Aman Sehrawat: ಕುಸ್ತಿಯಲ್ಲಿ ಕಂಚು ಗೆದ್ದ ಅಮನ್ ತರಬೇತಿಗೆ ಸರ್ಕಾರ ಖರ್ಚು ಮಾಡಿದ್ದು ಎಷ್ಟು?

Paris Olympics 2024: ಪ್ಯಾರಿಸ್‌ನಲ್ಲಿ ಭಾರತದ ಕಿರೀಟಕ್ಕೆ ಕಂಚಿನ ಪದಕ ತೊಡಿಸಿದ ಅಮನ್ ತರಬೇತಿಗಾಗಿ ಭಾರತ ಸರ್ಕಾರ ಒಟ್ಟು 2,41,311 ರೂ.ಗಳನ್ನು ವ್ಯಯಿಸಿದೆ. ಅಲ್ಲದೆ ಅವರಿಗೆ ತರಬೇತಿಯಲ್ಲಿ ಯಾವುದೇ ತೊಂದರೆಯಾಗದಂತೆ ಸರ್ಕಾರ ಎಲ್ಲಾ ಸವಲತ್ತುಗಳನ್ನು ಒದಗಿಸಿದೆ. ಇದಕ್ಕಾಗಿ ಪ್ಯಾರಿಸ್ ಒಲಿಂಪಿಕ್ಸ್‌ಗೂ ಮುನ್ನ ಅಮನ್‌ರನ್ನು ಎರಡು ಬಾರಿ ರಷ್ಯಾಕ್ಕೆ ಕಳುಹಿಸಲಾಗಿತ್ತು.

ಪೃಥ್ವಿಶಂಕರ
|

Updated on:Aug 10, 2024 | 3:49 PM

ಚೊಚ್ಚಲ ಒಲಿಂಪಿಕ್ಸ್ ಆಡುತ್ತಿರುವ ಅಮನ್ ಸೆಹ್ರಾವತ್ ಪುರುಷರ 57 ಕೆಜಿ ತೂಕ ಕುಸ್ತಿ ವಿಭಾಗದಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಪೋರ್ಟೊ ರಿಕೊ ಕುಸ್ತಿಪಟು ಡೇರಿಯನ್ ಟೊಯಿ ಕ್ರೂಜ್ ಅವರನ್ನು 13-5 ರಿಂದ ಏಕಪಕ್ಷೀಯವಾಗಿ ಸೋಲಿಸುವ ಮೂಲಕ ಅಮನ್ ಕಂಚಿನ ಪದಕವನ್ನು ತನ್ನದಾಗಿಸಿಕೊಂಡರು. ಇದರೊಂದಿಗೆ ಭಾರತದ ಪದಕಗಳ ಸಂಖ್ಯೆ 6 ಕ್ಕೇರಿದೆ.

1 / 8
ಕುಸ್ತಿಯಲ್ಲಿ ಕಂಚು ಗೆಲ್ಲುವ ಮೂಲಕ 16 ವರ್ಷಗಳಿಂದ ನಡೆದು ಬಂದ ಸಂಪ್ರದಾಯವನ್ನೂ ಅಮನ್ ಮುಂದುವರೆಸಿದ್ದಾರೆ. ವಾಸ್ತವವಾಗಿ 2008ರಿಂದ ಭಾರತ ಪ್ರತಿ ಒಲಿಂಪಿಕ್ಸ್​ನಲ್ಲೂ ಕುಸ್ತಿಯಲ್ಲಿ ಪದಕ ಗೆಲ್ಲುತ್ತಿದೆ. ಸುಶೀಲ್ ಕುಮಾರ್ ಅವರಿಂದ ಆರಂಭವಾದ ಈ ಪದಕಗಳ ಭೇಟೆ ಈ ಒಲಿಂಪಿಕ್ಸ್​ನಲ್ಲೂ ಮುಂದುವರೆದಿದೆ.

2 / 8
2008 ರಂತೆ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಸುಶೀಲ್ ಕುಮಾರ್ ಬೆಳ್ಳಿ ಹಾಗೂ ಯೋಗೇಶ್ವರ್ ದತ್ ಕಂಚಿನ ಪದಕ ಗೆದ್ದಿದ್ದರು. ನಂತರ 2016 ರಲ್ಲಿ ಸಾಕ್ಷಿ ಮಲಿಕ್ ಕಂಚು ಗೆದ್ದಿದ್ದರೆ, 2020 ರಲ್ಲಿ, ರವಿ ದಹಿಯಾ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಈಗ ಅಮನ್ ಸೆಹ್ರಾವತ್ ಪ್ಯಾರಿಸ್‌ನಲ್ಲಿ ಕಂಚಿನ ಪದಕಕ್ಕಾಗಿ ಕೊರಳೊಡ್ಡಿದ್ದಾರೆ.

3 / 8
ಇನ್ನು ತಮ್ಮ ಚೊಚ್ಚಲ ಒಲಿಂಪಿಕ್ಸ್​ನಲ್ಲೇ ಕಂಚು ಗೆದ್ದ ಅಮನ್ ಸೆಹ್ರಾವತ್​ಗೆ ಭಾರತ ಸರ್ಕಾರ ಎಷ್ಟು ಹಣ ಖರ್ಚು ಮಾಡಿದೆ? ಅವರನ್ನು ಪಕ್ವಗೊಳಿಸಲು ಯಾವ ದೇಶದಲ್ಲಿ ತರಬೇತಿಯನ್ನು ಕೊಡಿಸಲಾಗಿದೆ ಎಂಬುದರ ಬಗ್ಗೆ ಕುತೂಹಲಕಾರಿ ವಿಚಾರ ಇಲ್ಲಿದೆ.

4 / 8
ಪ್ಯಾರಿಸ್‌ನಲ್ಲಿ ಭಾರತದ ಕಿರೀಟಕ್ಕೆ ಕಂಚಿನ ಪದಕ ತೊಡಿಸಿದ ಅಮನ್ ತರಬೇತಿಗಾಗಿ ಭಾರತ ಸರ್ಕಾರ ಒಟ್ಟು 2,41,311 ರೂ.ಗಳನ್ನು ವ್ಯಯಿಸಿದೆ. ಅಲ್ಲದೆ ಅವರಿಗೆ ತರಬೇತಿಯಲ್ಲಿ ಯಾವುದೇ ತೊಂದರೆಯಾಗದಂತೆ ಸರ್ಕಾರ  ಎಲ್ಲಾ ಸವಲತ್ತುಗಳನ್ನು ಒದಗಿಸಿದೆ.. ಇದಕ್ಕಾಗಿ ಪ್ಯಾರಿಸ್ ಒಲಿಂಪಿಕ್ಸ್‌ಗೂ ಮುನ್ನ ಅಮನ್‌ರನ್ನು ಎರಡು ಬಾರಿ ರಷ್ಯಾಕ್ಕೆ ಕಳುಹಿಸಲಾಗಿತ್ತು.

5 / 8
ಮೊದಲ ಬಾರಿಗೆ ಅವರು 28 ದಿನಗಳ ಕಾಲ ಅಲ್ಲಿಯೇ ಇದ್ದು ತರಬೇತಿ ಪಡೆದಿದ್ದರು. ಈ ಅವಧಿಯಲ್ಲಿ ಒಟ್ಟು 5,05,176 ಲಕ್ಷ ರೂ. ಖರ್ಚಾಗಿತ್ತು. ಈ ವೇಳೆ ಫಿಸಿಯೋಥೆರಪಿಸ್ಟ್​ರನ್ನು ಸಹ ಅಮನ್‌ರೊಂದಿಗೆ ಕರೆದುಕೊಂಡು ಹೋಗುವ ಸೌಲಭ್ಯವನ್ನೂ ನೀಡಲಾಗಿತ್ತು. ಇನ್ನು ಎರಡನೇ ಬಾರಿ ರಷ್ಯಾಗೆ ಕಳುಹಿಸಿದ್ದಾಗ, 30 ದಿನ ತರಬೇತಿ ಪಡೆಯಲು 6,70,320 ರೂ. ವ್ಯಯಿಸಲಾಗಿತ್ತು.

6 / 8
ಭಾರತ ಸರ್ಕಾರವು ಕ್ರೀಡೆಯನ್ನು ಉತ್ತೇಜಿಸಲು ವಿವಿಧ ಯೋಜನೆಗಳ ಅಡಿಯಲ್ಲಿ ಅಮನ್ ಸೆಹ್ರಾವತ್ ಅವರಿಗೆ ಸಹಾಯ ಮಾಡಿದೆ. ಭಾರತೀಯ ಕ್ರೀಡಾ ಪ್ರಾಧಿಕಾರದ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ ಅಡಿಯಲ್ಲಿ 16,05,176 ರೂ.ಗಳ ಅನುದಾನದಿಂದ ಅಮನ್ ಅವರಿಗೆ ತರಬೇತಿ ನೀಡಲಾಗಿದೆ.

7 / 8
ಇದಲ್ಲದೆ ತರಬೇತಿ ಮತ್ತು ಸ್ಪರ್ಧೆಗಾಗಿ ವಾರ್ಷಿಕ ಕ್ಯಾಲೆಂಡರ್ ಅಡಿಯಲ್ಲಿ, 40,45,305 ರೂ. ವ್ಯಯಿಸಲಾಗಿದ್ದು, ಇದರ ಜೊತೆಗೆ ಖೇಲೋ ಇಂಡಿಯಾ ಸ್ಕಾಲರ್ ಶಿಪ್ ಸ್ಕೀಮ್ ಮೂಲಕ 4,14,734 ರೂ. ಬಿಡುಗಡೆ ಮಾಡಲಾಗಿದೆ. ಈ ಮೂಲಕ ಅಮನ್​ ತರಬೇತಿಗಾಗಿ ಒಟ್ಟು 72 ಲಕ್ಷಕ್ಕೂ ಹೆಚ್ಚು ಹಣವನ್ನು ವ್ಯಯಿಸಲಾಗಿದೆ.

8 / 8

Published On - 3:48 pm, Sat, 10 August 24

Follow us
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?

ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್

ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM

ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು

ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ

ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ

ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ

‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ

ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ

ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ