ಕ್ರಿಕೆಟ್ ವಿಶೇಷ: ದೈತ್ಯ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದಲ್ಲಿ ಯಾರಿದು 150 ಕೆ.ಜಿ. ತೂಕದ ದೈತ್ಯ ದೇಹಿ ಆಟಗಾರ..!?
rahkeem cornwall:ಈ ಆಟಗಾರ ಬರೋಬ್ಬರಿ 150 ಕೆ. ಜಿ ತೂಕ ಇದ್ದು, 6 ಅಡಿ 6 ಇಂಚು ಎತ್ತರ ಹೊಂದಿದ್ದಾರೆ. ಧೈತ್ಯ ದೇಹ ಹೊಂದಿರುವ ಈ ಆಟಗಾರ ಇತ್ತೀಚಿನ ದಿನಗಳಲ್ಲಿ ತನ್ನ ಭರ್ಜರಿ ಪ್ರದರ್ಶನದಿಂದಾಗಿ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗುರಿಯಾಗಿದ್ದಾರೆ.
ಕ್ರಿಕೆಟ್ ಎಂಬ ಚಿತ್ತಾಕರ್ಷಕ ಆಟ ವೆಸ್ಟ್ ಇಂಡೀಸ್ ದ್ವೀಪಗಳಲ್ಲಿ ಕಾಲಿಟ್ಟ ಆರಂಭದ ದಿನಗಳಿಂದಲೂ ಅದು ದೈತ್ಯ ಪ್ರತಿಭೆಗಳ ಮೂಲಕ ದೈತ್ಯ ಕ್ರಿಕೆಟ್ ರಾಷ್ಟ್ರವಾಗಿ ವಿಜೃಂಭಿಸಿದೆ. ಕ್ರಿಕೆಟ್ ಆರಂಭದ ದಿನಗಳಲ್ಲಿ, ಕ್ರಿಕೆಟ್ ಅಂದರೆ ಅದು ವೆಸ್ಟ್ ಇಂಡಿಸ್ ಎಂಬ ಮಾತು ಅಂದಿನ ಕ್ರಿಕೆಟ್ ಅಭಿಮಾನಿಗಳ ಮನದ ಮಾತಾಗಿತ್ತು. ಕ್ರಿಕೆಟ್‌ನಲ್ಲಿ ನಾವು ಕಾಣುವ ದೈತ್ಯ ದಾಂಡಿಗರಾಗಲಿ, ಅಜಾನುಬಾಹು ಆಟಗಾರರಾಗಲಿ, ಅವರೆಲ್ಲರೂ ಭಾಗಶಃ ವೆಸ್ಟ್ ಇಂಡೀಸ್ ತಂಡದವರೆ ಆಗಿರುತ್ತಾರೆ. ಇದಕ್ಕೆ ತಾಜಾ ಉದಾಹರಣೆಯನ್ನು ಕ್ರಿಸ್ ಗೇಲ್ರಲ್ಲಿ ಕಾಣಬಹುದು. ಅದಕ್ಕೂ ಮುಂಚಿನ ಆ್ಯಂಡಿ ರಾಬರ್ಟ್ಸ್, ಮಾಲ್ಕಂ ಮಾರ್ಷಲ್, ಕರ್ಟ್ಲಿ ಆ್ಯಂಬ್ರೋಸ್, ಮೈಕೆಲ್ ಹೋಲ್ಡಿಂಗ್, ಕರ್ಟ್ನಿ ವಾಲ್ಷ್, ಜೋಯಲ್ ಗಾರ್ನರ್, ಸರ್ ಐಸಾಕ್ ವಿವಿಯನ್ ರಿಚರ್ಡ್ಸ್, ಮತ್ತೊಬ್ಬ ರಿಚರ್ಡ್ಸ್, ಮಗದೊಬ್ಬ ಕ್ಲೈವ್ ಲಾಯ್ಡ್ ಹೀಗೆ ದೈತ್ಯ ಪ್ರತಿಭೆಗಳ ಪಟ್ಟಿ ಸಾಗುತ್ತದೆ. ಆದರೆ ಅವರೆಲ್ಲಾ ಈಗ ಯಾಕಪ್ಪಾ ಜ್ಞಾಪಕಕ್ಕೆ ಬಂದ್ರು ಅಂದ್ರೆ.. ಅವರನ್ನೆಲ್ಲಾ ಮೀರಿಸಿದ ಮತ್ತೂ ಒಬ್ಬ ದೈತ್ಯ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದಲ್ಲಿ ಕಾಣಿಸಿಕೊಂಡಿದ್ದಾನೆ. ಆತ ನಿಜಕ್ಕೂ ದೈತ್ಯನೇ ಸರಿ. ಆತನ ಬಗ್ಗೆ ದೈತ್ಯ ವಿವರ ಇಲ್ಲಿದೆ, ನೋಡಿ..
150 ಕೆ. ಜಿ ತೂಕ ಇದ್ದು, 6 ಅಡಿ 6 ಇಂಚು ಎತ್ತರ ಹೊಂದಿದ್ದಾರೆ.. ನಾವೀಗ ಹೇಳಹೊರಟಿರುವ ಆಟಗಾರ ಮೇಲಿನ ಅಷ್ಟೂ ಆಟಗಾರರಗಿಂತ ವಿಭಿನ್ನ. ಈತನ ಹೆಸರು ರಹಕೀಮ್ ಕಾರ್ನ್‌ವಾಲ್! ಈ ಆಟಗಾರ ಬರೋಬ್ಬರಿ 150 ಕೆ. ಜಿ. ತೂಕ ಇದ್ದು, 6 ಅಡಿ 6 ಇಂಚು ಎತ್ತರ ಇದ್ದಾವೆ. ದೈತ್ಯ ದೇಹ ಹೊಂದಿರುವ ಈ ಆಟಗಾರ ಇತ್ತೀಚಿನ ದಿನಗಳಲ್ಲಿ ತನ್ನ ಭರ್ಜರಿ ಪ್ರದರ್ಶನದಿಂದಾಗಿ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗುರಿಯಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಒಂಬತ್ತು ವಿಕೆಟ್ ಗಳಿಸಿದ ಬೆನ್ನಲ್ಲೇ ವೆಸ್ಟ್ ಇಂಡಿಸ್ನ ಆಫ್ ಸ್ಪಿನ್ನರ್ ರಹಕೀಮ್ ಕಾರ್ನ್‌ವಾಲ್ ಮೊದಲ ಬಾರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರ 50ರಲ್ಲಿ ಸ್ಥಾನಗಳಲ್ಲಿದ್ದಾನೆ.
ಇಂದು ಬಿಡುಗಡೆಯಾದ ಇತ್ತೀಚಿನ ಶ್ರೇಯಾಂಕದಲ್ಲಿ, 28 ವರ್ಷ ವಯಸ್ಸಿನ ರಹಕೀಮ್ ಕಾರ್ನ್‌ವಾಲ್ 16 ಸ್ಥಾನಗಳನ್ನು ಏರಿ 49 ನೇ ಸ್ಥಾನಕ್ಕೆ ತಲುಪಿದ್ದಾರೆ! ವೇಗದ ಬೌಲರ್‌ಗಳಾದ ಜೇಸನ್ ಹೋಲ್ಡರ್ (11 ನೇ ಸ್ಥಾನ), ಕೆಮರ್ ರೋಚ್ (15 ನೇ ಸ್ಥಾನ), ಶಾನನ್ ಗೇಬ್ರಿಯಲ್ (19 ನೇ ಸ್ಥಾನ) ಮತ್ತು ಆಫ್-ಸ್ಪಿನ್ನರ್ ರೋಸ್ಟನ್ ಚೇಸ್ (37 ನೇ ಸ್ಥಾನ) ಅಗ್ರ 50ರಲ್ಲಿ ಸ್ಥಾನ ಪಡೆದ ವೆಸ್ಟ್ ಇಂಡಿಸ್ ತಂಡದ ಬೌಲರ್ಗಳಾಗಿದ್ದಾರೆ.
26 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ.. ಕಾರ್ನ್‌ವಾಲ್ ಇದುವರೆಗೆ ಐದು ಟೆಸ್ಟ್‌ಗಳನ್ನು ಮಾತ್ರ ಆಡಿದ್ದು, ಎರಡು ಟೆಸ್ಟ್ ಸರಣಿಯಲ್ಲಿ ಕೆರಿಬಿಯನ್ ತಂಡದ ಪ್ರಮುಖ ಬೌಲರ್ ಆಗಿ ಮಿಂಚಿದ್ದಾರೆ. ಅಲ್ಲದೆ 26 ವಿಕೆಟ್‌ಗಳನ್ನೂ ಕಬಳಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧ ನಡೆದ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಅವರು ತೆಗೆದ ನಾಲ್ಕು ವಿಕೆಟ್‌ಗಳು ಅಂತಿಮ ದಿನದಂದು ತಂಡಕ್ಕೆ 17 ರನ್‌ಗಳ ರೋಚಕ ಜಯವನ್ನು ತಂದುಕೊಟ್ಟಿತು.
28 ವರ್ಷದ ಆಟಗಾರ ರಹಕೀಮ್ ಕಾರ್ನ್‌ವಾಲ್, ಆ್ಯಂಟಿಗುವಾದ ಕಾರ್ನ್‌ವಾಲ್ ನಿವಾಸಿ. ರಹಕೀಮ್ ಕಾರ್ನ್‌ವಾಲ್ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದರ ಜೊತೆಗೆ ಆಫ್ ಸ್ಪಿನ್ ಕೂಡ ಮಾಡುತ್ತಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರು ಈವರೆಗೆ 56 ಪಂದ್ಯಗಳಲ್ಲಿ 263 ವಿಕೆಟ್‌ಗಳನ್ನು ಪಡೆದಿದ್ದಾರೆ.
ಬ್ಯಾಟಿಂಗ್ನಲ್ಲಿ ಒಂದು ಶತಕ ಮತ್ತು 13 ಅರ್ಧ ಶತಕಗಳ ಜೊತೆಗೆ 2,224 ರನ್ ಗಳಿಸಿದ್ದಾರೆ. ದೈತ್ಯ ದೇಹ ಹೊಂದಿರುವುದರಿಂದ ಮೈದಾನದಲ್ಲಿ ಹೆಚ್ಚು ಓಡಲು ಇಚ್ಚಿಸದ ಈ ಆಟಗಾರ, ಬ್ಯಾಟಿಂಗ್ ವೇಳೆ ಸಿಂಗಲ್ ತೆಗೆದುಕೊಂಡು ಓಡುವುದಕ್ಕಿಂತ ಬೌಂಡರಿ, ಸಿಕ್ಸರ್‌ಗಳಲ್ಲೇ ಹೆಚ್ಚಾಗಿ ರನ್ ಗಳಿಸಲು ಬಯಸುತ್ತಾರೆ. ಈ ಅಜಾನುಬಾಹು ಆಟಗಾರ 2017 ರಲ್ಲಿ ಭಾರತ ವಿರುದ್ಧದ ಪ್ರವಾಸ ಪಂದ್ಯವೊಂದರಲ್ಲಿ ಕಣಕ್ಕಿಳಿದು, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಅವರ ವಿಕೆಟ್ ಸೇರಿದಂತೆ ಐದು ವಿಕೆಟ್ ಪಡೆದಾಗ ಬೆಳಕಿಗೆ ಬಂದರು.
Published On - 4:02 pm, Fri, 19 February 21