ಐಪಿಎಲ್ ಹರಾಜಿನಲ್ಲಿ ಚಾಲೆಂಜರ್ಸ್ ಬೆಂಗಳೂರು ತಂಡ ಒಟ್ಟು 8 ಆಟಗಾರರನ್ನು ಖರೀದಿಸಿದೆ. ಮೂರು ಆಟಗಾರರು ಅನುಭವಿಗಳಾದರೆ, ಮತ್ತೆ ಐದು ಆಟಗಾರರು ಹೊಸಬರು. ಹಾಗಾದರೆ, ಆರ್ಸಿಬಿ ಬಳಿ ಈಗ ಯಾರೆಲ್ಲ ಆಟಗಾರರು ಇದ್ದಾರೆ? ಯಾರನ್ನೆಲ್ಲ ಆರ್ಸಿಬಿ ಖರೀದಿಸಿದೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ. 2020ರ ಐಪಿಎಲ್ ನಂತರ ಆರ್ಸಿಬಿ ಕ್ರಿಸ್ ಮೊರಿಸ್, ಶಿವಂ ದುಬೆ, ಆರನ್ ಫಿಂಚ್, ಉಮೇಶ್ ಯಾದವ್, ಡೇಲ್ ಸ್ಟೇನ್, ಮೊಯೀನ್ ಅಲಿ, ಪಾರ್ಥಿವ್ ಪಟೇಲ್, ಪವನ್ ನೇಗಿ, ಇಸುರು ಉಡಾನಾ, ಗುರ್ಕೀರತ್ ಮನ್ ಅವರನ್ನು ತಂಡದಿಂದ ಕೈಬಿಟ್ಟಿತ್ತು. ಹೀಗಾಗಿ ಆರ್ಸಿಬಿ ಬಳಿ ಆಟಗಾರರನ್ನು ಖರೀದಿಸಲು ಒಟ್ಟು 35.9 ಕೋಟಿ ಇತ್ತು.
ಆರ್ಸಿಬಿ ಕಳೆದ 13 ಸೀಸನ್ಗಳಿಂದ ಕಪ್ ಎತ್ತಲೇ ಬೇಕು ಎನ್ನುವ ಹಠಕ್ಕೆ ಬಿದ್ದಿದೆ. ಆದರೆ, ಈ ವರೆಗೆ ಅದು ಸಾಧ್ಯವಾಗಿಲ್ಲ. 2020ರ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಆರ್ಸಿಬಿ ಕೊನೆಯಲ್ಲಿ ಎಡವಿತ್ತು. ಹೀಗಾಗಿ, ಈ ಬಾರಿ ಗೆಲ್ಲಲು ಯಾವೆಲ್ಲ ತಂತ್ರಗಳು ಬೇಕೋ ಅದಕ್ಕೆ ಪೂರಕವಾಗಿ ಎಲ್ಲವನ್ನೂ ಆರ್ಸಿಬಿ ಮಾಡುತ್ತಿದೆ.
ನಿನ್ನೆಯ ಹರಾಜು ಪ್ರಕ್ರಿಯೆಯಲ್ಲಿ ಕೈಲ್ ಜೇಮಿಸ್ಸನ್ ಅವರನ್ನು 15 ಕೋಟಿ ರೂಪಾಯಿಗೆ ಆರ್ಸಿಬಿ ಖರೀದಿಸಿದೆ. ನಿನ್ನೆ ನಡೆದ ಹರಾಜಿನಲ್ಲಿ ಆರ್ಸಿಬಿ ಖರೀದಿಸಿದ ದೊಡ್ಡ ಮೊತ್ತದ ಆಟಗಾರ ಇವರಾಗಿದ್ದಾರೆ. ಇನ್ನು ಗ್ಲೆನ್ ಮ್ಯಾಕ್ಸ್ವೆಲ್ 14.25 ಕೋಟಿ ರೂಪಾಯಿ ಹಾಗೂ ಡ್ಯಾನಿಯಲ್ ಕ್ರಿಶ್ಚಿಯನ್ಗೆ 4.80 ಕೋಟಿ ರೂಪಾಯಿ ನೀಡಿ ಖರೀದಿಸಿದೆ.
Happy with today’s buys, 12th Man Army? ?
We surely did #BidForBold! ????#PlayBold #IPLAuction #WeAreChallengers #ClassOf2021 pic.twitter.com/aD4uzSU8Xp
— Royal Challengers Bangalore (@RCBTweets) February 18, 2021
ಯುವ ಆಟಗಾರರಾರದ ಮೊಹಮ್ಮದ್ ಅಜರುದ್ದೀನ್, ಸುಯಶ್ ಪ್ರಭುದೇಸಾಯಿ, ಕೆ.ಎಸ್.ಭರತ್, ಸಚಿನ್ ಬೇಬಿ, ರಜತ್ ಪಾಟೀದಾರ್ ಅವರನ್ನು ಬೇಸ್ ಪ್ರೈಸ್ 20 ಲಕ್ಷ ರೂಪಾಯಿ ನೀಡಿ ಖರೀದಿಸಿದೆ.
A well-balanced squad with all the bases covered ?
Who do you think will be the gamechanger among our #Classof2021, 12th Man Army??#PlayBold #WeAreChallengers #IPLAuction pic.twitter.com/ZrGqV9cN7r
— Royal Challengers Bangalore (@RCBTweets) February 19, 2021
Kudos to the team behind assembling our #ClassOf2021 at the #IPLAuction yesterday! ????Kato and the rest of the coaching staff made their invaluable presence felt virtually! ??
Drop a ❤️ if you’re excited for #IPL2021, 12th Man Army. #PlayBold #BidForBold #WeAreChallengers pic.twitter.com/87BCzRnNP7
— Royal Challengers Bangalore (@RCBTweets) February 19, 2021
ಆರ್ಸಿಬಿ ಹೊಸ ಪಟ್ಟಿಯಲ್ಲಿ ಇರುವವರ ಹೆಸರು..
ಎ.ಬಿ. ಡಿವಿಲಿಯರ್ಸ್, ದೇವದತ್ ಪಡಿಕ್ಕಲ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಾಲ್, ಜೋಶ್ ಫಿಲಿಪೆ, ಪವನ್ ದೇಶಪಾಂಡೆ, ಶಹಬಾಜ್ ಅಹ್ಮದ್, ಆಡಮ್ ಜಂಪಾ, ಕೇನ್ ರಿಚರ್ಡ್ಸನ್, ಗ್ಲೆನ್ ಮ್ಯಾಕ್ಸ್ವೆಲ್, ಕೈಲ್ ಜೇಮಿಸ್ಸನ್, ಡ್ಯಾನಿಯಲ್ ಕ್ರಿಶ್ಚಿಯನ್, ಮೊಹಮ್ಮದ್ ಅಜರುದ್ದೀನ್, ಸುಯಶ್ ಪ್ರಭುದೇಸಾಯಿ, ಕೆ.ಎಸ್.ಭರತ್, ಸಚಿನ್ ಬೇಬಿ,ರಜತ್ ಪಾಟೀದಾರ್.
ಇದನ್ನೂ ಓದಿ: RCB 2 ಆಟಗಾರರಿಗೆ ಖರ್ಚು ಮಾಡಿದ್ದು ಬರೋಬ್ಬರಿ 30 ಕೋಟಿ ರೂಪಾಯಿ!