ಐಪಿಎಲ್ 2021ರ ಮೂರನೇ ಪಂದ್ಯಾಟದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣೆಸಾಡಲಿದ್ದಾರೆ. ಎರಡು ಬಾರಿ ಚಾಂಪಿಯನ್ ಪಟ್ಟಕ್ಕೆ ಏರಿರುವ ಕೋಲ್ಕತ್ತಾ ತಂಡ, 2016ರ ಚಾಂಪಿಯನ್ಸ್ ಸನ್ರೈಸರ್ಸ್ ತಂಡವನ್ನು ಎದುರಿಸಲಿದ್ದಾರೆ. ಇಂದಿನ ಪಂದ್ಯಾಟವು ಚೆನ್ನೈನ ಎಮ್.ಎ. ಚಿದಂಬರಂ ಮೈದಾನದಲ್ಲಿ ಸಂಜೆ 7.30ಕ್ಕೆ ಆರಂಭವಾಗಲಿದೆ.
ಕಳೆದ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಸನ್ರೈಸರ್ಸ್ ತಂಡ ಉತ್ತಮ ಆಟವನ್ನೇ ಆಡಿತ್ತು. ಸಂತುಲಿತ ತಂಡ, ತನ್ನ ಒಗ್ಗಟ್ಟಿನ ಪ್ರದರ್ಶನದ ಮೂಲಕ ಪ್ಲೇ ಆಫ್ ಹಂತವನ್ನುಪ್ರವೇಶಿಸಿತ್ತು. ಈ ವಿಶ್ವಾಸ ಸನ್ರೈಸರ್ಸ್ ತಂಡಕ್ಕೆ ವರವಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಟೀಂ ಸದೃಢವಾಗಿದೆ. ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್, ನಟರಾಜನ್, ಭುವನೇಶ್ವರ್ ಕುಮಾರ್, ಮನೀಶ್ ಪಾಂಡೆ ಮುಂತಾದ ಆಟಗಾರರು ಪಂದ್ಯ ಗೆಲ್ಲುವ ಪ್ರದರ್ಶನ ನೀಡೇ ನೀಡುತ್ತಾರೆ ಎಂಬ ನಂಬಿಕೆ, ನಿರೀಕ್ಷೆಗಳನ್ನು ಅಭಿಮಾನಿಗಳು ಇರಿಸಿಕೊಂಡಿದ್ದಾರೆ.
ಮತ್ತೊಂದೆಡೆ, ಕೋಲ್ಕತ್ತಾ ತಂಡ ಕೂಡ ಉತ್ತಮ ಆಟಗಾರರನ್ನು ಹೊಂದಿದೆ. ಇಯಾನ್ ಮಾರ್ಗನ್ ನಾಯಕತ್ವ, ರಸೆಲ್ ವೇಗದ ಆಟ ತಂಡಕ್ಕೆ ವರವಾಗಬಹುದು. ದಿನೇಶ್ ಕಾರ್ತಿಕ್, ಶುಭ್ಮನ್ ಗಿಲ್ ಆಟ ಕೂಡ ತಂಡ ಗೆಲ್ಲಿಸಬಹುದಾಗಿದೆ. ಶಕೀಬ್ ಅಲ್ ಹಸನ್ ಆಲ್ರೌಂಡ್ ಆಟ ನಂಬಿಕಸ್ಥ ಎಂಬುದು ಕೂಡ ಕ್ರಿಕೆಟ್ ಅಭಿಮಾನಿಗಳ ನಂಬಿಕೆಯಾಗಿದೆ.
ಸನ್ರೈಸರ್ಸ್ ಹೈದರಾಬಾದ್ ಸಂಭಾವ್ಯ ಪ್ಲೇಯಿಂಗ್ ಇಲೆವೆನ್:
1) ಡೇವಿಡ್ ವಾರ್ನರ್ (ನಾಯಕ)
2) ವೃದ್ಧಿಮಾನ್ ಸಹಾ
3) ಮನೀಶ್ ಪಾಂಡೆ
4) ಕೇನ್ ವಿಲಿಯಮ್ಸನ್
5) ವಿಜಯ್ ಶಂಕರ್
6) ಅಬ್ದುಲ್ ಸಮದ್
7) ಮೊಹಮ್ಮದ್ ನಬಿ
8) ರಶೀದ್ ಖಾನ್
9) ಭುವನೇಶ್ವರ್ ಕುಮಾರ್
10) ಸಂದೀಪ್ ಶರ್ಮಾ
11) ಟಿ.ನಟರಾಜನ್
ಕೋಲ್ಕತ್ತಾ ನೈಟ್ ರೈಡರ್ಸ್ ಸಂಭಾವ್ಯ ಪ್ಲೇಯಿಂಗ್ ಇಲೆವೆನ್:
1) ಶುಭ್ಮನ್ ಗಿಲ್
2) ರಾಹುಲ್ ತ್ರಿಪಾಠಿ
3) ನಿತೀಶ್ ರಾಣಾ
4) ಇಯೊನ್ ಮೋರ್ಗಾನ್ (ನಾಯಕ)
5) ದಿನೇಶ್ ಕಾರ್ತಿಕ್
6) ಆಂಡ್ರೆ ರಸ್ಸೆಲ್
7) ಶಕೀಬ್ ಅಲ್ ಹಸನ್ / ಸುನಿಲ್ ನರೈನ್
8) ಹರ್ಭಜನ್ ಸಿಂಗ್
9) ಪ್ಯಾಟ್ ಕಮ್ಮಿನ್ಸ್
10) ಪ್ರಸಾದ್ ಕೃಷ್ಣ
11) ವರುಣ್ ಚಕ್ರವರ್ತಿ
Published On - 5:45 pm, Sun, 11 April 21