ಇಂಡೋನೇಷಿಯನ್ ಓಪನ್ 2022 (Indonesia Open 2022) ಮೊದಲ ಸುತ್ತಿನಲ್ಲಿ ವಿಶ್ವ ರ್ಯಾಂಕಿಂಗ್ನಲ್ಲಿ 9ನೇ ಸ್ಥಾನದಲ್ಲಿರುವ ಲಕ್ಷ್ಯ ಸೇನ್ (Lakshya Sen) ಸೋಲನುಭವಿಸಿದ್ದಾರೆ. ಲಕ್ಷ್ಯ ಸೇನ್, ಭಾರತದ ಎಚ್.ಎಸ್.ಪ್ರಣಯ್ (HS Prannoy) ವಿರುದ್ಧ ಸೋಲನುಭವಿಸಬೇಕಾಯ್ತು. ಈ ಹೋರಾಟಕ್ಕೂ ಮುನ್ನ ಲಕ್ಷ್ಯ ಸೇನ್ ಈ ವರ್ಷ ಎರಡು ಬಾರಿ ಪ್ರಣಯ್ ಅವರನ್ನು ಸೋಲಿಸಿದ್ದರು. ಆದರೆ ಈ ಬಾರಿ ಪ್ರಣಯ್ ತಿರುಗೇಟು ನೀಡಿದ್ದಾರೆ. ಪ್ರಣಯ್ 21-10, 21-9 ನೇರ ಸೆಟ್ಗಳಿಂದ ಲಕ್ಷ್ಯ ಸೇನ್ರನ್ನು ಮಣಿಸಿದರು. ಈ ಪಂದ್ಯದಲ್ಲಿ ಪ್ರಣಯ್ ಅವರ ಮುಂದೆ ಲಕ್ಷ್ಯ ಸೇನ್ ಸಂಪೂರ್ಣವಾಗಿ ಮಂಕಾಗಿದ್ದರು. ಇದು ಹಲವರಿಗೆ ಅಚ್ಚರಿ ಮೂಡಿಸಿದೆ. ಲಕ್ಷ್ಯ ಸೇನ್ ಪ್ರಣಯ್ ಮೇಲೆ ಒತ್ತಡ ಹೇರಲು ಸಾಧ್ಯವಾಗಲಿಲ್ಲ. ಥಾಮಸ್ ಕಪ್ (Thomas Cup)ನಲ್ಲಿ ಲಕ್ಷ್ಯ ಸೇನ್ ಮತ್ತು ಪ್ರಣಯ್ ಒಟ್ಟಿಗೆ ಆಡಿದ್ದರು. ಈ ಟೂರ್ನಿಯಲ್ಲಿ ಭಾರತ ಗೆದ್ದು ಇತಿಹಾಸ ನಿರ್ಮಿಸಿತ್ತು.
ಪ್ರಣಯ್ ಮತ್ತು ಕಿಂದಬಿ ಶ್ರೀಕಾಂತ್ ಮೇಲೆ ಭಾರತದ ಅವಲಂಬನೆ
ಪ್ರಣಯ್ ಕೆಲವು ಅದ್ಭುತ ಹೊಡೆತಗಳಿಗೆ ಸೇನ್ ಅವರ ಬಳಿ ಉತ್ತರವಿರಲಿಲ್ಲ. ಲಕ್ಷ್ಯ ಸೇನ್ ಇತ್ತೀಚಿನ ಕೆಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಇಂದು ಏನೂ ಮಾಡಲು ಸಾಧ್ಯ ಆಗಲಿಲ್ಲ. ಇಂಡೋನೇಷ್ಯಾ ಓಪನ್ನ ಮೊದಲ ದಿನ ಸಾಯಿ ಪ್ರಣೀತ್ ಮತ್ತು ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಮೊದಲ ಸುತ್ತಿನಲ್ಲೇ ಸೋತು ಟೂರ್ನಿಯಿಂದ ಹೊರಬಿದ್ದರು. ಹೀಗಾಗಿ ಭಾರತ ಪ್ರಣಯ್ ಮತ್ತು ಕಿಂದಬಿ ಶ್ರೀಕಾಂತ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಅಲ್ಲದೆ ಈ ಇಬ್ಬರಿಂದ ಪದಕ ಗೆಲ್ಲುವ ನಿರೀಕ್ಷೆ ಹೊಂದಿದೆ.
ಇದನ್ನೂ ಓದಿ: Indonesia Open: ಲಕ್ಷ್ಯ ಸೇನ್ಗೆ ಭಾರತೀಯನೇ ಎದುರಾಳಿ; ಪಿವಿ ಸಿಂಧು, ಸೈನಾ ನೆಹ್ವಾಲ್ ಮೇಲೆ ಭಾರಿ ನಿರೀಕ್ಷೆ
ಪ್ರಣಯ್ಗೆ ಮೊದಲ ಗೆಲುವು
ಇದುವರೆಗೆ ಲಕ್ಷ್ಯ ಸೇನ್ ಮತ್ತು ಪ್ರಣಯ್ ಮೂರು ಪಂದ್ಯಗಳನ್ನು ಆಡಿದ್ದಾರೆ. ಇದು ಇಂದು ಪ್ರಣಯ್ ಅವರ ಮೊದಲ ಗೆಲುವಾಗಿದೆ. ಪುರುಷರ ಡಬಲ್ಸ್ನಲ್ಲಿ ಎಂಆರ್ ಅರ್ಜುನ್ ಮತ್ತು ಧ್ರುವ ಕಪಿಲ್ ಗೆಲುವಿನ ಖಾತೆ ತೆರೆದಿದ್ದಾರೆ. ಈ ಇಬ್ಬರು ರ್ಯಾಂಕ್ನಲ್ಲಿ ತಮಗಿಂತ ಮೇಲಿರುವ ಜಪಾನ್ ಜೋಡಿಯನ್ನು ಸೋಲಿಸಿದರು. ಈಇಬ್ಬರು 27-25, 18-25 ಮತ್ತು 21-19 ರಲ್ಲಿ ಜಪಾನ್ ಜೋಡಿಯನ್ನು ಮಣಿಸಿ ಮುಂದಿನ ಸುತ್ತಿಗೆ ಟಿಕೆಟ್ ಖಚಿತ ಪಡಿಸಿಕೊಂಡಿದೆ.
Published On - 8:44 pm, Wed, 15 June 22