India vs England: ನಿರ್ಣಾಯಕ ಪಂದ್ಯಗಳಲ್ಲಿ ಭಾರತದ ಸಾಧನೆ ಇಂಗ್ಲೆಂಡ್​ಗಿಂತ ಉತ್ತಮವಾಗಿದೆ!

ಬಿಳಿ ಚೆಂಡಿನ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಪ್ರದರ್ಶನ ಅದ್ಭುತವಾಗಿದೆ. ಆದರೆ ಕೊಹ್ಲಿ ಇದುವರೆಗೆ ಹಲವಾರು ಸರಣಿಗಳನ್ನು ಗೆದ್ದಿರುವರಾದರೂ, ಜಾಗತಿಕ ಮಟ್ಟದ ಟ್ರೋಫಿಯನ್ನು ಇದುವರೆಗೆ ಗೆದ್ದಿಲ್ಲ. ಇಂಗ್ಲೆಂಡ್ ಪ್ರಸಕ್ತ ಸೀಮಿತ ಓವರ್​ಗಳ ಸರಣಿಗಳನ್ನು ಗೆದ್ದರೆ ಕೊಹ್ಲಿಯ ಯುವ ತಂಡಕ್ಕೆ ಭಾರೀ ಬೂಸ್ಟ್ ಸಿಗಲಿದೆ.

India vs England: ನಿರ್ಣಾಯಕ ಪಂದ್ಯಗಳಲ್ಲಿ ಭಾರತದ ಸಾಧನೆ ಇಂಗ್ಲೆಂಡ್​ಗಿಂತ ಉತ್ತಮವಾಗಿದೆ!
ವಿರಾಟ್ ಕೊಹ್ಲಿ ಮತ್ತು ಅಯಾನ್ ಮೊರ್ಗನ್
Follow us
|

Updated on: Mar 19, 2021 | 11:10 PM

ಅಹಮದಾಬಾದ್:  ಟಿ20 ಕ್ರಿಕೆಟ್​ನಲ್ಲಿ ಭಾರತದ ಸಾಧನೆ ಅಸೂಯೆ ಹುಟ್ಟಿಸುವಂತಿರುದವುದು ನಿಜವಾದರೂ ಈ ಆವೃತ್ತಿಯ ರ‍್ಯಾಕಿಂಗ್​ಗಳಲ್ಲಿ ಇಂಗ್ಲೆಂಡ್ ಅಗ್ರಸ್ಥಾನದಲ್ಲಿದೆ. ಶನಿವಾರದಂದು ನಡೆಯಲಿರುವ ಅಂತಿಮ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಈ ಫಾರ್ಮಾಟ್​ನ ಎರಡು ಟಾಪ್​ ತಂಡಗಳು ಗೆಲ್ಲುವ ಹುಮ್ಮಸ್ಸಿನೊಂದಿಗೆ ಮೈದಾನಕ್ಕಿಳಿಯಲಿವೆ. ಭಾರತವೇನಾದರೂ ಸರಣಿಯನ್ನು ತನ್ನದಾಗಿಸಿಕೊಂಡರೆ ಈ ಗೆಲುವು ವರ್ಷದ ಕೊನೆಭಾಗದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅದಕ್ಕೆ ಹೆಚ್ಚಿನ ಆತ್ಮವಿಶ್ವಾಸ ಮತ್ತು ಸ್ಥೈರ್ಯವನ್ನು ಒದಗಿಸಲಿದೆ.

ಬಿಳಿ ಚೆಂಡಿನ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಪ್ರದರ್ಶನ ಅದ್ಭುತವಾಗಿದೆ. ಆದರೆ ಕೊಹ್ಲಿ ಇದುವರೆಗೆ ಹಲವಾರು ಸರಣಿಗಳನ್ನು ಗೆದ್ದಿರುವರಾದರೂ, ಜಾಗತಿಕ ಮಟ್ಟದ ಟ್ರೋಫಿಯನ್ನು ಇದುವರೆಗೆ ಗೆದ್ದಿಲ್ಲ. ಇಂಗ್ಲೆಂಡ್ ಪ್ರಸಕ್ತ ಸೀಮಿತ ಓವರ್​ಗಳ ಸರಣಿಗಳನ್ನು ಗೆದ್ದರೆ ಕೊಹ್ಲಿಯ ಯುವ ತಂಡಕ್ಕೆ ಭಾರೀ ಬೂಸ್ಟ್ ಸಿಗಲಿದೆ. 2021 ಟಿ20 ವಿಶ್ಪಕಪ್ ಭಾರತದಲ್ಲೇ ನಡೆಯಲಿರುವುದರಿಂದ ಅದನ್ನು ಗೆಲ್ಲುವ ಅತ್ಯುತ್ತಮ ಅವಕಾಶ ಭಾರತಕ್ಕೆ ಲಭಿಸಲಿದೆ.

ಕಳೆದ ಕೆಲವು ವರ್ಷಗಳಲ್ಲಿ ಭಾರತ ಮತ್ತು ಇಂಗ್ಲೆಂಡ್ ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ಸತತವಾಗಿ ತೋರುತ್ತಿರುವ ಉತ್ತಮ ಪ್ರದರ್ಶನಗಳು ಶನಿವಾರದ ಪಂದ್ಯವನ್ನು ಹೆಚ್ಚು ಕುತೂಹಲಕಾರಿಯನ್ನಾಗಿಸಿದೆ. ಭಾರತ ಕಳೆದ 5 ಟಿ20 ಸರಣಿಗಳನ್ನು ಗೆದ್ದಿದೆ. ಅದಕ್ಕೂ ಮೊದಲು ಅದು ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಸರಣಿಗಳನ್ನು ಸಮ ಮಾಡಿಕೊಂಡಿತ್ತು. ಅದರರ್ಥ 7 ಸರಣಿಗಳಲ್ಲಿ ಭಾರತ ಅಜೇಯವಾಗಿ ಉಳಿದಿದೆ. ಈ ಫಾರ್ಮಾಟ್​ನಲ್ಲಿ ಭಾರತ ಕೊನೆಬಾರಿಗೆ ಸರಣಿ ಸೋತಿದ್ದು 2018 ರಲ್ಲಿ ಸ್ವದೇಶದಲ್ಲೇ ಆಡಿದ ಆಸ್ಟ್ರೇಲಿಯಾ ವಿರುದ್ಧದ ಸರಣಿ.

ಅತ್ತ, ಇಂಗ್ಲೆಂಡ್​ ಸಹ ಕಳೆದ 7 ಸರಣಿಗಳಲ್ಲಿ ಅಜೇಯವಾಗಿ ಉಳಿದಿದೆ. ಪಾಕಿಸ್ತಾನದ ವಿರುದ್ಧ ಕಳೆದ ವರ್ಷ ಡ್ರಾ ಮಾಡಿಕೊಂಡ ಸರಣಿ ಸಹ ಆದರಲ್ಲಿ ಸೇರಿದೆ. ಕಾಕತಾಳೀಯ ಎಂಬಂತೆ ಆಂಗ್ಲರು ಕೊನೆಬಾರಿಗೆ ಟಿ20 ಸರಣಿಯೊಂದನ್ನು ಸೋತಿದ್ದು 2018ರಲ್ಲಿ ಭಾರತದ ವಿರುದ್ಧ.

ಆದರೆ ಸರಣಿಯನ್ನು ನಿರ್ಧರಿಸುವಂಥ ನಿರ್ಣಾಯಕ ಪಂದ್ಯಗಳ ವಿಷಯಕ್ಕೆ ಬಂದರೆ, ಭಾರತದ ಸಾಧನೆ ಅಪ್ರತಿಮವಾಗಿದೆ. 2016 ರ ಟಿ20 ವಿಶ್ವಕಪ್​ನಿಂದ ಈಚೆಗೆ 3 ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳ ಸರಣಿಗಳಲ್ಲಿ ಭಾರತ 9 ಪಂದ್ಯಗಳ ಪೈಕಿ 8ರಲ್ಲಿ ಜಯಭೇರಿ ಬಾರಿಸಿದೆ. ಭಾರತ ತನ್ನ ಏಕೈಕ ಸೋಲು ಹ್ಯಾಮಿಲ್ಟನ್​ನಲ್ಲಿ 2018-19 ನ್ಯೂಜಿಲೆಂಡ್ ವಿರುದ್ದ ಕಂಡಿತು, ಸರಣಿಯನ್ನು ಕಿವೀಸ್ 2-1 ಅಂತರದಿಂದ ಗೆದ್ದಿತ್ತು.

ಅಂಥ ನಿರ್ಣಾಯಕ ಪಂದ್ಯಗಲ್ಲಿ ಇಂಗ್ಲೆಂಡ್ 3 ಗೆದ್ದ 3 ರಲ್ಲಿ ಸೋತು ಮಿಶ್ರಫಲ ಅನುಭವಿಸಿದೆ.

ಕಿರು ಆವೃತ್ತಿಯ ಪಂದ್ಯಗಳು ಲಾಟರಿ ಇದ್ದಂತೆ. ಹಿಂದಿನ ಸಾಧನೆಗಳು ಇಲ್ಲಿ ಗಣನೆಗೆ ಬರೋದಿಲ್ಲ. ನಿರ್ದಿಷ್ಟ ದಿನದಂದು ಯಾವ ಟೀಮು ಉತ್ತಮ ಪ್ರದರ್ಶನ ನೀಡುತ್ತದೆಯೋ ಅದು ವಿಜೃಂಭಿಸುತ್ತದೆ. ಆದರೆ ಭಾರತದ ಸಾಧನೆಯಿಂದ ನಮಗೆ ವಿದಿತವಾಗುವ ಅಂಶವೆಂದರೆ, ಕ್ರಂಚ್​ ಸ್ಥಿತಿಗಳಲ್ಲಿ ಭಾರತೀಯ ಆಟಗಾರರು ಧೃತಿಗೆಟ್ಟು ಒತ್ತಡಕ್ಕೆ ಸಿಲುಕಿವುದಿಲ್ಲ. ಒತ್ತಡ ಅವರೊಳಗಿನ ಸಾಮರ್ಥ್ಯಕ್ಕೆ ಸವಾಲೆಸೆಯುತ್ತದೆ ಮತ್ತು ಆ ಸವಾಲುಗಲ್ಲಿ ಅವರು ಜಯಿಸುತ್ತಾ ಬಂದಿದ್ದಾರೆ. ಕೊಹ್ಲಿ ಅದನ್ನು ಹಿಂದೆಯೂ ಮಾಡಿದ್ದಾರೆ ಮತ್ತು ತಮ್ಮ ತಂಡದಷ್ಟೇ ಬಲಿಷ್ಠವಾಗಿರುವ ಇಂಗ್ಲೆಂಡ್ ವಿರುದ್ಧ ನಾಳೆಯೂ (ಶನಿವಾರ) ಮಾಡಬಹುದು.

ಭಾರತದ ವಿರುದ್ಧ ಆಡಿರುವ ಪಂದ್ಯಗಳಲ್ಲಿ ಇಂಗ್ಲೆಂಡ್ ಯಶಸ್ಸಿನ ಪ್ರಮಾಣ ಶೇಕಡಾ 50 ರಷ್ಟಿದೆ. ಎರಡೂ ತಲಾ 9 ಪಂದ್ಯಗಳನ್ನು ಗೆದ್ದಿವೆ, ಆದರೆ ಭಾರತದ ಯಶಸ್ಸಿನ ಪ್ರಮಾಣ ಎದುರಾಳಿಗಳಿಗಿಂತ ಉತ್ತಮವಾಗಿದೆ.

ಇದನ್ನೂ ಓದಿIndia vs England | 2011ರಿಂದಲೇ ಕೊಹ್ಲಿ ಫಿಟ್​ನೆಸ್​ ಬಗ್ಗೆ ವಿಪರೀತ ಅನಿಸುವಷ್ಟು ವ್ಯಾಮೋಹ ಬೆಳಸಿಕೊಂಡಿದ್ದರು: ವೀರೇಂದ್ರ ಸೆಹ್ವಾಗ್