IPL 2020: ಕಪ್​ ಗೆಲ್ತಾರಾ ಕೊಲ್ಕತ್ತಾ ಹುಡುಗರು, ಹೇಗಿದೆ ಶಾರುಖ್ ತಂಡದ ಸಮರಾಭ್ಯಾಸ?

ಕೆರಿಬಿಯನ್​ ಲೀಗ್​ನಲ್ಲಿ ಶಾರುಖ್ ಖಾನ್ ಒಡೆತನದ ತಂಡ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಹೀಗಾಗಿ ಶಾರುಖ್ ಒಡೆತನದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಈ ಆವೃತ್ತಿಯ ಮೊದಲ ಪಂದ್ಯವನ್ನು ಇಂದು ಆಡುತ್ತಿದೆ. ತಂಡವು ಗೆಲುವಿನೊಂದಿಗೆ ತಮ್ಮ ಖಾತೆ ತೆರೆಯಲು ಪಣ ತೊಟ್ಟಿದ್ದು, ಗೆಲುವನ್ನು ತಮ್ಮದಾಗಿಸಿಕೊಳ್ಳಲು ಭಾರಿ ಸಮರಾಭ್ಯಾಸ ಮಾಡುತ್ತಿದೆ. [yop_poll id=”1″] ಮೊದಲ ಬಾರಿಗೆ ಐಪಿಎಲ್‌ ರಣಾಂಗಣಕ್ಕೆ ಕಾಲಿಡುತ್ತಿರುವ ಅಮೆರಿಕದ ಮೊದಲ ಕ್ರಿಕೆಟ್​ ಆಟಗಾರ ಆಲಿ ಖಾನ್​ ಅವರ ಮೇಲೆ ಭಾರಿ ನಿರೀಕ್ಷೆ ಮೂಡಿದೆ. ಹೀಗಾಗಿ ಆಲಿ ಖಾನ್ […]

IPL 2020: ಕಪ್​ ಗೆಲ್ತಾರಾ ಕೊಲ್ಕತ್ತಾ ಹುಡುಗರು, ಹೇಗಿದೆ ಶಾರುಖ್ ತಂಡದ ಸಮರಾಭ್ಯಾಸ?
ಸಾಧು ಶ್ರೀನಾಥ್​

Updated on: Sep 23, 2020 | 6:08 PM

ಕೆರಿಬಿಯನ್​ ಲೀಗ್​ನಲ್ಲಿ ಶಾರುಖ್ ಖಾನ್ ಒಡೆತನದ ತಂಡ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಹೀಗಾಗಿ ಶಾರುಖ್ ಒಡೆತನದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಈ ಆವೃತ್ತಿಯ ಮೊದಲ ಪಂದ್ಯವನ್ನು ಇಂದು ಆಡುತ್ತಿದೆ. ತಂಡವು ಗೆಲುವಿನೊಂದಿಗೆ ತಮ್ಮ ಖಾತೆ ತೆರೆಯಲು ಪಣ ತೊಟ್ಟಿದ್ದು, ಗೆಲುವನ್ನು ತಮ್ಮದಾಗಿಸಿಕೊಳ್ಳಲು ಭಾರಿ ಸಮರಾಭ್ಯಾಸ ಮಾಡುತ್ತಿದೆ.
[yop_poll id=”1″]

ಮೊದಲ ಬಾರಿಗೆ ಐಪಿಎಲ್‌ ರಣಾಂಗಣಕ್ಕೆ ಕಾಲಿಡುತ್ತಿರುವ ಅಮೆರಿಕದ ಮೊದಲ ಕ್ರಿಕೆಟ್​ ಆಟಗಾರ ಆಲಿ ಖಾನ್​ ಅವರ ಮೇಲೆ ಭಾರಿ ನಿರೀಕ್ಷೆ ಮೂಡಿದೆ. ಹೀಗಾಗಿ ಆಲಿ ಖಾನ್ ಮೈದಾನದಲ್ಲಿ ಬೆವರಿಳಿಸುತ್ತಿದ್ದಾರೆ.


ಕೊಲ್ಕತ್ತಾ ನೈಟ್ ರೈಡರ್ಸ್​ ತಂಡದಲ್ಲಿ ವಿಕೆಟ್‌ ಕೀಪಿಂಗ್​ ವಿಭಾಗದಲ್ಲಿ ಮಿಂಚುತ್ತಿರುವ ದಿನೇಶ್​ ಕಾರ್ತಿಕ್ ಅತ್ಯುತ್ತಮ ದಾಂಡಿಗನೂ ಕೂಡ. ಹೀಗಾಗಿ ಡೆತ್​ ಓವರ್​ಗಳಲ್ಲಿ ದಿನೇಶ್​ ಕಾರ್ತಿಕ್ ತಂಡಕ್ಕೆ ಆಸರೆಯಾಗಬಲ್ಲರು.


ಮರಳುಗಾಡಿನ ಐಪಿಎಲ್​ಗೆ ರೆಡಿಯಾಗಿರುವ ಕೊಲ್ಕತ್ತಾ ಹುಡುಗರು ಅಭ್ಯಾಸದೊಂದಿಗೆ ಮೋಜುಮಸ್ತಿಯಲ್ಲೂ ಬಿಂದಾಸ್​ ಆಗಿ ಕಾಲ ಕಳೆಯುತ್ತಿದ್ದಾರೆ. ಅಭ್ಯಾಸದ ನಂತರ ಬಿಸಿಲ ಬೇಗೆಯಿಂದ ಬಸವಳಿದ ಕೊಲ್ಕತ್ತಾ ಹುಡುಗರು ಶರ್ಟ್​ ಕಳಚಿ ಪೋಸು ಕೊಟ್ಟಿದ್ದು ಹೀಗೆ.


ಚೈನಾ ಮ್ಯಾನ್​ ಖ್ಯಾತಿಯ ಕುಲ್​ದೀಪ್​ ಯಾದವ್​ ಕೊಲ್ಕತ್ತಾ ನೈಟ್ ರೈಡರ್ಸ್​ ತಂಡದ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದಾರೆ. ಅಭ್ಯಾಸದ ಸಮಯದಲ್ಲಿ ಕ್ಯಾಮೆರಾ ಕಣ್ಣಿಗೆ ಯಾದವ್​ ಸಿಕ್ಕಿ ಬಿದಿದ್ದು ಹೀಗೆ.


ಕೆರಿಬಿಯನ್ ದೈತ್ಯ ಆಂಡ್ರೆ ರಸೆಲ್​ ಮೇಲೆ ಈ ಆವೃತ್ತಿಯಲ್ಲಿ ಭಾರಿ ನಿರೀಕ್ಷೆಗಳಿವೆ. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಅಬ್ಬರಿಸುವ ಸಾಮರ್ಥ್ಯ ಹೊಂದಿರುವ ರಸೆಲ್​ ಯಾವುದೇ ಸಂದರ್ಭದಲ್ಲೂ ಪಂದ್ಯದ ದಿಕ್ಕನೇ ಬದಲಿಸಬಲ್ಲರು.


ತಂಡದಲ್ಲಿ ಯಾವ ಕ್ರಮಾಂಕದಲ್ಲೂ ಬ್ಯಾಟಿಂಗ್​ ಇಳಿದು ಘರ್ಜಿಸುವ ಸಾಮರ್ಥ್ಯ ಹೊಂದಿರುವ ನಿತಿಶ್ ರಾಣಾ ಅಭ್ಯಾಸದ ಸಮಯದಲ್ಲಿ ಕಾಣಿಸಿಕೊಂಡಿದ್ದು ಹೀಗೆ.


ಕೆಕೆಆರ್​ ಆರಂಭಿಕ ಆಟಗಾರ ಶುಬ್ಮಾನ್ ಗಿಲ್​ಗೆ ಅಭ್ಯಾದ ಸಮಯದಲ್ಲಿ ತಂಡದ ಕೋಚ್​ ಮೇಕಲಂ ತಮ್ಮ ಅನುಭವವನ್ನು ಧಾರೆ ಎರೆದಿದ್ದು ಹೀಗೆ.

(Photo courtesy: KolkataKnightRiders Twitter)

Published On - 1:22 pm, Wed, 23 September 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us