ವ ಚಾಂಪಿಯನ್ (world champion) ಪಾಕಿಸ್ತಾನಿ ತಂಡ ಭಾರತದಲ್ಲಿ ನಡೆಯುತ್ತಿರುವ ಈ ವಿಶ್ವಕಪ್‌ನಲ್ಲಿ ಭಾಗವಹಿಸದಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

ಹಾಕಿ ಆಟದಲ್ಲಿ ಅತಿ ದೊಡ್ಡ ಪೈಪೋಟಿ ಇರುವುದು ಭಾರತ ಮತ್ತು ಪಾಕಿಸ್ತಾನದ ನಡುವೆ. ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಹಾಕಿ ವಿಶ್ವಕಪ್ ಅಥವಾ ಯಾವುದೇ ಪಂದ್ಯಾವಳಿ ಇರಲಿ, ಈ ಎರಡು ತಂಡಗಳ ನಡುವಿನ ಪ್ರತಿ ಪಂದ್ಯವೂ ಹೈ ವೋಲ್ಟೇಜ್ ಆಗಿರುತ್ತದೆ. ಆದರೆ, ಭುವನೇಶ್ವರ್ ಮತ್ತು ರೂರ್ಕೆಲಾದಲ್ಲಿ ನಡೆಯುತ್ತಿರುವ ಹಾಕಿ ವರ್ಲ್ಡ್‌ನಲ್ಲಿ ಈ ರೋಚಕ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳಿಗೆ ಅವಕಾಶವಿಲ್ಲ.

Hockey World Cup: ಭಾರತ ವಿಶ್ವಕಪ್ ಗೆದ್ದರೆ ತಂಡದ ಪ್ರತಿಯೊಬ್ಬರಿಗೂ 1 ಕೋಟಿ ರೂ. ಬಹುಮಾನ! ಒಡಿಶಾ ಸಿಎಂ ಘೋಷಣೆ

ಅರ್ಹತೆ ಪಡೆಯದ ಪಾಕಿಸ್ತಾನ

ಕಳೆದ ಕೆಲವು ವರ್ಷಗಳಲ್ಲಿ, ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜಕೀಯ ಉದ್ವಿಗ್ನತೆಯು ಆಟದ ಮೇಲೂ ಪರಿಣಾಮ ಬೀರಿದೆ. ಪಾಕಿಸ್ತಾನಿ ಆಟಗಾರರಿಗೆ ವೀಸಾ ನೀಡಲು ಭಾರತ ಹಿಂದೇಟು ಹಾಕುತ್ತಿದೆ. ಆದರೆ ಪಾಕಿಸ್ತಾನ ಹಾಕಿ ವಿಶ್ವಕಪ್ ಆಡದೇ ಇರುವುದರ ಹಿಂದೆ ಯಾವುದೇ ರಾಜಕೀಯ ಕಾರಣ ಇಲ್ಲದಿದ್ದರೂ ಅದರಲ್ಲಿ ಭಾರತದ ಹಾಕಿ ಪ್ರಮುಖ ಪಾತ್ರ ವಹಿಸಿರುವುದೂ ಸತ್ಯ. ವಾಸ್ತವವಾಗಿ, ಮೂರು ಬಾರಿಯ ವಿಶ್ವ ಚಾಂಪಿಯನ್ ಪಾಕಿಸ್ತಾನವು ಹಾಕಿ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕಾಗಿ, ಪಾಕ್ ತಂಡ ಸತತ ಎರಡನೇ ಬಾರಿಗೆ ವಿಶ್ವಕಪ್‌ನಿಂದ ಹೊರಬಿದ್ದಿದೆ. 2018 ರಲ್ಲೂ ಪಾಕ್ ತಂಡ ವಿಶ್ವಕಪ್​ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು. ಕುತೂಹಲಕಾರಿ ಸಂಗತಿಯೆಂದರೆ, ಪಾಕಿಸ್ತಾನವನ್ನು ವಿಶ್ವಕಪ್‌ನಿಂದ ಹೊರತರುವಲ್ಲಿ ಭಾರತವೂ ಪಾತ್ರ ವಹಿಸಿದೆ.

ಅರ್ಹತಾ ರೇಸ್‌ನಿಂದ ಹೊರದಬ್ಬಿದ್ದ ಭಾರತ

ಕಳೆದ ವರ್ಷ ಜಕಾರ್ತದಲ್ಲಿ ಏಷ್ಯಾಕಪ್ ನಡೆದಿತ್ತು. ಇದು ಏಷ್ಯಾದ ಎಲ್ಲಾ ತಂಡಗಳಿಗೆ ವಿಶ್ವಕಪ್‌ಗೆ ಅರ್ಹತಾ ಪಂದ್ಯಾವಳಿಯಾಗಿತ್ತು. ಈ ಪಂದ್ಯಾವಳಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಮೊದಲ ಪಂದ್ಯವನ್ನು ಆಡಿದ್ದವು. ಆ ಪಂದ್ಯ 1-1 ಗೋಲುಗಳಲ್ಲಿ ಡ್ರಾದಲ್ಲಿ ಕೊನೆಗೊಂಡಿತು. ಇದಾದ ಬಳಿಕ ಎರಡನೇ ಪಂದ್ಯದಲ್ಲಿ 0-3 ಅಂತರದಲ್ಲಿ ಪಾಕ್ ತಂಡ ಸೋಲು ಅನುಭವಿಸಿತ್ತು. ಬಳಿಕ ಭಾರತ ಮತ್ತು ಇಂಡೋನೇಷ್ಯಾ ನಡುವಿನ ಪಂದ್ಯದ ಪಲಿತಾಂಶದ ಮೇಲೆ ಪಾಕಿಸ್ತಾನದ ಅರ್ಹತಾ ಕೊನೆಯ ಭರವಸೆ ಉಳಿದಿತ್ತು. ಈ ಪಂದ್ಯದಲ್ಲಿ ಇಂಡೋನೇಷ್ಯಾ ಭಾರತವನ್ನು ಸೋಲಿಸಿದ್ದರೆ, ಪಾಕಿಸ್ತಾನ ಅರ್ಹತೆ ಪಡೆಯಬಹುದಿತ್ತು. ಆದರೆ ಆತಿಥೇಯರನ್ನು 16-0 ಅಂತರದಿಂದ ಸೋಲಿಸುವ ಮೂಲಕ ಭಾರತ ವಿಶ್ವಕಪ್​ಗೆ ಟಿಕೆಟ್ ಖಚಿತ ಪಡಿಸಿಕೊಂಡಿದಲ್ಲದೆ ಪಾಕಿಸ್ತಾನವನ್ನು ವಿಶ್ವಕಪ್ ಅರ್ಹತಾ ರೇಸ್‌ನಿಂದ ಹೊರದಬ್ಬಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:47 pm, Fri, 6 January 23

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ