ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings – CSK) ಮೂರು ಬಾರಿ (2010, 2011 ಮತ್ತು 2018) ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಆದರೆ, ದುಬೈನಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹೀನಾಯವಾಗಿ ಸೋತಿತ್ತು! ಈ ಸೋಲಿನಿಂದ ಎಚ್ಚೆತ್ತಿರುವ ಸಿಎಸ್ಕೆ ತಂಡದ ಕೆಲ ಆಟಗಾರರನ್ನು ರಿಲೀಸ್ ಮಾಡಿತ್ತು. ಅಷ್ಟೇ ಅಲ್ಲ, ನಿನ್ನೆ ನಡೆದ ಹರಾಜಿನಲ್ಲಿ 6 ಆಟಗಾರರನ್ನು ಖರೀದಿಸಿದೆ. ಹಾಗಾದರೆ, ಚೆನ್ನೈ ತಂಡ ಈಗ ಹೇಗಿದೆ ಎನ್ನುವುದಕ್ಕೆ ಇಲ್ಲಿದೆ ವಿವರ.
ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್‌ನ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾಗಿದೆ. ಮೂರು ಬಾರಿ ಪ್ರಶಸ್ತಿ ಗೆದ್ದಿರುವ ಹೆಗ್ಗಳಿಕೆ ಚೆನ್ನೈಗೆ ಇದೆ. ಸ್ಪಾಟ್ ಫಿಕ್ಸಿಂಗ್ ಹಗರಣದಿಂದಾಗಿ ಎರಡು ವರ್ಷಗಳ ಕಾಲ ನಿಷೇಧಕ್ಕೊಳಗಾಗಿದ್ದ ಈ ತಂಡ, ನಿಷೇಧದಿಂದ ವಾಪಾಸ್ಸಾದ ಬಳಿಕ 2018 ರಲ್ಲಿ ಐಪಿಎಲ್ ಪ್ರಶಸ್ತಿಯನ್ನು ಎತ್ತಿ ಹಿಡಿದಿತ್ತು.
ಚೆನ್ನೈ ಈ ಮೊದಲು ಕೇದಾರ್ ಜಾಧವ್, ಮುರಳಿ ವಿಜಯ್, ಹರ್ಭಜನ್ ಸಿಂಗ್, ಪಿಯೂಷ್ ಚಾವ್ಲಾ, ಮೋನು ಸಿಂಗ್, ಶೇನ್ ವ್ಯಾಟ್ಸನ್ ಅವರನ್ನು ತಂಡದಿಂದ ಕೈ ಬಿಟ್ಟಿತ್ತು.
ಎಂ.ಎಸ್.ಧೋನಿ, ಸುರೇಶ್ ರೈನಾ, ಅಂಬಾಟಿ ರಾಯುಡು, ಕೆಎಂ ಆಸಿಫ್, ದೀಪಕ್ ಚಹರ್, ಡ್ವೇನ್ ಬ್ರಾವೋ, ಫಾಫ್ ಡು ಪ್ಲೆಸಿಸ್, ಇಮ್ರಾನ್ ತಾಹಿರ್, ಎನ್ ಜಗದೀಸನ್, ಕರಣ್ ಶರ್ಮಾ, ಲುಂಗಿ ಎನ್‌ಗಿಡಿ, ಮಿಚೆಲ್ ಸಾಂಟ್ನರ್, ರವೀಂದ್ರ ಜಡೇಜಾ, ರುತುರಾಜ್ ಶಾರ್ಕ್ವಾಕ್ ಕರ್ರನ್, ಜೋಶ್ ಹ್ಯಾಝಲ್‌ವುಡ್, ಆರ್ ಸಾಯಿ ಕಿಶೋರ್ ಅವರನ್ನು ತಂಡದಲ್ಲೇ ಉಳಿಸಿಕೊಂಡಿತ್ತು.
ನಿನ್ನೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಹೊಸದಾಗಿ 6 ಆಟಗಾರರನ್ನು ಚೆನ್ನೈ ಖರೀದಿ ಮಾಡಿದೆ. ಮೋಯಿನ್ ಅಲಿ, ಕನ್ನಡಿಗ ಕೆ. ಗೌತಮ್, ಚೇತೇಶ್ವರ ಪೂಜಾರ, ಎಂ. ಹರಿಕೃಷ್ಣ ರೆಡ್ಡಿ, ಕೆ. ಭಗತ್ ವರ್ಮ, ಸಿ. ಹರಿ ನಿಶಾಂತ್ ಅವರನ್ನು ಚೆನ್ನೈ ತನ್ನ ಬಳಗಕ್ಕೆ ಸೇರಿಸಿಕೊಂಡಿದೆ.
New entrants into the #SuperFam! #WhistlePodu #Yellove ?? pic.twitter.com/sSLqD0jESp
— Chennai Super Kings (@ChennaiIPL) February 18, 2021
Nandri from the #SuperAuction squad for all the support! But are we done yet? #DefinitelyNot!
Inimethane attam arambam.. See you soon #SummerOf2021! #WhistlePodu #Yellove ?? pic.twitter.com/kJc9Vqqr4r
— Chennai Super Kings (@ChennaiIPL) February 18, 2021
ಟೀಂನಲ್ಲಿರುವ ಆಟಗಾರರು..
ಎಂ.ಎಸ್.ಧೋನಿ, ಸುರೇಶ್ ರೈನಾ, ಅಂಬಾಟಿ ರಾಯುಡು, ಕೆಎಂ ಆಸಿಫ್, ದೀಪಕ್ ಚಹರ್, ಡ್ವೇನ್ ಬ್ರಾವೋ, ಫಾಫ್ ಡು ಪ್ಲೆಸಿಸ್, ಇಮ್ರಾನ್ ತಾಹಿರ್, ಎನ್ ಜಗದೀಸನ್, ಕರಣ್ ಶರ್ಮಾ, ಲುಂಗಿ ಎನ್‌ಗಿಡಿ, ಮಿಚೆಲ್ ಸಾಂಟ್ನರ್, ರವೀಂದ್ರ ಜಡೇಜಾ, ರುತುರಾಜ್ ಶಾರ್ಕ್ವಾಕ್ ಕರ್ರನ್, ಜೋಶ್ ಹ್ಯಾಝಲ್‌ವುಡ್, ಆರ್. ಸಾಯಿ ಕಿಶೋರ್ , ಮೋಯಿನ್ ಅಲಿ, ಕನ್ನಡಿಗ ಕೆ. ಗೌತಮ್, ಚೇತೇಶ್ವರ ಪೂಜಾರ, ಎಂ. ಹರಿಕೃಷ್ಣ ರೆಡ್ಡಿ, ಕೆ. ಭಗತ್ ವರ್ಮ, ಸಿ. ಹರಿ ನಿಶಾಂತ್.
ಇದನ್ನೂ ಓದಿ: K Gowtham: 9.25 ಕೋಟಿಗೆ ಚೆನ್ನೈ ಸೂಪರ್ ಕಿಂಗ್ಸ್ ಪಾಲಾದ ಕನ್ನಡಿಗ ಕೆ. ಗೌತಮ್..