ಅಂತಾರಾಷ್ಟ್ರೀಯ ಕ್ರೀಡಾಕೂಟಗಳಿಂದ ರಷ್ಯಾವನ್ನು ಹೊರಗಿಡುವಂತೆ ಕ್ರೀಡಾ ಒಕ್ಕೂಟಗಳಿಗೆ IOC ಶಿಫಾರಸು..!

International Olympic Committee: ಅಂತರರಾಷ್ಟ್ರೀಯ ಸ್ಪರ್ಧೆಗಳಿಂದ ರಷ್ಯಾ ಮತ್ತು ಬೆಲಾರಸ್‌ನ ಅಧಿಕಾರಿಗಳು ಮತ್ತು ಆಟಗಾರರನ್ನು ಹೊರಗಿಡಲು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಎಲ್ಲಾ ಫೆಡರೇಶನ್‌ಗಳಿಗೆ ಶಿಫಾರಸು ಮಾಡಿದೆ.

ಅಂತಾರಾಷ್ಟ್ರೀಯ ಕ್ರೀಡಾಕೂಟಗಳಿಂದ ರಷ್ಯಾವನ್ನು ಹೊರಗಿಡುವಂತೆ ಕ್ರೀಡಾ ಒಕ್ಕೂಟಗಳಿಗೆ IOC ಶಿಫಾರಸು..!
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಪೃಥ್ವಿಶಂಕರ

Updated on: Feb 28, 2022 | 10:42 PM

ಉಕ್ರೇನ್ ಮೇಲೆ ದಾಳಿ ಮಾಡಿರುವ ರಷ್ಯಾ (Russia)ವನ್ನು ಪ್ರತ್ಯೇಕಿಸಲು ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ (International Olympic Committee)ಯು ಕಠಿಣ ನಿಲುವು ತಳೆದು ವಿಶ್ವದಾದ್ಯಂತ ಕ್ರೀಡಾ ಒಕ್ಕೂಟಗಳಿಗೆ ದೊಡ್ಡ ಮನವಿ ಮಾಡಿದೆ. ಅಂತರರಾಷ್ಟ್ರೀಯ ಸ್ಪರ್ಧೆಗಳಿಂದ ರಷ್ಯಾ ಮತ್ತು ಬೆಲಾರಸ್‌ನ ಅಧಿಕಾರಿಗಳು ಮತ್ತು ಆಟಗಾರರನ್ನು ಹೊರಗಿಡಲು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಎಲ್ಲಾ ಫೆಡರೇಶನ್‌ಗಳಿಗೆ ಶಿಫಾರಸು ಮಾಡಿದೆ. ಜಾಗತಿಕ ಕ್ರೀಡಾಕೂಟಗಳ ಸಮಗ್ರತೆ ಮತ್ತು ಎಲ್ಲಾ ಭಾಗವಹಿಸುವವರ ಸುರಕ್ಷತೆಯನ್ನು ರಕ್ಷಿಸಲು ಇದು ಅವಶ್ಯಕವಾಗಿದೆ ಎಂದು IOC ಹೇಳಿದೆ. ಈ ನಿರ್ಧಾರದಿಂದ ವಿಶ್ವ ಫುಟ್‌ಬಾಲ್‌ನ ಅತ್ಯುನ್ನತ ಸಂಸ್ಥೆಯಾದ ಫಿಫಾ ಮಾರ್ಚ್ 24 ರಂದು ನಡೆಯಲಿರುವ ವಿಶ್ವಕಪ್ ಅರ್ಹತಾ ಪಂದ್ಯದಿಂದ ರಷ್ಯಾವನ್ನು ಹೊರಗಿಡುವ ಚಿಂತನೆ ನಡೆಸಿದೆ. ಈ ಪೂರ್ವನಿರ್ಧರಿತ ಪಂದ್ಯದಲ್ಲಿ ಪೋಲೆಂಡ್ ಈಗಾಗಲೇ ರಷ್ಯಾ ವಿರುದ್ಧ ಆಡಲು ನಿರಾಕರಿಸಿತ್ತು. ಐಒಸಿಯ ಮನವಿಯು ರಷ್ಯಾದ ದಾಳಿಯನ್ನು ಬೆಂಬಲಿಸುತ್ತಿರುವ ಬೆಲಾರಸ್‌ನ ಆಟಗಾರರು ಮತ್ತು ಅಧಿಕಾರಿಗಳಿಗೆ ಅನ್ವಯಿಸುತ್ತದೆ.

ಭಾರವಾದ ಹೃದಯದಿಂದ ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ IOC ಹೇಳಿದೆ, ಆದರೆ ಉಕ್ರೇನ್‌ನ ಕ್ರೀಡೆಗಳ ಮೇಲೆ ಯುದ್ಧದ ಪ್ರಭಾವವು ರಷ್ಯಾ ಮತ್ತು ಬೆಲಾರಸ್‌ನ ಆಟಗಾರರಿಗೆ ಮಾಡಿದ ಹಾನಿಯನ್ನು ಮೀರಿಸುತ್ತದೆ ಎಂದು ಹೇಳಿಕೊಂಡಿದೆ.

ರಷ್ಯಾ-ಬೆಲರೂಸಿಯನ್ ಕ್ರೀಡಾಪಟುಗಳ ಮೇಲೆ ಸಂಪೂರ್ಣ ನಿಷೇಧವಿಲ್ಲ ಐಒಸಿ ಸಂಪೂರ್ಣ ನಿಷೇಧ ಹೇರಿಲ್ಲ. ಸಾಂಸ್ಥಿಕ ಅಥವಾ ಕಾನೂನು ಕಾರಣಗಳಿಗಾಗಿ ಇಷ್ಟು ಬೇಗ ಆಟಗಾರರು ಮತ್ತು ಅಧಿಕಾರಿಗಳನ್ನು ಹೊರಹಾಕಲು ಸಾಧ್ಯವಾಗದಿದ್ದರೆ, ರಷ್ಯಾ ಮತ್ತು ಬೆಲಾರಸ್‌ನ ಆಟಗಾರರು ತಟಸ್ಥ ಆಟಗಾರರಾಗಿ ಭಾಗವಹಿಸಬೇಕು ಮತ್ತು ಅವರ ರಾಷ್ಟ್ರಧ್ವಜ, ರಾಷ್ಟ್ರಗೀತೆ ಅಥವಾ ಚಿಹ್ನೆಯನ್ನು ಬಳಸಬಾರದು ಎಂದು ಅದು ಹೇಳಿದೆ. ಇವುಗಳಲ್ಲಿ ಬೀಜಿಂಗ್‌ನಲ್ಲಿ ನಡೆಯಲಿರುವ ಮುಂಬರುವ ಚಳಿಗಾಲದ ಪ್ಯಾರಾಲಿಂಪಿಕ್ ಕ್ರೀಡಾಕೂಟಗಳು ಸೇರಿವೆ. ಒಲಿಂಪಿಕ್ ಸಮಿತಿಯು 2011 ರಲ್ಲಿ ವ್ಲಾದಿಮಿರ್ ಪುಟಿನ್ ಅವರಿಗೆ ನೀಡಲಾದ ‘ಒಲಿಂಪಿಕ್ ಆರ್ಡರ್’ ಅನ್ನು ಸಹ ಹಿಂಪಡೆದಿದೆ. ಜೊತೆಗೆ ರಷ್ಯಾದ ಇತರ ಅಧಿಕಾರಿಗಳಿಗೆ ನೀಡಲಾದ ಈ ಗೌರವವನ್ನು ಸಹ ಹಿಂಪಡೆಯಲಾಗಿದೆ. ಯುರೋಪಿನ ಹಲವು ಕ್ರೀಡಾ ಸಂಸ್ಥೆಗಳು ಈಗಾಗಲೇ ರಷ್ಯಾವನ್ನು ವಿರೋಧಿಸಿವೆ. ಹಾಗೆಯೇ ರಷ್ಯಾ ತಂಡದ ವಿರುದ್ಧ ಆತಿಥ್ಯ ವಹಿಸಲು ಅಥವಾ ಆಡಲು ನಿರಾಕರಿಸಿದ್ದಾರೆ.

ಅನೇಕ ಯುರೋಪಿಯನ್ ರಾಷ್ಟ್ರಗಳು ರಷ್ಯಾದ ವಿರುದ್ಧ ದನಿಗೂಡಿಸಿದವು ರಷ್ಯಾದ ಐಸ್ ಹಾಕಿ ತಂಡವನ್ನು ಪುರುಷರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸದಂತೆ ನಿರ್ಬಂಧಿಸಬೇಕೆಂದು ಫಿನ್‌ಲ್ಯಾಂಡ್ ಒತ್ತಾಯಿಸಿದೆ. ಜುಲೈನಲ್ಲಿ ನಡೆಯಲಿರುವ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಮಹಿಳಾ ತಂಡ ರಷ್ಯಾ ಎದುರು ಆಡುವುದಿಲ್ಲ ಎಂದು ಸ್ವಿಟ್ಜರ್ಲೆಂಡ್‌ನ ಫುಟ್‌ಬಾಲ್ ಫೆಡರೇಶನ್ ಹೇಳಿದೆ. ರಷ್ಯಾದ ರಾಜ್ಯ ನಿಯಂತ್ರಿತ ಇಂಧನ ಕಂಪನಿ ಗಾಜ್‌ಪ್ರೊಮ್‌ನೊಂದಿಗಿನ ತನ್ನ ದೀರ್ಘಕಾಲದ ಸಂಬಂಧವನ್ನು ಮುರಿಯಲು ನಿರ್ಧರಿಸಿದೆ ಎಂದು ಜರ್ಮನ್ ಫುಟ್‌ಬಾಲ್ ಕ್ಲಬ್ ಶಾಲ್ಕೆ ಹೇಳಿದೆ. ವಿಶ್ವಕಪ್‌ನ ಅರ್ಹತಾ ಸುತ್ತಿನಿಂದ ರಷ್ಯಾವನ್ನು ತಕ್ಷಣವೇ ಹೊರಗಿಡದಿರುವ ಫಿಫಾದ ಆದೇಶದ ಬಗ್ಗೆ ಯುರೋಪಿಯನ್ ರಾಷ್ಟ್ರಗಳು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದವು. ಹೀಗಾಗಿ ಅದರ ಧ್ವಜ ಮತ್ತು ರಾಷ್ಟ್ರಗೀತೆಯಿಲ್ಲದೆ ತಟಸ್ಥ ಸ್ಥಳಗಳಲ್ಲಿ ಮಾತ್ರ ರಷ್ಯಾದ ಒಕ್ಕೂಟದ ಫುಟ್‌ಬಾಲ್ ಯೂನಿಯನ್ ಹೆಸರಿನಲ್ಲಿ ಆಡಲು ಅವಕಾಶ ನೀಡಿತು. ಪೋಲೆಂಡ್ ಹೊರತುಪಡಿಸಿ, ಸ್ವೀಡನ್ ಮತ್ತು ಜೆಕ್ ರಿಪಬ್ಲಿಕ್ ಸಹ ರಷ್ಯಾ ವಿರುದ್ಧ ತಮ್ಮ ತಂಡವನ್ನು ಆಡಿಸುವುದಿಲ್ಲ ಎಂದು ಹೇಳಿಕೆ ನೀಡಿವೆ.

ಇದನ್ನೂ ಓದಿ:IPL 2022: ತಂಡದ ವಾತಾವರಣವನ್ನು ಬದಲಾಯಿಸುತ್ತೇನೆ! ಕೆಕೆಆರ್ ಅಭಿಮಾನಿಗಳಿಗೆ ಶ್ರೇಯಸ್ ಭರವಸೆ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್