ICC World T20: ಪಾಕಿಸ್ತಾನ ಕ್ರಿಕೆಟಿಗರಿಗೆ ವೀಸಾ ನೀಡಲು ಭಾರತ ನಿರ್ಧಾರ?

| Updated By: ganapathi bhat

Updated on: Nov 30, 2021 | 12:19 PM

ಭಾರತ- ಪಾಕಿಸ್ತಾನ ನಡುವೆ ಈ ವರ್ಷದ ಕೊನೆಯಲ್ಲಿ 3 ಪಂದ್ಯಗಳ ಟಿ20 ಸರಣಿ ನಡೆಯುವ ಸಾದ್ಯತೆಯನ್ನೂ ಕಳೆದ ತಿಂಗಳು ಅಂದಾಜಿಸಲಾಗಿತ್ತು. ಭಾರತ ಮತ್ತು ಪಾಕಿಸ್ತಾನ ತಂಡಗಳು ಪರಸ್ಪರ ಒಂದು ಸರಣಿಯಲ್ಲಿ ಆಡದೇ 8 ವರ್ಷಗಳೇ ಕಳೆದಿತ್ತು.

ICC World T20: ಪಾಕಿಸ್ತಾನ ಕ್ರಿಕೆಟಿಗರಿಗೆ ವೀಸಾ ನೀಡಲು ಭಾರತ ನಿರ್ಧಾರ?
ಭಾರತ- ಪಾಕಿಸ್ತಾನ ಕ್ರಿಕೆಟ್ ತಂಡ (ಸಂಗ್ರಹ ಚಿತ್ರ)
Follow us on

ದೆಹಲಿ: ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡ ಭಾರತದ ಮೈದಾನದಲ್ಲಿ ಕ್ರಿಕೆಟ್ ಆಡುವ ಸಾಧ್ಯತೆಗಳು ದಟ್ಟವಾಗಿದೆ. ಭಾರತದಲ್ಲೇ, ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯ ಆಡಲು ಇದ್ದ ಸಮಸ್ಯೆಗಳು ದೂರವಾಗುವ ಬಗ್ಗೆ ಮುನ್ಸೂಚನೆ ಲಭಿಸಿದೆ. ಅಕ್ಟೋಬರ್​ನಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟಿ20 ಟೂರ್ನಮೆಂಟ್​ನಲ್ಲಿ ಪಾಕಿಸ್ತಾನ್ ಕ್ರಿಕೆಟ್ ತಂಡ ಕೂಡ ಭಾಗವಹಿಸಲಿದೆ. ಈ ಪಂದ್ಯದಲ್ಲಿ ಭಾಗವಹಿಸಲು, ಪಾಕ್ ಕ್ರಿಕೆಟಿಗರಿಗೆ ವೀಸಾ ನೀಡುವ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.

ಬಿಸಿಸಿಐ ಕಾರ್ಯದರ್ಶಿ ಜೈ ಶಾ, ಪಾಕಿಸ್ತಾನ್ ಕ್ರಿಕೆಟ್ ಆಟಗಾರರಿಗೆ ವೀಸಾ ನೀಡುವ ಬಗ್ಗೆ ಸರ್ಕಾರ ತಾಳಿರುವ ನಿಲುವನ್ನು ಉನ್ನತ ಮಂಡಳಿಗೆ ತಿಳಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟಿಗರ ವೀಸಾ ಸಮಸ್ಯೆಗೆ ಪರಿಹಾರ ಲಭಿಸಿದೆ. ಆದರೆ, ಕ್ರಿಕೆಟ್ ಅಭಿಮಾನಿಗಳು ಗಡಿ ದಾಟಿ ಪ್ರಯಾಣ ಮಾಡಬಹುದೇ, ಇಲ್ಲವೇ ಎಂದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಉನ್ನತ ಮೂಲಗಳು ಮಾಹಿತಿ ನೀಡಿವೆ.

ಈ ವಿಚಾರದ ಬಗ್ಗೆ ಕೂಡ ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದು. ಐಸಿಸಿಗೆ ಎಲ್ಲಾ ವಿಷಯಗಳನ್ನು ಕೂಡ ಸರಿಪಡಿಸುವುದಾಗಿ ಹೇಳಿದ್ದೇವೆ ಎಂದು ಬಿಸಿಸಿಐ ಕಾರ್ಯದರ್ಶಿ ಹೇಳಿದ್ದಾರೆ.

ಭಾರತ- ಪಾಕಿಸ್ತಾನ ನಡುವೆ ಈ ವರ್ಷದ ಕೊನೆಯಲ್ಲಿ 3 ಪಂದ್ಯಗಳ ಟಿ20 ಸರಣಿ ನಡೆಯುವ ಸಾದ್ಯತೆಯನ್ನೂ ಕಳೆದ ತಿಂಗಳು ಅಂದಾಜಿಸಲಾಗಿತ್ತು. ಭಾರತ ಮತ್ತು ಪಾಕಿಸ್ತಾನ ತಂಡಗಳು ಪರಸ್ಪರ ಒಂದು ಸರಣಿಯಲ್ಲಿ ಆಡದೇ 8 ವರ್ಷಗಳೇ ಕಳೆದಿತ್ತು. 2012-13ರಲ್ಲಿ ಎರಡು ಟಿ20 ಪಂದ್ಯ ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲು ಪಾಕಿಸ್ತಾನ ಭಾರತ ಪ್ರವಾಸ ಕೈಗೊಂಡಿತ್ತು. ಅದರಲ್ಲಿ ಟಿ20 ಸರಣಿ 1-1 ಅಂತರದಿಂದ ಟೈ ಆಗಿತ್ತು. 2-1 ಅಂತರದಿಂದ ಪಾಕ್ ಏಕದಿನ ಸರಣಿಯನ್ನು ಗೆದ್ದಿತ್ತು. ಆ ಬಳಿಕ ಉಭಯ ದೇಶಗಳು ಕೂಡ ಹಲವು ತಂಡಗಳಿರುವ ಟೂರ್ನಮೆಂಟ್​ಗಳಲ್ಲಿ ಆಡಿದೆಯೇ ವಿನಃ ಒನ್ ಟು ಒನ್ ಆಗಿ ಕ್ರಿಕೆಟ್ ಆಡಿಲ್ಲ.

ಇದನ್ನೂ ಓದಿ: ಐಸಿಸಿ ಏಕದಿನ ರ್ಯಾಂಕಿಂಗ್​ನಲ್ಲಿ ವಿರಾಟ್​ ಕೊಹ್ಲಿ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ ಬಾಬರ್ ಆಜಂ

ಇದನ್ನೂ ಓದಿ: ಸರಣಿ ಗೆದ್ದ ಪಾಕಿಸ್ತಾನ: ಐಪಿಎಲ್​ಗಾಗಿ ದೇಶ ತೊರೆದ ದಕ್ಷಿಣ ಆಫ್ರಿಕಾ ಆಟಗಾರರ ಮೇಲೆ ಸಿಟ್ಟಾದ ಶಾಹಿದ್ ಅಫ್ರಿದಿ!

(India Pakistan T20 Series may happen this year India to grant Pak Cricketers Visas for ICC World T20)

Published On - 3:59 pm, Sat, 17 April 21