IND vs SL: ವಿಶ್ವ ದಾಖಲೆಯ ಹೊಸ್ತಿಲಲ್ಲಿ ಟೀಮ್ ಇಂಡಿಯಾ: ಇಂದಿನ ಪಂದ್ಯ ಗೆದ್ದರೆ ಏನಾಗಲಿದೆ ಗೊತ್ತೇ?
ವಿಶ್ವ ದಾಖಲೆ ನಿರ್ಮಿಸುವ ಹೊಸ್ತಿಲಲ್ಲಿ ಟೀಮ್ ಇಂಡಿಯಾವಿದೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದು ತಂಡದ ವಿರುದ್ಧ ಅತಿ ಹೆಚ್ಚು ಜಯ ಸಾಧಿಸಿದ ಟೀಮ್ಗಳ ಸಾಲಿನಲ್ಲಿ ಭಾರತ, ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡ ಜಂಟಿ ಸ್ಥಾನದಲ್ಲಿದೆ.
ಕೊಲಂಬೊದ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಟೀಮ್ ಇಂಡಿಯಾ ಶ್ರೀಲಂಕಾ (India vs Sri lanka) ಪ್ರವಾಸವನ್ನು ಭರ್ಜರಿಯಾಗಿ ಆರಂಭಿಸಿತು. ಇದು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಲಂಕಾನ್ನರ ವಿರುದ್ಧ ಭಾರತದ 92ನೇ ಜಯವಾಗಿದೆ. ಅಲ್ಲದೆ 2007 ರಿಂದ ಸತತವಾಗಿ ಲಂಕಾ ವಿರುದ್ಧ ಸರಣಿ ಜಯ ಸಾಧಿಸುತ್ತಾ ಬಂದಿರುವ ಭಾರತ ಈ ಸರಣಿಯನ್ನೂ ವಶಪಡಿಸಿಕೊಂಡರೆ ಸತತವಾಗಿ ಶ್ರೀಲಂಕಾ ವಿರುದ್ಧ 9ನೇ ಸರಣಿ ಗೆದ್ದಂತಾಗುತ್ತದೆ. ಇದಲ್ಲದೆ ಮತ್ತೊಂದು ವಿಶ್ವ ದಾಖಲೆ ನಿರ್ಮಿಸುವ ಹೊಸ್ತಿಲಲ್ಲಿ ಟೀಮ್ ಇಂಡಿಯಾವಿದೆ (Team India).
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದು ತಂಡದ ವಿರುದ್ಧ ಅತಿ ಹೆಚ್ಚು ಜಯ ಸಾಧಿಸಿದ ಟೀಮ್ಗಳ ಸಾಲಿನಲ್ಲಿ ಭಾರತ, ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡ ಜಂಟಿ ಸ್ಥಾನದಲ್ಲಿದೆ. ಭಾರತ ಮತ್ತು ಪಾಕಿಸ್ತಾನ ಲಂಕಾ ವಿರುದ್ಧ ಒಟ್ಟು 92 ಪಂದ್ಯಗಳನ್ನು ಗೆದ್ದಿದೆ. ಇತ್ತ ಆಸ್ಟ್ರೇಲಿಯಾ ಕೂಡ ನ್ಯೂಜಿಲೆಂಡ್ ವಿರುದ್ಧ 92 ಏಕದಿನ ಪಂದ್ಯಗಳನ್ನು ಗೆದ್ದ ಪಟ್ಟಿಯಲ್ಲಿದೆ.
ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಲಂಕಾ ವಿರುದ್ಧ 93 ಏಕದಿನ ಪಂದ್ಯ ಗೆದ್ದ ಸಾಧನೆ ಮಾಡಲಿದೆ. ಈ ಮೂಲಕ ಒಂದು ತಂಡದ ವಿರುದ್ಧ ಅತಿ ಹೆಚ್ಚು ಪಂದ್ಯವನ್ನು ಗೆದ್ದ ಟೀಮ್ ಭಾರತ ಆಗಲಿದ್ದು, ಇದು ವಿಶ್ವ ದಾಖಲೆಯಾಗಲಿದೆ. ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧವೂ ಭಾರತ 55 ಏಕದಿನ ಪಂದ್ಯ ಗೆದ್ದ ಸಾಧನೆ ಹೊಂದಿದೆ.
ಮೊದಲ ಪಂದ್ಯದಲ್ಲಿ 7 ವಿಕೆಟ್ಗಳಿಂದ ಗೆದ್ದು ವಿಶ್ವಾಸದಲ್ಲಿರುವ ಟೀಮ್ ಇಂಡಿಯಾ ಇಂದಿನ ಪಂದ್ಯವನ್ನೂ ಜಯಿಸಿ ಸರಣಿ ವಶಪಡಿಸಿಕೊಳ್ಳುವ ಪ್ಲಾನ್ನಲ್ಲಿದೆ. ಇತ್ತ ಸಿಂಹಳೀಯರಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಗೆದ್ದರೆ ಮಾತ್ರ ಸರಣಿ ಆಸೆ ಜೀವಂತವಾಗಿರಲಿದೆ. ಹೀಗಾಗಿ ಪ್ರೇಮದಾಸ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಪಂದ್ಯವಾಗುವ ಎಲ್ಲಾ ಲಕ್ಷಣಗಳಿವೆ.
ಈ ಪಂದ್ಯ ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗಲಿದ್ದು, ಟಾಸ್ ಮಧ್ಯಾಹ್ನ 2.30 ಕ್ಕೆ ನಡೆಯಲಿದೆ. ಸೋನಿ ಸಿಕ್ಸ್, ಸೋನಿ ಸಿಕ್ಸ್ ಎಚ್ಡಿ, ಸೋನಿ ಟೆನ್ 3, ಸೋನಿ ಟೆನ್ 3 ಎಚ್ಡಿ ಯಲ್ಲಿ ಪಂದ್ಯವನ್ನು ಲೈವ್ ವೀಕ್ಷಿಸಬಹುದು.
ತಂಡಗಳು:
ಭಾರತ: ಶಿಖರ್ ಧವನ್ (ನಾಯಕ), ಪೃಥ್ವಿ ಶಾ, ದೇವದತ್ ಪಡಿಕ್ಕಲ್, ರುತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ನಿತೀಶ್ ರಾಣಾ, ಇಶಾನ್ ಕಿಶನ್ (ವಿಕೆಟ್-ಕೀಪರ್), ಕೆ ಗೌತಮ್, ಕ್ರುನಾಲ್ ಪಾಂಡ್ಯ, ವರುಣ್ ಚಕ್ರವರ್ತಿ, ಭುವನೇಶ್ವರ್ ಕುಮಾರ್ (ಉಪನಾಯಕ), ದೀಪಕ್ ಚಹರ್, ಕುಲದೀಪ್ ಯಾದವ್, ನವದೀಪ್ ಸೈನಿ, ಚೇತನ್ ಸಕರಿಯಾ, ಯಜುವೇಂದ್ರ ಚಹಾಲ್.
ಶ್ರೀಲಂಕಾ: ದಾಸುನ್ ಶಾನಕಾ (ನಾಯಕ), ಧನಂಜಯ ಡಿ ಸಿಲ್ವಾ (ಉಪನಾಯಕ), ಅವಿಷ್ಕಾ ಫರ್ನಾಂಡೊ, ಭನುಕಾ ರಾಜಪಕ್ಸೆ, ಪಾತುಮ್ ನಿಸ್ಸಂಕ, ಚರಿತ್ ಅಸಲಂಕಾ, ವನಿಂದು ಹಸರಂಗ, ಆಶೆನ್ ಬಂಡರಾ, ಮಿನೋಡ್ ಭನುಕಾ, ಲಹಿರು ಉದಾರ, ಚಮೇಮರಾಮಾನಾ ಲಕ್ಷನ್ ಸಂದಕನ್, ಅಕಿಲಾ ಧನಂಜಯ, ಶಿರನ್ ಫರ್ನಾಂಡೊ, ಧನಂಜಯ ಲಕ್ಷನ್, ಇಶಾನ್ ಜಯರತ್ನ, ಪ್ರವೀಣ್ ಜಯವಿಕ್ರೆಮಾ, ಅಸಿಥಾ ಫರ್ನಾಂಡೊ, ಕಸುನ್ ರಾಜಿತಾ, ಲಹೀರು ಕುಮಾರ, ಇಸುರು ಉದಾನ.
IND vs SL: ಇಂದು ಎರಡನೇ ಏಕದಿನ: ಭಾರತ ಪರ ಪದಾರ್ಪಣೆ ಮಾಡಲಿದ್ದಾರೆ ಈ ಆಟಗಾರ?
IND vs SL: ಕೃನಾಲ್ ಪಾಂಡ್ಯ ವರ್ತನೆಯಲ್ಲಿ ಸಖತ್ ಬದಲಾವಣೆ! ಇದು ರಾಹುಲ್ ದ್ರಾವಿಡ್ ಎಫೆಕ್ಟ್ ಎಂದ ನೆಟ್ಟಿಗರು; ವಿಡಿಯೋ
(India vs Sri Lanka 2nd ODI Team India eye win to surpass Australia and Pakistan create world record)