ಚೆನ್ನೈ:ಚೆನ್ನೈ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನ ಮೂರನೇ ದಿನದಾಟ ಮುಗಿದಿದ್ದು, ಟೀಂ ಇಂಡಿಯಾ 257 ರನ್ಗಳಿಗೆ ಪ್ರಮುಖ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ದಿನದ ಆರಂಭದಲ್ಲಿ ಇಂಗ್ಲೆಂಡ್ ತಂಡವನ್ನು ಬೇಗ ಆಲ್ಔಟ್ ಮಾಡುವಲ್ಲಿ ಯಶಸ್ವಿಯಾದ ಟೀಂ ಇಂಡಿಯಾ, ಬ್ಯಾಟಿಂಗ್ ಆರಂಭಿಸುತ್ತಲೇ ರೋಹಿತ್ ಶರ್ಮ ವಿಕೆಟ್ ಕಳೆದುಕೊಂಡಿತು. ನಂತರ ಗಿಲ್, ಕೊಹ್ಲಿ ಹಾಗೂ ರಹಾನೆ ಬೇಗನೆ ಪೆವಿಲಿಯನ್ ಸೇರಿಕೊಂಡರು. ನಂತರ ಜೊತೆಯಾದ ಪಂತ್ ಹಾಗೂ ಪೂಜಾರ ಶತಕದ ಜೊತೆಯಾಟ ಆಡಿ ತಂಡಕ್ಕೆ ಚೇತರಿಕೆ ನೀಡಿದರು. ಪಂತ್ 91 ರನ್ ಗಳಿಸಿ ಔಟಾದರೆ. 73 ರನ್ಗಳಿಗೆ ಪೂಜಾರ ವಿಕೆಟ್ ಒಪ್ಪಿಸಿದರು.
Published On - 5:07 pm, Sun, 7 February 21