ಕೊಲಂಬೊದಲ್ಲಿ ನಡೆದ ಶ್ರೀಲಂಕಾ (Sri lanka) ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶಿಖರ್ ಧವನ್ (Shikhar Dhawan) ನೇತೃತ್ವದ ಟೀಮ್ ಇಂಡಿಯಾ (India) 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಬ್ಯಾಟಿಂಗ್ – ಬೌಲಿಂಗ್ ಎರಡೂ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಯಂಗ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಪಂದ್ಯ ಮುಗಿದ ಬಳಿಕ ಚೊಚ್ಚಲ ಬಾರಿಗೆ ಕ್ಯಾಪ್ಟನ್ ಪಟ್ಟತೊಟ್ಟ ನಾಯಕ ಧವನ್ ಆಟಗಾರರ ಪ್ರದರ್ಶನವನ್ನು ಹಾಡಿಹೊಗಳಿದ್ದಾರೆ.
“ನಮ್ಮ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅನಾನುಭವಿಗಳು ಎಂಬುದನ್ನು ಎಲ್ಲೂ ತೋರ್ಪಡಿಸಿಲ್ಲ. ವಿಕೆಟ್ ಸ್ವಲ್ಪ ಟರ್ನ್ ಆಗುತ್ತದೆ ಎಂಬುದು ತಿಳಿದಿತ್ತು. 10 ಓವರ್ಗಳ ಬಳಿಕ ನಮ್ಮ ಮೂವರೂ ಸ್ಪಿನ್ನರ್ಗಳು ಸಿಕ್ಕ ಅವಕಾಶವನ್ನು ಸಂಪೂರ್ಣ ಉಪಯೋಗಿಸಿಕೊಂಡರು” ಎಂದು ಹೇಳಿದ್ದಾರೆ.
“ನಾವು ಬ್ಯಾಟಿಂಗ್ ಆರಂಭಿಸಿದಾಗ ಮತ್ತೊಂದು ಬದಿಯಿಂದ ನೋಡಲು ತುಂಬಾನೆ ಖುಷಿಯಾಗುತ್ತಿತ್ತು. ನಮ್ಮಲ್ಲಿ ಬಲಿಷ್ಠ ಬ್ಯಾಟಿಂಗ್ ಬಲವಿದೆ. ಐಪಿಎಲ್ ಆಡಿದ ಸಾಕಷ್ಟು ಅನುಭವ ಯುವ ಆಟಗಾರರಿಗಿದ್ದು, ನಂಬಿಕೆ ಉಳಿಸಿಕೊಳ್ಳುತ್ತಿದ್ದಾರೆ. ಪೃಥ್ವಿ ಶಾ ಮತ್ತು ಇಶಾನ್ ಕಿಶನ್ಗೆ ಪಂದ್ಯವನ್ನು ಮುಗಿಸುವ ಜವಾಬ್ದಾರಿ ನೀಡಿದರೆ ಅವರು 15 ಓವರ್ಗಳಲ್ಲೇ ತಂಡಕ್ಕೆ ಗೆಲುವು ತಂದುಕೊಡುತ್ತಿದ್ದರು” ಎಂದು ಇಬ್ಬರ ಆಟವನ್ನು ಹೊಗಳಿದರು.
A comprehensive 7-wicket win for #TeamIndia to take 1-0 lead in the series?
How good were these two in the chase! ??
8⃣6⃣* runs for captain @SDhawan25 ?
5⃣9⃣ runs for @ishankishan51 on ODI debut ?Scorecard ? https://t.co/rf0sHqdzSK #SLvIND pic.twitter.com/BmAV4UiXjZ
— BCCI (@BCCI) July 18, 2021
ಸಾಕಷ್ಟು ಕುತೂಹಲ ಕೆರಳಿಸಿದ್ದ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ನಿಧಾನಗತಿಯಲ್ಲಿ ಇನ್ನಿಂಗ್ಸ್ ಆರಂಭಿಸಿತು. ಆವಿಶ್ಕಾ ಫೆರ್ನಾಂಡೊ 33 ರನ್ ಗಳಿಸಿದರೆ, ಭನುಕಾ 27 ರಬ್ಗ ಔಟ್ ಆದರು. ರಾಜಪಕ್ಷ 24, ಧನಂಜಯ ಡಿ ಸಿಲ್ವಾ 14, ಅಸಲಂಕಾ 38 ಮತ್ತು ನಾಯಕ ದಸನ್ ಶನಕ 39 ರನ್ ಬಾರಿಸಿ ದೊಡ್ಡ ಮೊತ್ತ ಕಲೆಹಾಕದೆ ನಿರ್ಗಮಿಸಿದರು.
ಕೊನೆಯಲ್ಲಿ ಕರುಣರತ್ನೆ 35 ಎಸೆತಗಳಲ್ಲಿ ಅಜೇಯ 43 ರನ್ ಗಳಿಸಿದ ಪರಿಣಾಮ ತಂಡದ ಮೊತ್ತ 250ರ ಗಡಿ ದಾಟಿತು. ಲಂಕಾ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 262 ರನ್ ಬಾರಿಸಿತು. ಭಾರತ ಪರ ಚಹಾರ್, ಚಹಾಲ್, ಕುಲ್ದೀಪ್ ತಲಾ 2 ಮತ್ತು ಪಾಂಡ್ಯ ಬ್ರದರ್ಸ್ ತಲಾ 1 ವಿಕೆಟ್ ಕಿತ್ತರು.
263 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತಕ್ಕೆ ಪೃಥ್ವಿ ಶಾ ಸ್ಫೋಟಕ ಆರಂಭ ಒದಗಿಸಿದರು. ಕೇವಲ 24 ಎಸೆತಗಳಲ್ಲಿ 9 ಬೌಂಡರಿ ಬಾರಿಸಿ 43 ರನ್ ಚಚ್ಚಿದರು. ನಂತರ ಇಶಾನ್ ಕಿಶನ್ ಹಾಗೂ ನಾಯಕ ಧವನ್ ಅಮೋಘ ಇನ್ನಿಂಗ್ಸ್ ಕಟ್ಟಿದರು. ಶತಕದ ಜೊತೆಯಾಟ ಆಡಿದ ಈ ಜೋಡಿ ತಂಡದ ಗೆಲುವನ್ನು ಹತ್ತಿರ ಮಾಡಿತು.
ಕಿಶನ್ 42 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಬಾರಿಸಿ 59 ರನ್ ಸಿಡಿಸಿದರೆ, ಧವನ್ 95 ಎಸೆತಗಳಲ್ಲಿ ಅಜೇಯ 86 ರನ್ ಗಳಿಸಿದರು. ಮನೀಶ್ ಪಾಂಡೆ 26 ಮತ್ತು ಸೂರ್ಯಕುಮಾರ್ ಯಾದವ್ ಅಜೇಯ 31 ರನ್ ಬಾರಿಸಿದರು. ಭಾರತ 36.4 ಓವರ್ನಲ್ಲೇ 3 ವಿಕೆಟ್ ನಷ್ಟಕ್ಕೆ 263 ರನ್ ಗಳಿಸಿ ಜಯ ಸಾಧಿಸಿತು.
ಬಟ್ಲರ್ ಅರ್ಧ ಶತಕ; ಎರಡನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿ ಸರಣಿ ಸಮ ಮಾಡಿಕೊಂಡ ಇಂಗ್ಲೆಂಡ್