AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AUS 1st Test: ಕಾಂಗರೂ ಪಡೆ ಅಶ್ವಿನ್​ಗಾಗಿ ಮಾಡಿದ ತಯಾರಿ ವಿಫಲ: ಭಾರತದ ಅಮೋಘ ಜಯದ ಬಗ್ಗೆ ಯಾರು ಏನಂದ್ರು ನೋಡಿ

India vs Australia 1st Test: 132 ರನ್​ಗಳ ಇನ್ನಿಂಗ್ಸ್​ ಜಯದೊಂದಿಗೆ ಟೀಮ್ ಇಂಡಿಯಾ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಭಾರತದ ಗೆಲುವನ್ನು ಅನೇಕ ಕ್ರಿಕೆಟ್ ಪಂಡಿತರು ಸಂಭ್ರಮಿಸಿದ್ದು ಯಾರು ಏನು ಹೇಳಿದರು ನೋಡಿ.

IND vs AUS 1st Test: ಕಾಂಗರೂ ಪಡೆ ಅಶ್ವಿನ್​ಗಾಗಿ ಮಾಡಿದ ತಯಾರಿ ವಿಫಲ: ಭಾರತದ ಅಮೋಘ ಜಯದ ಬಗ್ಗೆ ಯಾರು ಏನಂದ್ರು ನೋಡಿ
IND vs AUS 1st Test
Vinay Bhat
|

Updated on:Feb 11, 2023 | 3:36 PM

Share

ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಬಾರ್ಡರ್- ಗವಾಸ್ಕರ್ ಟ್ರೋಫಿಯ ಭಾರತ ಹಾಗೂ ಆಸ್ಟ್ರೇಲಿಯಾ (India vs Australia)ನಡುವಣ ಪ್ರಥಮ ಟೆಸ್ಟ್ ಪಂದ್ಯ ಎರಡೂವರೆ ದಿನಕ್ಕೇ ಅಂತ್ಯಕಂಡಿದೆ. ಟೀಮ್ ಇಂಡಿಯಾ ಸ್ಪಿನ್ ದಾಳಿಗೆ ನಲುಗಿದ ಕಾಂಗರೂ ಪಡೆ ಎರಡನೇ ಇನ್ನಿಂಗ್ಸ್​ನಲ್ಲಿ ಕೇವಲ 91 ರನ್​ಗೆ ಅಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿದೆ. ಮೊದಲ ಇನ್ನಿಂಗ್ಸ್​ ಬೌಲಿಂಗ್​ನಲ್ಲಿ ರವೀಂದ್ರ ಜಡೇಜಾ (Ravindra Jadeja) ಮಿಂಚಿದರೆ, ಎರಡನೇ ಇನ್ನಿಂಗ್ಸ್​ನಲ್ಲಿ ರವಿಂದ್ರನ್ ಅಶ್ವಿನ್ (R Ashwin) ಮಾರಕವಾಗಿ ಪರಿಣಮಿಸಿದರು. 132 ರನ್​ಗಳ ಇನ್ನಿಂಗ್ಸ್​ ಜಯದೊಂದಿಗೆ ಟೀಮ್ ಇಂಡಿಯಾ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಭಾರತದ ಗೆಲುವನ್ನು ಅನೇಕ ಕ್ರಿಕೆಟ್ ಪಂಡಿತರು ಸಂಭ್ರಮಿಸಿದ್ದು ಯಾರು ಏನು ಹೇಳಿದರು ನೋಡಿ.

ಮೊದಲ ಟೆಸ್ಟ್ ಆರಂಭವಾದ ಹೊತ್ತಿಗೆ ಆಸ್ಟ್ರೇಲಿಯಾ ಮೀಡಿಯಾಗಳು ಪಿಚ್ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದವು. ಭಾರತ ತನಗೆ ಬೇಕಾದಂತೆ ಪಿಚ್ ಅನ್ನು ಸಿದ್ಧ ಪಡಿಸಿದೆ ಎಂದು ವರದಿ ಬಿತ್ತರಿಸಿತ್ತು. ಇದೀಗ ಭಾರತ ಗೆಲುವು ಸಾಧಿಸುತ್ತಿದ್ದಂತೆ ಟ್ವೀಟ್ ಮಾಡಿರುವ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ವಾಸೀಂ ಜಾಫರ್ ಸರಿಯಾಗಿ ತಿರುಗೇಟು ನೀಡಿದ್ದಾರೆ. ”ಎಂದಿಗು ಎರಡೂ ತಂಡಗಳ ಆಟ ಮುಕ್ತಾಯ ಆಗುವವರೆಗೆ ಪಿಚ್ ಬಗ್ಗೆ ತೀರ್ಮಾನ ಕೈಗೊಳ್ಳಬೇಡಿ. ಇಲ್ಲಿ ಎರಡೂ ತಂಡಗಳು ಬ್ಯಾಟಿಂಗ್ ಮಾಡಲು ಕಷ್ಟ ಪಟ್ಟಿದೆ. ಇದು ನಿಜವಾದ ಪಿಚ್. ಭಾರತ ಉತ್ತಮವಾಗಿ ಆಡಿದೆ,” ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Rishabh Pant: ಕಾರು ಅಪಘಾತದ ಬಳಿಕ ತನ್ನ ಮೊದಲ ಫೋಟೋ ಹಂಚಿಕೊಂಡ ರಿಷಭ್ ಪಂತ್: ಇಲ್ಲಿದೆ ನೋಡಿ

”ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಅದ್ಭುತ ಆರಂಭ ಪಡೆದಿದೆ. ಟೀಮ್ ಇಂಡಿಯಾ ಆರಂಭದಿಂದ ಅಂತ್ಯದವರೆಗೆ ಅತ್ಯುತ್ತಮ ಪ್ರದರ್ಶನ ತೋರಿದೆ,” ಎಂದು ದಿನೇಶ್ ಕಾರ್ತಿಕ್ ಟ್ವೀಟ್ ಮಾಡಿದ್ದಾರೆ.

ಕರ್ನಾಟಕದ ಮಾಜಿ ಕ್ರಿಕೆಟಿಗ ವೇಂಕಟೇಶ್ ಪ್ರಸಾದ ಕೂಡ ಟ್ವೀಟ್ ಮಾಡಿದ್ದು, ”ಇದು ಭಾರತಕ್ಕೆ ಸಲ್ಲ ಬೇಕಾದ ಜಯ. ಜಡೇಜಾ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಮಿಂಚಿದ್ದಾರೆ. ರೋಹಿತ್ ಶರ್ಮಾ ಶತಕದ ಮೂಲಕ ತಂಡಕ್ಕೆ ನೆರವಾಗಿದ್ದಾರೆ. ಆಸ್ಟ್ರೇಲಿಯಾ ಭಯಕ್ಕೆ ತಕ್ಕಂತೆ ಅಶ್ವಿನ್ ಮಾರಕ ದಾಳಿ ನಡೆಸಿದರು. ಅಕ್ಷರ್ ಪಟೇಲ್ ಕೂಡ ಉತ್ತಮ ಆಲ್ರೌಂಡ್ ಪ್ರದರ್ಶನ ತೋರಿದರು. ಹಾಗೆಯೆ ಮೊಹಮ್ಮದ್ ಶಮಿ ಕೊಡುಗೆ ಮರೆಯುವಂತಿಲ್ಲ,” ಎಂದು ಹೇಳಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ರವೀಂದ್ರ ಜಡೇಜಾ ಬೌಲಿಂಗ್ ದಾಳಿಗೆ ಸಿಲುಕಿ ಕೇವಲ 177 ರನ್​ಗೆ ಸರ್ವಪತನ ಕಂಡಿತು. ಜಡೇಜಾ 5 ವಿಕೆಟ್ ಪಡೆದರೆ, ಅಶ್ವಿನ್ 3 ವಿಕೆಟ್ ಕಿತ್ತರು. ಆಸೀಸ್ ಪರ ಮಾರ್ನಸ್ ಲಾಬುಶೇನ್ 49 ಹಾಗೂ ಸ್ಟೀವ್ ಸ್ಮಿತ್ 37 ರನ್ ಗಳಿಸಿದರು. ಬಳಿಕ ತನ್ನ ಮೊದಲ ಇನ್ನಿಂಗ್ಸ್ ಶುರು ಮಾಡಿದ ಭಾರತ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ನಾಯಕ ರೋಹಿತ್ ಶರ್ಮಾ 120 ರನ್ ಬಾರಿಸಿದರೆ, ಅಕ್ಷರ್ ಪಟೇಲ್ 84, ರವೀಂದ್ರ ಜಡೇಜಾ 70 ಹಾಗೂ ಮೊಹಮ್ಮದ್ ಶಮಿ 37 ರನ್ ಸಿಡಿಸಿದರು. ಭಾರತ 400 ರನ್​ಗೆ ಆಲೌಟ್ ಆಯಿತು. 223 ರನ್​ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಶುರು ಮಾಡಿದ ಆಸೀಸ್ ಕೇವಲ 91 ರನ್​ಗೆ ಆಲೌಟ್ ಆಯಿತು. ಅಶ್ವಿನ್ 5 ವಿಕೆಟ್ ಗೊಂಚಲು ಪಡೆದುಕೊಂಡರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:36 pm, Sat, 11 February 23

ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್