IPL Auction 2021: ಕನ್ನಡಿಗ ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡಕ್ಕೆ ಹೊಸ ಹೆಸರು, ಹೊಸ ಲೊಗೊ ಮತ್ತು ಕೆಲ ಹೊಸ ಆಟಗಾರರು!

ಟಿ20 ಕ್ರಿಕೆಟ್​ನಲ್ಲಿ ಸದ್ಯಕ್ಕೆ ಹೆಚ್ಚು ಪ್ರಚಲಿತದಲ್ಲಿರುವ ಹೆಸರೆಂದರೆ ಇಂಗ್ಲೆಂಡಿನ ಡೇವಿಡ್ ಮಲನ್. ಈ ಆವೃತ್ತಿಯಲ್ಲಿ ಅವರು ವಿಶ್ವದ ನಂಬರ್ ವನ್ ಬ್ಯಾಟ್ಸ್​ಮನ್. ಪಂಜಾಬ್ ಕಿಂಗ್ಸ್ ಮಲನ್​ರನ್ನು ರೂ 1.5 ಕೋಟಿಗೆ ಖರೀದಿಸಿತು.

IPL Auction 2021: ಕನ್ನಡಿಗ ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡಕ್ಕೆ ಹೊಸ ಹೆಸರು, ಹೊಸ ಲೊಗೊ ಮತ್ತು ಕೆಲ ಹೊಸ ಆಟಗಾರರು!
ಪಂಜಾಬ್ ಕಿಂಗ್ಸ್ ಹೊಸ ಲೊಗೊ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Feb 19, 2021 | 11:36 PM

ಚೆನೈಯಲ್ಲಿ ನಿನ್ನೆ (ಫೆ.18) ನಡೆದ ಇಂಡಿಯನ್ ಪ್ರಿಮೀಯರ್​ ಲೀಗ್ 2021 ಮಿನಿ-ಲಿಲಾವಿನಲ್ಲಿ ಅತಿ ದೊಡ್ಡ ಹಣದ ಥೈಲಿ, ಹೊಸ ಹೆಸರು ಮತ್ತು ಹೊಸ ಲೊಗೊವಿನ ಚಮಕ್​ನೊಂದಿಗೆ ಹರಾಜಿನ ಆಖಾಡವನ್ನು ಪ್ರವೇಶಿಸಿದ್ದ ಫ್ರಾಂಚೈಸಿಯೆಂದರೆ, ಕಿಂಗ್ಸ್ ಇಲೆವನ್ ಪಂಜಾಬ್. ಈಗ ಅದು ಕಿಂಗ್ಸ್ ಇಲೆವೆನ್ ಪಂಜಾಬ್ ಅಲ್ಲ, ಅದರ ಹೆಸರು ಪಂಜಾಬ್ ಕಿಂಗ್ಸ್ ಎಂದಾಗಿದೆ. ಅವರ ಥೈಲಿಯಲ್ಲಿದ್ದಿದ್ದು ರೂ. 53.20 ಕೋಟಿ ಮತ್ತು ಟೀಮಿನಲ್ಲಿ ಖಾಲಿಯಿದ್ದ ಸ್ಲಾಟ್​ಗಳ ಸಂಖ್ಯೆ 9. ಹಾಗಾಗಿ ತನಗೆ ಬೇಕಿರುವ ಆಟಗಾರರ ಮೇಲೆ ಅದು ಮುಕ್ತವಾಗಿ ಹಣ ಹೂಡಲು ತಯಾರಾಗಿತ್ತು. ಹಾಗಾಗೇ, ಪ್ರೀಟಿ ಜಿಂಟಾ ಮತ್ತು ಇತರ ಸಹ ಮಾಲೀಕರು ಆಸ್ಟ್ರೇಲಿಯಾದ ವೇಗದ ಬೌಲರ್​ಗಳಾದ ಜಾಯ್ ರಿಚರ್ಡ್ಸನ್​ಗೆ ರೂ. 14 ಕೋಟಿ, ರೈಲೀ ಮೆರಿಡಿತ್​ಗೆ 8 ಕೋಟಿ ಮತ್ತು ಅದೇ ದೇಶದ ಆಲ್​​ರೌಂಡರ್ ಮೊಯ್ಸಿಸ್ ಹಾನ್ರೀಕ್ಸ್​ಗೆ ರೂ 4.2 ಕೋಟಿ ರೂ. ನೀಡಿ ಖರೀದಿಸಿದರು

ಅದಲ್ಲದೆ, ಅವರು ಇದುವರೆಗೆ ಒಂದೂ ಅಂತರರಾಷ್ಟ್ರೀಯ ಪಂದ್ಯವನ್ನಾಡದ ಅದರೆ ಇತ್ತೀಚಿಗೆ ಕೊನೆಗೊಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅಕ್ರಮಣಕಾರಿ ಬ್ಯಾಟಿಂಗ್ ಮೂಲಕ ಕ್ರೀಡೆಗೆ ಸಂಬಂಧಪಟ್ಟವರೆಲ್ಲರ ಗಮನ ಸೆಳೆದ ಶಾರುಖ್ ಖಾನ್ ಅವರನ್ನು ಭಾರಿಯೆನಿಸುವ ರೂ 5.25 ಕೋಟಿ ನೀಡಿ ಖರೀಸಿದರು. ನಿಮಗೆ ಗೊತ್ತಿರಬಹುದು ಖಾನ್ ಮೂಲ ಬೆಲ ಕೇವಲ ರೂ. 20ಲಕ್ಷ ಆಗಿತ್ತು.

ಟಿ20 ಕ್ರಿಕೆಟ್​ನಲ್ಲಿ ಸದ್ಯಕ್ಕೆ ಹೆಚ್ಚು ಪ್ರಚಲಿತದಲ್ಲಿರುವ ಹೆಸರೆಂದರೆ ಇಂಗ್ಲೆಂಡಿನ ಡೇವಿಡ್ ಮಲನ್. ಈ ಆವೃತ್ತಿಯಲ್ಲಿ ಅವರು ವಿಶ್ವದ ನಂಬರ್ ವನ್ ಬ್ಯಾಟ್ಸ್​ಮನ್. ಪಂಜಾಬ್ ಕಿಂಗ್ಸ್ ಮಲನ್​ರನ್ನು ರೂ 1.5 ಕೋಟಿಗೆ ಖರೀದಿಸಿತು.

Jhye Richardson

ಜಾಯ್ ರಿಚರ್ಡ್ಸನ್

ಪಂಜಾಬ್ ಕಿಂಗ್ಸ್ ಉಳಿಸಿಕೊಂಡಿದ್ದ ಆಟಗಾರರ ಬಗ್ಗೆ ಕಿರು ವಿವರ ಇಲ್ಲಿದೆ:

ಕೆ ಎಲ್ ರಾಹುಲ್: ಟೀಮಿನ ನಾಯಕ ಮತ್ತು ಆರಂಭಿಕ ಬ್ಯಾಟ್ಸ್​ಮನ್. ಕಳೆದ ಐಪಿಎಲ್ ಸೀಸನ್​ನಲ್ಲಿ ಅತಹೆಚ್ಚು ರನ್ ಬಾರಿಸಿದ ಖ್ಯಾತಿ. 2013ರಿಂದ ಐಪಿಎಲ್​ ಆಡುತ್ತಿರುವ ರಾಹುಲ್ ಇದವೆರೆಗೆ ಆಡಿರುವ 81 ಪಂದ್ಯಗಳಿಂದ 44.86 ಸರಾಸರಿಯೊಂದಿಗೆ 2467 ರನ್ ಗಳಿಸಿದ್ದು ಇದರಲ್ಲಿ 2 ಶತಕ ಮತ್ತು 21 ಅರ್ಧ ಶತಕಗಳಿವೆ, ಅವರ ಸ್ಟ್ರೈಕ್ ರೇಟ್ 135.81. ವಿಕೆಟ್​ಕೀಪರ್​ನ ಜವಾಬ್ದಾರಿಯನ್ನೂ ನಿಭಾಯಿಸುವ ಅವರು 39 ಕ್ಯಾಚ್ ಹಿಡಿದಿದ್ದಾರೆ ಮತ್ತು 5 ಸ್ಟಂಪಿಂಗ್​ಗಳನ್ನು ಮಾಡಿದ್ದಾರೆ. 29 ರ ಪ್ರಾಯದ ರಾಹುಲ್ ಸಂಭಾವನೆ ರೂ. 11 ಕೋಟಿ.

ಮಾಯಾಂಕ್ ಅಗರವಾಲ್: 30 ವರ್ಷ ವಯಸ್ಸಿನ ಮಾಯಾಂಕ್ ಅಗರವಾಲ್ ಅವರ ಸಂಭಾವನೆ ರೂ 1 ಕೋಟಿ. 2011 ರಲ್ಲಿ ಐಪಿಎಲ್​ಗೆ ಪದಾರ್ಪಣೆ ಮಾಡಿದ ಮಾಯಾಂಕ್ ಇದುವರೆಗೆ 88 ಪಂದ್ಯಗಳನ್ನಾಡಿ 21.12 ರ ಸರಾಸರಿಯಲ್ಲಿ 1,690 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 7 ಅರ್ಧ ಶತಕಗಳಿವೆ.

ಕ್ರಿಸ್ ಗೇಲ್: 42 ವರ್ಷ ವಯಸ್ಸಿನ ಗೇಲ್ 2009ರಿಂದ ಐಪಿಎಲ್​ ಆಡುತ್ತಿದ್ದಾರೆ. ಈವರೆಗೆ ಅವರು 132 ಪಂದ್ಯಗಳನ್ನಾಡಿದ್ದು 41.13 ಸರಾಸರಿಯೊಂದಿಗೆ 4,772 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ ಅಜೇಯ 175 ಆಗಿದ್ದು 6 ಶತಕ ಮತ್ತು 31 ಅರ್ಧ ಶತಕಗಳನ್ನು ಐಪಿಎಲ್​ನಲ್ಲಿ ಬಾರಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 150.11

ಮನ್​ದೀಪ್ ಸಿಂಗ್: 30ಪ್ರಾಯದ ಮನ್​ದೀಪ್ ಅವರ ಸಂಭಾವನೆ ರೂ. 1.40 ಕೋಟಿ. 2010 ರಿಂದ ಆಡುತ್ತಿದ್ದು, 104 ಪಂದ್ಯಗಳಿಂದ 22.12 ಸರಾಸರಿಯಲ್ಲಿ 1,658 ರನ್ ಗಳಿಸಿದ್ದಾರೆ, ಇದರಲ್ಲಿ 6 ಅರ್ಧ ಶತಕಗಳಿವೆ.

ಫ್ರಭ್​ಸಿಮ್ರನ್ ಸಿಂಗ್: 21 ವರ್ಷ ವಯಸ್ಸಿನ ವಿಕೆಟ್​ಕೀಪರ್​/ಬ್ಯಾಟ್ಸ್​ಮನ್ ಸಿಮ್ರನ್ ಸಿಂಗ್ ಸಂಭಾವನೆ ರೂ. 55 ಲಕ್ಷ, ಇದುವರೆಗೆ ಕೇವಲ 3 ಪಂದ್ಯಗಳನ್ನಾಡಿದ್ದಾರೆ.

ನಿಕೊಲಾಸ್ ಪೂರನ್: 26 ವರ್ಷ ವಯಸ್ಸಿನ ಪೂರನ್ ಸಂಭಾವನೆ ರೂ. 4.20 ಕೋಟಿ. ವಿಕೆಟ್​ಕೀಪರ್​/ಬ್ಯಾಟ್ಸ್​ಮನ್ ಆಗಿರುವ ಅವರು 2019ರಿಂದ ಐಪಿಎಲ್​ ಆಡುತ್ತಿದ್ದಾರೆ. ಇದುವರೆಗೆ 21 ಪಂದ್ಯಗಳಲ್ಲಿ ಕಾಣಿಸಿಕೊಂಡು 32.56 ಸರಾಸರಿಯಲ್ಲಿ 521 ರನ್ ಗಳಿಸಿದ್ದಾರೆ. ಇದರಲ್ಲಿ 2 ಅರ್ಧ ಶತಕ ಸೇರಿವೆ.

ಸರ್ಫ್ರಾಜ್ ಖಾನ್: 24 ರ ಪ್ರಾಯದ ಖಾನ್ ಸಂಭಾವನೆ ರೂ 25 ಲಕ್ಷ, ಇದುವರೆಗೆ ಆಡಿರುವ 38 ಪಂದ್ಯಗಳಿಂದ 25.94 ಸರಾಸರಿಯಲ್ಲಿ 140 ರ ಸ್ಟ್ರೈಕ್ ರೇಟ್​ನೊಂದಿಗೆ 441 ರನ್ ಗಳಿಸಿದ್ದಾರೆ.

ದೀಪಕ್ ಹೂಡ: ಹೂಡ ವಯಸ್ಸು 27 ಮತ್ತು ಸಂಭಾವನೆ ರೂ 50 ಲಕ್ಷ. 2015 ರಿಂದ ಇಲ್ಲಿಯವರೆಗೆ ಆಡಿರುವ 68 ಪಂದ್ಯಗಳಲ್ಲಿ 16.89 ಸರಾಸರಿಯೊಂದಿಗೆ 625 ರನ್ ಗಳಿಸಿದ್ದಾರೆ.

ಮುರುಗನ್ ಅಶ್ವಿನ್: ವಯಸ್ಸು 30, ಸಂಭಾವನೆ ರೂ. 20ಲಕ್ಷ, ಆಡಿರುವ 31 ಪಂದ್ಯಗಳಿಂದ 25 ವಿಕೆಟ್. 21/3 ಅತ್ಯತ್ತುಮ ಬೌಲಿಂಗ್ ಪ್ರದರ್ಶನ.

ರವಿ ಬಿಷ್ನೋಯಿ: 21 ವರ್ಷದ ರವಿ, ಅಂಡರ್-19 ಸೆನ್ಸೇಷನ್, ಸಂಭಾವನೆ ರೂ. 2 ಕೋಟಿ. ಕಳೆಸ ಸೀಸನ್​ನಿಂದ ಐಪಿಎಲ್​ನಲ್ಲಿ ಆಡುತ್ತಿರುವ ಲೆಗ್​ ಸ್ಪಿನ್ನರ್ ರವಿ 14 ಪಂದ್ಯಗಳಿಂದ 12 ವಿಕೆಟ್ ಪಡೆದಿದ್ದಾರೆ. 3/29 ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ

Punjab Kings full Squad

ಪಂಜಾಬ್ ಕಿಂಗ್ಸ್ ಸಂಪೂರ್ಣ ಟೀಮ್

ಹರ್ಪ್ರೀತ್ ಬ್ರಾರ್: 27ರ ಪ್ರಾಯದ ಹರ್ಪ್ರೀತ್ ಅವರ ಸಂಭಾವನೆ ರೂ. 20 ಲಕ್ಷ, ಇದುವರೆಗೆ 3 ಪಂದ್ಯಗಳನ್ನು ಮಾತ್ರ ಆಡಿದ್ದಾರೆ.

ಮೊಹಮ್ಮದ್ ಶಮಿ: ಟೀಮಿನ ಪ್ರಮುಖ ವೇಗದ ಬೌಲರ್ ಆಗಿರುವ ಶಮಿ 2009ರಿಂದ ಐಪಿಎಲ್ ಆಡುತ್ತಿದ್ದು ಇದವರೆಗೆ 65 ಕಾಣಿಸಿಕೊಂಡಿರುವ 65 ಪಂದ್ಯಗಳಿಂದ 33.45 ಸರಾಸರಿಯಲ್ಲಿ 60 ವಿಕೆಟ್ ಪಡೆದಿದ್ದಾರೆ, ಅವರ ವಯಸ್ಸು 31 ಮತ್ತು ಸಂಭಾವನೆ ರೂ. 4.80 ಕೋಟಿ

ಅರ್ಷ್​ದೀಪ್ ಸಿಂಗ್: 22 ವಯಸ್ಸಿನ ಸಿಂಗ್ ಸಂಭಾವನೆ ರೂ. 20 ಲಕ್ಷ. ಇದುವರೆಗೆ ಆಡಿರುವ 8 ಪಂದ್ಯಗಳಲ್ಲಿ 8 ವಿಕೆಟ್ ಪಡೆದಿದ್ದಾರೆ.

ಇಶಾನ್ ಪೊರೆಲ್: 22 ವರ್ಷ ವಯಸ್ಸಿನ ಪೊರೆಲ್ ಅವರ ಸಂಭಾವನೆ ರೂ. 20 ಲಕ್ಷ, ಐಪಿಎಲ್​ನಲ್ಲಿ ಇನ್ನೂ ಆಡಬೇಕಿದೆ.

ದರ್ಷನ್ ನಲ್ಕಂಡೆ: 23 ವರ್ಷ ವಯಸ್ಸಿನ ನಲ್ಕಂಡೆ ಸಂಭಾವನೆ ರೂ. 30 ಲಕ್ಷ, ಐಪಿಎಲ್​ನಲ್ಲಿ ಇನ್ನೂ ಆಡಿಲ್ಲ.

ಕ್ರಿಸ್ ಜೊರ್ಡನ್: 33ರ ಪ್ರಾಯದ ಜೊರ್ಡನ್ 2016ರಿಂದ ಆಡುತ್ತಿದ್ದರೂ ಇದುವರೆಗೆ ಕೇವಲ 20 ಪಂದ್ಯಗಳನ್ನಾಡಿದ್ದಾರೆ. ಆಲ್​ರೌಂಡರ್​ ಅಗಿರುವ ಜೊರ್ಡನ್ ಕೇವಲ 32 ರನ್​ ಗಳಿಸಿದ್ದರೆ ಮತ್ತು 9 ವಿಕೆಟ್ ಪಡೆದಿದ್ದಾರೆ. ಅವರ ಸಂಭಾವನೆ ರೂ 3 ಕೋಟಿ.

ಶುಕ್ರವಾರ ನಡೆದ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಖರೀದಿಸಿದ ಆಟಗಾರರು: ಜಾಯ್ ರಿಚರ್ಡ್ಸನ್ ರೂ 14 ಕೋಟಿ, ಡೇವಿಡ್ ಮಲನ್ ರೂ. 1.5 ಕೋಟಿ, ಶಾರುಖ್ ಖಾನ್ ರೂ. 5.25 ಕೋಟಿ, ರೈಲೀ ಮೆರೆಡಿತ್ ರೂ. 8 ಕೋಟಿ, ಮೊಯ್ಸಿಸ್ ಹಾನ್ರೀಕ್ಸ್​ಗೆ ರೂ 4.2 ಕೋಟಿ, ಜಲಜ್ ಸಕ್ಸೇನಾ ರೂ 30 ಲಕ್ಷ, ಉತ್ಕರ್ಷ್ ಸಿಂಗ್ ರೂ. 20 ಲಕ್ಷ, ಫೇಮಿಯನ್ ಅಲೆನ್ ರೂ 75 ಲಕ್ಷ ಮತ್ತು ಸೌರಭ್ ಕುಮಾರ್ ರೂ. 20 ಲಕ್ಷ.

ಇದನ್ನೂ ಓದಿ: IPL Auction 2021: ಮುಂಬೈ ಇಂಡಿಯನ್ಸ್ ಅಂತಿಮ ತಂಡದಲ್ಲಿರುವ ಸದಸ್ಯರ ಸಂಕ್ಷಿಪ್ತ ವಿವರ

Published On - 11:06 pm, Fri, 19 February 21

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ