AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021 Auction CSK Players List: ವಿಸಿಲ್​ ಹೊಡೆಯೋಕೆ ಸಿಎಸ್​ಕೆ ಸೇರಿದ 6 ಆಟಗಾರರು.. ಇಲ್ಲಿದೆ ಚೆನ್ನೈ ಟೀಂ ಫುಲ್​ ಲಿಸ್ಟ್​

IPL CSK Full Squad 2021: ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್‌ನ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾಗಿದೆ. ಮೂರು ಬಾರಿ ಪ್ರಶಸ್ತಿ ಗೆದ್ದಿರುವ ಹೆಗ್ಗಳಿಕೆ ಚೆನ್ನೈಗೆ ಇದೆ.

IPL 2021 Auction CSK Players List: ವಿಸಿಲ್​ ಹೊಡೆಯೋಕೆ ಸಿಎಸ್​ಕೆ ಸೇರಿದ 6 ಆಟಗಾರರು.. ಇಲ್ಲಿದೆ ಚೆನ್ನೈ ಟೀಂ ಫುಲ್​ ಲಿಸ್ಟ್​
ಎಂ.ಎಸ್. ಧೋನಿ
ರಾಜೇಶ್ ದುಗ್ಗುಮನೆ
| Edited By: ಸಾಧು ಶ್ರೀನಾಥ್​|

Updated on: Feb 19, 2021 | 6:00 PM

Share

ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings – CSK) ಮೂರು ಬಾರಿ (2010, 2011 ಮತ್ತು 2018) ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಆದರೆ, ದುಬೈನಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಹೀನಾಯವಾಗಿ ಸೋತಿತ್ತು! ಈ ಸೋಲಿನಿಂದ ಎಚ್ಚೆತ್ತಿರುವ ಸಿಎಸ್​ಕೆ ತಂಡದ ಕೆಲ ಆಟಗಾರರನ್ನು ರಿಲೀಸ್​ ಮಾಡಿತ್ತು. ಅಷ್ಟೇ ಅಲ್ಲ, ನಿನ್ನೆ ನಡೆದ ಹರಾಜಿನಲ್ಲಿ 6 ಆಟಗಾರರನ್ನು ಖರೀದಿಸಿದೆ. ಹಾಗಾದರೆ, ಚೆನ್ನೈ ತಂಡ ಈಗ ಹೇಗಿದೆ ಎನ್ನುವುದಕ್ಕೆ ಇಲ್ಲಿದೆ ವಿವರ. ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್‌ನ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾಗಿದೆ. ಮೂರು ಬಾರಿ ಪ್ರಶಸ್ತಿ ಗೆದ್ದಿರುವ ಹೆಗ್ಗಳಿಕೆ ಚೆನ್ನೈಗೆ ಇದೆ. ಸ್ಪಾಟ್ ಫಿಕ್ಸಿಂಗ್ ಹಗರಣದಿಂದಾಗಿ ಎರಡು ವರ್ಷಗಳ ಕಾಲ ನಿಷೇಧಕ್ಕೊಳಗಾಗಿದ್ದ ಈ ತಂಡ, ನಿಷೇಧದಿಂದ ವಾಪಾಸ್ಸಾದ ಬಳಿಕ 2018 ರಲ್ಲಿ ಐಪಿಎಲ್ ಪ್ರಶಸ್ತಿಯನ್ನು ಎತ್ತಿ ಹಿಡಿದಿತ್ತು.

ಚೆನ್ನೈ ಈ ಮೊದಲು ಕೇದಾರ್ ಜಾಧವ್, ಮುರಳಿ ವಿಜಯ್, ಹರ್ಭಜನ್ ಸಿಂಗ್, ಪಿಯೂಷ್ ಚಾವ್ಲಾ, ಮೋನು ಸಿಂಗ್, ಶೇನ್ ವ್ಯಾಟ್ಸನ್ ಅವರನ್ನು ತಂಡದಿಂದ ಕೈ ಬಿಟ್ಟಿತ್ತು.

ಎಂ.ಎಸ್.ಧೋನಿ, ಸುರೇಶ್ ರೈನಾ, ಅಂಬಾಟಿ ರಾಯುಡು, ಕೆಎಂ ಆಸಿಫ್, ದೀಪಕ್ ಚಹರ್, ಡ್ವೇನ್ ಬ್ರಾವೋ, ಫಾಫ್ ಡು ಪ್ಲೆಸಿಸ್, ಇಮ್ರಾನ್ ತಾಹಿರ್, ಎನ್ ಜಗದೀಸನ್, ಕರಣ್ ಶರ್ಮಾ, ಲುಂಗಿ ಎನ್‌ಗಿಡಿ, ಮಿಚೆಲ್ ಸಾಂಟ್ನರ್, ರವೀಂದ್ರ ಜಡೇಜಾ, ರುತುರಾಜ್ ಶಾರ್ಕ್ವಾಕ್ ಕರ್ರನ್, ಜೋಶ್ ಹ್ಯಾಝಲ್‌ವುಡ್, ಆರ್ ಸಾಯಿ ಕಿಶೋರ್ ಅವರನ್ನು ತಂಡದಲ್ಲೇ ಉಳಿಸಿಕೊಂಡಿತ್ತು.

ನಿನ್ನೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಹೊಸದಾಗಿ 6 ಆಟಗಾರರನ್ನು ಚೆನ್ನೈ ಖರೀದಿ ಮಾಡಿದೆ. ಮೋಯಿನ್​ ಅಲಿ, ಕನ್ನಡಿಗ ಕೆ. ಗೌತಮ್​, ಚೇತೇಶ್ವರ ಪೂಜಾರ, ಎಂ. ಹರಿಕೃಷ್ಣ ರೆಡ್ಡಿ, ಕೆ. ಭಗತ್​ ವರ್ಮ, ಸಿ. ಹರಿ ನಿಶಾಂತ್​ ಅವರನ್ನು ಚೆನ್ನೈ ತನ್ನ ಬಳಗಕ್ಕೆ ಸೇರಿಸಿಕೊಂಡಿದೆ.

ಟೀಂನಲ್ಲಿರುವ ಆಟಗಾರರು.. ಎಂ.ಎಸ್.ಧೋನಿ, ಸುರೇಶ್ ರೈನಾ, ಅಂಬಾಟಿ ರಾಯುಡು, ಕೆಎಂ ಆಸಿಫ್, ದೀಪಕ್ ಚಹರ್, ಡ್ವೇನ್ ಬ್ರಾವೋ, ಫಾಫ್ ಡು ಪ್ಲೆಸಿಸ್, ಇಮ್ರಾನ್ ತಾಹಿರ್, ಎನ್ ಜಗದೀಸನ್, ಕರಣ್ ಶರ್ಮಾ, ಲುಂಗಿ ಎನ್‌ಗಿಡಿ, ಮಿಚೆಲ್ ಸಾಂಟ್ನರ್, ರವೀಂದ್ರ ಜಡೇಜಾ, ರುತುರಾಜ್ ಶಾರ್ಕ್ವಾಕ್ ಕರ್ರನ್, ಜೋಶ್ ಹ್ಯಾಝಲ್‌ವುಡ್, ಆರ್. ಸಾಯಿ ಕಿಶೋರ್ , ಮೋಯಿನ್​ ಅಲಿ, ಕನ್ನಡಿಗ ಕೆ. ಗೌತಮ್​, ಚೇತೇಶ್ವರ ಪೂಜಾರ, ಎಂ. ಹರಿಕೃಷ್ಣ ರೆಡ್ಡಿ, ಕೆ. ಭಗತ್​ ವರ್ಮ, ಸಿ. ಹರಿ ನಿಶಾಂತ್​.

ಇದನ್ನೂ ಓದಿ: K Gowtham: 9.25 ಕೋಟಿಗೆ ಚೆನ್ನೈ ಸೂಪರ್​ ಕಿಂಗ್ಸ್​ ಪಾಲಾದ ಕನ್ನಡಿಗ ಕೆ. ಗೌತಮ್​..

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ