AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೆಸ್ಟ್ ಸರಣಿ ಆರಂಭಕ್ಕೆ ಮೊದಲು ಭಾರತಕ್ಕೆ ಒಂದು ಮೂರು-ದಿನಗಳ ಅಭ್ಯಾಸ ಪಂದ್ಯ ಏರ್ಪಾಟು ಮಾಡಲು ಈಸಿಬಿ ನಿರ್ಧಾರ: ಮೂಲಗಳು

ಪಿಟಿಐ ಜೊತೆ ಮಾತಾಡಿರುವ ಈಸಿಬಿಯ ವಕ್ತಾರರೊಬ್ಬರು, ‘ಐದು-ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗುವ ಮೊದಲು ಮೂರು-ದಿನಗಳ ಅಭ್ಯಾಸ ಪಂದ್ಯವೊಂದನ್ನು ಸೆಲೆಕ್ಟ್ ಕೌಂಟಿ ಇಲೆವೆನ್ ವಿರುದ್ಧ ಅಯೋಜಿಸುವಂತೆ ಬಿಸಿಸಿಐ ಮಾಡಿರುವ ಮನವಿ ನಮ್ಮ ಗಮನದಲ್ಲಿದೆ,’ ಎಂದು ಹೇಳಿದ್ದಾರೆ.

ಟೆಸ್ಟ್ ಸರಣಿ ಆರಂಭಕ್ಕೆ ಮೊದಲು ಭಾರತಕ್ಕೆ ಒಂದು ಮೂರು-ದಿನಗಳ ಅಭ್ಯಾಸ ಪಂದ್ಯ ಏರ್ಪಾಟು ಮಾಡಲು ಈಸಿಬಿ ನಿರ್ಧಾರ: ಮೂಲಗಳು
ಟೀಮ್ ಇಂಡಿಯಾ
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Jul 02, 2021 | 9:48 PM

Share

ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಆಗಸ್ಟ್ 4 ರಿಂದ ಆರಂಭವಾಗುವ ಟೆಸ್ಟ್ ಸರಣಿಗೆ ಮೊದಲು ಕನಿಷ್ಟ ಎರಡು ಟೂರ್ ಗೇಮ್ಗಳನ್ನು ಅಯೋಜಿಸಬೇಕೆಂದು ಇಂಗ್ಲೆಂಡ್ ಮತ್ತು ವೆಲ್ಸ್ ಕ್ರಿಕೆಟ್ ಮಂಡಳಿಗೆ (ಈಸಿಬಿ) ಮಾಡಿದ ಮನವಿ ಅರ್ಧ ನೆರವೇರಿದೆ. ಶುಕ್ರವಾರದಂದು ಪಿಟಿಐ ವರದಿ ಮಾಡಿರುವ ಪ್ರಕಾರ ಈಸಿಬಿ, ‘ಸೆಲೆಕ್ಟ್ ಕೌಂಟಿ ಇಲೆವೆನ್’ ಮೂರು ದಿನಗಳ ಒಂದು ಪಂದ್ಯವನ್ನು ಏರ್ಪಾಡು ಮಾಡಲು ನಿರ್ಧರಿಸಿದೆ. ಈ ಪಂದ್ಯಕ್ಕೆ ಪ್ರಥಮ ದರ್ಜೆ ಪಂದ್ಯದ ಸ್ಥಾನಮಾನ ನೀಡಲಾಗುವುದು ಅಂತ ಅದು ಹೇಳಿರುವುದನ್ನು ಪಿಟಿಐ ವರದಿ ಮಾಡಿದೆ. ಪಂದ್ಯವನ್ನು ಪ್ರಾಯಶಃ ಜುಲೈ ತಿಂಗಳ ಮೂರನೇ ವಾರದಲ್ಲಿ ಆಡಿಸಲಾಗುವುದು. ಇಂಗ್ಲಿಷ್ ಕೌಂಟಿಗಳಲ್ಲಾಡುವ ಕ್ಲಬ್​ಗಳಿಂದ ಆಟಗಾರರನ್ನು ಅರಿಸಿ ಸೆಲೆಕ್ಟ್ ಕೌಂಟಿ ಇಲೆವೆನ್ ತಂಡ ರಚಿಸಿ ಟೆಸ್ಟ್ ಸರಣಿ ಅರಂಭವಾಗುವ ಮೊದಲು ಇಂಡಿಯಾ ಟೀಮಿನ ವಿರುದ್ಧ ಆಡಿಸಲಾಗುವುದೆಂದು ಈಸಿಬಿ ಹೇಳಿದೆ.

ಪಂದ್ಯ ನಡೆಯುವ ದಿನಾಂಕವನ್ನು ಇನ್ನೂ ಅಂತಿಮಗೊಳಿಸಿಲ್ಲವಾದರೂ ಜುಲೈ 20 ರಿಂದ 22 ರವರೆಗೆ ಆಯೋಜಿಸುವ ಸಾಧ್ಯತೆ ಇದೆ.

ಪಿಟಿಐ ಜೊತೆ ಮಾತಾಡಿರುವ ಈಸಿಬಿಯ ವಕ್ತಾರರೊಬ್ಬರು, ‘ಐದು-ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗುವ ಮೊದಲು ಮೂರು-ದಿನಗಳ ಅಭ್ಯಾಸ ಪಂದ್ಯವೊಂದನ್ನು ಸೆಲೆಕ್ಟ್ ಕೌಂಟಿ ಇಲೆವೆನ್ ವಿರುದ್ಧ ಅಯೋಜಿಸುವಂತೆ ಬಿಸಿಸಿಐ ಮಾಡಿರುವ ಮನವಿ ನಮ್ಮ ಗಮನದಲ್ಲಿದೆ,’ ಎಂದು ಹೇಳಿದ್ದಾರೆ.

‘ಪಂದ್ಯ ಆಯೋಜಿಸುವುದನ್ನು ಕುರಿತಂತೆ, ಕೋವಿಡ್-19 ನಿಯಮಾವಳಿಗಳನ್ನು ಗಮನದಲ್ಲಿಟ್ಟುಕೊಂಡು ನಾವು ಯೋಜನೆ ರೂಪಿಸುತ್ತಿದ್ದೇವೆ. ಅದನ್ನು ಯಶಸ್ವೀಯಾಗಿ ಅಯೋಜಿಸುವ ಭರವಸೆ ನಮಗಿದೆ ಮತ್ತು ಆದಷ್ಟು ಬೇಗ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತೇವೆ,’ ಎಂದು ಅವರು ಹೇಳಿದ್ದಾರೆ.

’ಭಾರತದ ತಂಡ ಟೆಸ್ಟ್-ಪೂರ್ವ ತರಬೇತಿಗಾಗಿ ಜುಲೈ 15 ರಂದು ಡುರ್ಹಮ್ನ ಎಮಿರೇಟ್ಸ್ ರಿವರ್ಸೈಡ್ಗೆ ಬಂದು ಸೇರಲಿದೆ. ಅಲ್ಲಿ ಆಗಸ್ಟ್ 1 ರವರಗೆ ತಯಾರಿ ನಡೆಸಿದ ನಂತರ ಟ್ರೆಂಟ್ ಬ್ರಿಜ್ ನಾಟಿಂಗ್ಹ್ಯಾಮ್​ಗೆ ತೆರಳಲಿದೆ. ಇದೇ ಸ್ಥಳದಲ್ಲಿ ಮೊದಲ ಟೆಸ್ಟ್ ಆಗಸ್ಟ್ 4 ರಿಂದ ನಡೆಯಲಿದೆ,’ ಎಂದು ಬಾತ್ಮೀದಾರ ಹೇಳಿದರು.

ಜುಲೈ 23 ರಿಂದ ‘ದಿ ಹಂಡ್ರೆಡ್’ ಟೂರ್ನಿ ಆರಂಭವಾಗಲಿರುವುದರಿಂದ ಸೆಲೆಕ್ಟ್ ಕೌಂಟಿ ಇಲೆವೆನ್ ತಂಡದ ಕ್ವಾಲಿಟಿ ಹೇಗಿರಲಿದೆ ಎಂದು ಕೇಳಿದ ಪ್ರಶ್ನೆಗೆ ಅವರು, ‘ದಿ ಹಂಡ್ರೆಡ್’ ಟೂರ್ನಿಯಲ್ಲಿ ಭಾಗವಹಿಸದ ಆಟಗಾರರರನ್ನು ನಾವು ಆರಿಸಲಿದ್ದೇವೆ ಮತ್ತು ಒಂದು ಪ್ರಬಲ ತಂಡವನ್ನು ಆಯ್ಕೆ ಮಾಡುವ ಪ್ರಯತ್ನ ನಮ್ಮದಾಗಿರುತ್ತದೆ,’ ಎಂದು ಅವರು ಹೇಳಿದರು.

ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯುಟಿಸಿ) ಫೈನಲ್ನಲ್ಲಿ ದಯನೀಯ ಸೋಲು ಅನುಭವಿಸಿದ ನಂತರ ಟೀಮ್ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರು ಟೆಸ್ಟ್ ಸರಣಿಗೆ ಮೊದಲು ಅಭ್ಯಾಸ ಪಂದ್ಯವನ್ನು ಅಯೋಜಿಸಬೇಕೆನ್ನುವ ಬೇಡಿಕೆ ಮುಂದಿಟ್ಟಿದ್ದರು.

ಡಬ್ಲ್ಯುಟಿಸಿ ಫೈನಲ್ಗೆ ಮೊದಲು ಭಾರತ ಯಾವುದೇ ಅಭ್ಯಾಸ ಪಂದ್ಯ ಆಡದೆ ನೇರವಾಗಿ ಕಣಕ್ಕಿಳಿದಿತ್ತು. ಆದರೆ ಇಂಗ್ಲೆಂಡ್ ವಿರುದ್ಧ 2-ಪಂದ್ಯಗಳ ಸರಣಿ ಅಡಿದ ನ್ಯೂಜೆಲೆಂಡ್ ಭರ್ಜರಿ ತಯಾರಿಯೊಂದಿಗೆ ರಂಗ ಪ್ರವೇಶಿಸಿತ್ತು. ಹಾಗಾಗಿ ವಿಶ್ವದ ನಂಬರ್ ವನ್ ಟೀಮನ್ನು ಸೋಲಿಸಲು ಅದು ಹೆಚ್ಚು ಶ್ರಮಿಸುವ ಅಗತ್ಯ ಬೀಳಲಿಲ್ಲ.

ಇದನ್ನೂ ಓದಿ: Virat Kohli: ಕೊಹ್ಲಿ ಒಬ್ಬ ನತದೃಷ್ಟ ನಾಯಕ! ಕೇವಲ ಆತನೊಬ್ಬನನ್ನು ಮಾತ್ರ ಏಕೆ ದೂಷಿಸುತ್ತಾರೆ? ವಿರಾಟ್ ಪರ ನಿಂತ ಅರುಣ್ ಲಾಲ್

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!