CWG 2026: ಜಾವೆಲಿನ್ ಥ್ರೋ ಫೈನಲ್​ ಸುತ್ತಿಗೆ ಅರ್ಹತೆ ಪಡೆದ ಮೂವರು ಭಾರತೀಯರು

CWG 2026 Javelin: 2026ರ ಕಾಮನ್‌ವೆಲ್ತ್ ಕ್ರೀಡಾಕೂಟದ ಪುರುಷರ ಜಾವೆಲಿನ್ ಥ್ರೋ ಅರ್ಹತಾ ಸುತ್ತಿನಲ್ಲಿ ಭಾರತದ ನೀರಜ್ ಚೋಪ್ರಾ, ರೋಹಿತ್ ಯಾದವ್ ಮತ್ತು ಯಶ್ವೀರ್ ಸಿಂಗ್ ಫೈನಲ್ ಸುತ್ತಿಗೆ ಅರ್ಹತೆ ಪಡೆದಿದ್ದಾರೆ. ಮೂವರೂ ಅಗ್ರ 12 ರಲ್ಲಿ ಸ್ಥಾನ ಪಡೆದು ಪದಕ ಸ್ಪರ್ಧೆಗೆ ಲಗ್ಗೆ ಇಟ್ಟಿದ್ದಾರೆ. ನೀರಜ್ ಚೋಪ್ರಾ ಐದನೇ ಸ್ಥಾನ, ರೋಹಿತ್ ಒಂಬತ್ತನೇ ಹಾಗೂ ಯಶ್ವೀರ್ ಹತ್ತನೇ ಸ್ಥಾನ ಪಡೆದರು. ಫೈನಲ್‌ನಲ್ಲಿ ಪದಕ ಗೆಲ್ಲುವ ಭರವಸೆ ಹೆಚ್ಚಿದೆ.

CWG 2026: ಜಾವೆಲಿನ್ ಥ್ರೋ ಫೈನಲ್​ ಸುತ್ತಿಗೆ ಅರ್ಹತೆ ಪಡೆದ ಮೂವರು ಭಾರತೀಯರು
Javelin Throw

Updated on: Jul 30, 2026 | 6:35 PM

2026 ರ ಕಾಮನ್‌ವೆಲ್ತ್ ಕ್ರೀಡಾಕೂಟದ (Commonwealth Games) 8ನೇ ದಿನದಂದು ಪುರುಷರ ಜಾವೆಲಿನ್ ಥ್ರೋ (Javelin Throw ) ಅರ್ಹತಾ ಸುತ್ತು ಇಂದು ನಡೆಯಿತು. ಈ ಸುತ್ತಿನಲ್ಲಿ ಭಾರತದಿಂದ ಮೂವರು ಜಾವೆಲಿನ್ ಎಸೆತಗಾರರು ಭಾಗವಹಿಸಿದ್ದರು. ಅವರಲ್ಲಿ ಸ್ಟಾರ್ ಜಾವೆಲಿನ್ ಥ್ರೋವರ್ ನೀರಜ್ ಚೋಪ್ರಾ( Neeraj Chopra), ರೋಹಿತ್ ಯಾದವ್ ಮತ್ತು ಯಶ್ವೀರ್ ಸಿಂಗ್ ಸೇರಿದ್ದರು. ಈ ಮೂವರು ಜಾವೆಲಿನ್ ಥ್ರೋ ಫೈನಲ್‌ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂವರೂ ಅಗ್ರ 12 ರಲ್ಲಿ ಸ್ಥಾನ ಪಡೆದು ಪದಕ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ.

ಅರ್ಹತಾ ಸುತ್ತಿನಲ್ಲಿ ನೀರಜ್ ಚೋಪ್ರಾ ಐದನೇ ಸ್ಥಾನ ಪಡೆದರೆ, ರೋಹಿತ್ ಯಾದವ್ ಒಂಬತ್ತನೇ ಸ್ಥಾನ ಮತ್ತು ಯಶ್ವೀರ್ ಸಿಂಗ್ ಹತ್ತನೇ ಸ್ಥಾನ ಪಡೆದರು. ಶ್ರೀಲಂಕಾದ ರುಮೇಶ್ ಪತಿರಗೆ 82.84 ಮೀಟರ್ ಎಸೆಯುವ ಮೂಲಕ ಸ್ಪರ್ಧೆಯಲ್ಲಿ ಅಗ್ರಸ್ಥಾನ ಪಡೆದರೆ, ಪಾಕಿಸ್ತಾನದ ಅರ್ಷದ್ ನದೀಮ್ (78.63 ಮೀ) ಏಳನೇ ಸ್ಥಾನ ಪಡೆದರು.

ಪದಕ ಸುತ್ತಿನಲ್ಲಿ ಭಾರತೀಯರ ಪ್ರಾಬಲ್ಯ

2018 ರಲ್ಲಿ ಚಿನ್ನ ಗೆದ್ದಿದ್ದ ಚೋಪ್ರಾ ಅರ್ಹತಾ ಸುತ್ತಿನಲ್ಲಿ 79.61 ಮೀಟರ್ ಅತ್ಯುತ್ತಮ ಎಸೆತದೊಂದಿಗೆ ಐದನೇ ಸ್ಥಾನ ಪಡೆದರೆ, ರೋಹಿತ್ ಯಾದವ್ 78.37 ಮೀ ಮತ್ತು ಯಶ್ವೀರ್ ಸಿಂಗ್ 78.36 ಮೀ ಭರ್ಜಿ ಎಸೆಯುವ ಮಲಕ ಅರ್ಹತಾ ಸುತ್ತಿನಲ್ಲಿ ಕ್ರಮವಾಗಿ ಒಂಬತ್ತನೇ ಮತ್ತು 10 ನೇ ಸ್ಥಾನ ಪಡೆದರು. ಈ ಮೂಲಕ ಪದಕ ಸುತ್ತಿನಲ್ಲಿ ಪೂರ್ಣ ಭಾರತೀಯ ತಂಡ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿತು.

ಯಶ್ವೀರ್ ಮೊದಲ ಸುತ್ತಿನಲ್ಲಿ 73.89 ಮೀಟರ್ ದೂರ ಎಸೆದರೆ, ಎರಡನೇ ಸುತ್ತಿನಲ್ಲಿ 74.45 ಮೀಟರ್‌ ಮತ್ತು ಅಂತಿಮ ಪ್ರಯತ್ನದಲ್ಲಿ 78.36 ಮೀಟರ್ ದೂರವನ್ನು ಎಸೆಯುವ ಮೂಲಕ ಅರ್ಹತೆ ಪಡೆದರು. ಹಾಗೆಯೇ ರೋಹಿತ್ ಮೊದಲ ಸುತ್ತಿನಲ್ಲಿ 77.04 ಮೀಟರ್, ಎರಡನೇ ಪ್ರಯತ್ನದಲ್ಲಿ 78.37 ಮೀಟರ್‌ ದೂರ ಎಸೆಯುವ ಮೂಲಕ ಅರ್ಹತೆ ಗಿಟ್ಟಿಸಿಕೊಂಡರು. ಇತ್ತ ಮಾಜಿ ವಿಶ್ವ ಚಾಂಪಿಯನ್ ನೀರಜ್ ಮೊದಲ ಸುತ್ತಿನಲ್ಲಿ 76.28 ಮೀಟರ್ ದೂರ ಎಸೆತದರೆ, ಎರಡನೇ ಪ್ರಯತ್ನದಲ್ಲಿ 79.61 ಮೀಟರ್‌ ದೂರ ಎಸೆಯುವ ಮೂಲಕ ಫೈನಲ್​ಗೆ ಅರ್ಹತೆ ಪಡೆದರು.

ಚಿನ್ನದ ಹುಡುಗ ನೀರಜ್ ಚೋಪ್ರಾಗೆ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ ಪ್ರದಾನ

ಯಾರಿಗೂ ಗುರಿ ದಾಟಲು ಸಾಧ್ಯವಾಗಲಿಲ್ಲ

ನಿರಂತರ ಗಾಳಿ ಮತ್ತು 18 ಡಿಗ್ರಿ ಸೆಲ್ಸಿಯಸ್ ತಾಪಮಾನದಿಂದ ಯಾವುದೇ ಸ್ಪರ್ಧಿಗೆ 84 ಮೀಟರ್ ನಿಗದಿತ ಗುರಿಯನ್ನು ದಾಟಲು ಸಾಧ್ಯವಾಗಲಿಲ್ಲ.ಇದರಿಂದಾಗಿ ಅಗ್ರ 12 ಕ್ರೀಡಾಪಟುಗಳಿಗೆ ಫೈನಲ್ ಸುತ್ತಿಗೆ ಅರ್ಹತೆ ನೀಡಲಾಯಿತು. ಈ ಸೀಸನ್​ನ ದೋಹಾ ಮತ್ತು ರೋಮ್ ಡೈಮಂಡ್ ಲೀಗ್​ನ ವಿಜೇತ ಶ್ರೀಲಂಕಾದ ಫಾರ್ಮ್‌ನಲ್ಲಿರುವ ರುಮೇಶ್ ತರಂಗ ಪತಿರಾಜ ಮೊದಲ ಸುತ್ತಿನಲ್ಲಿ 82.84 ಮೀಟರ್ ಎಸೆಯುವ ಮೂಲಕ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:33 pm, Thu, 30 July 26

Loading...
Unable to load recommendations.
Follow Us