WTC Final: ರೋಹಿತ್ ವಿಕೆಟ್ ಪಡೆದಿದ್ದಲ್ಲದೆ ಗಿಲ್​ ಹೆಲ್ಮೆಟ್​ಗೆ ಗುರಿಯಿಟ್ಟ ಕೊಹ್ಲಿ ತಂಡದಲ್ಲಾಡುವ ಕಿವೀಸ್ ಬೌಲರ್

WTC Final: ಭಾರತದ ಇನ್ನಿಂಗ್ಸ್‌ನ 17 ನೇ ಓವರ್‌ನಲ್ಲಿ ಚೆಂಡು ಶುಬ್‌ಮನ್ ಗಿಲ್ ಅವರ ಹೆಲ್ಮೆಟ್‌ಗೆ ಬಡಿಯಿತು. ಕೈಲ್ ಜಾಮಿಸನ್ ಈ ಓವರ್ ಮಾಡುತ್ತಿದ್ದರು.

WTC Final: ರೋಹಿತ್ ವಿಕೆಟ್ ಪಡೆದಿದ್ದಲ್ಲದೆ ಗಿಲ್​ ಹೆಲ್ಮೆಟ್​ಗೆ ಗುರಿಯಿಟ್ಟ ಕೊಹ್ಲಿ ತಂಡದಲ್ಲಾಡುವ ಕಿವೀಸ್ ಬೌಲರ್
ಶುಭ್​ಮನ್ ಗಿಲ್
Follow us
ಪೃಥ್ವಿಶಂಕರ
|

Updated on: Jun 19, 2021 | 7:22 PM

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ 2021 ರ ಸಂದರ್ಭದಲ್ಲಿ ಭಾರತದ ಬ್ಯಾಟ್ಸ್‌ಮನ್ ಶುಬ್ಮನ್ ಗಿಲ್ ಬ್ಯಾಟಿಂಗ್ ಮಾಡುವಾಗ ಗಂಭೀರ ಅಪಘಾತವೊಂದು ತಪ್ಪಿದೆ. ಕಿವಿ ವೇಗದ ಬೌಲರ್ ಕೈಲ್ ಜಾಮಿಸನ್ ಅವರ ಬೌನ್ಸರ್​ ಗಿಲ್​ ಹೆಲ್ಮೆಟ್​ಗೆ ರಬಸವಾಗಿ ಬಡಿಯಿತು. ಇದರಿಂದಾಗಿ ಟೀಮ್ ಇಂಡಿಯಾದ ಈ ಯುವ ಬ್ಯಾಟ್ಸ್‌ಮನ್ ಕೊಂಚ ಸಮಯ ಸುದಾರಿಸಿಕೊಳ್ಳಬೇಕಾಯ್ತು. ಜೊತೆಗೆ ಫಿಸಿಷಿಯನ್​ ಸಹಾಯವನ್ನೂ ತೆಗೆದುಕೊಳ್ಳಬೇಕಾಗಿತ್ತು. ಸಮಾದಾನಕರ ಸುದ್ದಿಯೆಂದರೆ ಚೆಂಡು ಹೆಲ್ಮೆಟ್‌ಗೆ ಬಡಿದ ಕಾರಣ ಶುಬ್ಮನ್ ಗಿಲ್ ಯಾವುದೇ ಹಾನಿಗೊಳಗಾಗಲಿಲ್ಲ. ಫಿಸಿಷಿಯನ್ ಪರೀಕ್ಷೆಯ ನಂತರ ಅವರು ಬ್ಯಾಟಿಂಗ್ ಮುಂದುವರಿಸಿದರು. ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಅವರು ಉತ್ತಮ ಬ್ಯಾಟಿಂಗ್ ಮಾಡಿದರು ಮತ್ತು ಭಾರತಕ್ಕಾಗಿ ಮೊದಲ ವಿಕೆಟ್ ಪಾಲುದಾರಿಕೆಯಲ್ಲಿ 50 ಕ್ಕೂ ಹೆಚ್ಚು ರನ್ಗಳನ್ನು ಸೇರಿಸಿದರು.

ಭಾರತದ ಇನ್ನಿಂಗ್ಸ್‌ನ 17 ನೇ ಓವರ್‌ನಲ್ಲಿ ಚೆಂಡು ಶುಬ್‌ಮನ್ ಗಿಲ್ ಅವರ ಹೆಲ್ಮೆಟ್‌ಗೆ ಬಡಿಯಿತು. ಕೈಲ್ ಜಾಮಿಸನ್ ಈ ಓವರ್ ಮಾಡುತ್ತಿದ್ದರು. ಸೌತಾಂಪ್ಟನ್ ಮೈದಾನದಲ್ಲಿ ಸ್ವಿಂಗ್ ಕೊನೆಗೊಳಿಸಲು ಶುಬ್ಮನ್ ಗಿಲ್ ಕ್ರೀಸ್‌ನಿಂದ ಮುಂದೆ ಬಂದು ಬ್ಯಾಟಿಂಗ್ ಮಾಡುತ್ತಿದ್ದರು. ಅವರು ಈ ರೀತಿ ಹಲವಾರು ಬಾರಿ ಬ್ಯಾಟಿಂಗ್ ಮಾಡಿದರು. ಅಂತಹ ಪರಿಸ್ಥಿತಿಯಲ್ಲಿ, ಜೇಬ್ಸನ್ ಓವರ್ನಲ್ಲಿ ಶುಬ್ಮನ್ ಅನೇಕ ಬಾರಿ ಮುಂದೆ ಬಂದು ಆಡಿದರು. ಆದರೆ 17 ನೇ ಓವರ್‌ನ ಐದನೇ ಎಸೆತದಲ್ಲಿ ಕಿವಿ ಬೌಲರ್ ಬೌನ್ಸರ್ ಎಸೆದರು. ಮುಂದೆ ನಿಂತು ಆಡುತ್ತಿದ್ದ ಗಿಲ್​ ಹೆಲ್ಮೆಟ್​ಗೆ ರಬಸವಾಗಿ ಬಡಿಯಿತು.

ರೋಹಿತ್ ಅವರೊಂದಿಗೆ ಅರ್ಧಶತಕದ ಪಾಲುದಾರಿಕೆ ಟೀಮ್ ಇಂಡಿಯಾದ ಫಿಸಿಯೋ ನಿತಿನ್ ಪಟೇಲ್ ತಕ್ಷಣ ಮೈದಾನಕ್ಕೆ ಬಂದರು. ಅವರು ಶುಬ್ಮನ್ ಗಿಲ್ ಅನ್ನು ಪರೀಕ್ಷಿಸಿದರು. ಕನ್ಕ್ಯುಶನ್ ಹೊಸ ನಿಯಮಗಳಿಂದಾಗಿ, ಇತ್ತೀಚಿನ ದಿನಗಳಲ್ಲಿ ಇದನ್ನು ಮಾಡುವುದು ಅವಶ್ಯಕ. ತನಿಖೆಯಲ್ಲಿ ಶುಬ್ಮನ್ ಗಿಲ್ ಪರಿಪೂರ್ಣರಾಗಿದ್ದರು ಮತ್ತು ಅವರು ಬ್ಯಾಟಿಂಗ್ ಮುಂದುವರಿಸಿದರು. ಅದೇ ಸಮಯದಲ್ಲಿ, ಚೆಂಡು ಶುಬ್ಮನ್ ಗಿಲ್ನ ಹೆಲ್ಮೆಟ್​ಗೆ ಬಡಿದ ನಂತರ, ನ್ಯೂಜಿಲೆಂಡ್ ಆಟಗಾರರು ಸಹ ಗಿಲ್​ ನೆರವಿಗೆ ಬಂದರು. ಇದರ ನಂತರವೂ ಶುಬ್ಮನ್ ಗಿಲ್ ಬ್ಯಾಟಿಂಗ್ ಮುಂದುವರಿಸಿದರು. ಗಿಲ್ ಮತ್ತು ರೋಹಿತ್ ಶರ್ಮಾ ಮೊದಲ ವಿಕೆಟ್‌ಗೆ 62 ರನ್‌ಗಳ ಜೊತೆಯಾಟ ಹಂಚಿಕೊಂಡರು. ರೋಹಿತ್ 34 ರನ್ ಗಳಿಸಿದ ನಂತರ ಈ ಪಾಲುದಾರಿಕೆ ಮುರಿಯಿತು. ನಂತರ ಶುಬ್ಮನ್ ಗಿಲ್ ಕೂಡ 28 ರನ್ ಗಳಿಸಿದ ನಂತರ ಔಟಾದರು.

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್