IPL 2021 Auction KKR Players List: ಕೋಲ್ಕತಾ ಸೇರಿದ ಭಜ್ಜಿ, ಶಕೀಬ್.. ಉಳಿದಂತೆ ತಂಡದ ಆಟಗಾರರ ಮಾಹಿತಿ ಇಲ್ಲಿದೆ
IPL KKR Full Squad 2021: ಕೆಕೆಆರ್ ತಮ್ಮ ತಂಡದ ಪ್ರಮುಖ ಆಟಗಾರರಾದ ಇಯೊನ್ ಮೋರ್ಗಾನ್, ಪ್ಯಾಟ್ ಕಮ್ಮಿನ್ಸ್ ಮತ್ತು ಶುಭ್ಮನ್ ಗಿಲ್ ಮುಂತಾದವರನ್ನು ಉಳಿಸಿಕೊಂಡಿತ್ತು. ಆದರೆ ಟಾಮ್ ಬ್ಯಾಂಟನ್, ಕ್ರಿಸ್ ಗ್ರೀನ್, ಸಿದ್ಧೇಶ್ ಲಾಡ್, ನಿಖಿಲ್ ನಾಯಕ್, ಎಂ ಸಿದ್ದಾರ್ಥ್ ಅವರನ್ನು ತಂಡದಿಂದ ಬಿಡುಗಡೆ ಮಾಡಿತ್ತು.
ಐಪಿಎಲ್ 2021 ರ ಹರಾಜಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಹೇಳಿಕೊಳ್ಳುವಂತಹ ಆಟಗಾರರನ್ನು ಖರೀದಿಸುವ ಗೋಜಿಗೆ ಹೋದಂತೆ ಕಾಣಲಿಲ್ಲ. ಆದರೆ, ದಿನದ ಕೊನೆಯಲ್ಲಿ ಕೆಕೆಆರ್ ಕೆಲವು ಪ್ರಮುಖ ಖರೀದಿಗಳನ್ನು ಮಾಡುವ ಮೂಲಕ ಆಟಗಾರರ ಶಾಪಿಂಗ್ಗೆ ಮುಂದಾಯಿತು. ಶಕೀಬ್ ಅಲ್ ಹಸನ್ ಅವರನ್ನು ಕೆಕೆಆರ್ 3.2 ಕೋಟಿ ರೂ ನೀಡಿ ತನ್ನ ಬತ್ತಳಿಕೆಗೆ ಹಾಕಿಕೊಂಡಿತು. ಈ ಮೂಲಕ ಎರಡನೇ ಬಾರಿಗೆ ಬಾಂಗ್ಲಾದೇಶದ ಆಲ್‌ರೌಂಡರ್ ಫ್ರ್ಯಾಂಚೈಸ್‌ಗಾಗಿ ಆಡಲಿದ್ದಾರೆ. ಅವರನ್ನು 2011 ರ ಐಪಿಎಲ್ ಹರಾಜಿನಲ್ಲಿ ಕೆಕೆಆರ್ ಆಯ್ಕೆ ಮಾಡಿತ್ತು. ಅವರು 2011 ಮತ್ತು 2017 ರ ನಡುವೆ ಫ್ರ್ಯಾಂಚೈಸ್‌ಗಾಗಿ ಏಳು ಆವೃತ್ತಿಗಳನ್ನು ಆಡಿದ್ದಾರೆ. ಅದರ ನಂತರ, 2018 ರ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಸ್ಟಾರ್ ಆಲ್ರೌಂಡರ್ನನ್ನು ಖರೀದಿಸಿತ್ತು.
ಅನುಭವಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರನ್ನು ಕೋಲ್ಕತಾ ತನ್ನ ಮೂಲ ಬೆಲೆಗೆ 2 ಕೋಟಿ ರೂ. ನೀಡಿ ಖರೀದಿಸಿತು. COVID-19 ಸಮಯದಲ್ಲಿ ತಮ್ಮ ಕುಟುಂಬದೊಂದಿಗೆ ಉಳಿಯಲು ಬಯಸಿದ್ದರಿಂದ ಕಳೆದ ಆವೃತ್ತಿಯಲ್ಲಿ ಹರ್ಭಜನ್ ಕಾಣಿಸಿಕೊಂಡಿರಲಿಲ್ಲ. ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಂತರ ಇದು ಅವರ ಮೂರನೇ ಐಪಿಎಲ್ ತಂಡವಾಗಿದೆ.
50 ಲಕ್ಷ ಮೂಲ ಬೆಲೆಗೆ ಅವರನ್ನು ಖರೀದಿಸಲಾಯಿತು.. ಕೆಕೆಆರ್ ಫ್ರಾಂಚೈಸಿಯ ಐಪಿಎಲ್ ಹರಾಜಿನ ಕೊನೆಯ ಎರಡು ಪಿಕ್‌ಗಳು ಆಲ್‌ರೌಂಡರ್‌ಗಳಾದ ಪವನ್ ನೇಗಿ ಮತ್ತು ವೆಂಕಟೇಶ್ ಅಯ್ಯರ್. ಭಾರತ ಪರ ಟಿ20 ಕ್ರಿಕೆಟ್ ಆಡಿದ ನೇಗಿ ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರಿನೊಂದಿಗೆ ಇದ್ದರು. 50 ಲಕ್ಷ ಮೂಲ ಬೆಲೆಗೆ ಅವರನ್ನು ಖರೀದಿಸಲಾಯಿತು. ಮತ್ತೊಂದೆಡೆ, ಅಯ್ಯರ್ ಮಧ್ಯಪ್ರದೇಶದ ಆಲ್‌ರೌಂಡರ್ ಆಗಿದ್ದು, ಅವರು ಸ್ಪಿನ್ನರ್ ಆಗಿರುವ ನೇಗಿಗಿಂತ ಭಿನ್ನವಾಗಿ ಮಧ್ಯಮ ವೇಗದಲ್ಲಿ ಬೌಲ್ ಮಾಡುತ್ತಾರೆ. ಅಯ್ಯರ್ ಅವರ ಮೂಲ ಬೆಲೆ 20 ಲಕ್ಷ ರೂ.
ಈ ಮೊದಲು ಕೆಕೆಆರ್ ತಮ್ಮ ತಂಡದ ಪ್ರಮುಖ ಆಟಗಾರರಾದ ಇಯೊನ್ ಮೋರ್ಗಾನ್, ಪ್ಯಾಟ್ ಕಮ್ಮಿನ್ಸ್ ಮತ್ತು ಶುಭ್ಮನ್ ಗಿಲ್ ಮುಂತಾದವರನ್ನು ಉಳಿಸಿಕೊಂಡಿತ್ತು. ಆದರೆ ಟಾಮ್ ಬ್ಯಾಂಟನ್, ಕ್ರಿಸ್ ಗ್ರೀನ್, ಸಿದ್ಧೇಶ್ ಲಾಡ್, ನಿಖಿಲ್ ನಾಯಕ್, ಎಂ ಸಿದ್ದಾರ್ಥ್ ಅವರನ್ನು ತಂಡದಿಂದ ಬಿಡುಗಡೆ ಮಾಡಿತ್ತು.
ಕೆಕೆಆರ್ ಉಳಿಸಿಕೊಂಡಿದ್ದ ಆಟಗಾರರು – ಇಯೊನ್ ಮೋರ್ಗಾನ್, ದಿನೇಶ್ ಕಾರ್ತಿಕ್, ನಿತೀಶ್ ರಾಣಾ, ಶುಭ್ಮನ್ ಗಿಲ್, ರಿಂಕು ಸಿಂಗ್, ರಾಹುಲ್ ತ್ರಿಪಾಠಿ, ಕಮಲೇಶ್ ನಾಗರ್ಕೋಟಿ, ಕುಲದೀಪ್ ಯಾದವ್, ಲಾಕಿ ಫರ್ಗುಸನ್, ಪ್ಯಾಟ್ ಕಮ್ಮಿನ್ಸ್, ಪ್ರಸಾದ್ ಕೃಷ್ಣ, ಸಂದೀಪ್ ವಾರಿಯರ್, ರಷ್ಯಮ್ ಸುರ್ವಾವ್ ನರೈನ್, ಟಿಮ್ ಸೀಫರ್ಟ್.
ಹರಾಜಿನಲ್ಲಿ ಖರೀದಿಸಿದ ಆಟಗಾರರು 1. ಶಕೀಬ್ ಅಲ್ ಹಸನ್, 3.2 ಕೋಟಿ ರೂ 2. ಶೆಲ್ಡನ್ ಜಾಕ್ಸನ್, 20 ಲಕ್ಷ 3. ವೈಭವ್ ಅರೋರಾ, 20 ಲಕ್ಷ ರೂ 4. ಕರುಣ್ ನಾಯರ್, 50 ಲಕ್ಷ 5. ಹರ್ಭಜನ್ ಸಿಂಗ್, 2 ಕೋಟಿ ರೂ 6. ಬೆನ್ ಕಟಿಂಗ್, 75 ಲಕ್ಷ ರೂ 7. ವೆಂಕಟೇಶ್ ಅಯ್ಯರ್, 20 ಲಕ್ಷ ರೂ 8. ಪವನ್ ನೇಗಿ, 50 ಲಕ್ಷ ರೂ
ಐಪಿಎಲ್ 2021 ಕ್ಕೆ ಕೆಕೆಆರ್ ಪೂರ್ಣ ತಂಡ ಇಯೊನ್ ಮೋರ್ಗಾನ್, ಆಂಡ್ರೆ ರಸ್ಸೆಲ್, ದಿನೇಶ್ ಕಾರ್ತಿಕ್, ಕಮಲೇಶ್ ನಾಗರ್ಕೋಟಿ, ಕುಲದೀಪ್ ಯಾದವ್, ಲಾಕಿ ಫರ್ಗುಸನ್, ನಿತೀಶ್ ರಾಣಾ, ಪ್ರಸಾದ್ ಕೃಷ್ಣ, ರಿಂಕು ಸಿಂಗ್, ಸಂದೀಪ್ ವಾರಿಯರ್, ಶಿವಂ ಮಾವಿ, ಶುಭ್ಮನ್ ಗಿಲ್, ಸುನಿಲ್ ನರೈನ್, ಪ್ಯಾಟ್ ಕಮಿನ್ಸ್, ರಾತ್ ತ್ರಿಮೂರ್ತ್ , ಶಕೀಬ್ ಅಲ್ ಹಸನ್, ಶೆಲ್ಡನ್ ಜಾಕ್ಸನ್, ಹರ್ಭಜನ್ ಸಿಂಗ್, ಬೆನ್ ಕಟಿಂಗ್, ವೆಂಕಟೇಶ್ ಅಯ್ಯರ್, ಪವನ್ ನೇಗಿ, ವೈಭವ್ ಅರೋರಾ ಮತ್ತು ಕರುಣ್ ನಾಯರ್.
The #IPL2021 squad has assembled ?#Laphaao, #ToofaniFans!#KKR #HaiTaiyaar pic.twitter.com/wMX9K3XXou
— KolkataKnightRiders (@KKRiders) February 19, 2021
Published On - 5:43 pm, Fri, 19 February 21