IND vs SL: ಕೃನಾಲ್ ಪಾಂಡ್ಯ ವರ್ತನೆಯಲ್ಲಿ ಸಖತ್ ಬದಲಾವಣೆ! ಇದು ರಾಹುಲ್ ದ್ರಾವಿಡ್ ಎಫೆಕ್ಟ್ ಎಂದ ನೆಟ್ಟಿಗರು; ವಿಡಿಯೋ
IND vs SL: ಅಚಾನಕ್ಕಾಗಿ ನಡೆದ ತಪ್ಪಿಗೆ ಶ್ರೀಲಂಕಾದ ಕ್ರಿಕೆಟಿಗ ಚಾರಿತ್ ಅಸಲಂಕಾ ಅವರನ್ನು ಭಾರತೀಯ ಆಲ್‌ರೌಂಡರ್ ಕ್ರುನಾಲ್ ಪಾಂಡ್ಯ ತಬ್ಬಿಕೊಂಡು ಕ್ಷಮೆಯಾಚಿಸಿದರು.
ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಅಪರೂಪದ ಘಟನೆ ನಡೆಯಿತು. ಅಚಾನಕ್ಕಾಗಿ ನಡೆದ ತಪ್ಪಿಗೆ ಶ್ರೀಲಂಕಾದ ಕ್ರಿಕೆಟಿಗ ಚಾರಿತ್ ಅಸಲಂಕಾ ಅವರನ್ನು ಭಾರತೀಯ ಆಲ್‌ರೌಂಡರ್ ಕ್ರುನಾಲ್ ಪಾಂಡ್ಯ ತಬ್ಬಿಕೊಂಡು ಕ್ಷಮೆಯಾಚಿಸಿದರು. ಈಗ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. 22 ನೇ ಓವರ್‌ನ ಮೂರನೇ ಎಸೆತದಲ್ಲಿ ಕ್ರುನಾಲ್ ಪಾಂಡ್ಯ ಹಾಗೂ ಅಸಲಂಕಾ ನಡುವೆ ಈ ಘಟನೆ ನಡೆಯಿತು.
ಸ್ಟ್ರೈಕ್‌ನಲ್ಲಿದ್ದ ಡಿಸಿಲ್ವಾ ಕೃನಾಲ್ ಎಸೆದ ಚೆಂಡನ್ನು ಬಲವಾಗಿ ಹೊಡೆದರು. ಕ್ರುನಾಲ್ ನೇರವಾಗಿ ಬಂದ ಚೆಂಡನ್ನು ಹಿಡಿಯಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ನಾನ್ ಸ್ಟ್ರೈಕರ್ನಲ್ಲಿದ್ದ ಅಸಲಂಕಾ ಅವರಿಗೆ ಕೃನಾಲ್ ಡಿಕ್ಕಿ ಹೊಡೆದರು. ಕೂಡಲೇ ನೆಲದಿಂದ ಕ್ರುನಾಲ್ ಎದ್ದು ಅಸಲಂಕನನ್ನು ತಬ್ಬಿಕೊಂಡರು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಕ್ರುನಾಲ್ ಪಾಂಡ್ಯ ಅವರ ಕ್ರೀಡಾ ಮನೋಭಾವಕ್ಕಾಗಿ ಟ್ವಿಟರ್ ವೇದಿಕೆಯಲ್ಲಿ ಅನೇಕ ಕ್ರಿಕೆಟಿಗರು ಪ್ರಶಂಸಿಸಿದ್ದಾರೆ. ಇದು ರಾಹುಲ್ ದ್ರಾವಿಡ್ ಪರಿಣಾಮ ಎಂದು ಇನ್ನೂ ಕೆಲವರು ಹೇಳಿಕೊಂಡಿದ್ದಾರೆ. ರಾಹುಲ್ ದ್ರಾವಿಡ್ ಪ್ರಸ್ತುತ ಟೀಂ ಇಂಡಿಯಾದ ತರಬೇತುದಾರರಾಗಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ.
ಕ್ರುನಾಲ್ ಭಾರತೀಯ ಶಿಬಿರದ ಪ್ರಮುಖ ಬೌಲರ್ ಕ್ರುನಾಲ್ ತಮ್ಮ 10 ಓವರ್ಗಳ ಕೋಟಾವನ್ನು ಆರ್ಥಿಕ ದರದಲ್ಲಿ ಪೂರ್ಣಗೊಳಿಸಿದರು. ಪ್ರತಿ ಓವರ್‌ಗೆ ಕೇವಲ ಮೂರು ರನ್ ನೀಡಿದರು. ಕೇವಲ 26 ರನ್ ಬಿಟ್ಟುಕೊಟ್ಟು ಒಂದು ವಿಕೆಟ್ ಪಡೆದರು. ಇದು ಆತಿಥೇಯ ತಂಡವನ್ನು ಬ್ಯಾಕ್‌ಫೂಟ್‌ಗೆ ತಳ್ಳಿತು. ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಒಂಬತ್ತು ವಿಕೆಟ್‌ಗೆ 262 ರನ್ ಗಳಿಸಿತು. ಇದಕ್ಕೆ ಪ್ರತ್ಯುತ್ತರವಾಗಿ ಭಾರತ ಮೂರು ವಿಕೆಟ್‌ಗಳ ನಷ್ಟಕ್ಕೆ 36.4 ಓವರ್‌ಗಳಲ್ಲಿ ಗುರಿ ತಲುಪಿತು. ಭಾರತ ಪರ ನಾಯಕ ಶಿಖರ್ ಧವನ್ ಅಜೇಯ 86 ರನ್ ಗಳಿಸಿದರೆ, ಇಶಾಂತ್ ಕಿಶನ್ 59 ರನ್ ಗಳಿಸಿದರು. ಕುಲದೀಪ್ ಎರಡು ವಿಕೆಟ್ ಪಡೆದರು.
Upholding the Spirit of Cricket! ?Lovely gesture by Krunal ??
Tune into Sony Six (ENG), Sony Ten 1 (ENG), Sony Ten 3 (HIN), Sony Ten 4 (TAM, TEL) & SonyLIV (https://t.co/QYC4z57UgI) now! ?#SLvINDOnlyOnSonyTen #HungerToWin #KrunalPandya pic.twitter.com/REg3TB2Yu9
— Sony Sports (@SonySportsIndia) July 18, 2021