IPL 2021 Points Table: ಅಂಕಪಟ್ಟಿಯಲ್ಲಿ ಆರ್​ಸಿಬಿ ಟಾಪ್​, ಸಿಎಸ್​ಕೆ ಲಾಸ್ಟ್​!

| Updated By: ganapathi bhat

Updated on: Apr 05, 2022 | 12:37 PM

ರಾಯಲ್ ಚಾಲೆಂಜರ್ಸ್ ಈ ಸೀಸನ್​ನಲ್ಲಿ ಸತತವಾಗಿ ಎರಡು ಪಂದ್ಯ ಗೆದ್ದಿದೆ. ಕೊಹ್ಲಿ ಟೀಂ ಅಭಿಮಾನಿಗಳು, ಆರ್​ಸಿಬಿ ಸರಣಿಯುದ್ದಕ್ಕೂ ಇದೇ ಪ್ರದರ್ಶನ ಮುಂದುವರಿಸುತ್ತದೆ ಎಂಬ ನಿರೀಕ್ಷೆಯಲ್ಲಿ ಇದ್ದಾರೆ.

IPL 2021 Points Table: ಅಂಕಪಟ್ಟಿಯಲ್ಲಿ ಆರ್​ಸಿಬಿ ಟಾಪ್​, ಸಿಎಸ್​ಕೆ ಲಾಸ್ಟ್​!
ಆರ್​ಸಿಬಿ
Follow us on

ಐಪಿಎಲ್ ಟೂರ್ನಿಯ ಪಾಯಿಂಟ್ಸ್ ಟೇಬಲ್ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಸ್ಥಾನದಲ್ಲಿದೆ. ನಿನ್ನೆ ನಡೆದ ಲೀಗ್​ನ 6ನೇ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು ರೋಚಕ ರೀತಿಯಲ್ಲಿ ಬಗ್ಗುಬಡಿದ ಬಳಿಕ ಮೊದಲ ಸ್ಥಾನ ಅಲಂಕರಿಸಿದೆ. ರಾಯಲ್ ಚಾಲೆಂಜರ್ಸ್ ಈ ಸೀಸನ್​ನಲ್ಲಿ ಸತತವಾಗಿ ಎರಡು ಪಂದ್ಯ ಗೆದ್ದಿದೆ. ಕೊಹ್ಲಿ ಟೀಂ ಅಭಿಮಾನಿಗಳು, ಆರ್​ಸಿಬಿ ಸರಣಿಯುದ್ದಕ್ಕೂ ಇದೇ ಪ್ರದರ್ಶನ ಮುಂದುವರಿಸುತ್ತದೆ ಎಂಬ ನಿರೀಕ್ಷೆಯಲ್ಲಿ ಇದ್ದಾರೆ.

ಪಾಯಿಂಟ್ಸ್ ಟೇಬಲ್​ನಲ್ಲಿ ಸದ್ಯದ ಪ್ರಕಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಎರಡನೇ ಸ್ಥಾನದಲ್ಲಿದೆ. ಮುಂಬೈ ಹಾಗೂ ಪಂಜಾಬ್ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದೆ. ಬಳಿಕ, ಕೋಲ್ಕತ್ತಾ, ರಾಜಸ್ಥಾನ ತಂಡವಿದೆ. ಸನ್​ರೈಸರ್ಸ್ ಹೈದರಾಬಾದ್ ಮತ್ತು ಚೆನ್ನಯ ಸೂಪರ್ ಕಿಂಗ್ಸ್ ಕೊನೆಯ ಎರಡು ಸ್ಥಾನಗಳಲ್ಲಿದೆ.

ಪಾಯಿಂಟ್ಸ್ ಟೇಬಲ್ ಲೆಕ್ಕಾಚಾರ ಹೀಗಿದೆ..
ಇಂದು (ಏಪ್ರಿಲ್ 15) ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಹಣಾಹಣಿ ನಡೆಯಲಿದೆ. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆದ್ದರೆ ಡೆಲ್ಲಿ ಪಾಯಿಂಟ್ಸ್ ಟೇಬಲ್​ನಲ್ಲಿ ಮೊದಲ ಸ್ಥಾನಕ್ಕೆ ಏರಲಿದೆ. 2ರಲ್ಲಿ 2 ಮ್ಯಾಚ್ ಗೆದ್ದಿರುವ ಆರ್​ಸಿಬಿ ಎರಡನೇ ಸ್ತಾನಕ್ಕೆ ಇಳಿಕೆ ಕಾಣಲಿದೆ. ಡೆಲ್ಲಿ ತಂಡವು ಇಂದು ಗೆಲುವು ಕಂಡರೆ ಮೊದಲ ಸ್ಥಾನ ಅಲಂಕರಿಸಲಿದೆ. +0.175 ನೆಟ್ ರನ್​ರೇಟ್ ಹೊಂದಿರುವ ಆರ್​ಸಿಬಿ 2ನೇ ಸ್ಥಾನಕ್ಕೆ ಬರಲಿದೆ.

ನಾಳೆ-ನಾಡಿದ್ದು ಇವರು ಗೆದ್ದರೆ ಆರ್​ಸಿಬಿಗೆ ಅನುಕೂಲ..
ಇಂದಿನ ಲೆಕ್ಕಾಚಾರದ ಪ್ರಕಾರ, ಆರ್​ಸಿಬಿ 2ನೇ ಸ್ಥಾನಕ್ಕಿಂತ ಕೆಳಗೆ ಇಳಿಯುವ ಸಾಧ್ಯತೆ ಇಲ್ಲ. ನಾಳೆ (ಏಪ್ರಿಲ್ 16) ಪಂಜಾಬ್ ಹಾಗೂ ಚೆನ್ನೈ ನಡುವಿನ ಹಣಾಹಣಿಯಲ್ಲಿ ಚೆನ್ನೈ ಗೆಲುವು ಸಾಧಿಸಿದರೆ ಆರ್​ಸಿಬಿಗೆ ಪಾಯಿಂಟ್ಸ್ ಟೇಬಲ್ ಲೆಕ್ಕಾಚಾರದಲ್ಲಿ ಅನುಕೂಲವಾಗಲಿದೆ. ಹಾಗೂ ನಾಡಿದ್ದು (ಏಪ್ರಿಲ್ 17) ಮುಂಬೈ-ಹೈದರಾಬಾದ್ ಪಂದ್ಯದಲ್ಲಿ ಹೈದರಾಬಾದ್ ತಂಡ ಗೆಲುವು ಕಂಡರೆ ಆರ್​ಸಿಬಿಗೆ ಸಹಾಯವಾಗಲಿದೆ.

ಆರೆಂಜ್ ಕ್ಯಾಪ್ ಯಾರ ಬಳಿ ಇದೆ?
ಐಪಿಎಲ್ ಟೂರ್ನಿಯ ಅತಿ ಹೆಚ್ಚು ರನ್ ಸ್ಕೋರರ್​ಗೆ ನೀಡುವ ಆರೆಂಜ್ ಕ್ಯಾಪ್ ನಿತೀಶ್ ರಾಣಾ ಕೈಲಿದೆ. 137 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ಶತಕವೀರ ಸಂಜು ಸ್ಯಾಮ್ಸನ್ 119 ರನ್ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಮನೀಶ್ ಪಾಂಡೆ, ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ಕೆ.ಎಲ್. ರಾಹುಲ್ ನಂತರದ ಸ್ಥಾನ ಪಡೆದುಕೊಂಡಿದ್ದಾರೆ.

ಪರ್ಪಲ್ ಕ್ಯಾಪ್ ಯಾರ ಬಳಿ ಇದೆ?
ಆರ್​ಸಿಬಿ ಆಲ್​ರೌಂಡರ್ ಹರ್ಷಲ್ ಪಟೇಲ್ ಟೂರ್ನಿಯಲ್ಲಿ 7 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿ ಇದ್ದಾರೆ. ರಸ್ಸೆಲ್ 6 ವಿಕೆಟ್ ಮೂಲಕ ಎರಡನೇಯವರಾಗಿ ಇದ್ದಾರೆ. ಉಳಿದಂತೆ, ರಶೀದ್ ಖಾನ್, ರಾಹುಲ್ ಚಹರ್, ಕಮ್ಮಿನ್ಸ್ ನಂತರದ ಸ್ಥಾನದಲ್ಲಿ ಇದ್ದಾರೆ.

ಇದನ್ನೂ ಓದಿ: Kaviya Maran: ಹೈದರಾಬಾದ್ ಪಂದ್ಯದ ವೇಳೆ ಕ್ಯಾಮರಾ ಕಣ್ಣಿಗೆ ಬೀಳುವ ಈ ಸುಂದರಿ ಯಾರು?

ಇದನ್ನೂ ಓದಿ: ಐಪಿಎಲ್ ಶಿಷ್ಟಾಚಾರ ಮುರಿದ.. ಈ ಬಾರಿಯ ಗೆಲುವಿನ ಕುದುರೆ, ಕ್ಯಾಪ್ಟನ್​ ವಿರಾಟ್​ ಕೊಹ್ಲಿಗೆ ಕಿವಿಹಿಂಡಿದ ಐಪಿಎಲ್!

(IPL 2021 Points Table RCB Royal Challengers Bangalore Players in Orange Purple Cap List)

Published On - 4:03 pm, Thu, 15 April 21