India Hockey Team: ಭಾರತ ಹಾಕಿ ತಂಡಕ್ಕೆ ಭವ್ಯ ಸ್ವಾಗತ

Indian Hockey Team: ಭಾರತ ಹಾಕಿ ತಂಡವು ಒಲಿಂಪಿಕ್ಸ್​ನಲ್ಲಿ ಈವರೆಗೆ 13 ಪದಕಗಳನ್ನು ಗೆದ್ದುಕೊಂಡಿದೆ. ಈ ಹದಿಮೂರು ಪದಕಗಳಲ್ಲಿ 8 ಬಾರಿ ಚಿನ್ನದ ಪದಕಗಳಿಗೆ ಕೊರೊಳೊಡ್ಡಿದ್ದರು. ಇನ್ನು ಟೊಕಿಯೊ ಒಲಿಂಪಿಕ್ಸ್​ ಹಾಗೂ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತೀಯ ಹಾಕಿ ತಂಡ 1972 ರ ಬಳಿಕ ಬ್ಯಾಕ್ ಟು ಬ್ಯಾಕ್ ಮೆಡಲ್ ಗೆದ್ದ ಸಾಧನೆ ಮಾಡಿದೆ.

India Hockey Team: ಭಾರತ ಹಾಕಿ ತಂಡಕ್ಕೆ ಭವ್ಯ ಸ್ವಾಗತ
Indian Hockey Team
Follow us
ಝಾಹಿರ್ ಯೂಸುಫ್
|

Updated on:Aug 10, 2024 | 2:06 PM

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದು ತವರಿಗೆ ಹಿಂತಿರುಗಿರುವ ಭಾರತ ಹಾಕಿ ತಂಡಕ್ಕೆ ಭವ್ಯ ಸ್ವಾಗತ ಕೋರಲಾಗಿದೆ. ಪ್ಯಾರಿಸ್​​ನಿಂದ ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಭಾರತೀಯ ಹಾಕಿ ಪಡೆಯನ್ನು ಹೂವಿನ ಹಾರದೊಂದಿಗೆ ಸ್ವಾಗತಿಸಲಾಯಿತು. ಇನ್ನು ಆಟಗಾರರು ವಿಮಾನ ನಿಲ್ದಾಣದ ಹೊರಗೆ ಬರುತ್ತಿದ್ದಂತೆ ಡೋಲು ಬಜಾನಾ ಶುರು ಮಾಡಲಾಗಿದ್ದು, ಈ ವೇಳೆ ಕೆಲ ಆಟಗಾರರು ಭಾಂಗ್ರಾ ನೃತ್ಯದೊಂದಿಗೆ ಸಂಭ್ರಮಿಸಿದರು. ಇದೇ ವೇಳೆ ವಿಮಾನ ನಿಲ್ದಾಣದ ಬಳಿ ನೆರೆದಿದ್ದ ಪ್ರೇಕ್ಷಕರು ಕೂಡ ಭಾರತೀಯ ಆಟಗಾರರನ್ನು ಹುರಿದುಂಬಿಸಿದರು. ಇದೀಗ ಸಂಭ್ರಮದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ್ದ ಭಾರತೀಯ ಹಾಕಿ ತಂಡ ಸ್ಪೇನ್ ತಂಡವನ್ನು 2-1 ಅಂತರದಿಂದ ಮಣಿಸಿ ಕಂಚಿನ ಪದಕ ಗೆದ್ದುಕೊಂಡಿದೆ. ವಿಶೇಷ ಎಂದರೆ ಇದು ಒಲಿಂಪಿಕ್ಸ್​ನಲ್ಲಿ ಭಾರತ ಹಾಕಿ ತಂಡದ 13ನೇ ಪದಕವಾಗಿದೆ. ಹಾಗೆಯೇ 1972ರ ನಂತರ ಇದೇ ಮೊದಲ ಬಾರಿಗೆ ಭಾರತ ಹಾಕಿ ತಂಡವು ಒಲಿಂಪಿಕ್ಸ್‌ನಲ್ಲಿ ಸತತ ಎರಡನೇ ಪದಕ ಗೆದ್ದುಕೊಂಡಿದೆ.

ಇದನ್ನೂ ಓದಿ: Aman Sehrawat: ಒಲಿಂಪಿಕ್ಸ್​ನಲ್ಲಿ ಹೊಸ ಇತಿಹಾಸ ಬರೆದ ಅಮನ್ ಸೆಹ್ರಾವತ್

ಭಾರತೀಯ ಹಾಕಿ ತಂಡವು ಒಲಿಂಪಿಕ್ಸ್​ನಲ್ಲಿ ಮೊದಲ ಬಾರಿಗೆ ಪದಕ ಗೆದ್ದಿದ್ದು 1928 ರಲ್ಲಿ. ಅಲ್ಲಿಂದ ಶುರುವಾದ ಪದಕ ಬೇಟೆ ಇದೀಗ ಪ್ಯಾರಿಸ್ ಒಲಿಂಪಿಕ್ಸ್​ ವರೆಗೂ ಬಂದು ನಿಂತಿದೆ. ಅದರಲ್ಲೂ ಕಳೆದ ಬಾರಿ ಕಂಚಿನ ಪದಕ ಗೆದ್ದಿದ್ದ ಟೀಮ್ ಇಂಡಿಯಾ ಈ ಬಾರಿ ಕೂಡ ಮೂರನೇ ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಬ್ಯಾಕ್ ಟು ಬ್ಯಾಕ್ ಕಂಚಿನ ಪದಕವನ್ನು ಗೆದ್ದುಕೊಂಡಿದೆ.

ಒಲಿಂಪಿಕ್ಸ್​ನಲ್ಲಿ​ ಭಾರತೀಯ ಹಾಕಿ ತಂಡದ ಸಾಧನೆ:

  • ಚಿನ್ನ – ಪುರುಷರ ಹಾಕಿ – ಆಮ್​ಸ್ಟರ್​ಡ್ಯಾಮ್ 1928
  • ಚಿನ್ನ – ಪುರುಷರ ಹಾಕಿ – ಲಾಸ್ ಏಂಜಲೀಸ್ 1932
  • ಚಿನ್ನ – ಪುರುಷರ ಹಾಕಿ – ಬರ್ಲಿನ್ 1936
  • ಚಿನ್ನ – ಪುರುಷರ ಹಾಕಿ – ಲಂಡನ್ 1948
  • ಚಿನ್ನ – ಪುರುಷರ ಹಾಕಿ – ಹೆಲ್ಸಿಂಕಿ 1952
  • ಚಿನ್ನ – ಪುರುಷರ ಹಾಕಿ – ಮೆಲ್ಬೋರ್ನ್ 1956
  • ಬೆಳ್ಳಿ- ಪುರುಷರ ಹಾಕಿ – ರೋಮ್ 1960
  • ಚಿನ್ನ – ಪುರುಷರ ಹಾಕಿ – ಟೋಕಿಯೋ 1964
  • ಕಂಚು – ಪುರುಷರ ಹಾಕಿ – ಮೆಕ್ಸಿಕೋ ಸಿಟಿ 1968
  • ಕಂಚು – ಪುರುಷರ ಹಾಕಿ – ಮ್ಯೂನಿಚ್ 1972
  • ಚಿನ್ನ – ಪುರುಷರ ಹಾಕಿ – ಮಾಸ್ಕೋ 1980
  • ಕಂಚು – ಪುರುಷರ ಹಾಕಿ – ಟೋಕಿಯೋ 2020
  • ಕಂಚು – ಪುರುಷರ ಹಾಕಿ – ಪ್ಯಾರಿಸ್ 2024

Published On - 2:03 pm, Sat, 10 August 24

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್