Kaviya Maran: ಹೈದರಾಬಾದ್ ಪಂದ್ಯದ ವೇಳೆ ಕ್ಯಾಮರಾ ಕಣ್ಣಿಗೆ ಬೀಳುವ ಈ ಸುಂದರಿ ಯಾರು?

ಈ ಮೊದಲು ಕೂಡ ಕವಿಯಾ ಸಾಕಷ್ಟು ಬಾರಿ ಹೈಲೈಟ್​ ಆಗಿದ್ದಾರೆ. 2021ರ ಐಪಿಎಲ್​ ಹರಾಜಿನ ವೇಳೆಯೂ ಕವಿಯಾ ಕ್ಯಾಮೆರಾ ಕಣ್ಣಿಗೆ ಬಿದ್ದು ಸಾಕಷ್ಟು ವೈರಲ್​ ಆಗಿದ್ದರು.

Kaviya Maran: ಹೈದರಾಬಾದ್ ಪಂದ್ಯದ ವೇಳೆ ಕ್ಯಾಮರಾ ಕಣ್ಣಿಗೆ ಬೀಳುವ ಈ ಸುಂದರಿ ಯಾರು?
ಎಸ್​ಆರ್​ಎಚ್​ನ ಕವಿಯಾ ಮಾರನ್

ಸನ್​ರೈಸರ್ಸ್​ ಹೈದರಾಬಾದ್ ಹಾಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ನಡುವಿನ ಮ್ಯಾಚ್​ ವೇಳೆ ಹೆಚ್ಚು ಗಮನ ಸೆಳೆದಿದ್ದು ಪೆವಿಲಿಯನ್​ನಲ್ಲಿ ಕುಳಿತು ಸನ್​​ ರೈಸರ್ಸ್​ ಹೈದರಾಬಾದ್​ ತಂಡವನ್ನು ಬೆಂಬಲಿಸುತ್ತಿದ್ದಈ ಸುಂದರಿ. ಪ್ರತೀ ಬಾರಿ ಎಸ್​ಆರ್​ಎಚ್​ ಪಂದ್ಯದ ವೇಳೆ ಇವರು ಹೆಚ್ಚು ಗಮನ ಸೆಳೆಯುತ್ತಾರೆ. ಕ್ಯಾಮೆರಾ ಕಣ್ಣಿಗೂ ಬೀಳುತ್ತಾರೆ. ಅಷ್ಟಕ್ಕೂ ಯಾರು ಇವರು? ಇವರ ಹಿನ್ನೆಲೆ ಏನು ಎನ್ನುವ ಬಗ್ಗೆ ಇಲ್ಲಿದೆ ವಿವರ. ಇವರ ಹೆಸರು ಕವಿಯಾ ಮಾರನ್​. ಇವರು ಸನ್​​ ರೈಸರ್ಸ್​ ಹೈದರಾಬಾದ್ ತಂಡದ ಸಿಇಒ! ವಯಸ್ಸು 29 ವರ್ಷ. ಕವಿಯಾ ಸನ್​ ನೆಟ್ವರ್ಕ್​ ಮಾಲೀಕ ಕಲಾನಿಧಿ ಮಾರನ್​ ಅವರ ಮಗಳು. ಸನ್​ ರೈಸರ್ಸ್​ ಹೈದರಾಬಾದ್ ತಂಡದ ಮಾಲಿಕತ್ವವನ್ನು ಸನ್​ ನೆಟ್ವರ್ಕ್​ ಹೊಂದಿದೆ. ಹೀಗಾಗಿ, ತಮ್ಮ ತಂಡವನ್ನು ಬೆಂಬಲಿಸೋಕೆ ಪ್ರತಿ ಪಂದ್ಯಕ್ಕೂ ಕವಿಯಾ ಆಗಮಿಸುತ್ತಾರೆ.

ಆರ್​ಸಿಬಿ ಹಾಗೂ ಎಸ್​ಆರ್​ಎಚ್​ ನಡುವಣ ಪಂದ್ಯದ 16ನೇ ಓವರ್​ ವರೆಗೂ ಗೆಲುವು ಹೈದರಾಬಾದ್ ಕಡೆಗೇ ಇತ್ತು. ಹೈದರಾಬಾದ್ ತಂಡದ ನಾಯಕ ಡೇವಿಡ್​ ವಾರ್ನರ್​ ಬೌಂಡರಿ ಬಾರಿಸಿದಾಗೆಲ್ಲ ಕವಿಯಾ ಮೊಗದಲ್ಲಿ ಮಂದಹಾಸ ಮೂಡುತ್ತಿತ್ತು. ಆದರೆ, 17ನೇ ಓವರ್​ನಲ್ಲಿ ಶಹಬಾಜ್​ ಅಹ್ಮದ್​ ಮೂರು ವಿಕೆಟ್​ ಕೀಳುವ ಮೂಲಕ ಎಸ್​ಆರ್​ಎಚ್​ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಆಗ ಕವಿಯಾ ಬೇಸರ ಹೊರ ಹಾಕಿದ್ದರು. ಈ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ.‘

ಅಂದಹಾಗೆ, ಈ ಮೊದಲು ಕೂಡ ಕವಿಯಾ ಸಾಕಷ್ಟು ಬಾರಿ ಹೈಲೈಟ್​ ಆಗಿದ್ದಾರೆ. 2021ರ ಐಪಿಎಲ್​ ಹರಾಜಿನ ವೇಳೆಯೂ ಕವಿಯಾ ಕ್ಯಾಮೆರಾ ಕಣ್ಣಿಗೆ ಬಿದ್ದು ಸಾಕಷ್ಟು ವೈರಲ್​ ಆಗಿದ್ದರು. ನಿನ್ನೆಯ ಪಂದ್ಯದಲ್ಲೂ ಅವರು ಸಾಕಷ್ಟು ಹೈಲೈಟ್​ ಆಗಿದ್ದಾರೆ.

ಇದನ್ನೂ ಓದಿ: SRH vs RCB: ಕೈತಪ್ಪಿ ಹೋಗಿದ್ದ ಪಂದ್ಯಕ್ಕೆ ಟರ್ನ್​ ನೀಡಿದ್ದು ಶಹಬಾಜ್​ ಮಾಡಿದ ಆ ಒಂದು ಓವರ್​!

Published On - 3:53 pm, Thu, 15 April 21

Click on your DTH Provider to Add TV9 Kannada