Indonesia Open 2022: ಸೆಮಿಫೈನಲ್‌ನಲ್ಲಿ ಸೋತ ಪ್ರಣಯ್! ಪಂದ್ಯಾವಳಿಯಲ್ಲಿ ಭಾರತದ ಪ್ರಯಾಣ ಅಂತ್ಯ
Indonesia Open 2022: ಶನಿವಾರ ನಡೆದ ಇಂಡೋನೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಅನುಭವಿ ಆಟಗಾರ ಎಚ್ ಎಸ್ ಪ್ರಣಯ್ ಸೋಲಿನೊಂದಿಗೆ ಭಾರತದ ಸವಾಲು ಅಂತ್ಯಗೊಂಡಿದೆ.
ಶನಿವಾರ ನಡೆದ ಇಂಡೋನೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಪಂದ್ಯಾವಳಿ (Indonesia Open Super 1000 Badminton tournament)ಯಲ್ಲಿ ಅನುಭವಿ ಆಟಗಾರ ಎಚ್ ಎಸ್ ಪ್ರಣಯ್ (HS Prannoy) ಸೋಲಿನೊಂದಿಗೆ ಭಾರತದ ಸವಾಲು ಅಂತ್ಯಗೊಂಡಿದೆ. ಪ್ರಣಯ್ ಸೆಮಿಫೈನಲ್ ಪಂದ್ಯದಲ್ಲಿ ಚೀನಾದ ಜಾವೊ ಜಂಗ್ ಪೆಂಗ್ ಅವರನ್ನು ಎದುರಿಸಿದರು. 40 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಪೆಂಗ್ ಪ್ರಣಯ್ ಅವರನ್ನು 16-21, 15-21 ಸೆಟ್‌ಗಳಿಂದ ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟರು. ಇದಕ್ಕೂ ಮೊದಲು ಪ್ರಣಯ್ 40 ನಿಮಿಷಗಳ ಕಾಲ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಜೆಮ್ಕೆ ವಿರುದ್ಧ 21-14, 21-12 ಅಂತರದ ಜಯ ದಾಖಲಿಸಿದ್ದರು.
ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ನಲ್ಲಿ ಇವರಿಬ್ಬರ ಮೊದಲ ಭೇಟಿ ಇದಾಗಿದೆ. ಚೀನಿ ಆಟಗಾರ, ಪ್ರಣಯ್ ಅವರ ಪ್ರಬಲ ಸ್ಮ್ಯಾಶ್ ಮತ್ತು ಫ್ಲಿಕ್ ಶಾಟ್‌ಗೆ ಮೊದಲು ಆಟದ ವಿರಾಮದ ಹೊತ್ತಿಗೆ 11-6 ಮುನ್ನಡೆ ಸಾಧಿಸಿದರು. ನಂತರ ಪ್ರಣಯ್ ಅಂತರವನ್ನು 14-16ಕ್ಕೆ ಇಳಿಸಿದರೂ, ವೈಡ್ ಶಾಟ್ ಮತ್ತು ಲಾಂಗ್ ರಿಟರ್ನ್‌ನೊಂದಿಗೆ ಜುನ್ ಪೆಂಗ್ ಸ್ಕೋರ್ ಅನ್ನು 19-15 ಕ್ಕೆ ಏರಿಸಿದರು. ಪ್ರಣಯ್ ಮತ್ತೊಮ್ಮೆ ಪಾಯಿಂಟ್ ಉಳಿಸಿದರಾದರೂ, ಜುನ್ ಪೆಂಗ್ ಗೇಮ್ ಗೆದ್ದರು.
ಇದನ್ನೂ ಓದಿ:Swiss Open 2022: ಭಾರತಕ್ಕೆ ಸಿಹಿ- ಕಹಿ; ಸ್ವಿಸ್ ಓಪನ್ ಸೆಮಿಫೈನಲ್ ತಲುಪಿದ ಪಿವಿ ಸಿಂಧು- ಎಚ್‌ಎಸ್ ಪ್ರಣಯ್
ಪ್ರಣಯ್ ಮುನ್ನಡೆ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ
ಎರಡನೇ ಗೇಮ್‌ನಲ್ಲಿ ಪ್ರಣಯ್ 6-4ರಲ್ಲಿ ಮುನ್ನಡೆ ಸಾಧಿಸಿದರಾದರೂ ಹಲವು ಅವಕಾಶಗಳನ್ನು ಕೈಚೆಲ್ಲಿದರು. ಜುನ್ ಪೆಂಗ್, ಪ್ರಣಯ್ ಅವರ ದುರ್ಬಲ ಹೊಡೆತದ ಸಂಪೂರ್ಣ ಲಾಭವನ್ನು ಪಡೆದರು. ಜೊತೆಗೆ 17-9 ರಿಂದ ಮುನ್ನಡೆ ಸಾಧಿಸುವುದರೊಂದಿಗೆ ಗೆಲುವು ಸಾಧಿಸಿದರು. ಇಂಡೋನೇಷ್ಯಾ ಓಪನ್‌ನಲ್ಲಿ ವಿಶ್ವದ 23ನೇ ಶ್ರೇಯಾಂಕದ ಪ್ರಣಯ್‌ಗೆ ಇದು ಎರಡನೇ ಸೆಮಿಫೈನಲ್ ಆಗಿತ್ತು. 2017ರಲ್ಲೂ ಅವರು ಕೊನೆಯ ನಾಲ್ಕರ ಘಟ್ಟ ತಲುಪಿದ್ದರು. ಮಾರ್ಚ್‌ನಲ್ಲಿ ಸ್ವಿಸ್ ಓಪನ್ ಸೂಪರ್ 300 ಫೈನಲ್ ತಲುಪಿದ್ದ ಪ್ರಣಯ್ ಈಗ ಚೀನಾದ ಜಾವೊ ಜುನ್ ಪೆಂಗ್ ಅವರನ್ನು ಎದುರಿಸಲಿದ್ದಾರೆ. ಈ ಪಂದ್ಯಕ್ಕೂ ಮುನ್ನ ಪ್ರಣಯ್ ಮತ್ತು ಗೇಮೆಕೆ ನಡುವಿನ ಗೆಲುವಿನ ದಾಖಲೆ 2-2ರಲ್ಲಿ ಸಮವಾಗಿತ್ತು.
ಇತರೆ ಭಾರತೀಯರ ಫಲಿತಾಂಶ
ಇತರ ಭಾರತೀಯ ಆಟಗಾರರ ಪೈಕಿ, ಸಮೀರ್ ವರ್ಮಾ ಅವರು ನೇರ ಗೇಮ್‌ನಲ್ಲಿ ವಿಶ್ವದ ಐದನೇ ಶ್ರೇಯಾಂಕಿತ ಮಲೇಷ್ಯಾದ ಲಿ ಜಿ ಜಿಯಾ ವಿರುದ್ಧ ಸೋತರು. ವಿಶ್ವದ 11ನೇ ಶ್ರೇಯಾಂಕದ ಸಮೀರ್ ಅವರನ್ನು ಆರನೇ ಶ್ರೇಯಾಂಕದ ಲೀ 21-10, 21-13 ರಿಂದ ಸೋಲಿಸಿದರು. ಇದು ಲೀ ವಿರುದ್ಧದ ಏಳು ಪಂದ್ಯಗಳಲ್ಲಿ ಸಮೀರ್ ಅವರ ಐದನೇ ಸೋಲು. ಅಶ್ವಿನಿ ಪೊನ್ನಪ್ಪ ಮತ್ತು ಎನ್ ಸಿಕ್ಕಿ ರೆಡ್ಡಿ ಕೂಡ ಅಗ್ರ ಶ್ರೇಯಾಂಕದ ಚೆನ್ ಕ್ವಿಂಗ್ ಚೆನ್ ಮತ್ತು ಜಿಯಾ ಯಿ ಫಾನ್ ವಿರುದ್ಧ 16-21, 13-21 ಅಂತರದಲ್ಲಿ ಸೋತರು. ಎಂ.ಆರ್.ಅರ್ಜುನ್ ಮತ್ತು ಧ್ರುವ ಕಪಿಲ ಅವರು 19-21, 15-21 ರಲ್ಲಿ ಚೀನಾದ ಯು ಚೆನ್ ಮತ್ತು ಯು ಕ್ಸುವಾನ್ ವಿರುದ್ಧ ಸೋಲನುಭವಿಸಿದರು.