ಸದ್ಯಕ್ಕಂತು ಕಣಕ್ಕಿಳಿಯಲ್ಲ ಟೀಮ್ ಇಂಡಿಯಾ ಸ್ಟಾರ್ ಬ್ಯಾಟ್ಸ್​ಮನ್: ಟಿ20 ವಿಶ್ವಕಪ್​ಗೂ ಡೌಟ್..!

Shreyas Iyer: ಇದಾಗ್ಯೂ ಯುಎಇನಲ್ಲಿ ನಡೆಯಲಿರುವ ಐಪಿಎಲ್​ನ ಎರಡನೇ ಭಾಗದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವ ವಿಶ್ವಾಸದಲ್ಲಿದ್ದಾರೆ ಶ್ರೇಯಸ್ ಅಯ್ಯರ್. ಐಪಿಎಲ್​ 2ನೇ ಭಾಗವು ಸೆಪ್ಟೆಂಬರ್ 19 ರಿಂದ ಶುರುವಾಗಲಿದ್ದು, ಅಕ್ಟೋಬರ್ 15ರವರೆಗೆ ನಡೆಯಲಿದೆ. ಈ ವೇಳೆಗೆ ಸಂಪೂರ್ಣ ಚೇತರಿಸಿಕೊಂಡು ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳುವುದಾಗಿ ಅಯ್ಯರ್ ತಿಳಿಸಿದ್ದಾರೆ. ಒಂದು ವೇಳೆ ಐಪಿಎಲ್​ ವೇಳೆ ಕಣಕ್ಕಿಳಿಯದಿದ್ದರೆ ಟಿ20 ವಿಶ್ವಕಪ್ ತಂಡದಲ್ಲಿ ಶ್ರೇಯಸ್ ಅಯ್ಯರ್​ಗೆ ಸ್ಥಾನ ಸಿಗೋದು ಬಹುತೇಕ ಅನುಮಾನ ಎನ್ನಬಹುದು.

ಸದ್ಯಕ್ಕಂತು ಕಣಕ್ಕಿಳಿಯಲ್ಲ ಟೀಮ್ ಇಂಡಿಯಾ ಸ್ಟಾರ್ ಬ್ಯಾಟ್ಸ್​ಮನ್: ಟಿ20 ವಿಶ್ವಕಪ್​ಗೂ ಡೌಟ್..!
Shreyas Iyer
TV9kannada Web Team

| Edited By: Apurva Kumar Balegere

Jul 19, 2021 | 10:06 PM

ಒಂದೆಡೆ ಟೀಮ್ ಇಂಡಿಯಾ ಹಿರಿಯರ ತಂಡ ಇಂಗ್ಲೆಂಡ್​ ವಿರುದ್ದದ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದ್ದರೆ, ಮತ್ತೊಂದೆಡೆ ಟೀಮ್ ಇಂಡಿಯಾ ಯುವ ಪಡೆ ಶ್ರೀಲಂಕಾ ವಿರುದ್ದ ಗೆಲುವಿನೊಂದಿಗೆ ಏಕದಿನ ಸರಣಿ ಅಭಿಯಾನ ಆರಂಭಿಸಿದೆ. ಆದರೆ ಈ ಎರಡೂ ತಂಡಗಳಲ್ಲೂ ಭಾರತದ ಭವಿಷ್ಯದ ನಾಯಕ ಎಂದು ಬಿಂಬಿತವಾಗಿರುವ ಸ್ಟಾರ್ ಬ್ಯಾಟ್ಸ್​ಮನ್ ಶ್ರೇಯಸ್ ಅಯ್ಯರ್ ಇಲ್ಲ ಎಂಬುದೇ ಸತ್ಯ.

ಹೌದು, 26 ವರ್ಷ ಅಯ್ಯರ್ ಕ್ರಿಕೆಟ್​ ಅಂಗಳ ತೊರೆದು 4 ತಿಂಗಳುಗಳಾಗಿವೆ. ಇಂಗ್ಲೆಂಡ್​ ವಿರುದ್ದದ ಏಕದಿನ ಸರಣಿಯ ಮೊದಲ ಪಂದ್ಯದ ಫೀಲ್ಡಿಂಗ್ ವೇಳೆ ಬಿದ್ದು ಅಯ್ಯರ್ ಗಾಯಗೊಂಡಿದ್ದರು. ಚೆಂಡು ತಡೆಯುವ ಯತ್ನದಲ್ಲಿ ಡೈವ್ ಹೊಡೆದಿದ್ದ ಶ್ರೇಯಸ್ ಅವರ ಎಡಭುಜದ ಕೀಲು ತಪ್ಪಿತ್ತು. ಹೀಗಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಷ್ಟೇ ಅಲ್ಲದೆ ಐಪಿಎಲ್​ನ ಮೊದಲಾರ್ಧದಲ್ಲೂ ಗಾಯದ ಕಾರಣ ಕಣಕ್ಕಿಳಿದಿರಲಿಲ್ಲ.

ಇದಾಗ್ಯೂ ಇತ್ತೀಚೆಗಷ್ಟೇ ಬಲಗೈ ದಾಂಡಿಗ, ಶೀಘ್ರದಲ್ಲೇ ಕಂಬ್ಯಾಕ್ ಮಾಡುವುದಾಗಿ ತಿಳಿಸಿದ್ದರು. ಅದರಂತೆ ಇಂಗ್ಲೆಂಡ್​ನಲ್ಲಿ ನಡೆಯಲಿರುವ ಕೌಂಟಿ ಕ್ರಿಕೆಟ್​ ಮೂಲಕ ಮತ್ತೆ ಅಯ್ಯರ್ ಬ್ಯಾಟ್ ಬೀಸಲಿದ್ದಾರೆ ಎನ್ನಲಾಗಿತ್ತು. ಆದರೀಗ ಲಂಕಾಶೈರ್ ತಂಡದ ಪರ ಒಪ್ಪಂದ ಮಾಡಿಕೊಂಡಿದ್ದ ಶ್ರೇಯಸ್ ತಮ್ಮ ಒಪ್ಪಂದವನ್ನು ರದ್ದುಗೊಳಿಸಿದ್ದಾರೆ.

ಲಂಡನ್ ಕಪ್ ಹೆಸರಿನಲ್ಲಿರುವ ನಡೆಯಲಿರುವ ಕೌಂಟಿ ಒನ್​ಡೇ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ಲಂಕಾಶೈರ್ ಪರ ಕಣಕ್ಳಿಯುವುದಿಲ್ಲ ಎಂಬುದು ಖಚಿತವಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಲಂಕಾಶೈರ್ ತಂಡವು, ಲಂಡನ್​ ಕಪ್ ಸರಣಿಗೆ ಭಾರತದ ಬ್ಯಾಟ್ಸಮನ್​ ಶ್ರೇಯಸ್ ಅಯ್ಯರ್ ಅಲಭ್ಯತೆಯನ್ನು ದೃಢಪಡಿಸಿದ್ದಾರೆ. ಇದರೊಂದಿಗೆ ಕೌಂಟಿ ಕ್ರಿಕೆಟ್ ಮೂಲಕ ಮತ್ತೆ ಮೈದಾನಕ್ಕಿಳಿಯುವ ಅಯ್ಯರ್ ಕನಸು ಭಗ್ನಗೊಂಡಿದೆ. ಭುಜದ ನೋವು ಸಂಪೂರ್ಣ ಗುಣವಾಗದ ಕಾರಣ ಕೌಂಟಿ ಟೂರ್ನಿಯಿಂದ ಶ್ರೇಯಸ್ ಅಯ್ಯರ್ ಹಿಂದೆ ಸರಿದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೇಯಸ್ ಅಯ್ಯರ್, ಈ ಬೇಸಿಗೆಯಲ್ಲಿ ಲಂಕಾಶೈರ್ ಪರ ಆಡಲು ಸಾಧ್ಯವಿಲ್ಲ ಎಂಬುದು ಖಚಿತವಾಗಿದೆ. ಲಂಕಾಶೈರ್ ತನ್ನದೆಯಾದ ಇತಿಹಾಸ ಮತ್ತು ಮಹತ್ವಾಕಾಂಕ್ಷೆಯನ್ನು ಹೊಂದಿರುವ ಕ್ರಿಕೆಟ್ ಕ್ಲಬ್. ಭವಿಷ್ಯದಲ್ಲಿ ಲಂಕಾಶೈರ್ ಪರ ಎಮಿರೇಟ್ಸ್​ ಓಲ್ಡ್ ಟ್ರಾಫೋರ್ಡ್​​ ಮೈದಾನದಲ್ಲಿ ಆಡುವ ವಿಶ್ವಾಸ ಹೊಂದಿರುವುದಾಗಿ ತಿಳಿಸಿದ್ದಾರೆ.

ಇದಾಗ್ಯೂ ಯುಎಇನಲ್ಲಿ ನಡೆಯಲಿರುವ ಐಪಿಎಲ್​ನ ಎರಡನೇ ಭಾಗದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವ ವಿಶ್ವಾಸದಲ್ಲಿದ್ದಾರೆ ಶ್ರೇಯಸ್ ಅಯ್ಯರ್. ಐಪಿಎಲ್​ 2ನೇ ಭಾಗವು ಸೆಪ್ಟೆಂಬರ್ 19 ರಿಂದ ಶುರುವಾಗಲಿದ್ದು, ಅಕ್ಟೋಬರ್ 15ರವರೆಗೆ ನಡೆಯಲಿದೆ. ಈ ವೇಳೆಗೆ ಸಂಪೂರ್ಣ ಚೇತರಿಸಿಕೊಂಡು ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳುವುದಾಗಿ ಅಯ್ಯರ್ ತಿಳಿಸಿದ್ದಾರೆ. ಒಂದು ವೇಳೆ ಐಪಿಎಲ್​ ವೇಳೆ ಕಣಕ್ಕಿಳಿಯದಿದ್ದರೆ ಟಿ20 ವಿಶ್ವಕಪ್ ತಂಡದಲ್ಲಿ ಶ್ರೇಯಸ್ ಅಯ್ಯರ್​ಗೆ ಸ್ಥಾನ ಸಿಗೋದು ಬಹುತೇಕ ಅನುಮಾನ ಎನ್ನಬಹುದು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada