ಟೀಮ್ ಇಂಡಿಯಾದ ಕೋಚ್ ಆಗಲು ರಾಹುಲ್ ದ್ರಾವಿಡ್ ಬಿಸಿಸಿಐ ಎದುರು ಸಂದರ್ಶನಕ್ಕೆ ಹಾಜರಾಗುವ ಅಗತ್ಯವಿಲ್ಲ: ಅಜಿತ್ ಅಗರ್ಕರ್
ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ವರ್ಷಾಂತ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ನಂತರ ಸೀನಿಯರ್ ಟೀಮಿನ ಹೆಡ್ ಕೋಚ್ ರವಿ ಶಾಸ್ತ್ರಿ ಅವರು ಅವಧಿ ಕೊನೆಗೊಳ್ಳಲಿರುವುದರಿಂದ ಮುಂದಿನ ಹೆಡ್ ಕೋಚ್ ದ್ರಾವಿಡ್ ಆಗಲಿದ್ದಾರೆ ಎಂದು ಎಲ್ಲೆಡೆ ಚರ್ಚೆಗಳ ನಡೆದಿವೆ.
ಭಾರತದ ಸರ್ವ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರೆನಿಸಿಕೊಂಡಿರುವ ಮತ್ತು ಈಗ ಶ್ರೀಲಂಕಾದಲ್ಲಿರುವ ಭಾರತದ ಇನ್ನೊಂದು ಟೀಮಿನ ಕೋಚ್ ಕರ್ನಾಟಕದ ರಾಹುಲ್ ದ್ರಾವಿಡ್ ಅವರಿಗೆ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಬೇಕಾದರೆ, ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಎದುರು ಸಂದರ್ಶನಕ್ಕೆ ಹಾಜರಾಗುವ ಅಗತ್ಯವಿಲ್ಲ ಎಂದು ಭಾರತದ ಮಾಜಿ ವೇಗ್ ಬೌಲರ್ ಮತ್ತು ಈಗ ಕ್ರಿಕೆಟ್ ವಿಶ್ಲೇಷಕರಾಗಿ ಕೆಲಸ ಮಾಡುತ್ತಿರುವ ಅಜಿತ್ ಅಗರ್ಕರ್ ಹೇಳಿದ್ದಾರೆ.
ದ್ರಾವಿಡ್ ಮಾರ್ಗದರ್ಶನ ಮತ್ತು ಶಿಖರ್ ಧವನ್ ನಾಯಕತ್ವದ ಯುವ ಭಾರತೀಯ ತಂಡ ರವಿವಾರದಂದು ಕೊಲಂಬೋದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಮೊದಲ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯದಲ್ಲಿ ಅತಿಥೇಯರನ್ನು ಸುಲಭವಾಗಿ 7 ವಿಕೆಟ್ಗಳಿಂದ ಸೋಲಿಸಿತು. ಭಾರತದ ಸೀನಿಯರ್ ಆಟಗಾರು ಇಂಗ್ಲೆಂಡ್ ಪ್ರವಾಸದಲ್ಲಿರುವುದರಿಂದ ಧವನ್ ನಾಯಕತ್ವದಲ್ಲಿ ಯುವ ಪ್ರತಿಭಾವಂತರ ತಂಡವನ್ನು ಶ್ರೀಲಂಕಾಗೆ ಕಳಿಸಲಾಗಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ವರ್ಷಾಂತ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ನಂತರ ಸೀನಿಯರ್ ಟೀಮಿನ ಹೆಡ್ ಕೋಚ್ ರವಿ ಶಾಸ್ತ್ರಿ ಅವರು ಅವಧಿ ಕೊನೆಗೊಳ್ಳಲಿರುವುದರಿಂದ ಮುಂದಿನ ಹೆಡ್ ಕೋಚ್ ದ್ರಾವಿಡ್ ಆಗಲಿದ್ದಾರೆ ಎಂದು ಎಲ್ಲೆಡೆ ಚರ್ಚೆಗಳ ನಡೆದಿವೆ.
ಏತನ್ಮಧ್ಯೆ, ಅಗರ್ಕರ್ ಅವರು, 2018ರಲ್ಲಿ ದ್ರಾವಿಡ್ ಮಾರ್ಗದರ್ಶನದಲ್ಲಿ ಪೃಥ್ವಿ ಶಾ ಅವರ ನೇತೃತ್ವದ ಭಾರತದ ಅಂಡರ್-19 ತಂಡ ವಿಶಕಪ್ ಗೆದ್ದ ಸಂದರ್ಭವನ್ನು ಮೆಲಕು ಹಾಕಿದ್ದಾರೆ. ಸೋನಿ ಲಿವ್ ಚ್ಯಾನೆಲ್ನಲ್ಲಿ ರವಿವಾರದಂದು ಪಂದ್ಯ-ಪೂರ್ವ ಕಾರ್ಯಕ್ರಮವೊಂದರಲ್ಲಿ ಅಗರ್ಕರ್ ಅವರು, ದ್ರಾವಿಡ್ ಟೀಮ್ ಇಂಡಿಯಾ ಹೆಡ್ ಕೋಚ್ ಹುದ್ದೆಗೆ ಸಂದರ್ಶನ ನೀಡುವ ಅಗತ್ಯವಿಲ್ಲ ಅಂತ ಹೇಳಿದರು.
‘ನಾನಂದುಕೊಳ್ಳುವ ಹಾಗೆ ದ್ರಾವಿಡ್ ಸಂದರ್ಶನಕ್ಕೆ ಹಾಜರಾಗುವ ಅವಶ್ಯಕತೆಯಿಲ್ಲ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಬಿಟ್ಟರೆ ರವಿ ಶಾಸ್ತ್ರಿಯ ದಾಖಲೆ ಚೆನ್ನಾಗಿದೆ. ದ್ರಾವಿಡ್ ಅವರಿಂದ ಅಂಡರ್-19 ಟೀಮ್ ಪ್ರಯೋಜನ ಪಡೆದಿದೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿರುವ ಇತರ ಕೋಚ್ಗಳು ಸಹ ದ್ರಾವಿಡ್ ಅವರಿಂದ ಬಹಳಷ್ಟನ್ನು ಕಲಿತಿದ್ದಾರೆ,’ ಎಂದು ಅಗರ್ಕರ್ ಹೇಳಿದರು.
ಗಮನಿಸಬೇಕಿರುವ ಸಂಗತಿಯೆಂದರೆ, ಭಾರತದ ಟೀಮುಗಳಲ್ಲಿರುವ ಬಾರತದ ಯುವ ಆಟಗಾರರೆಲ್ಲ ದ್ರಾವಿಡ್ ಗರಡಿಯಲ್ಲಿ ಪಳಗಿದವರಾಗಿದ್ದಾರೆ. ಭಾರತ ಹೊಂದಿರುವ ಬಲಿಷ್ಠ ಬೆಂಚ್ ಬಲದ ಶ್ರೇಯಸ್ಸನ್ನೆಲ್ಲ ದ್ರಾವಿಡ್ ಅವರಿಗೆ ನೀಡಲಾಗುತ್ತದೆ. ಈ ಪ್ರತಿಭಾವಂತ ಯುವಕರು ಸಹ ದ್ರಾವಿಡ್ ಅವರಿಂದ ತುಂಬಾ ಕಲಿತಿರುವುದಾಗಿ ಹೇಳುತ್ತಾರೆ.
ಇದನ್ನೂ ಓದಿ: Rahul Dravid: ಟೀಂ ಇಂಡಿಯಾಗೆ ರಾಹುಲ್ ದ್ರಾವಿಡ್ ಕೋಚ್; ಶ್ರೀಲಂಕಾ ಪ್ರವಾಸದಲ್ಲಿ ‘ದಿ ವಾಲ್’ ಶಿಷ್ಯರದ್ದೇ ಹವಾ