ನೀರಜ್ ಚೋಪ್ರಾನ ಆ ಒಂದು ನಡೆಯನ್ನು ಮೆಚ್ಚಿಕೊಂಡ ಆನಂದ್ ಮಹೇಂದ್ರ
ನೀರಜ್ ಮತ್ತೊಮ್ಮೆ ಚಿನ್ನ ಗೆಲ್ಲುತ್ತಾರೆ. ಅವರು ಎಡವಲಿಲ್ಲ, ಫೌಲ್ ಮಾಡಲಿಲ್ಲ ಅಥವಾ ಗೊಂದಲಕ್ಕೊಳಗಾಗಲಿಲ್ಲ. ಅವರು ಉತ್ತಮ ಆಟವನ್ನು ಆಡಿದ್ದಾರೆ. ಭಾರತಕ್ಕೆ ಬ್ಯಾಕ್ ಟು ಬ್ಯಾಕ್ ಪದಕ ತಂದುಕೊಟ್ಟ ಯುವಕ ಪ್ರತಿಭೆ, ನೀರಜ್ ನೀವು ನಿಜವಾಗಿಯೂ ಶ್ರೇಷ್ಠ ಕ್ರೀಡಾಪಟು ಮತ್ತು ಒಳ್ಳೆಯ ಮನುಷ್ಯ. ನೀವು ನಮಗೆಲ್ಲರಿಗೂ ಹೆಮ್ಮೆ ತಂದಿದ್ದೀರಿ, ಆದರೆ ನಿಮ್ಮ ಈ ಒಂದು ನಡೆಗೆ ನಾನು ಮೆಚ್ಚಿಕೊಳ್ಳುವೇ. ಆನಂದ್ ಮಹೇಂದ್ರ ಅವರು ನೀರಜ್ ಅವರ ಯಾವ ನಡೆಯನ್ನು ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಇಲ್ಲಿದೆ ಮಾಹಿತಿ
ಶುಕ್ರವಾರ ಮುಂಜಾನೆ ನಡೆದ ಪ್ಯಾರಿಸ್ ಒಲಿಂಪಿಕ್ಸ್ 2024ರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಅವರು 89.45 ಮೀಟರ್‌ಗಳ ಅತ್ಯುತ್ತಮ ಎಸೆತದೊಂದಿಗೆ ಬೆಳ್ಳಿ ಗೆದ್ದಿದ್ದಾರೆ. ಆದರೆ ಈ ಬಾರಿ ಬಂಗಾರ ತಪ್ಪಿದೆ ಎಂಬುದು ಅವರ ನೋವಾಗಿದ್ದರು. ಚಿನ್ನ ಗೆಲ್ಲುವವರೆಗೆ ನಾನು ವಿರಮಿಸುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ಈ ಬಾರಿ ಚಿನ್ನವನ್ನು ಪಡೆದ ಆಟಗಾರ ಪಾಕಿಸ್ತಾನದ ಅರ್ಷದ್ ನದೀಮ್. ಇವರು 92.97 ಮೀಟರ್ ಉತ್ತಮ ಎಸೆತದೊಂದಿದೆ ಮೊದಲ ಬಾರಿ ಚಿನ್ನಕ್ಕೆ ಕೋರಲು ನೀಡಿದ್ದಾರೆ. ಇದರ ನಡುವೆ ಮಹೇಂದ್ರ ಕಂಪನಿಯ ಆನಂದ್ ಮಹೇಂದ್ರ ಅವರು ಭಾವನಾತ್ಮಕವಾಗಿ ಎಕ್ಸ್ನಲ್ಲಿ ಟ್ವೀಟ್ ಮಾಡಿದ್ದಾರೆ. ಅಷ್ಟಕ್ಕೂ ಆನಂದ್ ಮಹೇಂದ್ರ ಅವರು ಮಾಡಿ ಕಮೆಂಟ್ ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ
ಆನಂದ್ ಮಹೇಂದ್ರ ಅವರು ಎಕ್ಸ್ನಲ್ಲಿ ತುಂಬಾ ಚಟುವಟಿಕೆಯಿಂದ ಇರುವ ವ್ಯಕ್ತಿ. ತಮ್ಮ ಜ್ಞಾನಕ್ಕೆ ಬಂದು ವಿಚಾರಗಳ ಬಗ್ಗೆ ಆನಂದ್ ಅವರು ಎಕ್ಸ್ನಲ್ಲಿ ಹಂಚಿಕೊಳ್ಳುತ್ತಾರೆ. ಇದೀಗ ಪ್ಯಾರಿಸ್ ಒಲಿಂಪಿಕ್ ಬಗ್ಗೆಯೂ ಮಾತನಾಡಿದ್ದಾರೆ, ಅದರಲ್ಲೂ ಆನಂದ್ ಮಹೇಂದ್ರ ಅವರು ನೀರಜ್ ಚೋಪ್ರಾ ಅವರಿಗೆ ಚಿನ್ನ ಮಿಸ್ ಆಗಿ ಪಾಕಿಸ್ತಾನ ಪಾಲಾಗಿರುವ ಬಗ್ಗೆ ಭಾರೀ ದುಃಖಗೊಂಡಿದರಂತೆ. ಆದರೆ ನೀರಜ್ ಚೋಪ್ರಾ ಅವರ ಆ ಒಂದು ನಡೆ ಅವರಿಗೂ ತುಂಬಾ ಖುಷಿ ನೀಡಿದೆ ಎಂದು ಹೇಳಿಕೊಂಡಿದ್ದಾರೆ.
I confess.
I was devastated last night when @Neeraj_chopra1 didn’t win his second Olympic gold medal.
But, this morning, I first want to congratulate Arshad Nadeem for his record-breaking throw. AND his sportsmanship & camaraderie with Neeraj.
Then I want to tell Neeraj… pic.twitter.com/4KjPPrDh2e
— anand mahindra (@anandmahindra) August 9, 2024
ಆನಂದ್ ಮಹೇಂದ್ರ ಅವರು ಹೇಳಿಕೊಂಡ ಮಾತುಗಳು ಇಲ್ಲಿದೆ, “ನಾನು ತಪ್ಪೊಪ್ಪಿಕೊಂಡಿದ್ದೇನೆ. ನಿನ್ನೆ ರಾತ್ರಿ ನಡೆದ ಪಂದ್ಯದಿಂದ ತುಂಬಾ ನೋವಾಗಿತ್ತು. ನೀರಜ್ ಚೋಪ್ರಾ ತನ್ನ ಎರಡನೇ ಒಲಿಂಪಿಕ್ನಲ್ಲಿ ಚಿನ್ನದ ಪದಕವನ್ನು ಗೆಲ್ಲಲಿಲ್ಲ. ಆದರೆ, ಇಂದು ಬೆಳಿಗ್ಗೆ, ನಾನು ಮೊದಲು ಅರ್ಷದ್ ನದೀಮ್ ಅವರ ದಾಖಲೆಗೆ ಅಭಿನಂದಿಸಲು ಬಯಸುತ್ತೇನೆ. ಅದರಲ್ಲೂ ನೀರಜ್ ಅವರೊಂದಿಗಿನ ಅವರ ಕ್ರೀಡಾ ಮನೋಭಾವ ಮತ್ತು ಒಡನಾಟಕ್ಕೆ ನಾನು ಸೋತೆ. ನೀರಜ್ ಮತ್ತೊಮ್ಮೆ ಚಿನ್ನ ಗೆಲ್ಲುತ್ತಾರೆ. ಅವರು ಎಡವಲಿಲ್ಲ, ಫೌಲ್ ಮಾಡಲಿಲ್ಲ ಅಥವಾ ಗೊಂದಲಕ್ಕೊಳಗಾಗಲಿಲ್ಲ. ಅವರು ಉತ್ತಮ ಆಟವನ್ನು ಆಡಿದ್ದಾರೆ. ಭಾರತಕ್ಕೆ ಬ್ಯಾಕ್ ಟು ಬ್ಯಾಕ್ ಪದಕ ತಂದುಕೊಟ್ಟ ಯುವಕ ಪ್ರತಿಭೆ, ನೀರಜ್ ನೀವು ನಿಜವಾಗಿಯೂ ಶ್ರೇಷ್ಠ ಕ್ರೀಡಾಪಟು ಮತ್ತು ಒಳ್ಳೆಯ ಮನುಷ್ಯ. ನೀವು ನಮಗೆಲ್ಲರಿಗೂ ಹೆಮ್ಮೆ ತಂದಿದ್ದೀರಿ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಕೈ ಜಾರಿದ ಚಿನ್ನ; ಬೆಳ್ಳಿ ಪದಕಕ್ಕೆ ಮುತ್ತಿಟ್ಟ ನೀರಜ್ ಚೋಪ್ರಾ
ಅರ್ಷದ್ ನದೀಮ್ ಅವರು 2008 ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ನಾರ್ವೆಯ ಆಂಡ್ರಿಯಾಸ್ ಥೋರ್ಕಿಲ್ಡ್‌ಸೆನ್ 90.57 ಎಸೆತದ ಮೂಲಕ ತಮ್ಮ ಹಿಂದಿನ ದಾಖಲೆಗಳನ್ನು ಮುರಿದಿದ್ದರು. ಇದರಲ್ಲಿ ಕಂಚು ಪದಕ ಪಡೆದರು. ಇನ್ನು ಟೋಕಿಯೊ ಸಮ್ಮರ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದ ನೀರಜ್, ಮಂಗಳವಾರ ನಡೆದ ಪ್ಯಾರಿಸ್ ಒಲಿಂಪಿಕ್ಸ್‌ನ ಪುರುಷರ ಜಾವೆಲಿನ್ ಥ್ರೋ ಅರ್ಹತಾ ಸುತ್ತಿನ ಬಿ ಗುಂಪಿನಲ್ಲಿ 89.34 ಮೀಟರ್‌ಗಳ ಬೃಹತ್ ಎಸೆತವನ್ನು ದಾಖಲಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:57 am, Fri, 9 August 24