ವಿಶ್ವ ಟೆಸ್ಟ್ ಚಾಂಪಿಯನ್​ ಫೈನಲ್​ ನಾಳೆಯಿಂದ: ಫೇವರೀಟ್​ ಭಾರತ ತಂಡವನ್ನ ಸೋಲಿಸಲು ನ್ಯೂಜಿಲ್ಯಾಂಡ್​​ಗೆ ಈ ಒಂದು ಕಾರಣ ಸಾಕು!

|

Updated on: Jun 17, 2021 | 9:56 AM

India vs New Zealand WTC Final 2021: ತಟಸ್ಥ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ ನ್ಯೂಜಿಲ್ಯಾಂಡ್ ಪ್ರಾಬಲ್ಯ ಸಾಧಿಸಿದೆ. 2003 ವಿಶ್ವ ಕಪ್ ಪಂದ್ಯವೊಂದರಲ್ಲಿ ಮಾತ್ರವೇ ಭಾರತ ತಂಡ ನ್ಯೂಜಿಲ್ಯಾಂಡ್ ತಂಡವನ್ನು ಸೋಲಿಸಿರುವುದು. ಈಗ ಹೇಳಿ... ಈ ಲೆಕ್ಕಾಚಾರದಲ್ಲಿ 8ನೆಯ ಬಾರಿಗೆ ತಟಸ್ಥ ಕ್ರೀಡಾಂಗಣದಲ್ಲಿ (ಇಂಗ್ಲಂಡ್) ವಿಶ್ವ ಟೆಸ್ಟ್ ಚಾಂಪಿಯನ್​ ಫೈನಲ್ ಪಂದ್ಯದಲ್ಲಿ ಉಭಯ ತಂಡಗಳು ಸೆಣೆಸುತ್ತಿವೆ. ಫಲಿತಾಂಶ ಏನೋ, ಎಂತೋ? ಎಂಬಂತಾಗಿದೆ!

ವಿಶ್ವ ಟೆಸ್ಟ್ ಚಾಂಪಿಯನ್​ ಫೈನಲ್​ ನಾಳೆಯಿಂದ: ಫೇವರೀಟ್​ ಭಾರತ ತಂಡವನ್ನ ಸೋಲಿಸಲು ನ್ಯೂಜಿಲ್ಯಾಂಡ್​​ಗೆ ಈ ಒಂದು ಕಾರಣ ಸಾಕು!
ವಿಶ್ವ ಟೆಸ್ಟ್ ಚಾಂಪಿಯನ್​ ಫೈನಲ್​ ಪಂದ್ಯ ನಾಳೆಯಿಂದ: ಫೇವರೀಟ್​ ಭಾರತ ತಂಡವನ್ನು ಸೋಲಿಸಲು ನ್ಯೂಜಿಲ್ಯಾಂಡ್​ ತಂಡಕ್ಕೆ ಈ ಒಂದು ಕಾರಣ ಸಾಕು!
Follow us on

ಸೌಥಾಂಪ್ಟನ್​: ನಾಳೆಯಿಂದ ಐತಿಹಾಸಿಕ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್​ ಫೈನಲ್​ ಪಂದ್ಯ ಶುರುವಾಗಲಿದೆ. ಸದ್ಯಕ್ಕೆ ವಿರಾಟ್​​ ಕೊಹ್ಲಿ ಸಾರಥ್ಯದಲ್ಲಿ ಭಾರತ ತಂಡ ಗೆಲ್ಲುವ ನೆಚ್ಚಿನ ತಂಡವಾಗಿದೆ. ಹಾಗಂತ ನ್ಯೂಜಿಲ್ಯಾಂಡ್​ ತಂಡ ಕಳಪೆ ಅಥವಾ ಸುಲಭವಾಗಿ ಶರಣಾಗುತ್ತದೆ ಎಂದಲ್ಲ. ಕಣಕ್ಕಿಳಿದ ಮೇಲೆ ಮೈದಾನದಲ್ಲಿ ಏನು ಬೇಕಾದರೂ ಆಗಬಹುದು. ಆದರೆ ಮೈದಾನದ ಹೊರಗಡೆಯಿರುವ ಕ್ರಿಕೆಟ್​ ಪಂಡಿತರ ಲೆಕ್ಕಾಚಾರಗಳು ಏನೇನೋ ಇರುತ್ತವೆ. ಅದರತ್ತ ಒಮ್ಮೆ ಕಣ್ಣು ಹಾಯಿಸಿದಾಗ… ನ್ಯೂಜಿಲ್ಯಾಂಡ್​ ತಂಡವನ್ನು ಸೋಲಿಸಲು ಭಾರತ ತಂಡ ಹಾಟ್​ ಫೇವರೀಟ್ ಎಂದೇ ಪರಿಗಣಿತವಾಗಿದ್ದರೂ ಆ ಒಂದು ಕಾರಣ ಸಾಕು ನ್ಯೂಜಿಲ್ಯಾಂಡ್ ಗೆಲ್ಲಲು… ಏನದು!?

ಸುಮಾರು ದಶಕಗಳ ನಂತರ ಟೆಸ್ಟ್​ ಪಂದ್ಯವೊಂದು ತಟಸ್ಥ ಮೈದಾನದಲ್ಲಿ ನಡೆಯುತ್ತಿದೆ. ಅಂದರೆ ಉಭಯ ತಂಡಗಳ ತಾಯ್ನೆಲದಲ್ಲಿ ಆಡದೆ ಮೂರನೆಯ ರಾಷ್ಟ್ರದಲ್ಲಿ ಪಂದ್ಯ ನಡೆಯುತ್ತಿದೆ. ಆ ಲೆಕ್ಕಾಚಾರದಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್​ ತಂಡಗಳು ಪರಸ್ಪರ ಇದುವರೆಗೂ ಎಷ್ಟು ಬಾರಿ ಬೇರೊಂದು ರಾಷ್ಟ್ರದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿವೆ. ಮತ್ತು ಅದರ ಫಲಿತಾಂಶ ಏನು ಎಂಬುದನ್ನು ಪರಿಶೀಲಿಸಿದಾಗ ಭಾರತದ ಕ್ರಿಕೆಟ್​ ಪ್ರೇಮಿಗಳಿಗೆ ನಿಜಕ್ಕೂ ಆಘಾತ ಕಾದಿದೆ.

ಇದನ್ನೂ ಓದಿ ಇಂಟರೆಸ್ಟಿಂಗ್​ ಆಗಿದೆ…
ಮೊಟ್ಟಮೊದಲ ತಟಸ್ಥ ಟೆಸ್ಟ್​ ಪಂದ್ಯ ಎಲ್ಲಿ ನಡೆದಿತ್ತು? ಯಾರಯಾರ ಮಧ್ಯೆ? ಗೆಲವು ಯಾರದ್ದಾಗಿತ್ತು? ಇಲ್ಲಿದೆ ಸ್ವಾರಸ್ಯಕರ ಮಾಹಿತಿ!

ಏಳರ ಕಾಟದಿಂದ ಭಾರತ ಪಾರಾಗುವದೇ?:
ಸಿಂಪಲ್ ಆಗಿ ಹೇಳಬೇಕೆಂದ್ರೆ ಇದುವರೆಗೂ ​ಏಳು ಬಾರಿ ಎರಡೂ ರಾಷ್ಟ್ರಗಳು ಕ್ರಿಕೆಟ್​ ಅಂಗಳದಲ್ಲಿ ಸೆಣೆಸಿವೆ. ಅವು ಯಾವ ಪಂದ್ಯಗಳು ಎಂಬುದರ ಪಟ್ಟಿ ಇಲ್ಲಿದೆ ನೋಡಿ:

1) 1975 ವಿಶ್ವ ಕಪ್
2) 1979 ವಿಶ್ವ ಕಪ್
3) 1999 ವಿಶ್ವ ಕಪ್
4) 2000 ಚಾಂಪಿಯನ್ಸ್​ ಟ್ರೋಫಿ
5) 2003 ವಿಶ್ವ ಕಪ್
6) 2007 ಟಿ20 ವಿಶ್ವ ಕಪ್
7) 2019 ವಿಶ್ವ ಕಪ್
8) 2021 ವಿಶ್ವ ಟೆಸ್ಟ್ ಚಾಂಪಿಯನ್​ ಫೈನಲ್ ?

ಸರಿ ಈ ಏಳು ಬಾರಿ ವಿವಿಧ ರಾಷ್ಟ್ರಗಳಲ್ಲಿ ಎರಡೂ ರಾಷ್ಟ್ರಗಳು ಕ್ರಿಕೆಟ್​ ಆಡಿವೆ. ಆದರೆ ಅದರ ಫಲಿತಾಂಶ ಏನು ಎಂಬುದೇ ಭಾರತದ ಕ್ರಿಕೆಟ್​ ಪ್ರೇಮಿಗಳಿಗೆ ಆಘಾತಕಾರಿಯಾಗಿರುವುದು. ಏಳರಲ್ಲಿ ಏಳೂ ಅಲ್ಲದಿದ್ದರೂ ಒಂದೇ ಒಂದು ಬಾರಿ ನ್ಯೂಜಿಲ್ಯಾಂಡ್ ತಂಡ ಸೋತಿರುವುದು! ಅಷ್ಟರಮಟ್ಟಿಗೆ ತಟಸ್ಥ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ ನ್ಯೂಜಿಲ್ಯಾಂಡ್ ಪ್ರಾಬಲ್ಯ ಸಾಧಿಸಿದೆ. 2003 ವಿಶ್ವ ಕಪ್ ಪಂದ್ಯವೊಂದರಲ್ಲಿ ಮಾತ್ರವೇ ಭಾರತ ತಂಡ ನ್ಯೂಜಿಲ್ಯಾಂಡ್ ತಂಡವನ್ನು ಸೋಲಿಸಿರುವುದು. ಈಗ ಹೇಳಿ… ಈ ಲೆಕ್ಕಾಚಾರದಲ್ಲಿ 8ನೆಯ ಬಾರಿಗೆ ತಟಸ್ಥ ಕ್ರೀಡಾಂಗಣದಲ್ಲಿ (ಇಂಗ್ಲಂಡ್) ವಿಶ್ವ ಟೆಸ್ಟ್ ಚಾಂಪಿಯನ್​ ಫೈನಲ್ ಪಂದ್ಯದಲ್ಲಿ ಉಭಯ ತಂಡಗಳು ಸೆಣೆಸುತ್ತಿವೆ. ಫಲಿತಾಂಶ ಏನೋ, ಎಂತೋ? ಎಂಬಂತಾಗಿದೆ!

ಆದರೆ ಭಾರತದ ಕ್ರಿಕೆಟ್​ ಪ್ರೇಮಿಗಳಿಗೆ ಇಲ್ಲೊಂದು ಸಮಾಧಾನಕರ ವಿಶ್ಲೇಷಣೆಯಿದೆ. ಏನೆಂದ್ರೆ ನ್ಯೂಜಿಲ್ಯಾಂಡ್ ತಂಡ ಹೀಗೆ ಭಾರತ ತಂಡದ ವಿರುದ್ಧ ಪ್ರಾಬಲ್ಯ ತೋರಿಸಿರುವುದು ಟೆಸ್ಟ್ ಮ್ಯಾಚ್​​ನಲ್ಲಿ ಅಲ್ಲ. ಆ ಏಳೂ ಅಂತಾರಾಷ್ಟ್ರೀಯ ಪಂದ್ಯಗಳು ಬೇರೆ ಬೇರೆ ಮಾದರಿಯ ಕ್ರಿಕೆಟ್​ ಆಟದ್ದಾಗಿವೆ. ಅದಕ್ಕೇ ಈ ವಾದವನ್ನು ಸ್ವಲ್ಪ ಪಕ್ಕಕ್ಕೆ ಇಟ್ಟು ನೋಡಬಹುದು. ಆಗ ಈ ಬಾರಿಯ ತಟಸ್ಥ ವಿಶ್ವ ಟೆಸ್ಟ್ ಚಾಂಪಿಯನ್​ ಫೈನಲ್ ಕುತೂಹಲಕಾರಿಯಾಗಿದೆ. ಜೊತೆಗೆ ಭಾರತ ತಂಡದ ಈಗಿನ ಫಾರಂ ಮತ್ತು ಆಟಗಾರರಲ್ಲಿರುವ ಜೋಶ್​ ನೋಡಿದರೆ ಭಾರತ ತಂಡವೇ ಫೇವರೀಟ್ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆಲ್​ ದಿ ಬೆಸ್ಟ್​ ಟೀಂ ಇಂಡಿಯಾ!

(ICC WTC Final India not hot favourite in neutral grounds against new zealand previous statistics)

Published On - 9:44 am, Thu, 17 June 21