IPL 2021: ಕೊರೊನಾ ಗೆದ್ದ ವೀರ! ಪಡಿಕ್ಕಲ್​ ಮೊದಲ ಶತಕದಾಟಕ್ಕೆ ಒಲಿದು ಬಂದವು ಬರೋಬ್ಬರಿ 4 ಪ್ರಶಸ್ತಿಗಳು

IPL 2021 Devdutt Padikkal: ಕೊರೊನಾ ಸೋಂಕು ಹಿನ್ನಡೆಯುಂಟು ಮಾಡಿತು. ಸೋಂಕಿಗೆ ತುತ್ತಾಗಬಾರದು ಎಂದು ನಾನು ಬಯಸಿದ್ದೆ. ಆದ್ರೆ ಅದು ನನ್ನ ನಿಯಂತ್ರಣದಲ್ಲಿರಲಿಲ್ಲ. ಇದ್ದದ್ದನ್ನು ಇದ್ದ ಹಾಗೆ ಒಪ್ಪಿಕೊಳ್ಳಬೇಕಿತ್ತು. ಹೀಗಾಗಿ ನನಗೆ ಅವಕಾಶ ದೊರೆಯುವ ಸಮಯದಲ್ಲಿ ಸಿದ್ಧನಾಗಿರಲು ನಿರ್ಧರಿಸಿದೆ ಎನ್ನುವುದು ಪಡಿಕ್ಕಲ್​ ಮಾತು.

IPL 2021: ಕೊರೊನಾ ಗೆದ್ದ ವೀರ! ಪಡಿಕ್ಕಲ್​ ಮೊದಲ ಶತಕದಾಟಕ್ಕೆ ಒಲಿದು ಬಂದವು ಬರೋಬ್ಬರಿ 4 ಪ್ರಶಸ್ತಿಗಳು
ದೇವದತ್ ಪಡಿಕ್ಕಲ್
Follow us
ಪೃಥ್ವಿಶಂಕರ
| Updated By: Skanda

Updated on: Apr 23, 2021 | 6:38 AM

ಈ ಬಾರಿಯ ಐಪಿಎಲ್​ ಆರಂಭಕ್ಕೂ ಮುನ್ನ ಕೊರೊನಾ ಸೋಂಕಿಗೆ ತುತ್ತಾಗಿದ್ದ ಕನ್ನಡಿಗ ದೇವದತ್ ಪಡಿಕ್ಕಲ್, ಕೊರೊನಾ ಗೆದ್ದು ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಾಗ ಕೇವಲ 11 ರನ್​ಗಳಿಸಿದ್ದರು. ನಂತರ ಕೊಲ್ಕತ್ತಾ ವಿರುದ್ಧ ಗಳಿಸಿದ್ದು ಕೇವಲ 25 ರನ್​ಗಳನ್ನ ಮಾತ್ರ. ಇಷ್ಟೊತ್ತಿಗಾಗಲೇ ಪಡಿಕ್ಕಲ್ ಆಟ ಕಳೆದ ಸೀಸನ್​ಗಷ್ಟೇ ಸೀಮಿತ ಅನ್ನೋ ಮಾತುಗಳು ಕೇಳಿ ಬಂದಿತ್ತು. ಇಂತ ಅಂಕು ಡೊಂಕಿನ ಮಾತುಗಳು ಹರಿದಾಡುತ್ತಿರುವಾಗಲೇ ಪಡಿಕ್ಕಲ್, ಐಪಿಎಲ್​ನಲ್ಲಿ ಅಬ್ಬರಿಸಿಬಿಟ್ಟಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಪಡಿಕ್ಕಲ್, ನಾನು ಕೇವಲ ಒಂದು ಸೀಸನ್​ಗೆ ಸೀಮಿತವಾದ ಬ್ಯಾಟ್ಸ್​ಮನ್​ ಅಲ್ಲ ಎನ್ನುವುದನ್ನ ಸಾಬೀತುಮಾಡಿದ್ದಾರೆ.

ಟೀಮ್ ಇಂಡಿಯಾ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡ ವಾಂಖೆಡೆ ಮೈದಾನದಲ್ಲೇ ಪಡಿಕ್ಕಲ್, ಐಪಿಎಲ್​ನ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ರಾಜಸ್ಥಾನ್ ನೀಡಿದ್ದ 178 ರನ್​ಗಳ ಗುರಿ ಬೆನ್ನತ್ತಲು ನಾಯಕ ಕೊಹ್ಲಿ ಜತೆಗೆ ಬಂದ ಪಡಿಕ್ಕಲ್, ವಾಂಖೆಡೆ ಮೈದಾನದಲ್ಲಿ ರನ್ ಮಳೆಯನ್ನೇ ಹರಿಸಿದರು. ಕ್ಯಾಪ್ಟನ್ ಕೊಹ್ಲಿಗಿಂತ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ಪಡಿಕ್ಕಲ್, ಕೇವಲ 27 ಬಾಲ್​ಗಳಲ್ಲೇ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಪಡಿಕ್ಕಲ್ 51 ರನ್​ಗಳಿಸಿದ್ದಾಗ ಕ್ಯಾಪ್ಟನ್ ಕೊಹ್ಲಿ ಸ್ಕೋರ್ ಕೇವಲ 20 ರನ್ ಮಾತ್ರ. ಅಂದ್ರೆ ಕೊಹ್ಲಿಗಿಂತ ಹೆಚ್ಚೂ ಕಡಿಮೆ ಮೂರು ಪಟ್ಟು ವೇಗದಲ್ಲಿ ಅಬ್ಬರಿಸಿದ ಪಡಿಕ್ಕಲ್, ಅರ್ಧಶತಕದ ಹೊಸ್ತಿಲು ದಾಟಿದ ಬಳಿಕ ಇನ್ನಷ್ಟು ವೇಗವಾಗಿ ಬ್ಯಾಟಿಂಗ್ ಮಾಡಿದರು.

51 ಬಾಲ್​ಗಳಲ್ಲಿ ಚೊಚ್ಚಲ ಶತಕ ಸಿಡಿಸಿದ ಪಡಿಕ್ಕಲ್! ಅರ್ಧಶತಕ ಸಿಡಿಸೋಕೆ 27 ಬಾಲ್​ಗಳನ್ನ ತಗೆದುಕೊಂಡ ಪಡಿಕ್ಕಲ್, ಶತಕ ಪೂರೈಸಲು ಮತ್ತೆ ತಗೆದುಕೊಂಡಿದ್ದು ಕೇವಲ 24 ಬಾಲ್​ಗಳನ್ನ. ರಾಜಸ್ಥಾನ್ ಬೌಲರ್​ಗಳ ಮೇಲೆ ಸವಾರಿ ಮಾಡಿದ ದೇವದತ್, 17ನೇ ಓವರ್ ಮಾಡಲು ಬಂದ ಮುಸ್ತಾಫಿಜುರ್ ರಹಮಾನ್ ಎಸೆದ ಮೊದಲ ಬಾಲ್ ಅನ್ನೇ ಬೌಂಡರಿಗಟ್ಟಿ, ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರು. ಪಡಿಕ್ಕಲ್ ಶತಕ ಪೂರೈಸಲು ಕ್ಯಾಪ್ಟನ್ ಕೊಹ್ಲಿ ನೀಡಿದ ಸಹಕಾರ ಮೆಚ್ಚುವಂತಹದ್ದು. ಬಿಗ್ ಶಾಟ್​ಗಳನ್ನ ಹೊಡೆಯೋಕೆ ವಿರಾಟ್​ಗೆ ಲೂಸ್ ಬಾಲ್​ಗಳು ದೊರೆಕಿದ್ವು. ಆದ್ರೆ ಪಡಿಕ್ಕಲ್ ಶತಕ ಕಂಪ್ಲೀಟ್ ಮಾಡಲಿ ಎಂದು, ವಿರಾಟ್ ಸಿಂಗಲ್ ರನ್ ತಗೆದು ಕ್ರೀಸ್ ಬಿಟ್ಟುಕೊಟ್ರು.

ಕೊರೊನಾ ಹಿನ್ನಡೆ ಮೆಟ್ಟಿ ನಿಂತು ಶತಕ ಸಿಡಿಸಿದ ಪಡಿಕ್ಕಲ್! ಎಲ್ಲವೂ ಅಂದುಕೊಂಡಂತೆ ಆಗಿದ್ರೆ, ಮುಂಬೈ ವಿರುದ್ಧದ ಪಂದ್ಯದಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್, ಆರ್​ಸಿಬಿ ಪರ ಆರಂಭಿಕನಾಗಿ ಕಣಕ್ಕಿಳಿಯಬೇಕಿತ್ತು. ಆದ್ರೆ ಐಪಿಎಲ್​ಗೆ ಇನ್ನೊಂದು ವಾರವಿರುವಾಗಲೇ ಪಡಿಕ್ಕಲ್, ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಮುಂಬೈ ವಿರುದ್ಧದ ಪಂದ್ಯಕ್ಕೂ ಮುನ್ನವೇ ಕೊರೊನಾ ಗೆದ್ರೂ, ಪಡಿಕ್ಕಲ್​ಗೆ ಹನ್ನೊಂದರ ಬಳಗದಲ್ಲಿ ಆಡುವ ಅವಕಾಶ ಸಿಗಲಿಲ್ಲ. ಇದು ನಿಜಕ್ಕೂ ಪಡಿಕ್ಕಲ್​ಗೆ ಈ ಬಾರಿಯ ಐಪಿಎಲ್​ನಲ್ಲಿ ಹಿನ್ನಡೆಯಾಗುವಂತೆ ಮಾಡಿತ್ತು. ಆದ್ರೀಗ ಪಡಿಕ್ಕಲ್, ಆರ್​ಸಿಬಿ ಪರ ಆಡಿದ ಮೂರನೇ ಪಂದ್ಯದಲ್ಲೇ ಚೊಚ್ಚಲ ಶತಕ ಸಿಡಿಸಿ ತಾನೇನು ಅನ್ನೋದನ್ನು ಪ್ರೂವ್ ಮಾಡಿದ್ದಾರೆ.

ಈ ಬಗ್ಗೆ ಪಂದ್ಯದ ನಂತರ ಮಾತಾನಾಡಿದ ಪಡಿಕ್ಕಲ್, ಕೊರೊನಾ ಸೋಂಕು ಹಿನ್ನಡೆಯುಂಟು ಮಾಡಿತು. ಸೋಂಕಿಗೆ ತುತ್ತಾಗಬಾರದು ಎಂದು ನಾನು ಬಯಸಿದ್ದೆ. ಆದ್ರೆ ಅದು ನನ್ನ ನಿಯಂತ್ರಣದಲ್ಲಿರಲಿಲ್ಲ. ಇದ್ದದ್ದನ್ನು ಇದ್ದ ಹಾಗೆ ಒಪ್ಪಿಕೊಳ್ಳಬೇಕಿತ್ತು. ಹೀಗಾಗಿ ನನಗೆ ಅವಕಾಶ ದೊರೆಯುವ ಸಮಯದಲ್ಲಿ ಸಿದ್ಧನಾಗಿರಲು ನಿರ್ಧರಿಸಿದೆ ಎಂದಿದ್ದಾರೆ. ಅಲ್ಲದೆ ಪಡಿಕ್ಕಲ್ ಅವರ ಈ ಶತಕದಾಟಕ್ಕೆ ಒಂದೇ ಪಂದ್ಯದಲ್ಲಿ 4 ಪ್ರಶಸ್ತಿಗಳು ಒಲಿದುಬಂದಿವೆ.

ಅವುಗಳೆಂದರೆ..