IPL 2021 Auction DC Players List: ಡೆಲ್ಲಿ ತಂಡ ಸೇರಿದ ಹೊಸಬರು ಯಾರು? ತಂಡದ ಫುಲ್ ಸ್ಕ್ವಾಡ್ ಮಾಹಿತಿ ಇಲ್ಲಿದೆ
IPL DC Full Squad 2021: ಐಪಿಎಲ್ ಹರಾಜು 2021 ರಲ್ಲಿ ಮೂವರು ವಿದೇಶಿ ಮತ್ತು ಐವರು ಭಾರತೀಯ ಆಟಗಾರರನ್ನು ಖರೀದಿಸಿದೆ. ಇಲ್ಲಿಯವರೆಗೆ ವಿಶ್ವದ ಅತ್ಯಂತ ಜನಪ್ರಿಯ ಟಿ 20 ಪಂದ್ಯಾವಳಿಯಾದ ಐಪಿಎಲ್ನಲ್ಲಿ ಟ್ರೋಫಿಯನ್ನು ಎತ್ತಿಹಿಡಿಯದ ಕೆಲವೇ ತಂಡಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವೂ ಒಂದಾಗಿದೆ
ಐಪಿಎಲ್ ಹರಾಜು 2021 ರಲ್ಲಿ, ಹಿಂದಿನ ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ಎಂಟು ಆಟಗಾರರನ್ನು ಹರಾಜಿನಲ್ಲಿ ಕೊಂಡುಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು 5.25 ಕೋಟಿ ರೂ. ಹಣ ನೀಡಿ ಇಂಗ್ಲೆಂಡ್‌ನ ಟಾಮ್ ಕರಣ್ ಅವರನ್ನು ತಮ್ಮ ಬತ್ತಳಿಕೆಗೆ ಹಾಕಿಕೊಂಡಿತು. ಇದಲ್ಲದೆ ಸ್ಟೀವ್ ಸ್ಮಿತ್, ಉಮೇಶ್ ಯಾದವ್ ಮತ್ತು ಸ್ಯಾಮ್ ಬಿಲ್ಲಿಂಗ್ಸ್ ಅವರನ್ನೂ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಒಟ್ಟಾರೆ ಐಪಿಎಲ್ ಹರಾಜು 2021 ರಲ್ಲಿ ಮೂವರು ವಿದೇಶಿ ಮತ್ತು ಐವರು ಭಾರತೀಯ ಆಟಗಾರರನ್ನು ಖರೀದಿಸಿದೆ. ಇಲ್ಲಿಯವರೆಗೆ ವಿಶ್ವದ ಅತ್ಯಂತ ಜನಪ್ರಿಯ ಟಿ 20 ಪಂದ್ಯಾವಳಿಯಾದ ಐಪಿಎಲ್ನಲ್ಲಿ ಟ್ರೋಫಿಯನ್ನು ಎತ್ತಿಹಿಡಿಯದ ಕೆಲವೇ ತಂಡಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವೂ ಒಂದಾಗಿದೆ.
ಕಳೆದ ವರ್ಷ ಫೈನಲ್ ತಲುಪುವಲ್ಲಿ ತಂಡ ಯಶಸ್ವಿಯಾಗಿತ್ತು. ಆದರೆ ಅಂತಿಮ ಹೋರಾಟದಲ್ಲಿ ರೋಹಿತ್ ಶರ್ಮಾ ಅವರ ಮುಂಬೈ ಇಂಡಿಯನ್ಸ್, ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸುವ ಮೂಲಕ ವಿಜಯಶಾಲಿಯಾಯಿತು. ಇಡೀ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ದೆಹಲಿ ತಂಡ ಅಂತಿಮ ಹೋರಾಟದಲ್ಲಿ ಪ್ರಶಸ್ತಿಯನ್ನು ಕಳೆದುಕೊಂಡಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡ ಬೌಲಿಂಗ್ ಮತ್ತು ಬ್ಯಾಟಿಂಗ್ನಲ್ಲಿ ಸಮತೋಲನದ ಪ್ರದರ್ಶನ ತೋರಿತ್ತು. ಈ ಹರಾಜಿನಲ್ಲಿ, ತಂಡಕ್ಕೆ ಅವಶ್ಯಕವಾಗಿರುವ ಆಟಗಾರರನ್ನು ಆಯ್ಕೆ ಮಾಡುವ ಮೂಲಕ ತಂಡ, ತನ್ನ ಸಣ್ಣ ನ್ಯೂನತೆಗಳನ್ನು ನಿವಾರಿಸಲು ಪ್ರಯತ್ನಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಂಡಿದ್ದ ಮತ್ತು ಹರಾಜಿನಲ್ಲಿ ಖರೀದಿಸಿದ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ.
ದೆಹಲಿ ಕ್ಯಾಪಿಟಲ್ಸ್ ಐಪಿಎಲ್ ಹರಾಜು 2021 ಉಳಿಸಿಕೊಂಡಿದ್ದ ಆಟಗಾರರು: ಶ್ರೇಯಸ್ ಅಯ್ಯರ್, ಕಗಿಸೊ ರಬಾಡಾ, ಮಾರ್ಕಸ್ ಸ್ಟೊಯಿನಿಸ್, ಇಶಾಂತ್ ಶರ್ಮಾ, ಅಜಿಂಕ್ಯ ರಹಾನೆ, ಕ್ರಿಸ್ ವೋಕ್ಸ್, ರವಿಚಂದ್ರನ್ ಅಶ್ವಿನ್, ಶಿಖರ್ ಧವನ್, ಶಿಮ್ರಾನ್ ಹೆಟ್ಮಿಯರ್, ಪ್ರವೀಣ್ ದುಬೆ, ಪ್ರತಾವಿ ಶಾ, ಲಲಿತ್ ಯಾದವ್, ಎನ್ರಿಕ್ ಖಾರ್ಕೀಸ್, ಅವರ್ಖೆಲ್ , ಅಮಿತ್ ಮಿಶ್ರಾ.
ಹರಾಜಿನಲ್ಲಿ ಖರೀದಿಸಿದ ಆಟಗಾರರು ಸ್ಟೀವ್ ಸ್ಮಿತ್ – 2.20 ಕೋಟಿ ರೂ ಉಮೇಶ್ ಯಾದವ್ – 1 ಕೋಟಿ ರೂ ರಿಪಲ್ ಪಟೇಲ್ – 20 ಲಕ್ಷ ರೂ ವಿಷ್ಣು ವಿನೋದ್ – 20 ಲಕ್ಷ ರೂ ಲುಕ್ಮನ್ ಮೆರಿವಾಲಾ – 20 ಲಕ್ಷ ರೂ ಟಾಮ್ ಕರಣ್ – 5.25 ಕೋಟಿ ರೂ ಎಂ.ಸಿದ್ದಾರ್ಥ್ – 20 ಲಕ್ಷ ರೂ ಸ್ಯಾಮ್ ಬಿಲ್ಲಿಂಗ್ಸ್ – 2 ಕೋಟಿ ರೂ
6 ಆಟಗಾರರನ್ನು ಕೈಬಿಟ್ಟರೆ, 19 ಜನರನ್ನು ಉಳಿಸಿಕೊಂಡಿತ್ತು.. ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಹಿಂದೆ ಐಪಿಎಲ್ 2021 ಹರಾಜಿಗೂ ಮೊದಲು, ತನ್ನಲ್ಲೇ ಉಳಿಸಿಕೊಳ್ಳುವ ಆಟಗಾರರು ಮತ್ತು ಕೈಬಿಡುವ ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಿತ್ತು. ತಂಡವು 6 ಆಟಗಾರರನ್ನು ಕೈಬಿಟ್ಟರೆ, 19 ಜನರನ್ನು ತನ್ನಲ್ಲೇ ಉಳಿಸಿಕೊಂಡಿತ್ತು. ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೋಹಿತ್ ಶರ್ಮಾ, ತುಷಾರ್ ದೇಶಪಾಂಡೆ, ಕೀಮೋ ಪಾಲ್, ಸಂದೀಪ್ ಲಮಿಚೇನ್, ಅಲೆಕ್ಸ್ ಕ್ಯಾರಿ ಮತ್ತು ಜೇಸನ್ ರಾಯ್ ಅವರನ್ನು ತಂಡದಿಂದ ಕೈಬಿಟ್ಟಿತ್ತು.
ಜೊತೆಗೆ ತಂಡದಲ್ಲಿದ್ದ ಡೇನಿಯಲ್ ಸೈಮ್ಸ್ ಮತ್ತು ಹರ್ಷಲ್ ಪಟೇಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹರಾಜಿಗೂ ಮುನ್ನವೇ ಕೊಂಡುಕೊಂಡಿತ್ತು. ಐಪಿಎಲ್ 2020 ರಲ್ಲಿ ಮೋಹಿತ್ ಶರ್ಮಾ ಮತ್ತು ದೇಶಪಾಂಡೆ ದೆಹಲಿ ಪರ ಆಡಿದರೂ ಅವರು ಯಶಸ್ವಿಯಾಗಲಿಲ್ಲ. ಐಪಿಎಲ್ 2021 ರ ಆವೃತ್ತಿಯಲ್ಲೂ ಸಹ ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್ ಅವರೇ ಆಗಿರುತ್ತಾರೆ. ಕೋಚಿಂಗ್ ಕಾರ್ಯವನ್ನ ರಿಕಿ ಪಾಂಟಿಂಗ್ ಅವರೇ ಮಾಡಲಿದ್ದಾರೆ. ಈಗಾಗಲೇ ಬೌಲಿಂಗ್‌ನಲ್ಲಿ ಸಾಕಷ್ಟು ಆಯ್ಕೆಗಳನ್ನು ಹೊಂದಿರುವುದರಿಂದ ತಂಡವು ಹೆಚ್ಚಿನ ಬೌಲರ್‌ಗಳನ್ನು ತಂಡದಿಂದ ಹೊರಗಿಟ್ಟಿದೆ.
??????: ??????? 100% ????????#WeRoarTogether ?#YehHaiNayiDilli #IPLAuction #IPL2021 pic.twitter.com/Jx6ECwanye
— Delhi Capitals (@DelhiCapitals) February 18, 2021
Ladies & Gentlemen, our newest additions have arrived ?✅
Time for you to check them out ?#IPLAuction2021 #YehHaiNayiDilli pic.twitter.com/eU8ioDPw8H
— Delhi Capitals (@DelhiCapitals) February 18, 2021