
1925 ರಲ್ಲಿ ಪ್ರಾರಂಭವಾದ ಭಾರತೀಯ ಹಾಕಿಯ ಪ್ರಯಾಣ (Indian Hockey Journey) ಇಂದಿಗೆ 100 ವರ್ಷಗಳನ್ನು ಪೂರೈಸಿದೆ. 1925 ರಲ್ಲಿ ಗ್ವಾಲಿಯರ್‌ನಲ್ಲಿ ಭಾರತೀಯ ಹಾಕಿ ಫೆಡರೇಶನ್ (IHF) ಅನ್ನು ಸ್ಥಾಪಿಸಲಾಯಿತು. ಅಂದಿನಿಂದ ಇಂದಿನವರೆಗೆ ಭಾರತ ಹಾಕಿ ಸಾಧನೆಯ ಶಿಖರವನ್ನೂ ಏರಿದೆ, ಇತ್ತ ಕಳಪೆ ಪ್ರದರ್ಶನದ ಮೂಲಕ ಪಾತಾಳಕ್ಕೂ ಕುಸಿದಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಹಾಕಿಯ ಗತಕಾಲದ ವೈಭವ ಮತ್ತೆ ಮರುಕಳಿಸಲಾರಂಭಿಸಿದೆ. ಸತತ 2 ಒಲಿಂಪಿಕ್ಗಳಲ್ಲಿ ಕಂಚಿನ ಪದಕ ಗೆದ್ದಿರುವ ಹಾಕಿ ತಂಡ ತನ್ನ ಈ 100 ವರ್ಷಗಳಲ್ಲಿ ಪಯಣದಲ್ಲಿ 13 ಒಲಿಂಪಿಕ್ ಪದಕಗಳನ್ನು (8 ಚಿನ್ನ, 1 ಬೆಳ್ಳಿ ಮತ್ತು 4 ಕಂಚು) ಗೆದ್ದಿದೆ. ಅದರಲ್ಲೂ ತಂಡದ ಈ 10 ಗೆಲುವುಗಳು ಭಾರತದ ಹಾಕಿಯನ್ನು ಮತ್ತಷ್ಟು ವಿಶೇಷಗೊಳಿಸಿವೆ.
ಭಾರತಕ್ಕೆ ಹಾಕಿ ಕ್ರೀಡೆಯನ್ನು ಪರಿಚಯಿಸಿದ್ದು 1925 ರಲ್ಲಿ. ಕೇವಲ ಮೂರು ವರ್ಷಗಳ ನಂತರ, ಭಾರತೀಯ ತಂಡವು ಚಿನ್ನದ ಪದಕ ಗೆಲ್ಲುವ ಮೂಲಕ ತನ್ನ ಹೆಸರನ್ನು ವಿಶ್ವಾದ್ಯಂತ ಪ್ರಸಿದ್ಧಗೊಳಿಸಿತು. 1928 ರ ಆಮ್ಸ್ಟರ್‌ಡ್ಯಾಮ್ ಒಲಿಂಪಿಕ್ಸ್‌ನಲ್ಲಿ ಭಾರತವು, ನೆದರ್ಲ್ಯಾಂಡ್ಸ್ ತಂಡವನ್ನು 3-0 ಅಂತರದಿಂದ ಸೋಲಿಸಿ ಚಿನ್ನದ ಪದಕವನ್ನು ಗೆದ್ದಿತು. ಇಡೀ ಪಂದ್ಯಾವಳಿಯಲ್ಲಿ ಎದುರಾಳಿ ತಂಡಕ್ಕೆ ಒಂದೇ ಒಂದು ಗೋಲನ್ನು ಬಿಟ್ಟುಕೊಡದಿರುವುದು ವಿಶೇಷವಾಗಿತ್ತು.
ಆಮ್ಸ್ಟರ್‌ಡ್ಯಾಮ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನಂತರ, ಭಾರತ ನಾಲ್ಕು ವರ್ಷಗಳ ನಂತರ ಇತಿಹಾಸವನ್ನು ಪುನರಾವರ್ತಿಸಿತು. 1932 ರ ಲಾಸ್ ಏಂಜಲೀಸ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ, ಭಾರತ ತಂಡವು ಹಾಕಿ ಫೈನಲ್‌ನಲ್ಲಿ ಅಮೆರಿಕವನ್ನು 24-1 ಅಂತರದಿಂದ ಸೋಲಿಸಿ ಚಿನ್ನದ ಪದಕವನ್ನು ಗೆದ್ದಿತು. ಇಂದಿಗೂ, ಈ ದಾಖಲೆಯನ್ನು ಯಾರೂ ಮುರಿಯಲು ಸಾಧ್ಯವಾಗಿಲ್ಲ. ಆ ಪಂದ್ಯದಲ್ಲಿ ಧ್ಯಾನ್ ಚಂದ್ ಎಂಟು ಗೋಲುಗಳನ್ನು ಗಳಿಸಿದರೆ, ರೂಪ್ ಸಿಂಗ್ 10 ಗೋಲುಗಳನ್ನು ಬಾರಿಸಿದ್ದರು.
1939 ರ ಬರ್ಲಿನ್ ಒಲಿಂಪಿಕ್ಸ್‌ನಲ್ಲಿ, ಭಾರತೀಯ ಹಾಕಿ ತಂಡವು ಹ್ಯಾಟ್ರಿಕ್ ಚಿನ್ನದ ಪದಕಗಳನ್ನು ಗೆದ್ದಿತು. ಮೇಜರ್ ಧ್ಯಾನ್ ಚಂದ್ ನಾಯಕತ್ವದಲ್ಲಿ ಭಾರತವು ಫೈನಲ್‌ನಲ್ಲಿ ಜರ್ಮನಿಯನ್ನು 8-1 ಅಂತರದಿಂದ ಸೋಲಿಸಿತ್ತು.
ಸ್ವಾತಂತ್ರ್ಯದ ಒಂದು ವರ್ಷದ ನಂತರ, ಭಾರತವು ಲಂಡನ್‌ನಲ್ಲಿ ಸ್ಮರಣೀಯ ವಿಜಯವನ್ನು ಸಾಧಿಸಿತು. 1948 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತ ತಂಡ, ಬ್ರಿಟನ್ ತಂಡವನ್ನು 4-0 ಅಂತರದಿಂದ ಸೋಲಿಸಿ ಚಿನ್ನದ ಪದಕವನ್ನು ಗೆದ್ದಿತು. ಈ ಕ್ಷಣವು ಭಾರತೀಯ ಕ್ರೀಡಾ ಇತಿಹಾಸದಲ್ಲಿ ಅತ್ಯಂತ ಭಾವನಾತ್ಮಕ ಕ್ಷಣಗಳಲ್ಲಿ ಒಂದಾಗಿದೆ.
Women’s Hockey Junior Asia Cup 2023: ಚೊಚ್ಚಲ ಏಷ್ಯಾಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ವೀರ ವನಿತೆಯರು..!
ಲಂಡನ್ ಒಲಿಂಪಿಕ್ಸ್‌ನಲ್ಲಿ ಅದ್ಭುತ ಗೆಲುವಿನ ನಾಲ್ಕು ವರ್ಷಗಳ ನಂತರ, ಭಾರತೀಯ ಹಾಕಿ ತಂಡವು 1952 ರ ಹೆಲ್ಸಿಂಕಿ ಒಲಿಂಪಿಕ್ಸ್‌ನಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿತು. ಅಂತಿಮ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು 6-1 ಅಂತರದಿಂದ ಸೋಲಿಸಿ, ಟೀಂ ಇಂಡಿಯಾ ಸತತ ಐದನೇ ಒಲಿಂಪಿಕ್ ಚಿನ್ನದ ಪದಕವನ್ನು ಗೆದ್ದುಕೊಂಡಿತು. ಈ ಪಂದ್ಯದಲ್ಲಿ ಬಲ್ಬೀರ್ ಸಿಂಗ್ ಸೀನಿಯರ್ ಐದು ಗೋಲುಗಳನ್ನು ಬಾರಿಸಿದ್ದರು.
ಸ್ವಾತಂತ್ರ್ಯದ ನಂತರ, ಭಾರತ ಮತ್ತು ಪಾಕಿಸ್ತಾನ ಮೊದಲ ಬಾರಿಗೆ ಪರಸ್ಪರ ಮುಖಾಮುಖಿಯಾಗಿದ್ದು 1956 ರ ಮೆಲ್ಬೋರ್ನ್ ಒಲಿಂಪಿಕ್ ಕ್ರೀಡಾಕೂಟದಲ್ಲಿ . ಈ ಹಾಕಿ ಫೈನಲ್‌ನಲ್ಲಿ, ಭಾರತ ಪಾಕಿಸ್ತಾನವನ್ನು 1-0 ಗೋಲುಗಳಿಂದ ಸೋಲಿಸಿ ಸತತ ಆರನೇ ಒಲಿಂಪಿಕ್ ಚಿನ್ನದ ಪದಕವನ್ನು ಗೆದ್ದುಕೊಂಡಿತು. ಈ ಒಲಿಂಪಿಕ್ಸ್‌ನಲ್ಲಿ ಭಾರತ ಒಟ್ಟು 38 ಗೋಲುಗಳನ್ನು ಗಳಿಸಿತು. ಉಧಮ್ ಸಿಂಗ್ ಒಬ್ಬರೇ 15 ಗೋಲುಗಳನ್ನು ಗಳಿಸಿದ್ದರು. ಇದು ಇನ್ನೂ ಒಲಿಂಪಿಕ್ಸ್‌ನಲ್ಲಿ ಭಾರತೀಯರೊಬ್ಬರು ಗಳಿಸಿದ ಅತಿ ಹೆಚ್ಚು ಗೋಲುಗಳ ದಾಖಲೆಯನ್ನು ಹೊಂದಿದೆ.
1960 ರ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನದ ವಿರುದ್ಧದ ಸೋಲಿಗೆ ಭಾರತ 1964 ರಲ್ಲಿ ಸೇಡು ತೀರಿಸಿಕೊಂಡಿತು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ, ಫೈನಲ್‌ನಲ್ಲಿ ಪಾಕಿಸ್ತಾನವನ್ನು 1-0 ಅಂತರದಿಂದ ಸೋಲಿಸುವ ಮೂಲಕ ಟೀಂ ಇಂಡಿಯಾ ತನ್ನ ಏಳನೇ ಚಿನ್ನದ ಪದಕವನ್ನು ಗೆದ್ದುಕೊಂಡಿತು.
Junior Men’s Asia Cup Hockey: ಪಾಕ್ ಮಣಿಸಿ ಕಪ್ ಗೆದ್ದ ಭಾರತ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ
ಭಾರತ ಹಾಕಿ ತಂಡ ಇದುವರೆಗೆ ಒಮ್ಮೆ ಮಾತ್ರ ವಿಶ್ವಕಪ್ ಗೆದ್ದಿದೆ. 1975 ರಲ್ಲಿ ಕೌಲಾಲಂಪುರದಲ್ಲಿ ನಡೆದ ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತ, ಪಾಕಿಸ್ತಾನವನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.
14 ವರ್ಷಗಳ ಕಾಯುವಿಕೆಯ ನಂತರ, ಭಾರತೀಯ ತಂಡವು 1980 ರಲ್ಲಿ ಮತ್ತೆ ಒಲಿಂಪಿಕ್ ಚಿನ್ನದ ಪದಕವನ್ನು ಗೆದ್ದಿತು. ಮಾಸ್ಕೋ ಒಲಿಂಪಿಕ್ಸ್‌ನಲ್ಲಿ, ಟೀಂ ಇಂಡಿಯಾ, ಸ್ಪೇನ್ ತಂಡವನ್ನು 4-3 ಅಂತರದಿಂದ ಸೋಲಿಸಿ ಎಂಟನೇ ಚಿನ್ನದ ಪದಕವನ್ನು ಗೆದ್ದಿತು. ಅಂದಿನಿಂದ, ಟೀಂ ಇಂಡಿಯಾ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದಿಲ್ಲ.
ಒಲಿಂಪಿಕ್‌ನಲ್ಲಿ ಬರೋಬ್ಬರಿ 41 ವರ್ಷಗಳ ಕಾಯುವಿಕೆಯ ನಂತರ ಭಾರತೀಯ ಹಾಕಿ ತಂಡವು 2021 ರಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಗೆದ್ದಿತು. ಭಾರತ ತಂಡವು ಕ್ವಾರ್ಟರ್ ಫೈನಲ್‌ನಲ್ಲಿ ಜರ್ಮನಿಯನ್ನು 5-4 ಅಂತರದಿಂದ ಸೋಲಿಸಿತು. ನಂತರ 2024 ರಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿಯೂ ಭಾರತ ತಂಡ ಕಂಚಿನ ಪದಕವನ್ನು ಗೆದ್ದಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:45 pm, Fri, 7 November 25