Indonesia Open 2022: ಹಾಂಕಾಂಗ್​ನ ಲಾಂಗ್ ಆಂಗಸ್ ಮಣಿಸಿ ಕ್ವಾರ್ಟರ್​ ಫೈನಲ್​​ಗೆ ಎಂಟ್ರಿಕೊಟ್ಟ ಪ್ರಣಯ್..!

Indonesia Open 2022: HS ಪ್ರಣಯ್ ಅವರು ಗುರುವಾರ ಹಾಂಗ್​ಕಾಂಗ್‌ನ ಎನ್‌ಜಿ ಕಾ ಲಾಂಗ್ ಆಂಗಸ್ ಅವರನ್ನು ನೇರ ಗೇಮ್‌ಗಳಲ್ಲಿ ಸೋಲಿಸುವ ಮೂಲಕ ಇಂಡೋನೇಷ್ಯಾ ಓಪನ್ 2022 ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದರು.

Indonesia Open 2022: ಹಾಂಕಾಂಗ್​ನ ಲಾಂಗ್ ಆಂಗಸ್ ಮಣಿಸಿ ಕ್ವಾರ್ಟರ್​ ಫೈನಲ್​​ಗೆ ಎಂಟ್ರಿಕೊಟ್ಟ ಪ್ರಣಯ್..!
ಪ್ರಣಯ್
Follow us
TV9 Web
| Updated By: ಪೃಥ್ವಿಶಂಕರ

Updated on:Jun 16, 2022 | 6:25 PM

HS ಪ್ರಣಯ್ (HS Prannoy) ಅವರು ಗುರುವಾರ ಹಾಂಗ್​ಕಾಂಗ್‌ನ ಎನ್‌ಜಿ ಕಾ ಲಾಂಗ್ ಆಂಗಸ್ ಅವರನ್ನು ನೇರ ಗೇಮ್‌ಗಳಲ್ಲಿ ಸೋಲಿಸುವ ಮೂಲಕ ಇಂಡೋನೇಷ್ಯಾ ಓಪನ್ 2022 (Indonesia Open 2022) ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದರು. ಇತ್ತೀಚೆಗೆ ಭಾರತದ ಬಹುದಿನಗಳ ಕನಸಾಗಿದ್ದ ಥಾಮಸ್ ಕಪ್ ವಿಜಯೋತ್ಸವದ ಹೀರೋಗಳಲ್ಲಿ ಒಬ್ಬರಾದ ಪ್ರಣಯ್ ಅವರು ತಮ್ಮ ಹಾಂಗ್ ಕಾಂಗ್ ಎದುರಾಳಿಯ ವಿರುದ್ಧ 21-11, 21-18 ಅಂತರದ ಜಯ ಸಾಧಿಸಲು ಕ್ಲಿನಿಕಲ್ ಪ್ರದರ್ಶನವನ್ನು ನೀಡಿದರು. ಈ ಕೇರಳ ಮೂಲದ ಷಟ್ಲರ್ ಐದು ವರ್ಷಗಳಲ್ಲಿ ಇದುವರೆಗೂ ಒಂದು ಪ್ರಶಸ್ತಿಯನ್ನು ಗೆದ್ದಿಲ್ಲ. ಆದರೆ ಗುರುವಾರದ ಗೆಲುವು ಇತ್ತೀಚಿನ ತಿಂಗಳುಗಳಲ್ಲಿ ಅವರ ಶ್ರೀಮಂತ ಫಾರ್ಮ್ ಅನ್ನು ತೋರಿಸಿದೆ.

ಕಣದಲ್ಲಿದ್ದ ಇತರ ಭಾರತೀಯರ ಪೈಕಿ ಸಮೀರ್ ವರ್ಮಾ ಎರಡನೇ ಸುತ್ತಿನಲ್ಲಿ ವಿಶ್ವದ ಐದನೇ ಶ್ರೇಯಾಂಕದ ಮಲೇಷ್ಯಾದ ಲೀ ಝಿ ಜಿಯಾ ವಿರುದ್ಧ 10-21 13-21 ಅಂತರದಲ್ಲಿ ಸೋಲನುಭವಿಸುವ ಮೂಲಕ ತಮ್ಮ ಅಭಿಯಾನವನ್ನು ಕೊನೆಗೊಳಿಸಿದರು. ಅಶ್ವಿನಿ ಪೊನ್ನಪ್ಪ ಮತ್ತು ಎನ್ ಸಿಕ್ಕಿ ರೆಡ್ಡಿ ಕೂಡ ಮಹಿಳೆಯರ ಡಬಲ್ಸ್ ಸ್ಪರ್ಧೆಯಲ್ಲಿ ಚೀನಾದ ಅಗ್ರ ಶ್ರೇಯಾಂಕದ ಚೆನ್ ಕ್ವಿಂಗ್ ಚೆನ್ ಮತ್ತು ಜಿಯಾ ಯಿ ಫ್ಯಾನ್ ವಿರುದ್ಧ 16-21 13-21 ರಿಂದ ಸೋತು ಪಂದ್ಯಾವಳಿಯಿಂದ ಹೊರಬಿದ್ದರು.

ಇದನ್ನೂ ಓದಿ: Indonesia Open 2022: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್​ಗೆ ಭಾರತೀಯನಿಂದಲೇ ಸೋಲು..!

ಇದನ್ನೂ ಓದಿ
Image
ENG vs NZ: ಸೋಲಿನ ಸುಳಿಯಲ್ಲಿರುವ ನ್ಯೂಜಿಲೆಂಡ್​ಗೆ ಆಘಾತ; ತಂಡದ ಮತ್ತೊಬ್ಬ ಆಟಗಾರನಿಗೆ ಕೊರೊನಾ
Image
IND vs SA 4th T20 Match Live Streaming: ಸರಣಿ ಜೀವಂತವಾಗಿರಿಸಲು ಭಾರತ ಗೆಲ್ಲಲೇಬೇಕು! ಪಂದ್ಯದ ಬಗ್ಗೆ ಮಾಹಿತಿಯಿದು
Image
Ranji Trophy 2022: ರಣಜಿ ಟೂರ್ನಿಯಲ್ಲಿ ಸತತ ಎರಡನೇ ಶತಕ ಸಿಡಿಸಿದ ಬಂಗಾಳದ ಕ್ರೀಡಾ ಸಚಿವ..!

ಇತರರ ಪ್ರದರ್ಶನ

ಪುರುಷರ ಡಬಲ್ಸ್‌ನಲ್ಲಿ ಎಂಆರ್ ಅರ್ಜುನ್ ಮತ್ತು ಧ್ರುವ್ ಕಪಿಲಾ ಜೋಡಿಯು 19-21 15-21 ರಲ್ಲಿ ಚೀನಾದ ಲಿಯು ಯು ಚೆನ್ ಮತ್ತು ಔ ಕ್ಸುವಾನ್ ಯಿ ವಿರುದ್ಧ ಸೋಲನುಭವಿಸಬೇಕಾಯ್ತು. ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ, ಪ್ರಣಯ್ ಅವರು ಆರಂಭಿಕ ಪಂದ್ಯದ ಮೊದಲಾರ್ಧದಲ್ಲಿ ಪ್ರಾಬಲ್ಯ ಸಾಧಿಸಿದರು. ನಂತರ ಕ್ರಾಸ್-ಕೋರ್ಟ್ ಜಂಪ್ ಸ್ಮ್ಯಾಶ್‌ನೊಂದಿಗೆ 11-3 ರಿಂದ ಮುನ್ನಡೆ ಸಾಧಿಸಿದರು. ಆದಾಗ್ಯೂ, ಮಧ್ಯಂತರದ ನಂತರ ಪ್ರಣಯ್ ಅವರ ಅನಗತ್ಯ ದೋಷಗಳು ಎನ್‌ಜಿ ಲಾಂಗ್‌ಗೆ ಕೆಲವು ಅಂಕಗಳನ್ನು ಸಂಗ್ರಹಿಸಲು ಅವಕಾಶ ಮಾಡಿಕೊಟ್ಟವು.

ಪ್ರಣಯ್ ಅವರು ಹೊಡೆತಗಳನ್ನು ಬೆರೆಸಿದಲ್ಲದೆ ವೇಗವನ್ನು ಚೆನ್ನಾಗಿ ಬದಲಾಯಿಸಿದರು. ಇದಲ್ಲದೆ ಎದುರಾಳಿ ಮಾಡಿದ ತಪ್ಪುಗಳಿಂದ ಪಂದ್ಯವನ್ನು ಆರಾಮವಾಗಿ ಮುಕ್ತಾಯಗೊಳಿಸುವಲ್ಲಿ ಅವರಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಜೊತೆಗೆ ಮಾಜಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ವಿಜೇತ ಆರ್‌ಎಂವಿ ಗುರುಸಾಯಿ ದತ್ ಕೋಚ್ ಆಗಿರುವುದರಿಂದಲೂ ಪ್ರಣಯ್ ಪ್ರಯೋಜನ ಪಡೆದರು. ವಿರಾಮದ ವೇಳೆ ಇಬ್ಬರೂ ಮಾತನಾಡುತ್ತಿರುವುದು ಕಂಡುಬಂತು.

ಸಿಂಧು ಔಟ್

ಎರಡು ಬಾರಿಯ ಒಲಂಪಿಕ್ ಪದಕ ವಿಜೇತೆ ಪಿವಿ ಸಿಂಧು ಇಂಡೋನೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲೇ ಚೀನಾದ ಹಿ ಬಿಂಗ್ ಜಿಯಾವೊ ವಿರುದ್ಧ ನೇರ ಗೇಮ್‌ಗಳಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದರು. ಏಳನೇ ಶ್ರೇಯಾಂಕದ ಸಿಂಧು ಮಹಿಳೆಯರ ಸಿಂಗಲ್ಸ್‌ನಲ್ಲಿ ಬಿಂಗ್ ಕ್ಸಿಯಾವೊ ವಿರುದ್ಧ 14-21, 18-21 ಅಂತರದಲ್ಲಿ ಸೋತರು. ಈ ಗೆಲುವಿನೊಂದಿಗೆ ಸಿಂಧು ವಿರುದ್ಧ ಬಿಂಗ್ ಕ್ಸಿಯಾವೊ ದಾಖಲೆ 10-8ಕ್ಕೆ ಏರಿತು. ಮಾಜಿ ವಿಶ್ವ ಚಾಂಪಿಯನ್ ಸಿಂಧು ಈ ಸೀಸನ್​ನಲ್ಲಿ ಕೇವಲ ಎರಡು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಈ ಸೋಲು ಮುಂದಿನ ತಿಂಗಳು ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಅವರ ಸಿದ್ಧತೆಗಳ ಮೇಲೆ ಪರಿಣಾಮ ಬೀರಲಿದೆ. ಬಿ ಸಾಯಿ ಪ್ರಣೀತ್ ಪುರುಷರ ಸಿಂಗಲ್ಸ್‌ನಲ್ಲಿ ಡೆನ್ಮಾರ್ಕ್‌ನ ಹ್ಯಾನ್ಸ್ ಕ್ರಿಸ್ಟಿಯನ್ ಸೋಲ್ಬರ್ಗ್ ವಿಟ್ಟಿಂಗಸ್ ವಿರುದ್ಧ 16-21, 19-21 ರಿಂದ ಸೋಲನುಭವಿಸಿದರು.

Published On - 6:25 pm, Thu, 16 June 22