Shubman Gill IPL 2021 KKR Team Player: ಟೀಂ ಇಂಡಿಯಾದ ಭವಿಷ್ಯದ ನಾಯಕನೆನಿಸಿಕೊಂಡಿರುವ ಗಿಲ್, ಕೆಕೆಆರ್ನ ಪ್ರಮುಖ ಬ್ಯಾಟಿಂಗ್ ಅಸ್ತ್ರ!
Shubman Gill profile: ಗಿಲ್ 2018 ರಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಮಿಂಚಿದರು. ಭಾರತದ 19 ವರ್ಷದೊಳಗಿನವರ ತಂಡವು ಪೃಥ್ವಿ ಶಾ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದಿತು.

ಇಂಡಿಯನ್ ಪ್ರೀಮಿಯರ್ ಲೀಗ್ ಯುವ ಆಟಗಾರರಿಗೆ ಅತ್ಯುತ್ತಮ ವೇದಿಕೆಯಾಗಿದೆ. ಭಾರತಕ್ಕೆ ಐಪಿಎಲ್‌ನಿಂದ ಅನೇಕ ಯುವ ಆಟಗಾರರು ಸಿಕ್ಕಿದ್ದಾರೆ. ಈ ಲೀಗ್‌ನಲ್ಲಿ ಅನೇಕ ಯುವ ಆಟಗಾರರು ತಮ್ಮ ಆಟವನ್ನು ಸುಧಾರಿಸಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ ತಂಡದ ಶುಬ್ಮನ್ ಗಿಲ್ ಐಪಿಎಲ್‌ನಲ್ಲಿ ಮಿಂಚಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದ ಆಟಗಾರನಾಗಿದ್ದಾರೆ. ಗಿಲ್‌ಗೆ ಐಪಿಎಲ್ ಹೊಸ ಗುರುತನ್ನು ನೀಡಿದಲ್ಲದೆ ಟೀಂ ಇಂಡಿಯಾದ ಆರಂಭಿಕ ಆಟಗಾರನಾಗಿಯೂ ಪರಿಚಯಿಸಿತು.
ಗಿಲ್ 2018 ರಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಮಿಂಚಿದರು. ಭಾರತದ 19 ವರ್ಷದೊಳಗಿನವರ ತಂಡವು ಪೃಥ್ವಿ ಶಾ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದಿತು. ಗಿಲ್ ಆ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಗಿಲ್ ಅವರ ಪ್ರತಿಭೆಯನ್ನು ನೋಡಿದ ಕೋಲ್ಕತಾ ನೈಟ್ ರೈಡರ್ಸ್ ತಂಡದ ಮ್ಯಾನೆಜ್ಮೆಂಟ್ ಗಿಲ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿತು. ಗಿಲ್ 2018 ರಿಂದ ಕೋಲ್ಕತಾ ಪರ ಆಡುತ್ತಿದ್ದಾರೆ ಮತ್ತು ತಂಡದ ಪ್ರಬಲ ಸದಸ್ಯರಾಗಿದ್ದಾರೆ.
1000 ರನ್‌ಗಳನ್ನು ಪೂರೈಸುವ ಸನಿಹದಲ್ಲಿ ಗಿಲ್ ಇದುವರೆಗೆ ಐಪಿಎಲ್‌ನಲ್ಲಿ ಮೂರು ಆವೃತ್ತಿಗಳನ್ನು ಆಡಿದ್ದಾನೆ ಮತ್ತು ಈ ಆವೃತ್ತಿಯಲ್ಲಿ ತನ್ನ ಒಂದು ಸಾವಿರ ರನ್‌ಗಳನ್ನು ಪೂರ್ಣಗೊಳಿಸುವುದಕ್ಕೆ 61 ರನ್‌ಗಳ ದೂರದಲ್ಲಿದ್ದಾರೆ. ಮೂರು ಆವೃತ್ತಿಯಲ್ಲಿ ಗಿಲ್ 41 ಪಂದ್ಯಗಳನ್ನಾಡಿ 939 ರನ್ ಗಳಿಸಿದ್ದಾರೆ ಮತ್ತು ಏಳು ಅರ್ಧಶತಕಗಳನ್ನು ಗಳಿಸಿದ್ದಾರೆ. 2018 ರಲ್ಲಿ ಗಿಲ್ 13 ಪಂದ್ಯಗಳಲ್ಲಿ 203 ರನ್ ಗಳಿಸಿದ್ದರು ಮತ್ತು 2019 ರಲ್ಲಿ 14 ಪಂದ್ಯಗಳಲ್ಲಿ 296 ರನ್ ಗಳಿಸಿದ್ದಾರೆ. ಅವರು ಮೊದಲಿನಿಂದಲೂ ಕೋಲ್ಕತಾ ಪರ ಆಡುತ್ತಿದ್ದಾರೆ ಮತ್ತು ತಂಡವು ಅವರನ್ನು ಬೆಂಬಲಿಸಿದ ರೀತಿಯನ್ನು ನೋಡಿದರೆ, ತಂಡವು ಅವರನ್ನು ಶೀಘ್ರದಲ್ಲೇ ತಂಡದಿಂದ ಹೋಗಲು ಬಿಡುವುದಿಲ್ಲ ಎಂದು ತೋರುತ್ತದೆ.
2020 ರ ಆವೃತ್ತಿ ಅತ್ಯುತ್ತಮವಾಗಿತ್ತು ಗಿಲ್ ಅವರ ಕೊನೆಯ ಐಪಿಎಲ್ ಅತ್ಯಂತ ಅದ್ಭುತವಾಗಿದೆ. ಎರಡು ವರ್ಷಗಳ ನಿರಂತರ ಆಟದ ನಂತರ, ಗಿಲ್ ಐಪಿಎಲ್‌ನಲ್ಲಿ ಲಯ ಕಂಡುಕೊಂಡರು. ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಆಡಿದ ಕೊನೆಯ ಆವೃತ್ತಿಯಲ್ಲಿ, ಗಿಲ್ 14 ಪಂದ್ಯಗಳಲ್ಲಿ 33.40 ಸರಾಸರಿಯಲ್ಲಿ 440 ರನ್ ಗಳಿಸಿದರು. ಮೂರು ಬಾರಿ ಗಿಲ್ ಐವತ್ತರ ಗಡಿ ದಾಟಿದರು. ಹಲವಾರು ಪ್ರಮುಖ ಸಂದರ್ಭಗಳಲ್ಲಿ, ಅವರು ತಂಡಕ್ಕೆ ಉಪಯುಕ್ತ ಇನ್ನಿಂಗ್ಸ್ ಆಡಿದರು. ಕಳೆದ ಆವೃತ್ತಿಯಲ್ಲಿ ಅವರು ತಂಡಕ್ಕೆ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.
